ಎರಡನೇ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಗೆ ಬದುಕು ಹರಿಸುವುದೇ ಕಷ್ಟಕ್ಕೆ ಬಂದಿದೆ

ತಮ್ಮ ರಾಘವಸೇನೆ ಮುಖಾಂತರ ಸಂತ್ರಸ್ಥೆಗೆ ಭಯ ಉಂಟು ಮಾಡುತ್ತಿದ್ದಾರೆ. ಭಯೋತ್ಪಾದಕರಾಗಿ ಬಿಟ್ಟಿದ್ದಾರೆ. ಎರಡನೇ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಗೆ ಬದುಕು ಹರಿಸುವುದೇ ಕಷ್ಟಕ್ಕೆ ಬಂದಿದೆ. ಯಾವ ಹೊತ್ತಿಗೆ ಯಾವ ರೂಪದಲ್ಲಿ ಆಕ್ರಮಣ ಆಗುತ್ತದಯೊ ಎಂದು ಮೈಯೆಲ್ಲಾ ಕಣ್ಣಾಗಿಸಿ ಕಾದು ಕುಳಿತು ಕೊಳ್ಳುವಂತಾಗಿದೆ.ಏನು ಮಾಡಲು ಹೇಸದ ನಿಷ್ಠಾವಂತ ಶಿಷ್ಯರನ್ನು ಹೊಂದಿರುವ ಸ್ವಾಮಿಗಳು ತಮ್ಮ ಪ್ರಚೋದನಾಕಾರಿ ಭಾಷಣಗಳ ಮೂಲಕ ಶಿಷ್ಯರನ್ನು ನನ್ನ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ತೀರಾ ಹತಾಶರಾಗಿರುವ ಅವರು ಡು ಆರ್ ಡೈ ಹಂತ ತಲುಪಿದ್ದು ಸಂತ್ರಸ್ಥೆಗೆ ಅತ್ಯಂತ ಸಂಕಷ್ಟ ಸ್ಥಿತಿಯನ್ನು ಉಂಟುಮಾಡಿದೆ.ತಮ್ಮ ಒಂದು ಕಣ್ಣು ಹೋದರು ಪರವಾ ಇಲ್ಲ ಸಂತ್ರಸ್ಥೆಯ ಎರಡೂ ಕಣ್ಣು ಇಲ್ಲದಂತೆ ಆಗಬೇಕು ಎಂಬ ಒಂದು ಸಿದ್ಧಾಂತ ರೂಪುಗೊಳ್ಳುತ್ತಿದೆ.ಸಂತ್ರಸ್ಥೆಯ ಪರ ಇದ್ದವರನ್ನು ಸಾಮ ದಾನ ಬೇಧ ದಂಡ ನ್ಯಾಯದ ಮೂಲಕ ಬಗ್ಗಿಸಿ ಸಂತ್ರಸ್ಥೆಯಿಂದ ದೂರ ಮಾಡುತ್ತಿದ್ದಾರೆ. ಗಡಿಮಿತಿ ಇಲ್ಲದಂತೆ ನೀರನ್ನು ಖರ್ಚು ಮಾಡುವಂತೆ ಹಣ ವ್ಯಯ ಮಾಡುತ್ತಿದ್ದಾರೆ.

ಆದ್ದರಿಂದ ಕೋರ್ಟ್ ನಲ್ಲಿ ಒಂದು ಕಳಕಳಿಯ ಮನವಿ ಏನೆಂದರೆ ವಿಚಾರಣೆ ಯನ್ನು ತೀವ್ರಗೊಳಿಸಿ

Ganapathi Bhatta Jigalemane
28/09/2017
source: https://www.facebook.com/groups/1499395003680065/permalink/2032040443748849/

Advertisements

ಮುದಿ ಗೌಡರ್ ಅವರ ತೀರ್ಪೀನ ಬಗ್ಗೆ ಬಂದ ಒಂದು ಕಾಮೆಂಟ್

ಮುದಿ ಗೌಡರ್ ಅವರ ತೀರ್ಪೀನ ಬಗ್ಗೆ ಬಂದ ಒಂದು ಕಾಮೆಂಟ್

ಈ ವಿಷಯದಲ್ಲಿ ಎರಡೂ ಕಡೆಯವರು ಅವರವರಿಗೆ ಬೇಕಾದಂತಹ ಭಾಗಗಳನ್ನು ಮಾತ್ರ ಉದ್ಧರಿಸಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಅಂದುಕೊಳ್ಳೋಣ.

ಆದರೆ ಸಾಮಾನ್ಯಜನರ ಮೇಲೆ ಆರೋಪಗಳು ಬರುವುದಕ್ಕೂ ಶಾಂಕರಪೀಠಾಧಿಪತಿಯಾದ ಯತಿಗಳ ಮೇಲೆ ಆರೋಪ ಬರುವುದಕ್ಕೂ ವ್ಯತ್ಯಾಸವಿದೆ. ಗುರುತರವಾದ ಆರೋಪವು ಬಂದಾಗ ನ್ಯಾಯಾಲಯದಲ್ಲಿ ನಿರ್ದೋಷಿಯೆಂದು ತೀರ್ಪು ಬಂದಿತಷ್ಟೇ. ಹೀಗೆ ತೀರ್ಪು ಬಂದಾಗ ತಮ್ಮನ್ನು ತಪ್ಪಿತಸ್ಥರನ್ನಾಗಿಸಲು ದೂರುಕೊಟ್ಟ ಮಹಿಳೆಯ ಮೇಲೆ ಮಾನನಷ್ಟ ಮೊಕದ್ದಮೆ, ಎಫ್ ಎಸ್ ಎಲ್ ರಿಪೋರ್ಟನ್ನು ಕೊಟ್ಟ ಸಂಸ್ಥೆಯ ವಿರುದ್ಧ ಸುಳ್ಳು ಪ್ರಮಾಣಪತ್ರವನ್ನು ಕೊಟ್ಟಿದ್ದಕ್ಕಾಗಿ ಕ್ರಮಗಳನ್ನು ಕೈಗೊಂಡು ಆ ಇಡೀ ಪ್ರಕರಣವನ್ನು ಅಂತ್ಯಗೊಳಿಸುವುದು ಸರಿಯಾದ ನಡೆಯೆಂದು ನನ್ನಂತಹ ಸಾಮಾನ್ಯನ ಅಭಿಪ್ರಾಯ. ನನ್ನ ಗುರುಪೀಠವು ಅದಲ್ಲದಿದ್ದರೂ ಶಾಂಕರಪೀಠ, ಸಮಾಜದ ಪೀಠ, ಒಡನಾಡಿ ಜನರ ಗುರುಪೀಠ ಮುಂತಾದ ಕಾರಣಗಳಿಂದ ಆ ಪೀಠದ, ಪೀಠಾಧಿಪತಿಗಳ ಬಗ್ಗೆ ಸಹಜವಾದ ಗಮನವಿದ್ದರೂ ಅತ್ಯಾಚಾರಪ್ರಕರಣದ ಎಲ್ಲ ವಿಷಯಗಳೂ ತಿಳಿದದ್ದು ಪೇಪರಿನ, ಜಾಲತಾಣದ ಮುಖಾಂತರವೇ. ಅವರ ಮಠದ ಸಾಮಾನ್ಯ ಶಿಷ್ಯರ ಸ್ಥಿತಿಯೂ ಇದಕ್ಕಿಂತ ಹೊರತಲ್ಲ. ನಿರ್ದೋಷಿಗಳೆಂದು ತೀರ್ಪು ಬಂದ ಮೇಲೆ “ಷಡ್ಯಂತ್ರ ” ನಡೆಸಿದವರ ವಿರುದ್ಧವಾಗಿ ಪ್ರಕರಣ ದಾಖಲಿಸಬೇಕಿತ್ತು. ಹಾಗಾದಾಗ ಯಾವುದೇ ರೀತಿಯಲ್ಲಿಯೂ ಸಂಶಯಕ್ಕೆಡೆಯಿಲ್ಲದೇ ಅರ್ಥೈಸುವಿಕೆ ಸಮಾಜದ್ದು ಹಾಗೂ ಶಿಷ್ಯರದ್ದು ಆಗುತ್ತಿತ್ತು.
ಈ ಪ್ರಕರಣದಲ್ಲಿ ಒಳಗೊಂಡ ಜನರನ್ನು ಹೊರತುಪಡಿಸಿ ಬೇರೆ ಯಾರೂ ಪೀಠದ, ಪೀಠಾಧಿಪತಿಗಳ ಕಳಂಕ ಶಾಶ್ವತವಾಗಿಲೆಂದು ಬಯಸುವ ಆಗ್ರಹಿಗಳಲ್ಲ. ಅಡ್ಡಗೋಡೆಯ ಮೇಲೆ ದೀಪವಿಟ್ಟ ತರಹ ತೀರ್ಪನ್ನು ಅರ್ಥೈಸಲು ಸಾಧ್ಯವಿರಬಹುದಾದರೆ “ಆ ರೀತಿಯ ಅರ್ಥವಲ್ಲ, ಇದೇ ಅರ್ಥ” ಎಂದು ತಾರ್ಕಿಕವಾಗಿ ನ್ಯಾಯಾಲಯದ ಮುಖೇನ ಅರ್ಥಸ್ಪಷ್ಟತೆಯನ್ನು ಸಮಾಜಕ್ಕೆ ತಿಳಿಸುವುದು ಸಾಮಾನ್ಯರಿಗಿಂತ ಪೀಠಾಧಿಪತಿಗಳ ವಿಷಯದಲ್ಲಿ ಜರೂರತ್ತಿದೆ.

Ganapathi Bhatta Jigalemane
28/09/2017
source: https://www.facebook.com/groups/1499395003680065/permalink/2032073487078878/

ಅನಾಚಾರಿ ಸರಣಿ ಕ್ರಿಯೆ (ಚೈನ್ ರಿಯಾಕ್ಶನ್)…….

ಅನಾಚಾರಿ ಸರಣಿ ಕ್ರಿಯೆ (ಚೈನ್ ರಿಯಾಕ್ಶನ್)…….

ಪೀಠದಲ್ಲಿ ಕೂತ ಮೂರ್ಖಮಹಾರಾಜರು ಮಾಡಿದ ಅನಾಚಾರವನ್ನು ಮುಚ್ಚಿಹಾಕಲು
• ಸಂಗಡಿಗರೊಂದಿಗೆ ಸೇರಿ ಕೆಲವೊಂದು ಸುಳ್ಳು ಕಥೆಗಳನ್ನು ಹುಟ್ಟುಹಾಕಲಾಯಿತು
• ಅಮಾಯಕರನ್ನು ಜೈಲಿಗಟ್ಟಲಾಯಿತು
• ವಾರ್ತಾ ಮಾಧ್ಯಮಗಳನ್ನು ದುಡ್ಡುಕೊಟ್ಟು ಖರೀದಿಸಲಾಯಿತು
• ಗುಣಗಾನ ಮಾಡುವವರಿಗೆ ಶಾಲು ಹೊದೆಸಿ ಸನ್ಮಾನ ಮಾಡಲಾಯಿತು
• ಗುರು ಶಾಪವೆಂಬ ಕಣ್ಕಟ್ ವಿದ್ಯೆಯಿಂದೆ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯಿತು
• ರಕ್ಷಣೆಗೆ ಹಲವಾರು ಸೇನೆಗಳನ್ನು ಕಟ್ಟಲಾಯಿತು, ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಧರ್ಮದ ಹೆಸರಲ್ಲಿ ಅನುಕಂಪ ಗಿಟ್ಟಿಸುವ ಕಾರ್ಯಗಳಾದವು
• ಪ್ರಶ್ನಿಸುವವರ ಮೇಲೆ ಆಕ್ರಮಣ ಮಾಡುವವರಿಗೆ, ಬೆದರಿಕೆ ಹಾಕುವವರಿಗೆ ಹಾಗೂ ಸಜ್ಜನರಿಗೆ ಹಿಂಸೆ ನೀಡುವವರಿಗೆ ಟಂಕೆ ಪ್ರಶಸ್ತಿ ನೀಡಲಾಯಿತು
• ಶಾಸ್ತ್ರವನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಬೇಕಾಗಿ ಅಪ್ಪಣೆಯಾಯಿತು
• ಸಂತೆ-ಕೌ ಸಮಾವೇಶವೆಂದು ಭಕ್ತರ ಕೋಟಿಗಟ್ಟಲೆ ಹಣವನ್ನು ಪೋಲು ಮಾಡಲಾಯಿತು
• ಮಿಲ್ಕಾ ಹಬ್ಬದ ನೆಪದಲ್ಲಿ ಕೊಡಗಳನ್ನು ಸವಾರಲಾಯಿತು
• ಗುಣಗಾನಮಾಡಲು ಮೀಡಿಯಾ ಮ್ಯಾನೇಜ್ಮೆಂಟ್ ಸೆಲ್ಲ್ ರೂಪಿಕರಿಸಲಾಯಿತು
• ಅನಾಚಾರವನ್ನು ಪ್ರಶ್ನಿಸುವ ಸಜ್ಜನರನ್ನು ಜಾತಿಯಿಂದ ಬಹಿಷ್ಕರಿಸಲಾಯಿತು
• ಹಲವಾರು ಕುಟುಂಬಗಳನ್ನು, ಸಂಬಂಧಗಳನ್ನು ಬೇರ್ಪಡಿಸಿದರು
• ಅನಾಚಾರವನ್ನು ವಿರೋಧಿಸದ ಮೂಕ, ಕಿವುಡ ಹಾಗೂ ಅಂಧರಾದ ಮೂರ್ಖರಿಗೆ ಸಮಾಜದ ಮುಖ್ಯ ಸಂಘಟನೆಯ ನಾಯಕ ಹಾಗೂ ಪದಾಧಿಕಾರಿಗಳನ್ನಾಗಿ ಮಾಡಲಾಯಿತು
• ಭಕ್ತರನ್ನುಸುಳ್ಳು ಹೇಳುತ್ತಾ ಕೊಳ್ಳೆ ಹೊಡೆಯಲಾಯಿತು
• ಅನಾಚಾರವನ್ನು ಸಮರ್ಥಿಸುತ್ತಾ ವಿಜಯೋತ್ಸವ ನಡೆಯಿತು
• ಕಲೆಯ ಬಗ್ಗೆ ಬಂದ ವೈಜ್ಞಾನಿಕ ವರದಿಯನ್ನು ಮುಚ್ಚಿಡುವ ಪ್ರಯತ್ನ ಮಾಡಲಾಯಿತು
• ದೂರು ನೀಡುವವರ ಚಾರಿತ್ರ್ಯಹರಣ ಪ್ರಯತ್ನ ನಡೆಯಿತು
• ಮಾರ್ಮಿಕ ಭಾಷಣಗಳನ್ನು ಮಾಡಲಾಯಿತು
• ಹೊಲಸು ರಾಜಕಾರಣಿ ಹಾಗೂ ವಾಗ್ಮಿಗಳನ್ನು ಕರೆಯಿಸಿ ಪಾದಪೂಜೆ, ಗುಣಗಾನ ಮಾಡಿಸಲಾಯಿತು, ಮಂತ್ರಾಕ್ಷತೆ ನೀಡಲಾಯಿತು
• ತನಿಖೆಗಳನ್ನು ಅಡ್ಡಪಡಿಸುವ ಯೋಜನೆಗಳು ನಡೆದವು, ರಾಜಕೀಯ ಒತ್ತಡ ಹೇರಲಾಯಿತು
• ಪವಾಡ ಕಥೆಗಳನ್ನು ಬರೆಸಲಾಯಿತು
• ಸಜ್ಜನರು ಪ್ರಶ್ನಿಸಿದ್ದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಕೇಸ್ ಹಾಕಿಸಿದರು
• ವಿರೋಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಸಿದರು
• ಕಚ್ಚೆಯನ್ನು ಬಿಚ್ಚಿ ಮಾಡುವ ಸೇವೆ ಸಂಸ್ಕಾರಗಳನ್ನು ಮುಂದುವರಿಸಿದರು
• ಸಂಸ್ಕಾರದ ನೆಪದಲ್ಲಿ ನಡೆದಿರುವ ಅನಾಚಾರವನ್ನು ಪ್ರಶ್ನಿಸಿ ಹೋರಾಟ ನಡೆಸಿದವರಿಗೆ ಪ್ರತಿಬಂಧಕವನ್ನು ಏರ್ಪಡಿಸಿದರು
———————–
ಹೀಗೇ ಹೇಡಿಗಳಾದ ಮೂರ್ಖಮಹಾರಾಜರು ಪ್ರಶೆಗಳನ್ನು ಉತ್ತರಿಸದೆ, ಪರೀಕ್ಷೆಗಳನ್ನು ಹಾಗೂ ಸವಾಲುಗಳನ್ನು ಎದುರಿಸದೆ, ಪೀಠವನ್ನೂ ಬಿಡದೆ ತಮ್ಮ ನೀಚತನವನ್ನು ಮುಂದುವರಿಸುತ್ತಲೆ ಇದ್ದಾರೆ. ಶತಮೂರ್ಖ ಶಿಷ್ಯರಂತೂ ಆನ್ ಮಾಡಿ ಇಟ್ಟ ಟೇಪ್ ರೆಕಾರ್ಡರಿನಂತೆ ಕ್ಷಣಕ್ಕೊಮ್ಮೆ ಭೊ ಪರಾಕು…..ಭೊ ಪರಾಕು ಕೂಗುತ್ತಲೇ ಇದ್ದಾರೆ……
ಅನಾಚಾರಗಳ ಸರಣಿ ಮುಂದುವರಿಯುತ್ತಲೇ ಇದೆ…..
ಫಾಂಡೇಶನ್ ಗಟ್ಟಿಯಿಲ್ಲದ ಸುಳ್ಳಿನ ಗೋಪುರವನ್ನು ಎಷ್ಟು ಎತ್ತರಕ್ಕೇರಿಸಬಹುದು ಕಾದು ನೋಡೋಣ……..

ಅಮ್ಮಾ…….ದೇವೀ ……ಮಹಾಮಾಯೇ……….
ಲೋಕ ಕಲ್ಯಾಣಕ್ಕಾಗಿ ದುಷ್ಟರ ಸಂಹಾರಮಾಡಿ ಧರ್ಮವನ್ನು ಸಂರಕ್ಷಿಸು ಮಹಾಮಾತೇ……

Pranav Kumar
26/09/2017
source: https://www.facebook.com/groups/1499395003680065/permalink/2031262143826679/

ನಿಮ್ಮ ಮಾತು ಸತ್ಯವಾಗಿಸಲು ಮಂಪರು ಪರೀಕ್ಷೆಗೆ ಸಿದ್ಧರಾಗಿ

ಸತ್ಯ ಹೊರಗೆ ಬರಬೇಕು. ಸತ್ಯವೆ ಹೊರಗೆ ಬರಬೇಕು. ಈ ನಿಮ್ಮ ಮಾತು ಸತ್ಯವಾಗಿಸಲು ಮಂಪರು ಪರೀಕ್ಷೆಗೆ ಸಿದ್ಧರಾಗಿ. ನಿಮಗೆ ಬೇಕಾಗಿದ್ದು ಸತ್ಯ, ನಮಗೆ ಬೇಕಾಗಿದ್ದು ಸತ್ಯ,ಮಂಪರು ಪರೀಕ್ಷೆಯಲ್ಲಿ ಸಿಗುತ್ತದೆ ಸತ್ಯ.

ಬ್ಲಾಕ್ ಮೇಲ್ ಪ್ರಕರಣದಲ್ಲಿ ಸತ್ಯ ಹೊರಬಂದಿದೆ.ಮೊದಲೇ ಅದು ಬರಬೇಕಾದದ್ದು ಅಂದಿದ್ರಿ.ಈಗ ನೋಡಿದರೆ ನಮಗೂ ಅದೇ ಮೊದಲು ಹೊರಬೀಳ ಬೇಕಾಗಿತ್ತು ಎನ್ನಿಸುತ್ತಿದೆ. ಸತ್ಯ ಹೊರ ಬಂದ ಮೇಲೆ ಏನು? ಅಭಯಾಕ್ಷರಕ್ಕೆ ಸಹಿ ಹಾಕಿದರೆ ಸರಿಯಾಯಿತು ಎಂದಾ?

ಬ್ಲಾಕ್ ಮೇಲ್ ಪ್ರಕರಣದ ಸತ್ಯ ಹೊರಬಂದ ಕೂಡಲೇ ನಿಮ್ಮದೆ ಮಾತಿಗೆ ಒಂದು ಬಿಲ್ಲೆ ಕಾಸಿನಷ್ಟು ಬೆಲೆ ಇದೆ ಎಂದಾಗಿದ್ದರೆ ಪೀಠತ್ಯಾಗ ಮಾಡಬೇಕಾಗಿತ್ತು.ನಿಮ್ಮ ಮಾತಿಗೆ ಬಿಲ್ಲೆ ಕಾಸು ಬೆಲೆ ಇದೆ ಎಂದು ನಾವು ಎಂದೂ ಭಾವಿಸಿಲ್ಲ ಬಿಡಿ. ಎಷ್ಟೇ ಸತ್ಯ ಹೊರಬಂದರೂ ನೀವೇನೂ ಪೀಠ ಬಿಡುವವರಲ್ಲ.

ನಾವು ಈಗ ಅನೇಕ ವಿಷಯಗಳನ್ನು ಹೊಸದಾಗಿ ಕಲಿಯುತ್ತಿದ್ದೇವೆ.ನಮಗೆ ಕೋರ್ಟ್ ಕಛೇರಿ ಇದೇಲ್ಲಾ ಗೊತ್ತೇ ಇರಲಿಲ್ಲ. ಸಾಮಾನ್ಯವಾಗಿ ಎರಡು ಪಕ್ಷದವರು ಮೈ ಕೈ ಮುಟ್ಟಿಕೊಂಡು ರಕ್ತಪಾತಾದಿಗಳು ಸಂಭವಿಸಿದರೆ ಕ್ರಿಮಿನಲ್ ಕೇಸ್ ಮಾಡುತ್ತಾರೆ ಎಂಬ ವಿಷಯ ತಲೆಯೊಳಗೆ ಹೊಕ್ಕಿಕೊಂಡು ಬಿಟ್ಟಿತ್ತು.ನಿಮ್ಮಿಂದಾಗಿ ಕಲಿತೆವು -ಪರಸ್ಪರ ಜೀವಮಾನದಲ್ಲಿ ಸಂಧಿಸದವರ ಮೇಲೆ ಕ್ರಿಮಿನಲ್ ಕೇಸ್ ಹಾಕಬಹುದು. ಟ್ಯಾಬ್ ನಲ್ಲಿ ಅಕ್ಷರದ ಮೇಲೆ ಬಡಿದಿದ್ದಾರೆ, ಹಾಗಾಗಿ ಇವರು ಕೇಸ್ ಹಾಕಿಸಿಕೊಳ್ಳಲು ಯೋಗ್ಯರು.ಇದು ಸತ್ಯವನ್ನು ಬಯಸುವವರ ನಡೆ.ಇದು ಮತ್ತು ಇಂತಹ ಎಷ್ಟೋ ವಿಷಯ ನಾವು ಕಲಿಯ ತೊಡಗಿದ್ದೇವೆ.

ಸನ್ಯಾಸಿಯ ಬಾಯಿಯಿಂದ ಬಂದ ಮೃದು ಮಧುರವಾದ ಸತ್ಯದ ಬಯಕೆ ಕಾರ್ಯಗತವಾಗಲು ಮಂಪರು ಪರೀಕ್ಷೆ ಆಗಲಿ.ಒಂದಲ್ಲ ಹತ್ತು ಕಡೆ ಆಗಲಿ.ಪ್ರತಿಯೊಂದು ಸಂದರ್ಭದಲ್ಲಿಯೂ ಸಿಡಿ ಮೂಲಕ ನಿಮ್ಮ ತಲೆಯಲ್ಲಿ ಎನು ನಡೆದಿದೆ ಎಂಬುದು ದಾಖಲಾಗಲಿ.ತಲೆಯಲ್ಲಿ ಯಾವ ಯಾವ ಹೆಂಗಸರ ಬಗ್ಗೆ ನಿಮ್ಮ ಭಾವನೆಗಳು ಹೇಗಿದ್ದಾವೆ ವಿಚಾರಿಸಲ್ಪಡಲಿ.ನಿಮ್ಮ ಅಪೇಕ್ಷೆಯ ಮತ್ತು ನಾವು ಒಪ್ಪಿದ ಮನೋವೈದ್ಯರನ್ನು ನಿಯಮಿಸಿಕೊಳ್ಳೊಣ.ನೀವು ಅಪೇಕ್ಷಿಸಿದ ಎದರುಪಕ್ಷದವರನ್ನು ಮಂಪರು ಪರೀಕ್ಷೆಗೆ ಒಳಪಡಿಸೋಣ.

ನಿಮಗೆ ಬೇಕಾಗಿದ್ದು ಸತ್ಯವಲ್ಲ.ಹಿಂದೂ ಧರ್ಮದ ಅತ್ಯಂತ ಶ್ರೇಷ್ಠ ಸಂಕೇತ ವಾಗಿದ್ದ ಕಾವಿಯ ಮಾನ ಹರಾಜು ಮಾಡುವುದು ನಿಮಗೆ ಬೇಕಾಗಿದೆ.ಶಂಕರಾಚಾರ್ಯರ ಅತ್ಯದ್ಭತ ತತ್ತ್ವವು ಜನರ ಪರಿಹಾಸ್ಯಕ್ಕೆ ಒಳಪಡಿಸುವುದು ನಿಮಗೆ ಬೇಕಾಗಿದೆ.

Ganapathi Bhatta Jigalemane
26/09/2017
source: https://www.facebook.com/groups/1499395003680065/permalink/2031006120518948/

ಪೀಠದ ಮೇಲೆ ಕೂತವರನ್ನು ಮಾನಗೆಟ್ಟವರು ಎಂದು ಕರೆಯುವುದು ಹೇಗೆ ತೇಜೋವಧೆ ಯಾಗುತ್ತದೆ.

ಗಂಭೀರ ಆಪಾದನೆ ಬಂದಾಗ ತಾವೇ ಮುಂದೆ ಬಂದು ತಮ್ಮನ್ನು ಪರೀಕ್ಷೆಗೊಡ್ಡಿಕೊಂಡಿದ್ದರೆ°°°° ಈ ಮಾತು ಅತ್ಯಂತ ಸರಿಯಾದ ಮಾತು.

ಬಂದ ಆಪಾದನೆಯನ್ನು ಷಡ್ಯಂತ್ರವೆಂದು ತಳ್ಳಿ ಹಾಕುವ ಬದಲು ಎಲ್ಲರಿಗೂ ಸಮಾಧಾನವಾಗುವಂತಹ ಪರೀಕ್ಷೆಗೆ ಓಳ ಪಡಬೇಕಾಗಿತ್ತು.ಅದನ್ನು ಬಿಟ್ಟು ಧಮನಕಾರಿ ನೀತಿಯಿಂದ ಬಾಯಿ ಮುಚ್ಚಿಸುವ ಪ್ರಯತ್ನ.ಹಣ ಸುರಿದು ಮುಚ್ಚಿ ಹಾಕುವ ಪ್ರಯತ್ನ ನಡೆಯಿತು.ಕೂಡಿಕೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಪ್ರಮಾಣ ಕೊಡಿ ಎಂದು ಕೇಳುತ್ತಾರೆ..ಕೂಡಿಕೆ ಮಾಡಿಕೊಂಡಿದ್ದಕ್ಕೆ ಪ್ರಮಾಣ ಕೋಡ ಬೇಕಾದವರು ನಾವಲ್ಲ.ಬಂದ ಆಪಾದನೆಗೆ ಸರಿಯಾದ ಸಮಂಜಸ ಪರೀಕ್ಷೆಯ ಮೂಲಕ ಉತ್ತರ ಕೋಡ ಬೇಕಾದವರು ನೀವು.ಆ ಉತ್ತರ ಕೋಡಲು ವಿಫಲವಾಗಿದ್ದರಿಂದ ನೀವು ಕೂಡಿಕೆ ಮಾಡಿಕೋಂಡಿದ್ದಿರೆಂದು ಆ ಕಾರಣಕ್ಕಾಗಿ ಪೀಠ ಬಿಡಿ ಎನ್ನಲು ನಮಗೆ ಮುಕ್ತ ಅವಕಾಶವಿದೆ.ನೀವು ಚಪ್ಪಲಿ ಪೋರಕೆ ತೋರಿಸಿ ಬಾಯಿ ಮುಚ್ಚಿಸುವುದಲ್ಲ.ವಿರೋಧಿಸುವವರ ಮನೆಯ ಮೇಲೆ ಮೂಕರ್ಜಿ ಬರೆದು ದಾಳಿ ಮಾಡಿಸುವುದಲ್ಲ.ಫೇಸ್ಬುಕ್ನಲ್ಲಿ ಚಾರಿತ್ರ್ಯಹನನ ಮಾಡುವುದಲ್ಲ.ಕೋರ್ಟ್ ನಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕೇಸ್ ಗಳ ಸರಮಾಲೆ ಸೃಷ್ಟಿ ಸುವುದಲ್ಲ‌

ಸಮಾದಾನಕರವಾದ ಸೂಕ್ತ ಪರೀಕ್ಷೇಗೆ ಓಳಪಟ್ಟು ಆ ದೇಹಕ್ಕೆ ಹೆಣ್ಣಿನ ಸ್ಪರ್ಶವಾಗಿಲ್ಲವೆಂಬುದನ್ನು ಮನದಟ್ಟು ಮಾಡಿಕೊಡುವ ಕೆಲಸ ಆಪಾದನೆ ಹೊತ್ತವರ ಮೇಲೆ ಇದೆ.ನೀವು ನಾಲ್ಕು ಗೋಡೆಯ ನಡುವೆ ನಡೆಸಿದ ಅವ್ಯವಹಾರಕ್ಕೆ ನಾವು ಸಾಕ್ಷಿ ತರಲು ಸಾಧ್ಯವಿಲ್ಲ. ನಾಲ್ಕು ಗೋಡೆಗಳ ನಡುವೆ ಇಂತಹ ವ್ಯವಹಾರ ನಡೆದಿದೆ ಎಂದು ನಿಮ್ಮ ಮೇಲೆ ಕೇಸ್ ಹಾಕಿ ಹೇಳಿದ್ದಾರೆ. ಅಂತಹ ಯಾವ ಅವ್ಯಾವಹಾರವೂ ನಡೆದಿಲ್ಲ ಎಂಬುದನ್ನು ಸೂಕ್ತ ಎಲ್ಲಾ ಪರೀಕ್ಷೆಗೂ ಒಳಪಟ್ಟು ಸಾಧಿಸಬೇಕಾದವರು ನೀವು. ಗುಪ್ತಾಂಗ ದಲ್ಲಿ ಮಚ್ಚೆ ಇರಲಿಲ್ಲ ಎಂದು ಬಿಚ್ಚಿ ತೋರಿಸಬೇಕಾದವರು ನೀವು.ಆ ಹೆಂಗಸಿನ ಒಳವಸ್ರ್ತದಲ್ಲಿ ನಿಮ್ಮ ವೀರ್ಯ ಹೇಗೆ ಬಂತು ಎಂಬುದಕ್ಕೆ ಉತ್ತರ ಕೊಡಬೇಕಾದವರು ನೀವು, ಬ್ಲಾಕ್ ಮೇಲ್ ಕೇಸಿನಲ್ಲಿ ನಿಮ್ಮ ಅನುಯಾಯಿಯ ಫೋನ್ ನಂಬರಿನಿಂದ ಯಾಕಾಗಿ ಫೋನ್ ಮಾಡಿ ಅದನ್ನು ಇನ್ನೊಬ್ಬರ ಮೇಲೆ ಹೊರಿಸಲಾಯಿತು ಎಂದು ಹೇಳಬೇಕಾದವರು ನೀವು. ಇದೆಲ್ಲದರಿಂದ ನುಣುಚಿಕೊಂಡು ಇನ್ನೂ ಪೀಠದ ಮೇಲೆ ಕೂತವರನ್ನು ಮಾನಗೆಟ್ಟವರು ಎಂದು ಕರೆಯುವುದು ಹೇಗೆ ತೇಜೋವಧೆ ಯಾಗುತ್ತದೆ.ಇದರಿಂದ ಹೇಗೆ ಲಕ್ಷಾಂತರ ಜನರ ಧಾರ್ಮಿಕ ಭಾವನೆಗೆ ಘಾಸಿಯಾಗುತ್ತದೆ.?

Ganapathi Bhatta Jigalamane
26/09/2017
source: https://www.facebook.com/groups/1499395003680065/permalink/2031030943849799/

ಇವರಿಗೆ ಗೋಕರ್ಣಕೊಟ್ಟ ಪಾಪದ ಫಲ ಯಡಿಯೂರಪ್ಪ ನವರನ್ನು ಎಂದಿಗೂ ಮುಖ್ಯಮಂತ್ರಿ ಯಾಗಲು ಬಿಡುವುದಿಲ್ಲ

ಕೇಂದ್ರ ಮತ್ತು ರಾಜ್ಯ ನಾಯಕರಲ್ಲಿ ಸ್ವಾಮಿಯ ಬಗ್ಗೆ ತಿಕ್ಕಾಟವಿದೆ.ಯಡಿಯೂರಪ್ಪ ,ಈಶ್ವರಪ್ಪ, ಕರಂದ್ಲಾಜೆ ಮುಂತಾದ ರಾಜ್ಯ ನಾಯಕರು ಈ ಸ್ವಾಮಿಯ ಹಿಂಬಾಲಕರಾಗಿರುವನಕ ಈ ನಾಯಕರು ಬರ್ಕಾತ್ ಹೊಂದುವುದಿಲ್ಲ.ಅಸತ್ಯ,ಆನಾಚಾರ ಗಳನ್ನು ಬೆಂಬಲಿಸುವವರಿಗೆ ರಾಜ್ಯ ನಾಯಕತ್ವ ಕೊಡುವುದು ಶಕ್ಯವಿಲ್ಲ.ಒಬ್ಬ ಸ್ವಾಮಿ ಅಸಲಿಯೇ,ನಕಲಿಯೇ ಎಂದು ಗ್ರಹಿಸಲಾಗದವರ ಕೈಗೆ ಒಂದು ರಾಜ್ಯ ಆಳಲು ಕೊಟ್ಟರೆ ಅವರಿಗೆ ಎನು ತಿಳಿಯುತ್ತದೆ? ರಾಜ್ಯಭಾರ ಮಾಡ ಹೊರಡುವವರು ತೀರಾ ಅಮಾಯಕ ರಾಗಿದ್ದರೆ ದೇಶಕ್ಕೆ ಹಿತವಾಗುವುದಿಲ್ಲ.ಒಬ್ಬನ ಬಗ್ಗೆ ಇರುವ FSL ವರದಿ,ಬ್ಲಾಕ್ ಮೇಲ್ ಹಗರಣದ ಹಕಿಕತ್, ಕೋರ್ಟ್ ಬರೆದ ಅವಲೋಕನದ ಅಧ್ಯಯನ ಮುಂತಾದ ಪ್ರಾಥಮಿಕ ಸಂಗತಿ ಗಳನ್ನು ಲಕ್ಷಿಸಲಾಗದವರು ಮುಖ್ಯಮಂತ್ರಿ ಯಾದರೆ ಪ್ರಜೆಗಳ ಪಾಡು ಕಷ್ಟಕ್ಕಿಡಾಗುತ್ತದೆ.

ಇಂತಹ ಅಮಾಯಕರು ತಾವು ಮುಖ್ಯಮಂತ್ರಿ ಯಾಗುವ ಕನಸು ಕಾಣುವುದೇ ತಪ್ಪು. ಹವ್ಯಕ ಬ್ರಾಹ್ಮಣೇತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು 100 ಕ್ಕೆ 99 ಭಾಗ ಸ್ವಾಮಿಗೆ ವಿರೋಧ ವಾಗಿದ್ದಾರೆ.ಇದನ್ನು ಗ್ರಹಿಸಲು, ಈ ಜನರ ನಾಡಿಮಿಡಿತ ವನ್ನು ಅರ್ಥ ಮಾಡಿಕೊಳ್ಳದವ ಅದು ಹೇಗೆ ನಾಯಕರಾಗುತ್ತಾರೆ. ರಾಷ್ಟ್ರೀಯ ಅಧ್ಯಕ್ಷರು ಯಡಿಯೂರಪ್ಪ ನವರನ್ನು ಪಕ್ಕದಲ್ಲಿ ಕೂರಿಸಿಕೊಂಡೆ ಸಂಘದ ಸ್ವಯಂ ಸೇವಕರಿಗೆ ಆಶ್ವಾಸನೆ ಕೊಟ್ಟಿದ್ದಾರೆ.ಅದರಿಂದಲಾದರೂ ಡಾರ್ಕ್ ಹಾರ್ಸ್ ಯಾವುದು,ಯಾಕೆ ಹುಟ್ಟಿಕೊಂಡಿದೆ ಎಂದು ವಿಚಾರಿಸಿ ಕಂಡುಕೊಳ್ಳಬಹುದಿತ್ತು.

ಇವರ ಮಂತ್ರಾಕ್ಷತೆ, ಇವರಿಗೆ ಗೋಕರ್ಣಕೊಟ್ಟ ಪಾಪದ ಫಲ ಯಡಿಯೂರಪ್ಪ ನವರನ್ನು ಎಂದಿಗೂ ಮುಖ್ಯಮಂತ್ರಿ ಯಾಗಲು ಬಿಡುವುದಿಲ್ಲ. ಇದು ನನ್ನ ಮತ್ತು ಶಿಲಗೆಟ್ಟ ಪೀಠಾಧಿಪತಿ ಯನ್ನು ವಿರೋಧಿಸುತ್ತಿರುವ ಬಿಜೆಪಿ ಹಿತೈಷಿಗಳ ಚಿಂತನೆ.

Ganapathi Bhatta Jigalemane
26/09/2017
source: https://www.facebook.com/groups/1499395003680065/permalink/2031067600512800/

ಅನಾಚಾರಿ ಧೋಖೇಬಾಜ್ ಕಾವಿಯೊಳಗೆ ಸೇರಿದಾಗ…….

ಅನಾಚಾರಿ ಧೋಖೇಬಾಜ್ ಕಾವಿಯೊಳಗೆ ಸೇರಿದಾಗ…….

ಕವಿರತ್ನ ಮಹಾಕವಿ ಕಾಳಿದಾಸರ ಕೃತಿಯಾದ ‘ರಘುವಂಶ’ ಮಹಾಕಾವ್ಯವು ರಾಜನೀತಿ ಹಾಗೂ ನಿರ್ವಾಹಣಾ (management) ವಿಷಯಗಳಲ್ಲಿ ಮಾದರಿ ಪಾಠ್ಯಪುಸ್ತಕವೇ ಸರಿ.

ಇದರಲ್ಲಿ ರಘುವಂಶ ಮಹಾರಾಜರ ಗುಣಗಳನ್ನು ವರ್ಣಿಸುವ ಮೊದಲ ಕೆಲವು ಶ್ಲೋಕಗಳಲ್ಲಿ ಒಂದು ಮುಖ್ಯವಾದ ಶ್ಲೋಕವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ.

ತ್ಯಾಗಾಯ ಸಂಭೃತಾರ್ಥಾನಾಂ ಸತ್ಯಾಯ ಮಿತಭಾಷಿಣಾಮ್ ।
ಯಶಸೇ ವಿಜಿಗೀಷೂಣಾಂ ಪ್ರಜಾಯೈ ಗೃಹಮೇಧಿನಾಮ್ ॥

त्यागाय संभृतार्थानां सत्याय मितभाषिणाम्।
यशसे विजिगीषूणां प्रजायै गृहमेधिनाम्॥

(ರಘುವಂಶ ಮಹಾಕಾವ್ಯ ಅಧ್ಯಾಯ 1, 7ನೇ ಶ್ಲೋಕ)

ರಘುವಂಶದ ಮಹಾರಾಜರುಗಳು ಅರ್ಥಸಂಚಯ ಮಾಡುತ್ತಿದ್ದುದೆಲ್ಲ ತ್ಯಾಗಕ್ಕಾಗಿಯೇ ಹೊರತು, ತಮಗಾಗಿ ಅಲ್ಲ. ಕಡಿಮೆ ಮಾತು ಆಡುತ್ತಿದ್ದುದೇಕೆಂದರೆ ಸತ್ಯವನ್ನೇ ನುಡಿಯಲು ಮಾತ್ರ. ಹೆಚ್ಚು ಮಾತಿನ ನಮ್ಮ ರಾಜಕಾರಣಿಗಳು ಹಾಗೂ ಕಪಟ ಸನ್ಯಾಸಿಗಳು ಆಡುವುದೇನನ್ನೆಂದು ವಿವರಿಸಬೇಕಿಲ್ಲವಷ್ಟೆ! ವಿಜಯಯಾತ್ರೆ ಹೊರಡುತ್ತಿದ್ದುದು ರಾಜ್ಯದಾಹದಿಂದ, ಹಿಂಸಾವೃತ್ತಿಯಿಂದ ಅಲ್ಲ, ಕೀರ್ತಿಯನ್ನು ಎತ್ತಿ ಹಿಡಿಯಲು. ಕೊನೆಗೆ ತಾವಾಗಿಯೇ ಯೋಗಮಾರ್ಗದಲ್ಲಿ ಪ್ರಾಣ ಬಿಡುತ್ತಿದ್ದರೇ ಹೊರತು, ದುರ್ಮರಣಗಳಲ್ಲೋ, ಜನರಿಂದ ಛೀ ಥೂ ಹಾಕಿಸಿಕೊಂಡೋ ಅಲ್ಲ ಎಂದು ಅರ್ಥ. ಅರಸುಪದವಿ, ಆಡಳಿತದ ಪೀಠ, ಧರ್ಮ ಸಂರಕ್ಷಣೆಯ ಹೊಣೆ ಹೊತ್ತ ಧರ್ಮಪ್ರಭುವಿನ ತ್ಯಾಗಕ್ಷೇತ್ರ ಮಾತ್ರ, ಅದು ಸ್ವ-ವೈಭವೀಕರಣದ ಭೋಗದ ಸ್ಥಾನವಲ್ಲ ಎಂದು ತೋರಿಸಿಕೊಟ್ಟ ಮಹಾಪ್ರಭು ಶ್ರೀರಾಮಚಂದ್ರ.

ನಮ್ಮ ನಕಲಿ ರಾಮನ ಗುಣಗಳು ಇದಕ್ಕೆ ವಿಪರೀತವಾಗಿವೆ
ಅವರು ತಮ್ಮ ಮಾನರಕ್ಷಣೆಗೆ ಹಾಗೂ ಕೋರ್ಟ್ ಖರ್ಚ್ಚುಗಳಿಗೆ ಜನಸಾಮಾನ್ಯರನ್ನು ಹಲವಾರು ಪೊಳ್ಳು ಯೋಜನೆಗಳ ಮೂಲಕ ಕೊಳ್ಳೆಹೊಡುಯುತ್ತಾರೆ.

ಬಾಯಿ ತೆರೆದರೆ ಸಂಪೂರ್ಣ ಸುಳ್ಳಿನ ಗಾಳಿಗೋಪುರವನ್ನೇ ಕಟ್ಟಿ ಬಿಡುತ್ತಾರೆ. ಇದನ್ನು ಗ್ರಾಮೀಣ ಭಾಷೆಗಳಲ್ಲಿ ಭೊಂಗು ಅಥವಾ ರೈಲು ಬಿಡುವುದು ಎಂದು ಕರೆಯುತ್ತಾರೆ,

ಮಾಡಿದ ಕೆಲವು ಸಾಮಾನ್ಯ ಕಾರ್ಯಗಳನ್ನು ಪ್ರಚಾರ ಗಿಟ್ಟಿಸಲು ಏನೋ ಇವರಿಲ್ಲದಿದ್ದರೆ ಬ್ರಂಹಾಂಡವೇ ಇರದು ಎಂಬ ರೀತಿಯಲ್ಲಿ ವಾಚಾಲರಾಗುತ್ತಾ ಭೊ ಪರಾಕು ಕೂಗಿಸುತ್ತಾರೆ.

ಧರ್ಮಪೀಠದಲ್ಲಿ ಕುಳಿತು ಸರ್ವಾಧಿಕಾರಿ ಮನೋಭಾವದಿಂದ ಅನಾಚಾರ, ಅತ್ಯಾಚಾರ ಹಾಗೂ ಸಜ್ಜನರ ಹಿಂಸೆಯನ್ನು ಮಾಡುತ್ತಾ ಜನರಿಂದ ಛೀ, ಥೂ ಉಗಿಸಿಕ್ಕೊಳ್ಳುತ್ತಾರೆ.

ನ್ಯಾಯಪೀಠವು ಇವರ ಘನಾಂಧಾರಿ ಕೆಲಸವನ್ನು ನೋಡಿ ‘ಧೋಖೇಬಾಜ್’ ಎಂಬ ನೀಚ ಬಿರುದನ್ನೂ ನೀಡಿದೆ.

ಅನಾಚಾರವನ್ನು ಪ್ರಶ್ನಿಸುವ ಜನತೆಗೆ ಉತ್ತರ ನೀಡದೆ ಹೇಡಿಗಳಂತೆ ಹೊಡಿದೋ, ಬಡಿದೋ ಅಥವಾ ಕೇಸ್ ಜಡಿಸಿಯೋ ಬಾಯಿಮುಚ್ಚಿಸುವ ಹುನ್ನಾರ ಮಾಡುತ್ತಿದ್ದಾರೆ.

ಇಂತಹ ನೀಚರನ್ನು ರಾಮಾವತಾರವೆಂದು ಕರೆಯುವ ಅಂಧ ಭಕ್ತರನ್ನು ಶ್ಲಾಘಿಸಲೇಬೇಕು.

ಎಲ್ಲಿ ಮರ್ಯಾದಾಪುರುಷೋತ್ತಮರಾದ ಪ್ರಭು ಶ್ರೀ ರಾಮಚಂದ್ರರು…….
ಎಲ್ಲಿ ಅನಾಚಾರಿ ಧೋಖೇಬಾಜ್………

ಯಾರು ಯಾರನ್ನು ಅವಮಾನ ಮಾಡುತ್ತಾರೆ????

Pranav Kumar
25/09/2017
source: https://www.facebook.com/groups/1499395003680065/permalink/2030475250572035/