ನಮ್ಮ ಸ್ವಾಮಿಗಳು ಪೂರ್ಣ ಕ್ರಿಮಿನಲ್ ಮೈಂಡ್ ನವರು

142 jun ನಮ್ಮ ಸ್ವಾಮಿಗಳು ಪೂರ್ಣ ಕ್ರಿಮಿನಲ್ ಮೈಂಡ್ ನವರು. ಪೀಠ ಏರುವ ಮುಂಚೆ ಗಮನಕ್ಕೆ ಬರಲಿಲ್ಲ. ಪೀಠ ಏರಿದ ನಂತರ ಅವರ ಯೋಚನೆ ಚಿಂತನೆಯಲ್ಲಾ ಭಗವಂತನ ಕಡೆ ಇದ್ದಿದ್ದಲ್ಲ. ಎಲ್ಲ ಕೋರ್ಟ್ ನ ಕಡೆಗೆ. ಈ ಕೋರ್ಟ್ ನ ಬಗ್ಗೆ ಚಿಂತಿಸುವವರು ಅದೊಂದು ಚಟವಾಗಿ ಹತ್ತಿಸಿಕೊಂಡು ಬಿಡುತ್ತಾರೆ. ಇಂತಹ ಚಟ ಹತ್ತಿಸಿಕೊಂಡವರು ನಾಲ್ಕಾರು ಊರಿಗೆ ಓಬ್ಬರಿರುತ್ತಾರೆ. ಅಂತಹವರಿಗೆ ಕೋರ್ಟ್ ನದೇ ಧ್ಯಾನ. ಹಿಡಿದಿದ್ದಕ್ಕು ಮುಟ್ಟಿದ್ದಕ್ಕು ಕೋರ್ಟಿಗೆ ಹೋಗುತ್ತಲೇ ಇರುತ್ತಾರೆ. ಸನ್ಯಾಸಿಗಳಿಗೆ ಬ್ರಹ್ಮಸೂತ್ರ ಭಗವದ್ಗೀತೆ ಇದ್ದಾಂಗೆ ಇವರಿಗೆ ಲಾ ಪುಸ್ತಕಗಳು.ಜಿಜ್ಞಾಸೆ ಎಂದರೆ ಕಾನೂನು.ಸತ್ಸಂಗ ಎಂದರೆ ವಕೀಲರು. ಕೋರ್ಟ್ ಎಂದರೆ ಅವರಿಗೆ ಕ್ರೀಡಾಂಗಣ. ಕೆಲವರಿಗೆ ಇಸ್ಪೀಟ್ ಆಡಲು ಹಾಸಿದ ಜಮಖಾನದಂತೆ. ಯಕ್ಷಗಾನದವರಿಗೆ ರಂಗಮಂಚ ಇದ್ದಂತೆ. ನಮ್ಮ ಸ್ವಾಮಿಗಳಿಗೆ ಕೋರ್ಟಿನ ಚಟ ಇದೆ. ಕೋರ್ಟಿನ ಕೇಸುಗಳ ಚಿಂತನೆಯ ಕಾಲವೇ ಅವರ ಧ್ಯಾನಕಾಲ.

ಅವರು ಪೀಠಾರೋಹಣ ಮಾಡಿ ಮೂರ್ನಾಲ್ಕು ವರ್ಷಕ್ಕೆ ಕೋರ್ಟಿಗೆ ಪದಾರ್ಪಣೆ ಮಾಡಲು ಪ್ರಾರಂಭಿಸಿದರು. ಸನ್ಯಾಸ ಸ್ವೀಕರಿಸಿದ ನಂತರದ ಮೊಟ್ಟ ಮೊದಲ ಕೇಸನ್ನು 2003 ರಲ್ಲಿ RD77/03 ಅಂತ ನಂಬರು ಹೋಂದಿರುವ ಲೊವರ್ ಕೇಸ್ ಹಾಕಿದರು. ಪೀಠಾರೋಹಣ ಆಗಿ ಮೂರು ವರ್ಷ ಅಂತೂ ತಮ್ಮ ಖಯಾಲಿಯನ್ನು ತಡೆ ಹಿಡಿದು ಕೊಂಡಿದ್ದರು. ಅವರ ಈ ಮೊದಲ ಕೇಸ್ RB vs principal secretary of Karnataka ಆಗಿತ್ತು. ವಿಷಯಂತಂದ್ರೆ ಮಠಮಂದಿರಗಳ ಮೇಲೆ ಸರ್ಕಾರದ ಯಾವ ನಿಯಂತ್ರಣವೂ ಇರಬಾರದು ಎಂಬುದಾಗಿತ್ತು. 30 4 2003ರಲ್ಲಿ ಈ ಕೇಸ್ ದಾಖಲಿಸಿದರು. ಮೂರು ವರ್ಷ ನಡೆಯಿತು. 2005ರಲ್ಲಿ 3440| 05 ಕೇಸ್ ಅನ್ನು ರಾಜ್ಯಾದ್ಯಂತ ಇರುವ ದೇವಸ್ಥಾನಗಳ ಧರ್ಮದರ್ಶಿ ಮಂಡಳಿ ಹಾಕಿತು. ಇದು ನೂರಾರು ಜನ ಸೇರ್ ಹಾಕಿದ್ದು. ಇದರ ವಿಷಯ ಮಠಮಂದಿರಗಳ ಮೇಲೆ ಸರ್ಕಾರದ ನಿಯಂತ್ರಣ ಇರಬೇಕು ಎಂದು. ಇದು ಸ್ವಾಮಿಗಳ ವಿಷಯಕ್ಕೆ ವಿರುದ್ಧ ವಿಷಯವಾಗಿತ್ತು. 6 9 2006ರಂದು ಸ್ವಾಮಿಗಳು ಹಾಕಿದ ಕೇಸ್ ,ಕೆಲವು ಅಪೀಲ್ ಗಳ ಸಹಿತ ಕಿತ್ತುಕೊಂಡು ಹೋಯಿತು.
ಹೀಗೆ ಅನೇಕ ಕೇಸುಗಳನ್ನು ಹಾಕುತ್ತಾ ಕಾನೂನಿನ ನಿರಂತರ ಅಧ್ಯಯನ ನಡೆಸುತ್ತಲೇ ಬಂದರು.

ಅತ್ಯಾಚಾರದ ಕೇಸಿನ ವಾಸನೆ ಬರುವ ಎರಡು ತಿಂಗಳ ಪೂರ್ವದಲ್ಲಿ ಮತ್ತೊಂದು ಬ್ಲಾಕ್ ಮೇಲ್ ಕೇಸ್ ದಾಖಲಿಸಿದ್ದರು. ದಿವಾಕರ ಶಾಸ್ತ್ರಿಯವರದ್ದಲ್ಲ. ಇದು ಬೇರೆ. 26 5 2014ರಂದು ಗಿರಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಸಿಸಿ 13527-14 . ರಾಮಚಂದ್ರಾಪುರ ಮಠದ ಆಡಳಿತಾಧಿಕಾರಿ ಕೇಜಿ ಭಟ್ಟರು 1 ಮಲ್ಲಿಕಾರ್ಜುನ 2 ಚಂದನ್ 3 ರಾಜಗೋಪಾಲ ಅಡಿ 4 ಶೇಷಾನಂದ ಅಡಿ 5 ಗೋಪಾಲ ಸದಾಶಿವ ಗಾಯತ್ರಿ 6 ಅಮಿತ್ ನಾಡಕರ್ಣಿ 7 ಗಣಪತಿ ಗಜಾನನ ಹಿರೆ ಈ ಏಳು ಜನರ ಮೇಲೆ ಬ್ಲಾಕ್ ಮೇಲ್ ಕೇಸ್ ದಾಖಲಿಸಿದರು.ಏನೋ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಂಬಿಸಲು ಹೀಗೆ ಕೇಸ್ ದಾಖಲಿಸಿದರು. ಪರಪತ್ನಿಯರ ಜೊತೆ ಕಳ್ಳಕೂಡಿಕೆ ವ್ಯವಹಾರ ಇಟ್ಟು ಕೊಂಡಿದ್ದರು, ಓಂದು ರೀತಿಯ ಅಂತರ್ಗತ ಉದ್ವೇಗ ತಳಮಳ ಕಾಡುತ್ತಿತ್ತು. ತಮ್ಮ ಪ್ರಕರಣ ಹೊರಬಂದು ಹೋದರೆ ಹತ್ತರಲ್ಲಿ ಇನ್ನೊಂದು ಆಗಿ ಮಹತ್ವದ್ದಾಗದಿರಲಿ ಎಂಬ ಮುಂದಾಲೊಚನೆ ಇದ್ದಿರಬಹುದು.

ಈ ಕೇಸ್ ಹಾಕಿಸಿಕೊಂಡ ಏಳು ಜನ ಗೋಕರ್ಣ ಪರಭಾರೆ ಮಾಡಿದ್ದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ತನ್ನ ಮೇಲೆ ಬರಬಹುದಾದ ಅತ್ಯಾಚಾರ ಪ್ರಕರಣವನ್ನು ಈ ಕೇಸಿನೊಂದಿಗೆ ತಳಕು ಹಾಕಿ ತಮ್ಮ ಭಕ್ತರ ನಂಬಿಕೆಯನ್ನು ಹತೋಟಿಯಲ್ಲಿರಿಸಲು, ಗೊಂದಲ ಮೂಡಿಸಲು ಮಾಡಿದಂತಹ ಕ್ರಮ ಇದಾಗಿತ್ತು.

ಈ ಕೇಸ್ ಹ್ಯಾಗೆ ಮುಂದುವರೆಯಿತು ನೋಡಿದರೆ ನೀವು ದಿಜ್ಮೂಡ ರಾಗಲೇಬೇಕು. ಕೋರ್ಟಿನ ಸ್ವಭಾವಗಳನ್ನು ಮೀರಿ ಇಲ್ಲಿ ವಿಚಾರಣೆಯ ದಿನಾಂಕಗಳು ಕ್ಷಿಪ್ರಗತಿಯಲ್ಲಿ ನಿರ್ದಾರಿತವಾಗಿವೆ. ಆ ಕೋರ್ಟ್ ಈ ಪ್ರಕರಣ ಓಂದನ್ನೇ ಆವರಿಸಿ ಕೊಂಡು ಬಿಟ್ಟಿತಾಂತ. 26 5 2014 ರಂದು ಗಿರಿನಗರ ಠಾಣೆಯಲ್ಲಿ ಕೇಸ್ ದಾಖಲಾಗುತ್ತದೆ. ಅದೇ ದಿನ ಬೆಂಗಳೂರು ಮೆಜಿಸ್ಟೇಟ್ ಕೋರ್ಟ್ ನಲ್ಲಿ ರಿಜಿಸ್ಟ್ರಿ ಆಗುತ್ತದೆ. ಕೇವಲ 10 ದಿನದಲ್ಲಿ ಅಂದರೆ 6 6 2014ರಲ್ಲಿ ವಿಚಾರಣೆಗೆ ಬರೂತ್ತದೆ. ಮತ್ತೆ 6 ದಿನಕ್ಕೆ ಹಿಯರಿಂಗ್ ಇರುತ್ತದೆ. 12 6 2014 ರ ಈ ಹಿಯರಿಂಗ್ ನಂತರ ಮುಂದಿನ ಹಿಯರಿಂಗ್ ದಿನಾಂಕ ನೋಡಿ ತಬ್ಬಿಬ್ಬಾಗಬೇಡಿ. 20,21,22,(23 ಬಾನುವಾರ) 25, 26.ಓಂದು ಸಾಮಾನ್ಯ ಬ್ಲಾಕ್ ಮೇಲ್ ಕೇಸ್ ಹೀಗೆ ನಿರಂತರ ಆರು ದಿನಗಳ ಹಿಯರಿಂಗ್ ಪಡೆಯುತ್ತದೆ. ನಂತರ ಸ್ವಲ್ಪ ಸ್ಥಿಮಿತಕ್ಕೆ ಬಂದ ವಿಚಾರಣೆ 2 6 2014ಕ್ಕೆ ಬೆಂಚ್ ಛೆಂಜ್ ಆಗಿ ಶರವೇಗದಲ್ಲಿ ಓಡಿದ್ದು ಕಂಡುಬರೂತ್ತದೆ. ಆರ್ಥಾತ್ ಪ್ರಕರಣ ಹಿಂದೆ ಯಾರೊ ಮಸಲತ್ತು ಮಾಡುತ್ತಿದ್ದಾರೆಂದು ಅರ್ಥೈಸ ಬಹುದಾಗಿದೆ. ಈಗ ಈ ಕೇಸ್ 19 7 2017ಕ್ಕೆ ನಿಗಧಿಯಾಗಿದೆ. ಇನ್ನೂ ಕೂಡ ಚಾರ್ಜ್ ಪ್ರೇಮ್ ಮಾಡಲು ಆಗಿಲ್ಲ.

ಸ್ವಾಮಿಗಳು ಮತ್ತು ಅವರ ಸುತ್ತಮುತ್ತ ಇರುವ ಬಗಲಿಗಳ ಪರ ಮತ್ತು ವಿರುದ್ಧವಾಗಿ 50-60 ಪ್ರಕರಣಗಳಿದ್ದಾವೆ. ಲಾಯರ್ ಗಳ ದೊಡ್ಡ ಪಡೆಯನ್ನೇ ಮಠದ ಪರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕೆಲವು ಲಾಯರ್ ಗಳು ತಮ್ಮನ್ನು ಕೂಡ ಮಠದ ಲಾಯರ್ ಪಡೆಗೆ ಸೇರಿಸಿ ಕೋಳ್ಳುವಂತೆ ಉರುಳುಸೇವೆ ಮಾಡುತ್ತಿದ್ದಾರೆ. ಸ್ವಾಮಿಗಳಿಗೆ ಹೆಂಗಸರ ಖಯಾಲಿ ಓಂದೇ ಇದೆ ಎಂದು ಕೆಲವರು ತಪ್ಪು ತಿಳಿದಿದ್ದಾರೆ. ಅವರಿಗೆ ಕೋರ್ಟಿನ ಖಯಾಲಿಯು ಇದೆ. ಮಠದ ಉತ್ಪತ್ತಿಯ ದೊಡ್ಡ ಭಾಗವನ್ನು ಕೋರ್ಟಗಾಗಿ ವಿನಿಯೋಗಿಸುತ್ತಾರೆ. ತಿಳುವಳಿಕೆ ಇಲ್ಲದ ಭಕ್ತರು ತಮ್ಮ ಹಣ ಕೋರ್ಟ್ ಕಛೇರಿಗಳಿಗಾಗಿ ವ್ಯಯವಾಗುತ್ತಿರುವುದನ್ನು ಅರ್ಥ ಮಾಡಿ ಕೊಳ್ಳುತ್ತಿಲ್ಲ.

Ganapathi Bhatta Jigalemane
23/06/2017
source: https://www.facebook.com/groups/1499395003680065/permalink/1979669175652643/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s