ಮಠದ ಭಕ್ತರೇ ನಿಮ್ಮ ಧಾರ್ಮಿಕ ಭಾವನೆಗೆ ಈಗಲೂ ಧಕ್ಕೆಯಾಗಿಲ್ಲವೆ!!?

ಮಠದ ಭಕ್ತರೇ ನಿಮ್ಮ ಧಾರ್ಮಿಕ ಭಾವನೆಗೆ ಈಗಲೂ ಧಕ್ಕೆಯಾಗಿಲ್ಲವೆ!!? ಹವ್ಯಕರ ತೇಜೋವಧೆಯಾಗಿಲ್ಲವೆ… ಯಾರಿಂದ?!!
****************************

ನಾನು ಒಬ್ಬ ಹವ್ಯಕ. ನಮ್ಮ ಪೂರ್ವಜರ ಕಾಲದಿಂದಲೂ ರಾಮಚಂದ್ರಾಪುರ ಮಠಕ್ಕೆ ನಡೆದುಕೊಳ್ಳಲಾಗುತ್ತಿದೆ. ಹಾಗೆಯೇ ಮಠಕ್ಕೆ , ಗುರುವಿಗೆ ಸಲ್ಲಬೇಕಾದ ಎಲ್ಲ ಗೌರವ, ಹಣ ಎಲ್ಲವೂ ಸಲ್ಲುತ್ತಾ ಬಂದಿದೆ. ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಪೀಠವೇರಿದ ಮೇಲೆ ಎಲ್ಲರಂತೆ ನನ್ನ ಪಾಲಿನಿಂದಲೂ ಸಾಕಷ್ಟು ಹಣ ಬೇರೆ ಬೇರೆ ರೂಪದಲ್ಲಿ ಹೋಗಿದೆ. ಮುಷ್ಟಿ ಭಿಕ್ಷ, ಆ ವರಾಡ ಈ ವರಾಡ ಎಂದು ಸ್ಥಳೀಯ ಪರಿಚಯಸ್ಥ ಗುರಿಕಾರರೇ ಸಂಗ್ರಹಕ್ಕೆ ಬಂದಾಗ ವಿರೋಧಿಸಲಾಗದೆ ಪೀಠದ ಮೇಲೆ ಕುಳಿತು ರಾಘವೇಶ್ವರ ಶ್ರೀ ಮಾಡಿದ ಆದೇಶಗಳನ್ನು ಪಾಲಿಸುವ ಅನಿವಾರ್ಯ ವಾತಾವರಣವಿತ್ತು. ಅನುಕೂಲವಿದ್ದವರು ಹೆಚ್ಚೇ ದಾನ ಮಾಡಿದ್ದಾರೆ, ಕಂಡಕಂಡ ಕಾರ್ಯಕ್ರಮಗಳಿಗೆಲ್ಲ ದೇಣಿಗೆ ನೀಡಿದ್ದಾರೆ, ಹವ್ಯಕ ಮಹಾಸಭೆಯನ್ನೂ ಕಟ್ಟಿ ಬೆಳೆಸಿದವರಿದ್ದಾರೆ.ಎಲ್ಲವೂ ಧಾರ್ಮಿಕ ನಂಬಿಕೆ, ಶಂಕರಾಚಾರ್ಯ ಪೀಠ ಎನ್ನುವ ಭಕ್ತಿಯಿಂದ ಜೊತೆಗೆ ಪೀಠದ ಮೇಲೆ ಕುಳಿತ ರಾಘವೇಶ್ವರ ಶ್ರೀಗಳು ಏನೋ ಜಾತಿ ಸಂಘಟನೆ ಮಾಡೀ ಒಂದಿಷ್ಟು ಕಾರ್ಯಕ್ರಮ ಮಾಡ್ತಿದಾರೆ ಅನ್ನೋ ನಂಬಿಕೆಯಿಂದ, ಭಕ್ತಿಯಿಂದ.
ನಮ್ಮ ಕುಟುಂಬದಿಂದಲೂ ನನ್ನ ಪಾಲಿನ ಆಸ್ತಿಯ ಹಕ್ಕಿನ ಭಾಗದಿಂದಲೂ ಇವರು ಪೀಠ ಏರಿದ ಮೇಲೆ ಸಲ್ಲಬೇಕಾದ ಎಲ್ಲವೂ ಸಲ್ಲಿದೆ.ಆದರೆ ಪೀಠದ ಮೇಲೆ ಕುಳಿತ ಸಂನ್ಯಾಸಿ ಮಾಡಬಾರದ್ದೆನ್ನಲ್ಲ ಮಾಡಿದ್ದಾರೆ,ಯತಿನಿಯಮ ಮೀರಿ ನಡೆದಿದ್ದಾರೆ ಎಂದರೆ ಎಷ್ಟು ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರಬಹುದು. ಪೀಠವೇರುವ ಪ್ರಾರಂಭವೇ ಹಗರಣಗಳಲ್ಲಿ ಸಿಲುಕಿದ್ದರು ಎನ್ನುವುದು ಕೂಡ ಹಿರಿಯರು ಹೇಳುವ ಸತ್ಯ ಜೀವಂತ ಸಾಕ್ಷಿಗಳು ಸಾಕಷ್ಟಿವೆ. ಈಗಿನಂತೆ ಸಾಮಾಜಿಕ ತಾಣಗಳಿಲ್ಲದ್ದರಿಂದ ಅವುಗಳು ಅಷ್ಟಾಗಿ ಸುದ್ಧಿಯಾಗಿರಲಿಲ್ಲ. ಅದನ್ನು ಹೊರತಾಗಿಯೂ ಜನರ ಧಾರ್ಮಿಕ ಬಾವನೆಗೆ ಧಕ್ಕೆ ಮಾಡಿದ ನೂರೆಂಟು ವಿವಾದಗಳು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರರ ಮೇಲಿದೆ.ಇವರ ಮೇಲೆ ಎಷ್ಟೆಲ್ಲ ಕ್ರಿಮಿನಲ್ ಆಪಾದನೆಗಳಿವೆ,ಸಿವಿಲ್ ವ್ಯಾಜ್ಯಗಳಿವೆ, ಕಳ್ಳ ಕೂಡಿಕೆಯ ಹಲವಾರು ಗುಸು ಗುಸು ಸುದ್ಧಿಗಳಿವೆ.ಇವುಗಳು ಅವಿಚ್ಚಿನ್ನವಾಗಿ ನಡೆದುಕೊಂಡು ಬಂದ ಮಠದ ಭಕ್ತರ ಧಾರ್ಮಿಕ ನಂಬಿಕೆಗೆ ನೋವುಂಟುಮಾಡಲಿಲ್ಲವೆ?. ಇದನ್ನು ವಿರೋಧಿಸಿದವರನ್ನು ಬಾಯ್ಮುಚ್ಚುವ ಕೆಲಸ ರಾಘವೇಶ್ವರ ಶ್ರೀಗಳು ತಮ್ಮ ಪಟಾಲಂ ಮೂಲಕ ಮಾಡಿಸುತ್ತಿರುವುದು ಸರಿಯೇ. ರಾಘವೇಶ್ವರರಿಗೆ ನೇರವಾಗಿ ಪ್ರಶ್ನೆ ಕೇಳಬೇಕಾಗಿದೆ.. ಹವ್ಯಕ ಸಮಾಜದ ಹಲವರ ಮೇಲೆ ನ್ಯಾಯಾಂಗದ ದುರ್ಬಳಕೆ ಮಾಡಿಕೊಂಡು ವಾಕ್ ಸ್ವಾತಂತ್ರ್ಯವನ್ನು ಕಸಿಯುತ್ತಿರುವ ನಿಮ್ಮ ಪಟಾಲಂಗಳಿಗೆ ನಿಮ್ಮ ಮೇಲೆ ಇರುವ ಅತ್ಯಾಚಾರದಂತ ಪ್ರಕರಣಗಳು ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುತ್ತಿಲ್ಲವೇನು? ರಿಪೋರ್ಟ್ ಪ್ರಕಾರ ಅತ್ಯಾಚಾರ ಸಂತ್ರಸ್ಥೆಯೊಬಳು ನೀಡಿದ ಒಳ ಚೆಡ್ಡಿಯಲ್ಲಿರುವ ಅಂಶಗಳು ನಿಮ್ಮ DNA ಯೊಂದಿಗೆ ತಾಳೆಯಾಗುತ್ತಿದೆ ಎಂದ ಮೇಲೂ ನಿಮ್ಮನ್ನು ಓಲೈಸುತ್ತಾ ನಾವುಗಳು ಬಾಯಿ ಮುಚ್ಚಿಕೊಳ್ಳಬೇಕಾಗಿತ್ತೇನು? ಸಾಮಾಜಿಕ ತಾಣಗಳನ್ನು ಬಳಸಿಯೇ ಸಮಾಜವನ್ನು ಚಿದ್ರ ಮಾಡಿರುವ ನಿಮ್ಮ ದ್ವೇಷಪೂರಿತ ಭಾಷಣಗಳು,ಹೇಳಿಕೆಗಳು, ಪೊಳ್ಳು ಪವಾಡಗಳನ್ನು ಹರಿಬಿಟ್ಟು ಪ್ರಕರಣದ ದಿಕ್ಕು ತಪ್ಪಿಸಿ ಹಣ ಪೀಕುತ್ತಿರುವ ನೀವು, ನಿಮ್ಮ ಪಟಾಲಂಗಳು ಸಾಮಾಜಿಕ ತಾಣ ದಲ್ಲಿ ಏನು ಬೇಕಾದರೂ ಬರೆಯಬಹುದು, ನಿಮ್ಮ ಕೃಪಾಕಟಾಕ್ಷದಿಂದಲೇ ಸಂತ್ರಸ್ಥೆಯಾದವಳನ್ನು! ಸೂಳೆ ಎಂದು ಸಂಭೋಧಿಸಬಹುದು ಎಂದಾದರೆ,ಸಂವಿಧಾನಬದ್ದವಾದ FSL ರಿಪೋರ್ಟ್ ನಂಥ ವೈಜ್ಞಾನಿಕ ಸಾಕ್ಷಿಗಳನ್ನು ನೋಡಿದ ಮೇಲೂ ಬಾಯ್ಮುಚ್ಚಿ ಕುಳಿತಿರುತ್ತೇವೆ ಎಂದರೆ ಅದು ನಿಮ್ಮ ಭ್ರಮೆ! ನಿಮ್ಮ ವಿರುದ್ಧ ಬರೆದ ಲೇಖನಗಳಿಗೆ ಎಲ್ಲ ಸಾಕ್ಷಿಗಳನ್ನು ಒಂದೊಂದಾಗಿ ಈ ಜಾಲತಾಣದಲ್ಲಿಯೇ ಹಾಕಲಾಗುತ್ತದೆ. ಸಂಬಂಧಿಸಿದವರು ಯಾರ ಭಾವನೆಗೆ ಧಕ್ಕೆಯಾಗಿರಬಹುದು ಎನ್ನುವುದನ್ನು ಗಮನಿಸಿ ನ್ಯಾಯಾಲಯಕ್ಕೆ ವರಧಿ ಕೊಡಲು ಹಾದಿ ಸುಗಮವಾಗಲಿ ಎಂದು…ಜೈ ಶಂಕರಾಚಾರ್ಯ

Prakash Kakal
10/06/2017
source: https://www.facebook.com/groups/1499395003680065/permalink/1972374766382084/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s