ಮಠದಲ್ಲಿ ಹಾಯಾಗಿ ಉಣ್ಣುತ್ತಿರುವ ಹರಾಮಿಯ ಚೇಲಾಗಳೆಲ್ಲ ಮೈಮೇಲೆ ಬೀಳ್ತಾರೆ

ಮಠದಲ್ಲಿ ಹಾಯಾಗಿ ಉಣ್ಣುತ್ತಿರುವ ಹರಾಮಿಯ ಚೇಲಾಗಳೆಲ್ಲ ಮೈಮೇಲೆ ಬೀಳ್ತಾರೆ

ವೀರ್ಯಪ್ಪನ್ ಸಾಮ್ಗಳ ವಿರುದ್ಧ ಯಾರೊಬ್ಬರೂ ಏನನ್ನೂ ಹೇಳೋಹಾಗಿಲ್ಲ. ಅವನು ಸಾಕಿಕೊಂಡ ಸಾವಿರಾರು ’ನಾಯಿ’ಗಳಿವೆ. ಮೇಲಾಗಿ ಕತ್ತೆಕಿರುಬಗಳಿವೆ. ಮಠದ ಸೀಮೆ ಶಿಷ್ಯರಾಗಿದ್ದು ಹಿಂದೆ ಮಠಕ್ಕೆ ತಲೆತಲಾಂತರದಿಂದ ಕಾಣಿಕೆ ಕೊಟ್ಟು ನಡೆದುಕೊಂಡು ಬಂದವರನ್ನೂ ಸಹ ಮಠಕ್ಕೆ ಸಂಬಂಧವೇ ಇಲ್ಲ; ಅವರ್ಯಾರೋ ಗೊತ್ತಿಲ್ಲ, ಮಠದ ಬಗ್ಗೆ ಏನನ್ನೂ ಹೇಳುವ ಅಧಿಕಾರ ಅವರಿಗಿಲ್ಲ ಅಂತ ತಾಕೀತು ಮಾಡ್ತಾರೆ! ಯಾವಾಗ?- ಯಾವಾಗ ಶಿಷ್ಯರು ಎಚ್ಚೆತ್ತುಕೊಂಡು ಕಳ್ಳ ಸಾಮಿಯ ಕಚ್ಚೆಹರುಕುತನವನ್ನು ವಿರೋಧಿಸಲು ಆರಂಭಿಸುತ್ತಾರೋ ಆಗ ಶುರುವಾಗುತ್ತದೆ ನಾಯಿಗಳ ದಾಳಿ.

ಮಠದ ಅವ್ಯವಹಾರಗಳನ್ನು ಬಯಲಿಗೆಳೆಯುತ್ತಿರುವುದಕ್ಕೆ ಪರೋಕ್ಷ ಹೇಳಿಕೆ ಕೊಟ್ಟ ಸ್ನೇಹಿತರೊಬ್ಬರ ಹೇಳಿಕೆಗೆ ಹಲವು ಬೌಬೌ ಪ್ರತ್ಯುತ್ತರಗಳು ಬಂದಿವೆ. ಮುಚ್ಚಿಕೊಂಡು ಸುಮ್ಮನಿರಿ, ಮುದರ್ಕಂಡು ಸುಮ್ಮನಿದ್ಬುಡು ಎಂಬಂತಹ ಫರ್ಮಾನುಗಳು ಹೊರಟಿರುವುದು ಕಾಣಿಸಿತು. ಮುದಿತನಕ್ಕೆ ಹೆಜ್ಜೆ ದಾಂಗುಡಿ ಇಡಲು ಹತ್ತಿರವಾದ ನ್ಯಾಯಯುತ ದುಡಿಮೆ ಮಾಡಲಾಗದ ಮೈಗಳ್ಳರು ಮಠವನ್ನು ಸೇರಿಕೊಂಡು ಎರಡು ದಶಕಗಳಿಂದ ಮಠದಲ್ಲಿ ಹೊಟ್ಟೆಗೂ ಜೇಬಿಗೂ ಗಡದ್ದಾಗಿ ಊಟ ಹೊಡೆದಿರುವುದೇ ಅದಕ್ಕೆಲ್ಲ ಕಾರಣ. ಸಾಮಾನು ಸಾಮ್ಗಳು ಪೀಠದಲ್ಲಿರುವವರೆಗೂ ಅಂತಹ ನಾಯಿಗಳಿಗೆ ಮತ್ತು ಕತ್ತೆಕಿರುಬಗಳಿಗೆ ಬದುಕು ಬಹಳ ಸಲೀಸು.

ಅಂಥವರು ಮಠದಲ್ಲೇ ಬಿದ್ದಿರುತ್ತಾರೆ. ಹೊತ್ತಿಂದೊತ್ತಿಗೆ ಪುಷ್ಕಳ ತಿಂಡಿ-ಭೂರಿ ಭೋಜನ ನಡೆಸಲಿಕ್ಕೆ ತೊಂದರೆಯಿಲ್ಲ. ಬರುವವರನ್ನು ಹಿಡಿದು, ಬೋಳೆಣ್ಣೆ ಸವರಿ ವಸೂಲಿ ಮಾಡಿ, ಒಂದಷ್ಟು ಜೇಬಿಗೆ ಬಿಟ್ಟುಕೊಂಡು, ಉಳಿದದ್ದನ್ನು ಮಠದ ಮಾಣಿಯ ಬೊಕ್ಕಸಕ್ಕೆ ಹಾಕಿ ಅಡ್ಡಬಿದ್ದು ಪರಾಕು ಕೂಗ್ತಾರೆ, ಬರೇಕಾಮ ಕೂಗ್ತಾರೆ. ಮಲಗಿದಲ್ಲೆ ಮಗ್ಗಲು ಬದಲಾಯಿಸಿದಾಗ ಸಾಮ್ಗಳ ’ಏಕಾಂತ ಪ್ರಸಾದ’ಗಳು ಕೆಲವೊಮ್ಮೆ ಸಿಗುತ್ತವೆ. ಆಗ ಅವುಗಳ ಮೇಲೆ ಬಿದ್ದರಾಯಿತು. ಕುಂಯೋ ಮುರ್ರೋ ಅನ್ನೋದಿಲ್ಲ ಯಾಕೆಂದರೆ ಏಕಾಂತ ಭಕ್ತೆಯರ ವ್ಯವಹಾರ ಇವರಿಗೆಲ್ಲ ಗೊತ್ತಿರ್ತದೆ, ವ್ಯವಹಾರ ಬಹಿರಂಗಗೊಂಡರೆ ಬಾಕಿ ಜನರೆದುರಿಗೆ ಮಹಾಭಕ್ತೆಯರ ’ಮರ್ಯಾದಿ’ ಮೂರುಕಾಸಿಗೆ ಹರಾಜಾಗುತ್ತದೆ. ಹೀಗಾಗಿ ಮಠದ ಗಂಡು ನಾಯಿ ಮತ್ತು ಕತ್ತೆಕಿರುಬಗಳಿಗೆಲ್ಲ ಅಲ್ಲಲ್ಲೆ ಅಡ್ಜಸ್ಟ್ ಮೆಂಟು!

ಏನಂದ್ರೆ ಏನೂ ಗೊತ್ತಿಲ್ಲದೆ ಲಫಂಗರೆನಿಸಿಕೊಂಡು ಊರು ಮಧ್ಯದಲ್ಲಿ ಚಿಲ್ಲರೆ ಕಳ್ಳರಂತಿದ್ದ ಮಾಣಿಗಳೆಲ್ಲ ಮಠ ಸೇರಿಕೊಂಡು, ಹಳದೀ ಹೊದ್ದು, ಬಾಯಿ ವಾಸನೆಗೆ ಗುಟ್ಕಾ ಹೊರತು ಬೇರೆ ಯಾವುದೂ ತಾಗೋದಿಲ್ಲ ಎಂಬ ಪ್ರಾಮಾಣಿಕ ಅನಿಸಿಕೆಯಿಂದ ಅದನ್ನೇ ಜಗಿಯುತ್ತ, ವ್ಯವಹಾರ ಸುರು ಹಚ್ಚಿಕೊಳ್ತಾರೆ. ಯಾವ ಬಂಡವಾಳ ಬೇಡ ಏನೂ ಬೇಡ. ಹೊಟ್ಟೆಗೂ ಊಟ, ಬಟ್ಟೆಯೊಳಗಿನ ಬಾವಲಿಗೂ ಊಟ! ಒಂದೇ ವರ್ಷದಲ್ಲಿ ಕೈಯಲ್ಲಿ ಕೊರಳಲ್ಲಿ ಬಂಗಾರದ ಹಗ್ಗಗಳು ಬರುತ್ತವೆ. ಹಲಗೆ ಮೊಬೈಲುಗಳು ಎರಡು ಮೂರು ಬರುತ್ತವೆ. ಊರಲ್ಲಿ ಬಂಗಲೆಗಳನ್ನು ಕಟ್ಟಲು ಆರಂಭಿಸುತ್ತಾರೆ. ಇದನ್ನೆಲ್ಲ ಕಣ್ಣಾರೆ ಕಾಣುತ್ತ ಕಾಣಿಕೆ ಕೊಡುತ್ತಲೇ ಇರುವ ಕುರಿಗಳು “ಮಠದ ಪರಿವಾರ’ದ ಕಾಂಚಾಣದ ಕತೆಗಳನ್ನು ಹಿಂದುಗಡೆ ಮಾತನಾಡಿಕೊಳ್ಳುತ್ತಾರೆಯೇ ಹೊರತು ರಟ್ಟೆ ಹಿಡಿದು ಕೇಳುವ ಯಾವ ಪುರುಷನೂ ಅಲ್ಲಿಲ್ಲ.

ಶಿಖರ ನಗರದಲ್ಲಿ ಕೆಲವು ಅಡ್ಡಕಸುಬಿ ಖಾಸಗಿ ನೌಕರರು ತಮ್ಮ ನೌಕರಿ ಬಿಟ್ಟು ಮಠದಲ್ಲೇ ಜಾಂಡಾ ಹೂಡಿ ಆರ್ಥಿಕವಾಗಿ ಸೇನಾನಿಗಳಾಗಿರುವುದು ಯಾರಿಗೆ ಗೊತ್ತಿರದ ವಿಷಯ ಅಂದುಕೊಂಡಿದ್ದಾರೆ? ಹಳದೀ ಕಚ್ಚೆಯ ಮೇಲೆ ಬೆಲ್ಟ್ ಬ್ಯಾಗು ಹಾಕಿಕೊಳ್ಳೋ ಅಂತವರು ಅದರಲ್ಲಿ ಇಟ್ಟುಕೊಳ್ಳುವ ವಸ್ತುಗಳನ್ನೆಲ್ಲ ಸರಿಯಾಗಿ ನೋಡಿದರೆ ದನಕಾಯ್ತಿದ್ದ ತಿಪ್ಪನಿಗಾದರೂ ಅರ್ಥವಾಗ್ತಿತ್ತು. ಈಗ ತಿಪ್ಪ ದನ ಕಾಯೋ ಕಾಲ ಹೋಗಿಬಿಟ್ಟಿದೆ. ಈಗ ದನ ಕಾಯೋರೆಲ್ಲ ಮಠ ಸೇರ್ಕಂಡಿದ್ದಾರೆ. ಹಣ ಪೀಕುವ ಹೊಸ ಧಂದೆಯಾಗಿರೋ ಅದೊಂದು ಕಚ್ಚೆ ಹರುಕರಿಗೆ ಕೆಲವುಕಾಲ ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ನೆರಳು ನೀಡ್ತಾ ಇದೆ. ಆಗ ತುಮರಿ ಅಂದುಕೊಂಡಿದ್ದು-ರಾಮನಾಮ ಜಪ ಮಾಡ್ತಾ ಇಲ್ಲ, ದನದ ಜಪ ಮಾಡಿ ಕೆಲವು ಸಮಯ ಜನರನ್ನು ದಾರಿ ತಪ್ಪಿಸುತ್ತಾರಲ್ಲ ಎಂಬುದು.

ನಂಬಿ ಸಾರ್, ಆ ಜನ ಹಾಗೇ, ಮಠಕ್ಕೆ ಬರುವವರ ಮೂಗಿಗೆ ಯಾವ ’ಗಂಧ’ ಹಚ್ಚಬೇಕು ಮತ್ತು ತಲೆಗೆ ಯಾವ ಎಣ್ಣೆ ಸವರಬೇಕು ಅನ್ನೋದು ಅವರಿಗೆ ಕರತಲಾಮಲಕವಾಗಿಬಿಟ್ಟಿದೆ. ಪಾಪ ಪುಣ್ಯ ಎಲ್ಲ ಆಮೇಲೆ, ಮೊದಲು ಜೇಬು ಗಟ್ಟಿಯಾಗ್ಬೇಕು. ಜೇಬು ಗಟ್ಟಿಯಾಗಲಿ ಅಂತ ಅವನ್ಯಾರೋ ಹೆಂಡತಿ ಸಮೇತ ಮಠಕ್ಕೆ ಬಂದ. ಮಠದ ಮಾಣಿ ಅವನಿಗೆ ರೀಯಲ್ ಎಸ್ಟೇಟ್ ಕೆಲಸ ಹೆಚ್ಚಿದ. ಅವ ಹೊರಗಡೆ ಓಡಾಡುವಾಗ ಮಠದೊಳಗೆ ಅವನ ಹೆಂಡತಿಯೊಡನೆ ’ಮೀಟಿಂಗ್’ ಆರಂಭಗೊಂಡಿತು. ಮಂಗನಾಗೋ ಯಾತ್ರೆಯುದ್ದಕ್ಕೂ ಅವಳನ್ನು ಜೊತೆಗೇ ಇಟ್ಟುಕೊಂಡು ನಿತ್ಯವೂ ಹಾರುತ್ತಲೇ ಸಾಗಿದರು ವೀರ್ಯಪ್ಪನ್ ಸಾಮ್ಗಳು!

ಹಿಂದೆ ಮಲ್ಲಿಕಾ ಶರಬತ್ತು ತಯಾರಿಸಿದಾಗಲೇ ನಮಗೆಲ್ಲ ಭಾರೀ ಅನುಮಾನ ಹೊಡೆದಿತ್ತು. ಮಠದಲ್ಲಿ ಶ್ರೀಗಂಧದ ಬದಲಿಗೆ ದೇವರಿಗೆ ವೀರ್ಯಾರ್ಪಣೆಯೇ ಆಗುತ್ತಿದೆ ಅಂತ; ಆ ಕೆಲಸ ಒಂದೂವರೆ ದಶಕದ ವರೆಗೆ ಗೋಪ್ಯವಾಗಿ ನಡೀತು. ನಂತರ ಒಂದಿನ ಹೊಗೆ ಬಂತು! ಹೊಗೆ ಬರುವ ಹೊತ್ತಿಗೆ ಮಠದ ಮಾಣಿ ನಾಯಿಗಳಿಗೂ ಕತ್ತೆಕಿರುಬಗಳಿಗೂ ಬೇಕಾದಷ್ಟು ’ಬಿಸ್ಕೀಟು’ ಕೊಟ್ಟು ಕೊಬ್ಬಿಸಿಕೊಂಡುಬಿಟ್ಟಿದ್ದ. ಮಠದವನನ್ನು ವಿರೋಧಿಸುವವರಿಗೆ ಹಲವು ರೂಪದಲ್ಲಿ ಜೀವಭಯ ಕಾಡಹತ್ತಿತು.

“ಯಾರಿಗೂ ಸಹಾಯ ಮಾಡದವರು ಎಲ್ಲಿದ್ದರೇನು? ಇದ್ದರೇನು ಬಿಟ್ಟರೇನು? ನಮ್ಮ ಸಾಮ್ಗಳು ನಮಗೆಲ್ಲ ಸಹಾಯ ಮಾಡಿದ್ದಾರೆ, ಹೀಗಾಗಿ ಅವರು ಸಾಕ್ಷಾತ್ ಶ್ರೀರಾಮ” ಅಂತ ಕೂಗತೊಡಗುವ ಅವಕಾಶವಾದಿ ನಾಯಿಗಳಿವೆ, ಕಚ್ಚುವ ಕತ್ತೆಕಿರುಬಗಳಿವೆ. ಸಮ್ಮರ್ ಕ್ಯಾಂಪ್ ಉಸ್ತುವಾರಿ ಸೂಜಿಭಟ್ಟ ಕುರಿವಾಡೆಯಲ್ಲಿ ಸಾಮ್ಗಳು ’ಹಿಮಾಲಯ ಚತುರ್ಮೋಸ’ ಕೈಗೊಂಡ ಅವಧಿಯಲ್ಲಿ ಮೈಕು ಹಿಡಿದು ಪರಾಕು ಹಾಕಿ ನಂತರ ಕಾರು ಖರೀದಿಸಿದ ಕತೆ ಗೊತ್ತಿಲ್ಲವೇ? ಚಟ್ನೆ ತಿಮ್ಮಣ್ಣ ಹೆಗಡೇರು ಹೇಳಿದಂತೆ, ಮಸಾಕುಳಿಯಲ್ಲಿ ಬಂಗಲೆಯಂತಹ ಮನೆಕಟ್ಟುವಷ್ಟು ಆದಾಯವಿಲ್ಲದ ವ್ಯಕ್ತಿ ನಗರದಲ್ಲಿರುವಂಥ ಮನೆಕಟ್ಟಿದ್ದು ಗೊತ್ತಿಲ್ಲವೇ? ವೈದ್ಯ, ಬಸ್ಸಣ್ಣ ಮುಂತಾದವರು ಕೋಟಿಗಳಲ್ಲಿ ಸುವರ್ಣ ಮಂತ್ರಾಕ್ಷತೆ ಪಡೆದುಕೊಂಡಿದ್ದು ಗೊತ್ತಿಲ್ಲವೇ? ಏಕಾಂತ ಭಕ್ತೆಯರು ಹಾಸ್ಟೆಲು, ಇಂಡಸ್ಟ್ರಿ ಆರಂಭಿಸಿದ್ದು ಗೊತ್ತಿಲ್ಲವೇ? ಇದು ಕೆಲವೇ ಶಾಂಪಲ್ಲು, ಕತೆ ಬಾಳಾ ದೀರ್ಘ ಯಾದಿಯನ್ನೇ ಹೊಂದಿದೆ. ಅದು ಪಡೆದುಕೊಂಡವರಿಗೂ ಮತ್ತು ವೀರ್ಯಪ್ಪನ್ ಸಾಮ್ಗಳಿಗೂ ಮಾತ್ರ ಗೊತ್ತು!

ಬಿಸ್ಕೀಟ್ ತಿಂದ ನಾಯಿಗೊಂದು ಋಣ, ಹಂಗು ಇರುತ್ತದಲ್ಲ? ಹಾಗೆಯೇ ಸಾಮ್ಗಳ ವಿರುದ್ಧ ಒಂದು ಸಣ್ಣ ಹೇಳಿಕೆ ಬಂದರೂ ಅವುಗಳೆಲ್ಲ ಬಾಲ ಬಿಚ್ಚಿ ಬೊಗಳತೊಡಗುತ್ತವೆ. ಏನನ್ನು ಬೊಗಳಬೇಕೆಂಬ ಬಗ್ಗೆ ಸಾಮ್ಗಳು ಮತ್ತು ಅವರ ಬಾವಯ್ಯ ಸ್ಕಿಟ್ ರೆಡಿಮಾಡಿಕೊಡ್ತಾರೆ. ಈ ಹರಾಮಿಯ ಚೇಲಾಗಳೆಲ್ಲ ವಿದ್ವನ್ಮಣಿಗಳಂತೆ, ಲೋಕದಲ್ಲಿಲ್ಲದ ಪುಣ್ಯಗಳಿಕೆ ಮಾಡಿಕೊಂಡ ಮಹಾ ಧರ್ಮಭೀರುಗಳಂತೆ ಕೆಲವೊಮ್ಮೆ ಬೇರೆಯವರಿಗೆ ಉಪದೇಶ ಕೊಡ್ತಾರೆ. ಅವರ ವಾಗ್ಝರಿಗಳಲ್ಲಿರುವ ಪದಪದಗಳನ್ನೂ ಕಳ್ಳ-ಕುಳ್ಳ ನಿರ್ದೇಶಿಸಿರುತ್ತಾರೆ. ಎಷ್ಟರಮಟ್ಟಿಗೆ ಅವರೆಲ್ಲರಿಗೆ ಹಂಗಿದೆ ಎಂದರೆ ರಾಮ ಪ್ರಸಾದ ಎನ್ನುತ್ತ ವೀರ್ಯಪ್ಪನ್ ತನ್ನ ವೀರ್ಯವನ್ನೋ ಲದ್ದಿಯನ್ನೋ ಕಟ್ಟಿಕೊಟ್ಟರೆ ಲಬಕ್ಕನೆ ಬಾಯಿಗೆ ಒಕ್ಕಂಡು ಪರಾಕು ಕೂಗ್ತಾರೆ. ಕಾಸಿಗಾಗಿ ಹೇಸಿಗೆ ತಿನ್ನಲೂ ಹೇಸದ ಆ ಜನ, ಯಾರಾದರೂ “ಮಠದವ ದಾರಿ ತಪ್ಪಿದ್ದಾನೆ, ಧರ್ಮ ಮಾರ್ಗ ಅದಲ್ಲ, ಸನ್ಯಾಸಧರ್ಮ ಅದಲ್ಲ ಎನ್ನುತ್ತಿದ್ದಂತೆ” ಆವೇಶಭರಿತರಾಗಿ ಅವರಮೈಮೇಲೆ ಬೀಳ್ತಾರೆ.

ಎಂತಹ ಪುಣ್ಯ ಪುರುಷರು ವೀರ್ಯಪ್ಪನ್ ಸಾಮ್ಗಳು! ಅವರಿಗೆ ರಾಂಪಾಲನಂತೆ ಒಂದು ಸ್ನಾನದ ಚೇಂಬರ್ ಮಾಡಿಸಿ, ಸ್ನಾನಮಾಡಿದ ನೀರು ಸೀದಾ ಹರಿದುಹೋಗಿ ಅಲ್ಲಿ ಶೇಖರವಾಗಿ, ಯಂತ್ರಚಾಲಿತ ವ್ಯವಸ್ಥೆಯಲ್ಲಿ ಬಾಟಲುಗಳಲ್ಲಿ ಸಂಗ್ರಹಿಸಲ್ಪಟ್ಟು ’ರಾಂಗಾಮೃತ’ವೆಂದು ಹಣೆಪಟ್ಟಿಯೊಂದಿಗೆ ಹಳದೀ ಭಕ್ತರಿಗೆಲ್ಲ ವಿತರಿಸುವುದು ಕುಡಿಸುವುದು ಒಳ್ಳೆಯದು. ಅಂತಹ ಅವತಾರ ಪುರುಷರಂತೆ ಜಗದ್ಗುರು ಶೋಭರಾಜಾಚಾರ್ಯರು! ಈ ಅವತಾರಿಯ ’ಕಚ್ಚೆಮಹಾತ್ಮೆ’ ಬೆಟ್ಟದೊಡೆಯನಿಗೆ ಗೊತ್ತಿಲ್ಲವೇ? ಗೊತ್ತಿದೆ. ಹಾಗಾಗಿಯೇ ಅಲ್ಲಿ ವೈದಿಕರು ಪೂರ್ಣಕುಂಭ ಸ್ವಾಗತ ನಡೆಸೋದಿಲ್ಲ. ಇವನಷ್ಟಕ್ಕೆ ಇವನು ರೌಡಿ ಪಟಾಲಂ ಕಟ್ಟಿಕೊಂಡು ಹೋಗ್ತಾ ಇರಬೇಕು ಬರ್ತಾ ಇರಬೇಕು ಅಷ್ಟೆ. ಸಾಕಲ್ಲವೇ ಮಂಗಲಾರತಿ?

ಈಗ ಯಾರೋ ಹೇಳಿದ್ದಾರೆ, ಸಾಮ್ಗಳೇ ನಿಮಗೆ ಬರೋ ಅಕ್ಟೋಬರಿನಲ್ಲಿ ಕಂಟಕ ಇದೆ. ಈಗ ಹಾಗೆ ಮಾಡಿ ಹೀಗೆ ಮಾಡಿ ಅಂತ. ಅದಕ್ಕೇ ಸಾಮ್ಗಳು ಸುತ್ತದ ಜಾಗವೇ ಇಲ್ಲ; ಕಾಣದ ದೇವರೇ ಇಲ್ಲ. ಒಂದುಮಾತ್ರ ಅವನು ನೆನಪಿಟ್ಟುಕೊಳ್ಳಬೇಕು-ಅವನು ಎಸಗಿದ್ದು ಸಾಮಾನ್ಯ ದ್ರೋಹವಲ್ಲ, ಕ್ಷಮಾರ್ಹ ದ್ರೋಹವಲ್ಲ. “ಅವನಲ್ಲಿ ದೋಷ ಕಾಣದಿದ್ದರೆ ಯುಧಿಷ್ಠಿರನಂತಹ ಸದ್ಗುಣಿಗಳು ಮಠಬಿಟ್ಟು ಬರುತ್ತಿರಲಿಲ್ಲ, ಅವನ ವಿರುದ್ಧ ಹೇಳಿಕೆ ಕೊಡ್ತಿರಲಿಲ್ಲ ಅಲ್ಲವೇ?” ಎಂದು ಸಾಮಿ ಸಾಕಿಕೊಂಡ ಬೊಗಳು ನಾಯಿಗಳಲ್ಲಿ, ಕತ್ತೆಕಿರುಬಗಳಲ್ಲಿ ಪ್ರಶ್ನಿಸಬೇಕು.

ತುಮರಿ ಹಿಂದೆ ಹೇಳಿದ ಒಂದೊಂದೂ ಸತ್ಯ ನಿಧಾನವಾಗಿ ದಾಖಲೆ ಸಮೇತ ಹೊರಗೆ ಬರುತ್ತಿದೆ-ನೀವೆಲ್ಲ ಅದನ್ನು ನೋಡಿದ್ದೀರಿ ಅಂದುಕೊಳ್ತೇನೆ. ಇಂದು ಒಷ್ಟೊಂದು ಜನಜಾಗೃತಿಯಾಗಿ ವಿರೋಧೀ ಕಾವು ಹೆಚ್ಚಿರುವುದರಿಂದ ವಿರೋಧಿಸುವವರಿಗೆ ಉಸಿರಾಡಲು ಸ್ವಲ್ಪ ಅವಕಾಶವಾಗಿದೆ. ಹಾಗಾಗಿಯೇ ಆ ಭಟ್ಟರು ದನಕಾಯೋರನ್ನು ಕಾಣೋದಕ್ಕೆ ಧೈರ್ಯ ಮಾಡಿದರು. ಇಷ್ಟಾಗದಿದ್ದರೆ, ಎರಡು ವರ್ಷಗಳ ಹಿಂದಾಗಿದ್ದರೆ, ಕಾಣಲು ಹೋದ ಭಟ್ಟರು ಜೀವಸಹಿತ ಮರಳಿ ಮನೆ ಕಾಣ್ತಿರಲಿಲ್ಲ, ಭಟ್ಟರ ಎಲುವು, ಮೂಳೆ ಸಿಗ್ತಿರಲಿಲ್ಲ. ಈಗ ಹಾಗಿಲ್ಲ, ಜನ ಎದ್ದಿದ್ದಾರೆ, ಅಧರ್ಮದ ನಾಯಿಸೇನೆಯ ವಿರುದ್ಧ ಧರ್ಮವೇ ಎದ್ದು ಹೋರಾಡಲು ರೂಪವನ್ನು ಪಡೆಯುತ್ತಲಿದೆ. ನೋಡ್ತಾ ಇರಿ, ಬರುವ ಅಕ್ಟೋಬರಿನಲ್ಲಿ ಒಂದು ಬಹುದೊಡ್ಡ ಮೆರವಣಿಗೆ ತೆಗೆಯಲಿಕ್ಕೆದೆ. ಬಸ್ಸಣ್ಣನಿಗೆ ಹೇಳಿ ರಥ ನಿರ್ಮಾಣ ಮಾಡಿಸಲಿಕ್ಕೆ.

ಅಂದಹಾಗೆ ಬಸ್ಸಣ್ಣನ ಬಸ್ಸುಗಳು ಅಪಘಾತದ ಮೇಲೆ ಅಪಘಾತ. ಕೆಲವರು ಸತ್ತರು, ಹಲವರು ಕೈಕಾಲು ಮುರಿದುಕೊಂಡರು, ಯಾಕೆ? ಮಠದ ಮಾಣಿ ಮಂತ್ರಾಕ್ಷತೆ ಒಗೆದದ್ದು ಎಡವಟ್ಟು ಪರಿಣಾಮ ನೀಡ್ತಾ ಇದೆಯೇ? ’ರಾಂಗಾನುಗ್ರಹ’ದಲ್ಲಿ ಇದೆಲ್ಲ ದಾಖಲಾಗುವುದೇ?

Thumari Ramachandra
27/05/2017
source: https://www.facebook.com/groups/1499395003680065/permalink/1965223567097204/

source: https://thumari.wordpress.com

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s