ಚಾಷ್ಟೇ ಚಾಟು-35 : ಸ್ವಾಮಿ NON DROP ! ಜಪ NON STOP !!

ಚಾಷ್ಟೇ ಚಾಟು-35 : ಸ್ವಾಮಿ NON DROP ! ಜಪ NON STOP !!
********************

ಅಡ್ ಬಿದ್ದೆಸ್ವಾಮಿ..ಅಡ್ ಬಿದ್ದೆ..ಅಲ್ಲ ಅಡ್ನಾಡಿ ತಂಬ್ಳಿ ಭಟ್ರೆಲ್ಲ ನಿಮ್ ಜಾತಿ ದೊಡ್ಡ್ ದೊಡ್ ಜನಕ್ಕೆ ಕೋರ್ಟು ಕಛೇರಿ ದಾರಿ ತೋರಿಸೋಕೆ ಸುರು ಹಚ್ಕಂಡಿದ್ದ್ ಗೊತ್ತಾತು ಸ್ವಾಮಿ..ಇದ್ದಿದ್ ಇದ್ದ ಹಾಗೆ ಹೇಳಿದ್ರೆ ಎದ್ ಬಂದ್ ಎದಿಗೊದ್ರು ಅನ್ನೋಗಾದೆ ಸುಳ್ಳಲ್ಲ ಸ್ವಾಮಿ. ಅನುಷ್ಟಾನವೇ ಇಲ್ಲದ ಅನಿಷ್ಟ ಅನ್ನೋದು ಗೊತ್ತಾಗೋಕೆ ಮೊದ್ಲು ಅವರುಗಳು ಮಾಡಿದ ಸೇವೆ ನೋಡಿಯಾದ್ರು ಗೌರವ ಕೊಡಬೇಕು ಅನ್ನೋದು ನಿಮ್ ಹೊಲಸು ತಿಂತಾ ಇರೋ ಕೆಲವು ಭಟ್ಟಂಗಿಗಳಿಗೆ ಗೊತ್ತಾಗಿಲ್ವಲ್ಲ ಸ್ವಾಮಿ..” ಗಬ್ಬು ವಾಸನೆ ಹೊಡಿತಿದ್ರು ಮೂಗು ಮುಚ್ಚಿಕೊಳ್ಳೋ ಹಾಗಿಲ್ಲ” ಅನ್ನೋ ತರ ಆಯ್ತು ನೀವ್ ಹಾಕ್ಸಿದ ಕೇಸು. ಭಾರೀ ಘನಂದಾರಿ ಕೆಲಸ ಮಾಡಿದಂಗೆ ನಿಮ್ ಭಕ್ತ ಮಹಾಮಣಿಗಳನ್ನೆಲ್ಲ ಕರೆಸಿ ಕಾಲೆತ್ತಿ ಕುಣಿಸಿ ಫೇಸ್ ಬುಕ್ಕಲ್ಲಿ ಹಾಕ್ಬೋದಿತ್ತಲ ಸ್ವಾಮಿ..ಇಸ್ಪೀಟಾಟದಾಗೆ ನಾನ್ ಡ್ರಾಪ್ ಬಂದಾಗ ಆಟ ಆಡ್ತಾರಲ್ಲ ಹಂಗೆ ನಿಮ್ ಪರಿಸ್ಥಿತಿ ಆಗಿದೆ ಅಂಥ ಕವಳದ ಗೋಪಣ್ಣ ಹೇಳ್ತಿದ್ದ ಸ್ವಾಮಿ…ಮತ್ತೆ ಹಳೆ ಖಾಯಿಲೆ ಮರುಕಳಿಸಿದೆ ಅಂಥ ಹೇಳ್ತಿದ್ದ ಸ್ವಾಮಿ ಹೌದಾ??!!..ಅದೇನೋ ಜಪ ಮಾಡೋಕೆ ಹೇಳಿದೀರಂತಲ ಸ್ವಾಮಿ..ಯಾರ್ ಬೇಕಾದ್ರು ಮಾಡ್ ಬೋದು …ಎಲ್ ಬೇಕಾದ್ರು ಮಾಡ್ಬೋದು..ಎಷ್ಟೊತ್ತಿಗೆ ಬೇಕಾದ್ರು ಮಾಡ್ಬೋದು ಅಂಥ ಆದೇಸ ಬೇರೆ ಕೊಟ್ಟಿದೀರಂತೆ…ನೀವು ಏಕಾಂತ ಆಟ ಆಡದ ಜಾಗನೇ ಇಲ್ಲ…ಹೊತ್ತಲ್ಲದ ಹೊತ್ನಲ್ಲು ಆಡಿದೀರಿ ಅಂತ ಸುದ್ಧಿ ಇದೆ…ಇಸ್ಫೀಟ್ ಆಡ್ತಾನು ಜಪ ಮಾಡಬಹುದು ಅಂಥ ಆದೇಶ ಮಾಡಿ ಸ್ವಾಮಿ….ನಿಮ್ ಜಾತಿಯ ರಾಷ್ಟ್ರೀಯ ಆಟ ಇಸ್ಪೀಟು ಅಂಥ ಕವಳದ ಗೋಪಣ್ಣ ಹೇಳ್ತಿದ್ದ..ಇಸ್ಪೀಟ್ ಆಡ್ದಂಗು ಆಯ್ತು ..ಜಪ ಮಾಡ್ದಂಗು ಆಯ್ತು…ನೀವ್ ಹ್ಯಾಂಗು NON DROPಗೆ ಬಂದಿದೀರಿ. ಎದುರುಗಡೆಯವರು ರಮ್ಮಿ ಶೋ ಇಡೋಕೆ ರೆಡಿಯಾಗಿದಾರೆ ಸ್ವಾಮಿ.ಏನೋ ಒಂದೆರಡಾಟ ಬಚಾವಾಗ ಬಹುದು ಸ್ವಾಮಿ….ನಂಗ್ಯಾಕೆ ಸ್ವಾಮಿ ನಿಮ್ ಜಾತಿ ವಿಚಾರ. ನಮ್ ಹೆಂಡ್ರು ಇಸ್ಪೀಟ್ ಆಡಂಗಿಲ್ಲ ಅಂತ ನಿರ್ಬಂಧ ಹಾಕವ್ಳೆ..ಆದ್ರು ಯಾಕೋ ಬಲಗಣ್ಣು ಎಗರ್ತಾ ಇದೆ…ಇವತ್ತು ಒಳ್ಳೆ ಆಟ ಬಿದ್ರು ಬೀಳ್ ಬೋದು…ಅದೇ ನಿಮ್ ಭಕ್ತ ರಾಂಭಟ್ಟನ ಮನೆಲಿ ಇಸ್ಪೀಟ್ ಆಡ್ತಾ ಜಪ ಮಾಡ್ತಿದಾರಂತೆ…ನಾನು ಒಂದ್ ಜಾಕ್ ಪಾಟ್ ಆಡಿ ಬರೋವ ಅಂಥ…ಹ್ಯಾಂಗಿದ್ರು ಜಪ NON STOP ….ಯಾರಾದ್ರು ಎಳೆದು ಬಿಡೋ ವರೆಗು ನಿಮಗೇ ಫುಲ್ JACKPOT…..ನಾ ಬರ್ಲಾ

Prakash Kakal
08/05/2017
source: https://www.facebook.com/groups/1499395003680065/permalink/1954550054831222/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s