ಮಠದ ಕಡೆಯಿಂದ ಏನು ತಪ್ಪಾಗಿದೆ?

ಯಾರೋ ಒಬ್ಬರು ಕೇಳುತ್ತಾರೆ.ಪದೇ ಪದೇ ಬ್ಲಾಕ್ ಮೇಲ್ ಪ್ರಕರಣ ಉಲ್ಲೇಖಿಸುತ್ತೀರಲ್ಲಾ.
ಅದು ಏನು.ಅದರಲ್ಲಿ ಮಠದ ಕಡೆಯಿಂದ ಏನು ತಪ್ಪಾಗಿದೆ ಎಂದು ವಿಚಾರಿಸಿದರು.ಅವರಿಗಾಗಿ ಪುನಃ ಪ್ರಕಟಿಸುತ್ತಿದ್ದೇನೆ

ಸಿ ಐ ಡಿ ಯವರು ಏನು ಹೇಳುತ್ತಾರೆಂದರೆ ಯಾವ ಕಾಯಿನ್ ಬೂತ್ ನಿಂದ ದಿವಾಕರ ಶಾಸ್ತ್ರಿಯವರು ಮೂರು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಚಂದ್ರಶೇಖರ್ ಹೇಳುತ್ತಾರೋ ಅಲ್ಲಿ ಇದ್ದವರು ದಿವಾಕರ ಶಾಸ್ತ್ರಿಗಳಲ್ಲ.ದಿವಾಕರ ಶಾಸ್ತ್ರಿಗಳ ಮೋಬೈಲ್ ಟವರ್ ಲೋಕೇಷನ್ ಅವರು ಆಗ ಅಲ್ಲಿ ಇದ್ದಿದ್ದನ್ನು ತೋರಿಸುತ್ತಿಲ್ಲ.ಬದಲಾಗಿ ಆ ಕಾಯಿನ್ ಬೂತ್ ಹತ್ತಿರ ಆ ಹೊತ್ತಿಗೆ ಇದ್ದವರು ಚಂದ್ರಶೇಖರ್, ಶಂಕರಿಮೂರ್ತಿ ಬಾಳಿಲಾ,ಡಾ|| ಗಜಾನನ ಶರ್ಮಾ, ದೀಪಿಕಾಕುಮಾರಿ.ಇವರಲ್ಲಿ ಕೆಲವರ ಮೋಬೈಲ್ ಟವರ್ ಲೋಕೇಷನ್ ಅದನ್ನು ತೋರಿಸುತ್ತಿದೆ.ವೈಜ್ಞಾನಿಕ ತಳಹದಿಯ ಮೇಲೆ ಸಿ ಐ ಡಿ ಯವರು ಕಂಡು ಹಿಡಿದಿದ್ದು ಇದು.ಚಂದ್ರಶೇಖರ್ ಮೊದಲಾದ ಮೂರ್ನಾಲ್ಕು ಜನ ಆ ಕಾಯಿನ್ ಬಾಕ್ಸ್ ನಿಂದ ಮೂರು ಕೋಟಿ ರೂಪಾಯಿಗೆ ದಿವಾಕರ ಶಾಸ್ತ್ರಿಯ ಹೆಸರಿನಲ್ಲಿ ಬೇಡಿಕೆ ಇಟ್ಟಿದ್ದನ್ನು ಸಿ ಐ ಡಿ ಇಲಾಖೆ ವೈಜ್ಞಾನಿಕ ದಾಖಾಲೆಗಳ ಮೂಲಕ ಪತ್ತೆ ಹಚ್ಚಿದೆ.ಈ ನಾಲ್ವರ ಕೆಲವು ಮೊಬೈಲ್ ಟವರ್ ಲೋಕೆಷನ್ ಅವರು ಆ ಹೊತ್ತಿಗೆ ಅಲ್ಲಿದ್ದರು ಎಂದು ದೃಡಪಡಿಸಿದೆ

ಮತ್ತು ಆ ಹೊತ್ತಿಗೆ ದಿವಾಕರ ಶಾಸ್ತ್ರಿಯವರು ಬೆಂಗಳೂರಿನಲ್ಲಿ ಇದ್ದರು ಎಂಬುದನ್ನು ಕೂಡ ಮೋಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ಸಿ ಐ ಡಿ ಯವರು ದೃಡಪಡಿಸಿದ್ದಾರೆ.ಹಾಗಾಗಿ ದಿವಾಕರ ಶಾಸ್ತ್ರಿಯವರು ಮೂರು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ದೂರುದಾರರು ಹೇಳಿದ ಕಾಯಿನ್ ಬೂತ್ ನಿಂದ ಪೋನ್ ಮಾಡಲು ಶಕ್ಯವೇ ಇಲ್ಲ ಎಂದು ಸಿ ಐ ಡಿ ಸಾಭಿತು ಪಡಿಸಿದೆ. ಇದು ವೈಜ್ಞಾನಿಕ ತಳಹದಿಯ ಮೇಲೆ ಮಾಡಿದ ಸಂಶೋಧನೆಯ ಫಲವಾಗಿ ಸಿಕ್ಕಿದ ಪಲಿತಾಂಶದ ಆಧಾರದ ಮೇಲೆ ನಿಷ್ಕರ್ಷಿಸಲ್ಪಟ್ಟು ತಿರ್ಮಾನಗೊಂಡಂತಹ ವಿಷಯವಾಗಿದೆ.ಇದು ಅತ್ಯಂತ ಪ್ರಬಲವಾದ ಪುರಾವೆ ಗಳಿಂದ ಕೂಡಿದ ಸಾಕ್ಷ್ಯವಾಗಿದ್ದು ಬಾಯಿ ಮಾತಿನಲ್ಲಿ ಹೇಳಿದ ಸಾಕ್ಷ್ಯಗಳಂತಲ್ಲ.

ಇಂತಹ ಲುಚ್ಚ ಕೆಲಸವನ್ನು ಚಂದ್ರಶೇಖರ್, ಶಂಕರಿಮೂರ್ತಿ ಬಾಳಿಲಾ, ಡಾ|| ಗಜಾನನ ಶರ್ಮಾ ,ದೀಪಿಕಾ ಕುಮಾರಿ ಯವರು ಯಾಕೆ ಮಾಡಿದರು.ಯಾವ ಆಶೆ ಆಮಿಷಗಳಿಗೆ ಬಲಿಯಾಗಿ ಮಾಡಿದರು.ಹಣಕ್ಕಾಗಿ ಮಾಡಿದರೇ? ಕೀರ್ತಿಗಾಗಿ ಮಾಡಿದರೇ? ತಮಗಾಗಿ ಒಂದು ಆಧಿಕಾರ ಪಟ್ಟ ಕಟ್ಟಿದ್ದಾರೆ ಎಂದು ಮಾಡಿದರೆ?

ಈ ಕೆಟ್ಟ ಕೆಲಸ ಮಾಡಿದ್ದತ ಪರಿಣಾಮ ಅನುಭವಿಸಬೇಕಲ್ಲಾ.ಅದನ್ನು ಅವರೇ ಅನುಭವಿಸಬೇಕು.ಹಚ್ಚಿಕೊಟ್ಟವರ್ಯರು ಇವರ ಜೋತೆಯಲ್ಲಿ ಪಾಪದ ಫಲ ಅನಭವಿಸಲು ಬರುವುದಿಲ್ಲ.ಕರ್ಮ – ಕರ್ಮಫಲ ಸಿದ್ಧಾಂತವನ್ನು ಹಿಂದೂಧರ್ಮದ ಎಲ್ಲಾ ಆರು ದರ್ಶನಗಳು ನೂರಕ್ಕೆ ನೂರು ಒಪ್ಪಿಕೊಂಡಿವೆ.ಈ ನಾಲ್ಕು ಜನ ಮಾಡಿದ ಈ ಕಾರ್ಯಕ್ಕೆ ಏಳೇಳು ಜನ್ಮಗಳ ಪರ್ಯಂತ ಕೆಟ್ಟ ಕರ್ಮಫಲ ಉಣ್ಣುವಂತಹದನ್ನು ಯಾವ ಆಶೆಯಿಂದ ಪ್ರೇರಿತವಾಗಿ ಮಾಡಿಕೊಂಡರೆಂದು ನನಗೆ ಊಹಿಸಲು ಸಾಧ್ಯವಾಗಿಲ್ಲ.ಪೂರ್ವ ಸುಕೃತ ಪುಣ್ಯದ ಫಲವಾಗಿ ನಮಗೆ ಈ ದೇಹ, ಬುದ್ಧಿ ಮನಸ್ಸು ಸಹಿತ ಪರಿಸರ ವಾತಾವರಣ ಸಿಕ್ಕಿರುತ್ತದೆ.ಸಿಕ್ಕಿದ ಇದನ್ನು ಸದ್ವಿನಿಯೋಗ ಮಾಡಿಕೊಂಡು ಪುಣ್ಯ ಸಂಪಾದನೆಯಿಂದ ಮತ್ತಷ್ಟು ಉನ್ನತವಾದ ದೇಹ,ಬುದ್ಧಿ ಮನಸ್ಸು,ಸಂಪತ್ತು ಪರಿಸರಗಳನ್ನು ಹೊಂದ ಬೇಕಾದ್ದು ಮಾನವ ಜನ್ಮದಂತಹ ಉನ್ನತ ಜನ್ಮ ಪಡೆದವನ ಬುದ್ಧಿವಂತಿಕೆ ಅಥವಾ ವಿವೇಕ..ಪೂರ್ವಕೃತ ಕರ್ಮಫಲದಿಂದ ಸಿಕ್ಕ ಬುದ್ಧಿ ಮನಸ್ಸುಗಳನ್ನು ಯಾರದೋ ತಪ್ಪು ನಿರ್ದೆಶನದಿಂದ ಹೀಗೆ ಮಾಡಬಾರದ ಕೃತ್ಯದಲ್ಲಿ ಬಳಸಿದರೆ ಮುಂದೆ ಅದರ ಫಲವನ್ನು ತಾವೇ ಅನುಭವಿಸಿಕೊಳ್ಳ ಬೇಕಾಗುತ್ತದೆ.ಅನುಭವಿಸಲು ಹಚ್ಚಿಕೊಟ್ಟವರು ಬರುವುದಿಲ್ಲ.ತಿಂದಾಂಗಿಲ್ಲ ಉಂಡಾಗಿಲ್ಲ ಇಂತಹ ಒಂದು ಘನಘೋರ ಪಾಪಕೃತ್ಯ,ಕೊಲೆಗಡಕರು ಮಾಡುವ ಕಾರ್ಯಕ್ಕೆ ಸಮಾನಾದ ಕಾರ್ಯ ಈ ನಾಲ್ವರಿಂದ ಹೇಗೆ ಯಾಕೆ ಘಟಿಸಿತು ಎಂಬ ಯಕ್ಷ ಪ್ರಶ್ನೆ ರಾತ್ರಿ ಇಡೀ ನನ್ನನು ಕೊರೆಯಿತು.ಅಜ್ಞಾನವೇ ಕಾರಣವಾಗಿ ಮನುಷ್ಯ ಮಾಡಬಾರದ್ದನ್ನು ನಗುನಗುತ್ತಾ ಮಾಡಿ ನಂತರ ಒಂದಲ್ಲಾ ಒಂದು ದಿನ ಅಳು ಅಳುತ್ತಾ ಅನುಭವಿಸುತ್ತಾನೆ ಎಂಬ ಸಿದ್ಧಾಂತಕ್ಕೆ ಬಂದು ಉದ್ವಿಗ್ನ ಮನಸ್ಸು ಸಮಾಧಾನ ಪಡೆದುಕೊಂಡಿತು.ಹವ್ಯಕ ಬ್ರಾಹ್ಮಣರಂತಹ ಉನ್ನತ ಕುಲಗಳಲ್ಲಿ ಹುಟ್ಟಿದ ಇವರು ಯಾರೋ ಮಾಡಿದ ಅತ್ಯಾಚಾರವನ್ನು ಮುಚ್ಚಿಹಾಕಲು ವೈಯಕ್ತಿಕವಾಗಿ ಇಷ್ಟೊಂದು ದೊಡ್ಡ ಮಟ್ಟದ ಪಾಪಕಾರ್ಯ ಮಾಡುವ ಮೂಲಕ ಬಹು ದೊಡ್ಡ ಬೆಲೆ ತೆರಬೇಕಾಗಿ ಬಂದಿದ್ದು ಅವರ ದುರಂತ ಎನ್ನದೆ ಗತ್ಯಂತರವಿಲ್ಲ

ಇರಲಿ, ಇನ್ನು ಇಷ್ಟು ಪರ್ಪೆಕ್ಟ್ ಆಗಿ ಸಿಕ್ಕಿದ ವೈಜ್ಞಾನಿಕ ದಾಖಾಲೆಯ ಆಧಾರ ಇರುವುದರಿಂದ ದೂರುದಾರರು ಇನ್ನೇಂದಿಗೂ ಕಾನೂನು ಹೋರಾಟ ಕೈ ಗೊಳ್ಳುವ ಗೂಜಿಗೆ ಹೊಗುವುದಿಲ್ಲ.ಹೊದರೆ ಅದು ತಮಗೆ ಸುತ್ತಿ ಕೊಳ್ಳುತ್ತದೆ ಎಂಬುದನ್ನು ತಿಳಿಯಲು ಲಾಯರ್ ಗಳನ್ನು ಕನ್ಸಲ್ಟ್ ಮಾಡಬೇಕಾಗಿಲ್ಲ.ಸರ್ವಸಾಮಾನ್ಯನಿಗೂ ಅರ್ಥವಾಗುವಂತಿದೆ.

ಈ ಸಿ ಐ ಡಿ ದಾಖಾಲೆಯ ಜಾಡು ಹಿಡಿದು ನಮ್ಮವರ್ಯರಾದರೂ ಸ್ವಲ್ಪ ಉಮೇದು ಮಾಡಿ ಚಂದ್ರಶೇಖರ,ಬಾಳಿಲಾ,ಡಾ ಶರ್ಮಾ ಮತ್ತು ಕುಮಾರಿಯನ್ನು ಪ್ರತಿವಾದಿಯನ್ನಾಗಿಸಿ ಕೊಂಡು ಕೋರ್ಟ್ ಗೆ ಹೋದರೆ ಇವರು ನಿಸ್ಸಂಶಯವಾಗಿ ಕಂಬಿ ಎಣಿಸ ಬೇಕಾಗುತ್ತದೆ.ಇವರು ಕಂಬಿ ಎಣಿಸುವುದನ್ನು ತಡೆಯುವ ಶಕ್ತಿ ಯಾವ ಹಳದಿ ತಾಲಿಭಾನುಗಳಿಗಾಗಲಿ,ಅವರ ಗುರುಗಳಿಗಾಗಲಿ ಇರುವುದಿಲ್ಲ.ಯಾರನ್ನೋ ರಕ್ಷಿಸ ಹೋಗಿ ಈ ನಾಲ್ವರು ಬೇಡಿ ತೋಟ್ಟುಕೊಂಡು ಕೃಷ್ಣ ಜನ್ಮಸ್ಥಾನವನ್ನು ಸೇರಬೇಕಾಗಿ ಬರುವುದು ಪೀಠದ ಮಹಿಮೆಯೇ ಸರಿ.ಒಂದೊಮ್ಮೆ ದಿವಾಕರ ಶಾಸ್ತ್ರಿಯವರೇ ಪುನಃ ಈ ವಿಚಾರ ಎತ್ತಿಕೊಂಡು ಕೋರ್ಟಿಗೆ ಹೋದರು ಇವರು ಸಿಕ್ಕಿಕೊಳ್ಳುತ್ತಾರೆ.

ಸತ್ಯವನ್ನೇ ಸ್ವಾಗತಿಸುವ ಪೀಠಾಧಿಪತಿಗಳು ಮೋಬೈಲ್ ಟವರ್ ಲೋಕೇಷನ್ ಪ್ರಕರಣವನ್ನು ಸ್ವಾಗತಿಸಿ ವಿಫಲತೆಯ ತಪ್ಪನ್ನೆಲ್ಲಾ ಆ ನಾಲ್ವರ ಮೇಲೆ ಹಾಕಿ ಪೀಠ ಖಾಲಿ ಮಾಡುತ್ತಾರೆಂದು ನಿರೀಕ್ಷಿಸಿತ್ತೇವೆ.ಅವರು ಸತ್ಯವನ್ನು ಕಾನೂನನ್ನು ಗೌರವಿಸುತ್ತೇವೆಂದು ಕುಂತಲ್ಲಿ ನಿಂತಲ್ಲಿ ಹೇಳಿದ್ದಾರೆ.

ಸತ್ಯವನ್ನು ಸ್ವಿಕರಿಸುವುದು ಇಷ್ಟ ವಾಗದಿದ್ದರೆ ,ಕಾನೂನು ಹೋರಾಟ ಮಾಡಲು ಸಾಧ್ಯವಾಗದಿದ್ದರೆ,.ಇನ್ನು ಉಳಿದಿರುವುದು ಜನಾಂದೋಲನವೊಂದೇ.ಹಾಗೆ ಮಾಡಿ ಪೋಲಿಸರಿಂದ ಲಾಠಿ ಏಟು ತಿಂದರೆ ಮಾತ್ರ ದಪ್ಪ ಎಮ್ಮೆ ಚರ್ಮದ ಇವರಿಗೆ ವಾಸ್ತವ ಪರೀಸ್ಥಿತಿಯ ನಿಜವಾದ ಚಿತ್ರಣ ಕಲ್ಪನೆಗೆ ಸಿಕ್ಕಿ ಪೀಠ ಬಿಟ್ಟರೂ ಬಿಡಬಹುದು.

Ganapathi Bhatta Jigalemane
21/04/2017
source: https://www.facebook.com/groups/1499395003680065/permalink/1945248095761418/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s