ಕಾಳಿಂಗದ ಬಾಯಲ್ಲಿ ಮಾತ್ರ ವಿಷ; ವೀರ್ಯಪ್ಪನ್‍ನ ಮೈ ಮನವೆಲ್ಲವೂ ವಿಷ

ಕಾಳಿಂಗದ ಬಾಯಲ್ಲಿ ಮಾತ್ರ ವಿಷ; ವೀರ್ಯಪ್ಪನ್‍ನ ಮೈ ಮನವೆಲ್ಲವೂ ವಿಷ

ಆರಂಭ ಕಾಲದಲ್ಲಿ ಕೆಲವು ದೋಷಗಳನ್ನು ನಿವಾರಿಸಿಕೊಳ್ಳಬೇಕು. ಒಂದಿಬ್ಬರು ಮಿತ್ರರು ವೈದಿಕ ಆಚರಣೆಗಳ ಬಗ್ಗೆ ಹೀನಾಯವಾಗಿ ಆಗಾಗ ಪೋಸ್ಟ್ ಹಾಕುತ್ತಾರೆ. ಅವರಿಗೆಲ್ಲ ಉತ್ತರ ಒಂದೆ-ನಿಮಗೆ ಅಂತಹ ಆಚರಣೆಗಳ ಮಹತ್ವ ತಿಳಿದಿಲ್ಲ; ಹುದುಗಿರುವ ವೈಜ್ಞಾನಿಕ ಚಮತ್ಕಾರದ ಬಗ್ಗೆ ನೀವು ಎಂದೂ ತಲೆಕೆಡಿಸಿಕೊಂಡಿಲ್ಲ. ಇನ್ನೊಂದು ದೋಷ-ಸಾಮಾನು ಸಾಮಿಯನ್ನು ಯಾರೋ ಕೆಲವರು ಸಂಸ್ಕೃತಿಯ ರಾಯಭಾರಿಯೆಂಬಂತೆ, ಹಲವು ಸಾಧನೆಗಳ ವೀರ ಎಂಬಂತೆ ಅಲ್ಲಲ್ಲಿ ವಕಾಲತ್ತು ಹಾಕಿದ್ದು ನೋಡಿದೆ. ಅವರು ವೀರ್ಯಪ್ಪನ ದರ್ಶನ ಮಾಡಬೇಕಂತೆ. ಸೀದಾ ಏಕಾಂತ ದರ್ಶನಕ್ಕೆ ಹೋಗೋದೆ ಒಳ್ಳೇದು ಅನ್ನೋದು ಕವಳದ ಗೋಪಣ್ಣನ ಉಚಿತ ಸಲಹೆ!

ಪರಾಕು ಹಾಕೋ ಮನುಷ್ಯನಿಗೆ ಬಹಳ ದೊಡ್ಡಮಟ್ಟದ ಪ್ರಜ್ಞಾವಂತಿಕೆಯಿಲ್ಲದಿದ್ದರೂ ಕನಿಷ್ಠ ಪ್ರಜ್ಞೆ ಎನ್ನುವುದೊಂದು ಇರಬೇಕು. ಹಾಡುಹಗಲೇ ಹೇಳೋದೊಂದು ಮಾಡೋದೊಂದು ಮಾಡಿದರೆ ಜನ ನಗದೆ ಇರ್ತಾರಾ? ತೊನೆಯಪ್ಪ ಸಾಮ್ಗಳು ಮಾತ್ರ ಅದಕ್ಕೆಲ್ಲ ಅಪವಾದ. ಅವರಿಗೆ ಅವರೇ ಹೇಳಿದ್ದು ತಾಗೋದೇ ಇಲ್ಲ! ಅಥವಾ ಮುಂದಿನ ಅಕ್ಟೋಬರ್ ಹತ್ತಿರ ಬರ್ತಾ ಇದೆ ಅಂತ ಟೆನ್ಶನ್ ತಗಂಡು, ವೇದಿಕೆ ಖಾಲಿ ಬಿಡಬಾರ್ದು ಅನ್ನೋ ಕಾರಣಕ್ಕೆ, ಏನ್ಮಾಡ್ತಿದೀನಿ ಅಂತ ಅರ್ಥವಾಗದೆ, ಯಾವುದೋ ಸೀನನ್ನು ಓಡಿಸ್ತಾ ಇರಬೋದು. ಅವರ ಭಕ್ತರಿಗೆ ಸಾಮ್ಗಳ ದ್ವಂದ್ವ ಹೇಳಿಕೆಗಳಲ್ಲಿ ಒಂದೇ ಅರ್ಥ ಕಾಣುತ್ತದೆ.

ನಡೆದದ್ದಿಷ್ಟೆ-ವೀರ್ಯಪ್ಪನ್ ಕೃಪಾಪೋಷಿತ ಸ್ತ್ರೀಡಮಾರ್ ಬಸ್ಸಣ್ಣನಿಂದ ’ಅಖಿಲ ಭಾರತ ಪ್ರಸಾದ ತಯಾರಕ ಮಹಾಮಂಡಳ ನಿಗಮ ಅನಿಯಮಿತ’ದ ಘನ ಅಧ್ಯಕ್ಷರಾಗಿರುವ ದಕ್ಷಿಣದ ರಾಂಪಾಲಾದ್ಯನೇಕ ಬಿರುದಾಂಕಿತ, ಹಾವಾಡಿಗ ಜಗದ್ಗುರು ಸ್ರೀ ಸ್ರೀ ಸ್ರೀ ಶೋಭರಾಜಾಚಾರ್ಯರ ಮಹಾಮೆರವಣಿಗೆ. ಅಲೆಲೆಲೆಲೆ ಆ ಮೆರವಣಿಗೆ ಅದೆಷ್ಟು ಅದ್ಧೂರಿ ಗೊತ್ತೆ? ಹೇ…. ನಿಮಗೆ ಗೊತ್ತಾಗಿರ್ತದೆ ಬಿಡಿ. ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾವಿದರ ತಂಡಗಳೆಷ್ಟು?[ಜನ ಸೇರಲಿಲ್ಲ ಬಿಡಿ, ಇನ್ಮುಂದೆಲ್ಲ ಹಾಗೆ, ಜನ ಬರೋದಿಲ್ಲ. ಗೊತ್ತಾಗ್ಬುಟ್ಟದೆ ಇಂವ ಅಂತವ್ನೇಯ ಅಂತ], ಅವರಿಗೆಲ್ಲ ಕೊಟ್ಟ ಭಕ್ಷೀಸೆಷ್ಟು? ಆ ಕಾಸನ್ನು ಅದ್ಯಾವುದೋ ಹೊಸ ಯೋಜನೆ ಇದ್ಯಂತಲ್ಲ? ಅದಕ್ಕೆ ಕೊಡಬಹುದಿತ್ತಲ್ಲ!

ಏನ್ಮಾತಾಡ್ತೀರಿ ತುಮರಿ? ನಿಮಗೆ ಅಷ್ಟೂ ಗೊತ್ತಾಗದಿಲ್ವ? ಸಾಮ್ಗಳ ಮೆರವಣಿಗೆ ಬೋಳೆತ್ತಿನ ಗಾಡಿಮೇಲೆ ಮಾಡೋಕೆ ಸಾಧ್ಯನಾ? ಅಥವಾ ಬರಿಗಾಲಲ್ಲಿ ನಡೆಸಿ ಮಾಡೋದು ಸಾಧ್ಯನಾ? ಸುತ್ತ ಮಠದ ವಂದಿಮಾಗಧರ ವಾಹನಗಳು ಇರಬೇಕು. ’ಮಹಾಸ್ವಾಮಿಗಳು’ ಐಶಾರಾಮಿ ವಾಹನದಲ್ಲಿ ಬಂದಿಳಿದು ಮೆರವಣಿಗೆಯ ಅಲಂಕೃತ ಮುಖ್ಯವಾಹನವನ್ನೇರಬೇಕು. ಹಿಂದೆ ಬಿಲ್ಡಪ್ ಕೊಡಲು ಒಂದಷ್ಟು ವಾಹನಗಳು ಜೊತೆಯಾಗಬೇಕು. ಮುಂದೆ ಸಲಾಮು ಹೊಡೆಯುವವರ ತಂಡಗಳು, ತಟ್ಟೀರಾಯ, ಛದ್ಮವೇಷಗಳು ಎಲ್ಲವೂ ಬೇಕು.

ಕತೆ ಮಾಡೋಕೆ ಹೊರ‍್ಟಿದಾನೆ ತೊನೆಯಪ್ಪ. ಮತ್ತೆ ಪೀಠ, ಮತ್ತೆ ಅಲಂಕಾರ, ಮತ್ತೆ ನಾನಾ ರಂಗದ ಕಲಾವಿದರು, ಮತ್ತೆ ಲಕ್ಷಗಳಲ್ಲಿ ಬಾಚಿಕೊಳ್ಳೋದು. ಮತ್ತೆ ಏಕಾಂತ, ಮತ್ತೆ ಕೆಲವರಿಗೆ ಸಂತಾನ ಭಾಗ್ಯ! ಸಂತಾನ ಭಾಗ್ಯದ ಜೊತೆಗೆ ಸಂಸಾರ ನಿಭಾಯಿಸುವ ಪ್ಯಾಕೇಜ್ ಡೀಲಿಂಗ್! ಬಾಳ ಗ್ರೇಟ್ ನಮ್ ಸಾಮ್ಗಳು ಆಂ…….ಹಾಂ ಹಾಂ.

ಅಲ್ಲರಿ, ಕತೆಗೆ ಇನ್ವೆಷ್ಟ್ ಮಾಡೋವಷ್ಟು ಹಣಾನ ಅವನ ಯೋಜನೆಗೇ ಅವನು ಹಾಕಬಹುದಿತ್ತಲ್ಲ? ಇಲ್ಲ ಇಲ್ಲ, ಅದೆಲ್ಲ ಆಗೋದಿಲ್ಲ. ಅದು ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್! ರಾಜಾಕಾರಣಿಗಳು ರಂಗದಲ್ಲಿ ಕಾಲು ಗಟ್ಟಿಯಾಗೋವರೆಗೆ ಕಂಡವರಿಗೆಲ್ಲ ಸಲಾಮು ಹಾಕ್ತಾರೆ; ತಾವು ನಿಗದಿಮಾಡಿಕೊಂಡ ಕ್ಷೇತ್ರದ ಹೊರಗಿನವರು ಕಂಡರೂ ಮಸ್ಕಾ ಹೊಡೀತಾರೆ. ಯಾಕೆಂದರೆ ಎಲ್ಲರ ಬಾಯಲ್ಲೂ ಅವರ ಹೆಸರೆ ಕೇಳಬೇಕು.

ಚುನಾವಣೇಲಿ ಗೆದ್ದು ಒಂದು ಟರ್ಮ್ ಅವಕಾಶ ಸಿಗಲಿ; ಮುಂದಿನ ಚುನಾವಣೆಗೆ ಖರ್ಚಿಗೆ ಒಂದಷ್ಟು ಮತ್ತು ತಮ್ಮ ಮನೆ,ಮಠ,ಸುತ್ತಲ ಚೇಲಾಗಳು, ಬಳಗ, ಬಿಲ್ಡಪ್ಪಿನ ಬರೋರು ಎಲ್ಲರಿಗೂ ಸೇರಿ ಒಂದಷ್ಟು ಕೋಟಿ ಮಾಡ್ಕೋತಾರೆ! ಭ್ರಷ್ಟಾಚಾರ ನಿರ್ಮೂಲನಾ ಕಾರ್ಯಾಗಾರವನ್ನು ವೇದಿಕೆಯಲ್ಲಿ ದೀಪ ಬೆಳಗಿ ಉದ್ಘಾಟಿಸುವ ರಾಜಕಾರಣಿಯೆ ವೇದಿಕೆಯಿಳಿದು ಇನ್ನೆಲ್ಲೋ ನಡೀತಿರುವ ರಸ್ತೆಕಾಮಗಾರಿ ನೋಡಲು ಹೋಗಿ ಕಂಟ್ರಾಕ್ಟರ್ ಜೊತೆಗೆ ತಗಾದೆ ತೆಗೆದು ತನ್ನ ಪಾಲನ್ನು ಇಸ್ಗೊಂಡು ಬರ್ತಾನೆ!

ವೀರ್ಯಪ್ಪನ್ ಸಾಮ್ಗಳದ್ದೂ ಅದೇ ಕತೆ. ಕತೆ, ಯಾತ್ರೆ ಅಂತೆಲ್ಲ ಸಾರ್ವಜನಿಕರಿಂದಲೋ ಸಮಾಜದಿಂದಲೋ ಸಂಗ್ರಹಿಸಿದ ಹಣವನ್ನೆ ಮತ್ತೆ ಇನ್ವೆಸ್ಟ್ ಮಾಡೋದು. ಫಲಾನುಭವಿ ಚೇಲಾಗಳನ್ನು ಮುಂದೆಬಿಟ್ಟು, ’ಮಹಾಸ್ವಾಮಿಗಳು ಸಮಾಜಮುಖಿ, ಮಹಾಸಾಧಕರು’ಅಂತ ಪ್ರಚಾರಮಾಡಿಸೋದು. ತಾನು ಇನ್ವೆಸ್ಟ್ ಮಾಡಿದ ಪ್ರತಿಯೊಂದು ಕ್ಷೇತ್ರದಿಂದಲೂ ಲಾಭ ಪಡೆಯದೆ ಎದ್ದವನೆ ಅಲ್ಲ ಈ ಕಳ್ಳ ಸನ್ಯಾಸಿ; ಇದರಲ್ಲಿ ಮಹಿಳಾ ಕ್ಷೇತ್ರಗಳಲ್ಲಿ ಬೀಜ ಬಿತ್ತಿದ್ದೂ ಸೇರಿಕೊಂಡಿದೆ!

ಬುದ್ಧಿ ಹೆಚ್ಚಿರುವ ಬುದ್ಧುಗಳು ಕೋಲೆ ಬಸವನ ರೀತಿಯಲ್ಲಿ ಅವನು ಹೇಳಿದ್ದಕ್ಕೆಲ್ಲ ತಲೆಯಲ್ಲಾಡಿಸುತ್ತ ಜೈಕಾರ ಹಾಕುತ್ತವೆ. ಹಳ್ಳಿಗಳಲ್ಲಿ ಇನ್ನೂ ಸಹ ಪ್ರತಿದಿನ ’ಮಹಾಸ್ವಾಮಿಗಳು’ ಪೂಜೆ ನಡೆಸುತ್ತಿರುವ ದೃಶ್ಯಾವಳಿಗಳನ್ನೆ ಲೋಕಲ್ ಚಾನೆಲ್ ಗಳು ಗುತ್ತಿಗೆಯಾಧಾರದಲ್ಲಿ ತೋರಿಸ್ತಾ ಇರ್ತವೆ. ಅತ್ತ ನೋಡಿದರೆ ಮಾಸ್ವಾಮಿಗಳು ಏಕಾಂತದಲ್ಲಿ ಯಾವುದಕ್ಕೋ ಹಾರುತ್ತಿರುತ್ತಾರೆ. 🙂 🙂 ಅದು ಶಿವರಾತ್ರಿಯಾದರೂ ಸರಿ ನವರಾತ್ರಿಯಾದರೂ ಸರಿ; ಅನಾರೋಗ್ಯದವರಾದರೂ ಸರಿ ಮುಟ್ಟಾದ ಮಹಿಳೆಯರಾದರೂ ಸರಿ ಒಟ್ನಲ್ಲಿ ವೀರ್ಯಪ್ಪನ್ ಸಾಮ್ಗಳಿಗೆ ಬೇಕೆಂದರೆ ಬೇಕೇ ಬೇಕು.

ಮೂರ್ಖರ ಪೆಟ್ಟಿಗೆ ಎಂಬುದೊಂದಿದೆಯಲ್ಲ ಅದೀಗ ಪ್ರೇಕ್ಷಕರ ಪಾಲಿಗೆ ಕಣ್ಣೀರ ಪೆಟ್ಟಿಗೆಯಾಗಿದೆ! ಇನ್ನೊಂದು ಕೋನದಲ್ಲಿ ನೋಡಿದರೆ ಕ್ರಿಮಿನಲ್ ಗಳಿಗೆ ನೂರಾರು ಹೊಸ ಐಡಿಯಾ ಕೊಡುವ ಪೆಟ್ಟಿಗೆಯೂ ಹೌದು. ಅತ್ತೆ-ಸೊಸೆಯರು, ಅತ್ತಿಗೆ-ನಾದಿನಿಯರ ನಡುವೆ ಬೆಂಕಿ ಹಚ್ಚಿ ಕ್ಷುಲ್ಲಕ ಕೌಟುಂಬಿಕ ಸಮಸ್ಯೆಗಳು ಭೂತಾಕಾರ ತಳೆಯುವಂತೆ ಪ್ರಚೋದಿಸುವ ಪೆಟ್ಟಿಗೆಯೂ ಆಗಿದೆ! ಒಳ್ಳೆಯ ಮಾವ ಮನೆಯಲ್ಲಿ ಸೊಸೆಯೊಟ್ಟಿಗೆ ಮಗಳೆಂಬಂತೆ ಪ್ರೀತಿಯಿಂದ ಮಾತನಾಡೋ ಹಾಗಿಲ್ಲ. ಗಂಡನ ಅಕ್ಕತಂಗೀರು ತವರಿಗೆ ಹೆಚ್ಚಿಗೆ ಬಂದುಹೋಗೋ ಹಾಗಿಲ್ಲ!

ಸಲಿಂಗಕಾಮ, ವ್ಯಭಿಚಾರ, ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಹದಿಹರಯದ ಸಮಸ್ಯೆಗಳು, ಏಡ್ಸ್ ,ಪತಿಯ ದಬ್ಬಾಳಿಕೆಯಂತಹ ಸಮಸ್ಯೆಗಳು ಸಂಜೆಯಾಗುತ್ತಿದ್ದಂತೆ ಪ್ರಸಾರವಾಗಲು ಪ್ರಾರಂಭವಾಗುತ್ತವೆ. ಒಂದಾದ ನಂತರ ಒಂದು ರಿಯಾಲಿಟಿ ಕಾರ್ಯಕ್ರಮಗಳ ನಡುವೆ ಪೈಪೋಟಿ ಆರಂಭವಾಗುತ್ತದೆ.

ಬುದ್ಧಿ ಹೆಚ್ಚಿರುವ ಜನ ಇವುಗಳನ್ನೆಲ್ಲ ಕೋಲೆ ಬಸವನಂತೆ ನೋಡ್ತಾರೆ. ತೊನೆಯಪ್ಪನೋರು ತೊನೆದಾಡುತ್ತ ಪೂಜೆಮಾಡೋದನ್ನು “ನಮ್ಮ ಸ್ವಾಮಿಗಳು” “ನಮ್ಮ ಸಂಸ್ಥಾನ” ಅಂತ ಎರಡೂ ಕಿವಿಗಳ ಮೇಲೆ ಹೂಗಳನ್ನಿಟ್ಟುಕೊಂಡು ನೋಡುವ ಜನ ಇದ್ದಾರೆ. ಅಂಥವರಿಗೆಲ್ಲ ಹದವಾಗಿ ಬೋಳೆಣ್ಣೆ ಹಚ್ಚಿ ರಶೀದಿ ನೀಡದೆಯೆ ಮಠಕ್ಕಾಗಿ ಎತ್ತುವಳಿ ನಡೆಸುವ ಜನ ಅಲ್ಲಿಗೆ ಹೋಗ್ತಾರೆ.

ಎಲ್ಲದಕ್ಕೂ ವಿಜ್ಞಾನದ ಹೇಳಿಕೆಗಳನ್ನು ನಂಬೋ ಜನ ವೀರ್ಯಪ್ಪನ್ ಸಾಮ್ಗಳ ವೀರ್ಯ ಪರೀಕ್ಷೆಯಲ್ಲಿ ಹೌದೆಂದು ಪಾಸಾಗಿದೆ ಎಂದು ಬಂದಿದ್ದನ್ನು ಅಲ್ಲಗಳೀತಾರೆ! “ಆ ವರದಿಯನ್ನು ಬೆಲ್ಲಹಾಕಿ ನೆಕ್ಕಿ” ಎಂದು ಬೈತಾರೆ. ಅವರೆಲ್ಲರ ಪ್ರಾಂಜಲ ಮನಸ್ಸಿನ ಮೂಲೆಮೂಲೆಗಳಲ್ಲಿ ಗುರುವೆಂಬ ಸ್ಥಾನವನ್ನು ಅಲಂಕರಿಸಿದ ವ್ಯಕ್ತಿಯನ್ನು ಕೆಟ್ಟವನೆಂದು ಒಪ್ಪುವ ಚಿತ್ರಗಳೇ ಕಾಣುತ್ತಿಲ್ಲ! “ಗುರುಶಾಪ” ಮತ್ತು “ವಂಶ ನಿರ್ವಂಶ” ಎಂಬೆರಡು ಶಬ್ದಗಳು ಹಗಲಿರುಳುಗಳಲ್ಲೂ ಕನಸುಗಳಲ್ಲಿ ಲಗ್ಗೆಯಿಡುತ್ತ ಕಚ್ಚೆಹರುಕನನ್ನು ವಿರೋಧಿಸಲು ಬೇಕಾದ ಮನೋದೈಹಿಕ ಕಸುವನ್ನೆಲ್ಲ ಕಸಿದುಕೊಂಡುಬಿಡುತ್ತವೆ.

ಈಗಲೂ “ಭಯಂಕರ ಬರಗಾಲ ಬಂದಿದೆ ಅಂತ ನೀನೆ ಹೇಳಿದೀಯಲ್ಲ, ಯಾಕೆ ಆಡಂಬರ ಮಾಡ್ತೀಯ? ನಿನಗೆ ಮಾತ್ರ ಅದು ನಾಟೋದಿಲ್ವ?” ಎಂದು ಕೇಳುವ ಧೈರ್ಯ ಒಬ್ಬ ಗಂಡಸಿನಲ್ಲೂ ಇಲ್ಲ! ಮರಿಯಾಗಿದ್ದಾಗ ಸರಪಳಿ ಕಾಲಿಗೆ ಬಿಗಿದು ಛಡಿಯೇಟು ನೀಡಿದಾಗ ಅನುಭವಿಸಿದ ಯಾತನೆ ಬಲಾಢ್ಯ ಆನೆಯು ಸ್ವತಂತ್ರವಾಗುವ ಜಂಘಾಬಲವನ್ನೆ ಅಡಗಿಸುವುದಂತೆ. ಅದೇರೀತಿ, ಶಾಪ, ಬಹಿಷ್ಕಾರ, ನಿರ್ವಂಶ ಎಂಬ ಅಂಕುಶಗಳು ಸಮಾಜದ ಹಲವರನ್ನು ನಿಯಂತ್ರಿಸುವಲ್ಲಿ ಇನ್ನೂ ಆಕ್ಟಿವ್ ಆಗಿವೆ. ಅರ್ಚಕ ಸರಿಯಿಲ್ಲದಿದ್ದರೆ ಯಾವ ವಿಗ್ರಹದಲ್ಲೂ ಶಕ್ತಿಯಿರೋದಿಲ್ಲ; ಗುರು ಸರಿಯಿಲ್ಲದಿದ್ದರೆ ಯಾವ ಪೀಠದಲ್ಲೂ ಶಕ್ತಿ ಉಳಿಯೋದಿಲ್ಲ ಎಂಬುದನ್ನು ಕೆಲವರು ಮಾತ್ರ ಜೀರ್ಣಿಸಿಕೊಂಡಿದ್ದಾರೆ.

ಒಂದು ಕಾಲವಿತ್ತಂತೆ. ಆ ಕಾಲದಲ್ಲಿ ಎಲ್ಲರೂ ಸತ್ಯವಾದಿಗಳೇ ಆಗಿದ್ದರಂತೆ. ಒಬ್ಬ ಮತ್ತೊಬ್ಬನಿಗೆ ತನ್ನ ಭೂಮಿಯನ್ನು ಮಾರಿದ್ದನಂತೆ. ಭೂಮಿ ಕೊಂಡವನು ಗದ್ದೆಯನ್ನು ಉಳುವಾಗ ಆ ಗದ್ದೆಯಲ್ಲಿ ಒಂದು ಚಿನ್ನದ ನಾಣ್ಯ ತುಂಬಿದ ಕೊಡ ಸಿಕ್ಕಿತಂತೆ. ಆತನು ಕೂಡಲೇ ಇದು ತಾನು ಕೊಂಡ ಭೂಮಿಯಲ್ಲಿ ಸಿಕ್ಕಿದ್ದು. ತನಗೆ ಭೂಮಿ ಕೊಟ್ಟವನಿಗೇ ಇದು ಸೇರಬೇಕೆಂದು ಆ ಕೊಡವನ್ನು ಕೊಂಡು ಹೋಗೆ ಆತನಿಗೇ ಒಪ್ಪಿಸಿದರೂ ಭೂಮಿ ಮಾರಿದವನು “ಇಲ್ಲ ಅದು ತನಗೆ ಬೇಡ,ಅದು ನಿನಗೆ ಸೇರಿದ್ದು, ನಿನ್ನ ಭಾಗ್ಯದಿಂದಲ್ಲವೇ ನೀನು ಉಳುವಾಗ ನಿನಗೆ ಸಿಕ್ಕಿತು”ಎಂದು ಎಷ್ಟು ಹೇಳಿದರೂ ಸಮಾಧಾನವಾಗದೆ ಇಬ್ಬರೂ ಅದನ್ನು ಸ್ವೀಕರಿಸಲು ಒಪ್ಪಲಿಲ್ಲವಂತೆ.

ಯಾರು ಇಟ್ಟುಕೊಳ್ಳಬೇಕೆಂಬುದು ಅವರಲ್ಲಿ ತೀರ್ಮಾನವಾಗದೆ ಕಡೆಗೆ ರಾಜನಲ್ಲಿಗೆ ದೂರು ಹೋಯಿತು. ಇಬ್ಬರಲ್ಲಿ ಯಾರೂ ಅದನ್ನು ಸ್ವೀಕರಿಸಲು ಒಪ್ಪದಿದ್ದಾಗ, ರಾಜ ಊರಿನ ದೇವಸ್ಥಾನಕ್ಕೆ ಆ ಕೊಡವನ್ನು ಒಪ್ಪಿಸಲು ಹೇಳಿಬಿಟ್ಟನಂತೆ. ರಾಜನಾದರೂ ತನ್ನ ಖಜಾನೆಗೆ ಆ ಕೊಡವನ್ನು ತುಂಬಿಸಲಿಲ್ಲ. ಅವನಿಗೆ ಜನ ಕೊಟ್ಟ ತೆರಿಗೆಯೇ ಸಾಕು. ಒಟ್ಟಿನಲ್ಲಿ ಹಾಗೆ ನ್ಯಾಯ ತೀರ್ಮಾನವಾಯಿತು.

ಸಮಾಜದಲ್ಲಿ ಈಗಲೂ ಇಂತಹ ಸತ್ಯವಾದಿಗಳು ಹಲವರಿದ್ದಾರೆ; ಆದರೆ ಚಿನ್ನದ ಕೊಡ ಸಿಕ್ಕುತ್ತಿಲ್ಲ ಅಷ್ಟೆ! ಈ ಕತೆ ಇಂದೇನಾದರೂ ನಡೆದಿದ್ದರೆ, ಪಂಚಾಯತಿಗೆ ವೀರ್ಯಪ್ಪನ್ ಸಾಮ್ಗಳು ಬಿಜಯಂಗೈಯುತ್ತಿದ್ದರು; ಚಿನ್ನದ ಕೊಡವನ್ನು ಮಠಕ್ಕೆ ಕೊಟ್ಟುಬಿಡೋದೇ ಸರಿಯೆನ್ನುತ್ತ ತನ್ನ ವಾಹನಕ್ಕೆ ಅದನ್ನು ತುಂಬಿಸಿಕೊಂಡು ಹಲವು ಏಕಾಂತ ಸಖಿಯರನ್ನು ಸಂಭಾಳಿಸಲಿಕ್ಕೆ ಅನುಕೂಲವಾಯ್ತು ಎಂದು ಒಳಗೊಳಗೇ ಸಂತೋಷಪಡುತ್ತಿದ್ದರು!

ಮಹಾಭಾರತದಲ್ಲಿ ಗುರು ದ್ರೋಣರನ್ನೂ ಸಹ ವ್ಯಾಸರು ದೂಷಿಸುತ್ತಾರೆ; ಕತೆಯಲ್ಲಿ ಕೃಷ್ಣ ಅವರನ್ನು ಪಾಪಿಯೆಂದು ಹೇಳುತ್ತಾನೆ. ಕೃಪಾಚಾರ್ಯರ ಕತೆಯೂ ಅಷ್ಟೆ. ಕೃಪ-ದ್ರೋಣರೇನು ತಪ್ಪು ಮಾಡಿದರು? ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ನಡೆಯುತ್ತಿರೋವಾಗ ಅಸಹಾಯರಾದ ಪಾಂಡವರಂತೆ ಕೃಪ-ದ್ರೋಣರೂ ಅದು ತಪ್ಪೆಂದು ತಲೆಯೆತ್ತಿ ಹೇಳಲಿಲ್ಲವಂತೆ. ಮನುಷ್ಯ ಇನ್ನೊಬ್ಬನ ಹಂಗಿನರಮನೆಯಲ್ಲಿದ್ದರೆ, ಪರರಾಶ್ರಯದಲ್ಲಿದ್ದರೆ ತಪ್ಪನ್ನೂ ತಪ್ಪೆಂದು ಎತ್ತಿಹೇಳುವ ಧೈರ್ಯ ಬರೋದಿಲ್ಲ ಹೇಗೆಂಬುದಕ್ಕೆ ಇದೊಂದು ಉದಾಹರಣೆ.

“ಗುರುಗಳು ತಪ್ಪು ಮಾಡಿದ್ದನ್ನು ನೀನು ನೋಡಿದ್ದೀಯಾ? ನೋಡಿಲ್ಲವಾದರೆ ಹಾಗೇಕೆ ಹೇಳ್ತೀಯ?” ಎಂದು ವಿತಂಡವಾದಮಾಡ್ತಾರೆ. ಹಲವು ಸಾಕ್ಷಿ, ಪುರಾವೆಗಳು ಈ ಸನ್ಯಾಸಿ ಕಳ್ಳನೆಂದು ಎತ್ತಿ ಸಾರುತ್ತವೆ ಎಂದು ಹೇಳಿದರೆ ಒಪ್ಪದ ಬುದ್ಧುಗಳಿದ್ದಾವೆ.

ಸನ್ಯಾಸಿ ವೇಷ ಧರಿಸಿ ಸಂಸ್ಥಾನಿಕನಾದರೆ ಸಾಮ್ರಾಜ್ಯ ಕಟ್ಟಿಕೊಂಡು ಹಾಯಾಗಿ ರಾಜನಂತೆ ಬದುಕಬಹುದು ಎಂಬುದು ಇತ್ತೀಚೆಗೆ ಕಾವಿಧಾರಿಗಳಾದವರ ಯೋಚನೆ. ಎಂತೆಂತ ಜನರೆಲ್ಲ ಕಾವಿ ತೊಟ್ಟರು ನೋಡಿ, ಅಣಲೆಕಾಯಿ ಔಷಧ ಹೇಳುತ್ತಿದ್ದವರೆಲ್ಲ ಜಗದ್ಗುರುಗಳಾಗಹೊರಟಿದ್ದಾರೆ. ಇತಿಹಾಸ ಹಾಗಿತ್ತು ಪುರಾಣ ಹೀಗಿತ್ತು ಅಂತ ನಂಬಿಕೆಗೆ ಒಗ್ಗುವ ಜನರ ಕಿವಿಗಳ ಮೇಲೆ ಹೂವಿಡುತ್ತಿದ್ದಾರೆ.

ಸಂಸಾರವಿದೆಯೆಂದು ಜನರಿಗೆ ತೋರಿಸದೆ, ಹೆಚ್ಚಿಗೆ ಎಲ್ಲೂ ಆ ವಿಷಯ ಬೆಳಕಿಗೆ ಬರದಂತೆ ನೋಡಿಕೊಳ್ಳುತ್ತ ಸಂಸ್ಥಾನ ಕಟ್ಟಿಕೊಳ್ಳುತ್ತಿದ್ದಾರೆ. ತನ್ಮೂಲಕ ರಾಜಕೀಯವಾಗಿ ಹಲವರಮೇಲೆ ಇನ್‍ಫ್ಲೂಎನ್ಸ್ ಮಾಡುತ್ತಾರೆ. ಜೀವನದಲ್ಲಿ ಮಕ್ಕಳು ಮರಿಮೊಮ್ಮಕ್ಕಳಿಗಾಗುವಷ್ಟು ಬೊಕ್ಕಸ ತುಂಬಿಸಿಕೊಳ್ತಾರೆ. ನಿತ್ಯ ಮೃಷ್ಟಾನ್ನ ಭೋಜನ, ಹದಗೊಂಡ ನೀರಿನಲ್ಲಿ ಸ್ನಾನ, ಸುಂದರಿಯರೊಡನೆ ಏಕಾಂತ, ಬಯಸಿದಾಗ ಸುಖನಿದ್ರೆ, ಮಾಧ್ಯಮಗಳಲ್ಲೆಲ್ಲ ಅಬ್ಬರದ ಪ್ರಚಾರ, ತಮ್ಮದೆ ಬ್ರಾಂಡ್ ಹಾಕಿಕೊಂಡು ಹಲವು ವಸ್ತುಗಳನ್ನು ಮಾರುಕಟ್ಟೆಮಾಡೋದು ಎಲ್ಲವೂ ನಡೀತಿದೆ! ಚುನಾವಣೇಲಿ ಯಾರೆ ಗೆದ್ರೂ ಇವರೇ ಗೆದ್ದಂಗೆ, ಇಂತವರ ಖುರ್ಚಿ ಅಲುಗಾಡೋದೇ ಇಲ್ಲ.

ಪೆದ್ದಜನ ಕಾಣಿಕೆ ಕೊಟ್ಟು, ಅಡ್ಡಬಿದ್ದು ಕೈಮುಗಿದು ಪರಾಕು ಹಾಕುತ್ತ ಆಶೀರ್ವಾದ ಬೇಡುತ್ತಾರೆ. ತೊನೆಯಪ್ಪನ ಬಳಗದಲ್ಲಿ ಇಂತಹ ಹಲವು ಜನ ಇದ್ದಾರೆ. ಈಗಾಗಲೆ ಒಬ್ಬನಂತೂ ಪ್ರವರ್ಧಮಾನಕ್ಕೆ ಬರುತ್ತಿದ್ದಾನೆ. ಹಾಗಾದರೆ ’ಸನ್ಯಾಸಿ’ ಎಂಬ ಪದಕ್ಕೆ, ಯೋಗಾಧಿಕಾರಕ್ಕೆ ಅರ್ಥವೇ ಇಲ್ಲವೇ? ರಾಜಪ್ರಭುತ್ವವಾದರೆ ರಾಜನಲ್ಲಿ ದೂರಬಹುದಿತ್ತು; ಪ್ರಜಾಪ್ರಭುತ್ವದಲ್ಲಿ ಇಚ್ಛಿಸಿದಂತೆ ಬದುಕಲು ತಮಗೆ ಹಕ್ಕಿದೆ ಎಂದು ಅಂತವರೆಲ್ಲ ವಾದಿಸುತ್ತಾರೆ. ಅವರವರ ಬದುಕು ಅವರವರ ಇಚ್ಛೆಯೇನೋ ಸರಿ ಆದರೆ ಅದೇವೇಳೆಗೆ ಇತರರು ಅಂತಹ ನಯವಂಚಕರಿಂದ ಮೋಸಹೋಗಬಾರದಲ್ಲ? ಇದಕ್ಕಾಗಿ ಮುಂದೆ ಹೊಸ ಕಾನೂನನ್ನೇ ತರಬೇಕಾದ ಕಾಲ ಬರಬಹುದು!

ಕಾಳಿಂಗಸರ್ಪವನ್ನು ಜನ ವಿಷಕಾರಿಯೆಂದು ಹೇಳ್ತಾರೆ. ಕಾಳಿಂಗಕ್ಕೆ ಅದರ ಹಲ್ಲಿನ ಮೇಲ್ಭಾಗದ ಚೀಲದಲ್ಲಿ ಮಾತ್ರ ವಿಷದಹನಿಗಳಿರುತ್ತವೆ. ತೊನೆಯಪ್ಪನ ವಿಷಯದಲ್ಲಿ ಹಾಗಲ್ಲ; ಅವನ ಮೈಮನಗಳ ಕಣಕಣವೂ ವಿಷಮಯವೇ. ಕಾಣಿಕೆ ತೆತ್ತು ಶಾಲು ಹೊದ್ದು ಬಣ್ಣದ ಅಕ್ಕಿ ಬೇಡುವ ಬೋಳೆಣ್ಣೆ ಹಚ್ಚಿಸಿಕೊಂಡ ಭಕ್ತನಾದರೆ ವಿಷ ಹೊರಬರುವುದಿಲ್ಲ.

ಪರಸ್ತ್ರೀಯರನ್ನು, ಹರೆಯದ ಹುಡುಗಿಯರನ್ನು ಬಗರ್ ಹುಕುಂ ರೀತಿಯಲ್ಲಿ ಬಗೆದು ಮುಕ್ಕಲು ಸಮ್ಮತಿಸುವವರಿಗೆ, ಕಳ್ಳ-ಕುಳ್ಳ ನಡೆಸುವ ಅನೈತಿಕತೆ, ವ್ಯಭಿಚಾರ, ಭ್ರಷ್ಟಾಚಾರ, ದುರಾಚಾರ, ಧರ್ಮ ದ್ರೋಹ, ಸಮಾಜ ದ್ರೋಹ, ಕಾವಿಗೆ ಅಗೌರವದಂತ ಘನಂದಾರಿ ಕಾರ್ಯಗಳನ್ನೆಲ್ಲ ಒಪ್ಪಿಕೊಳ್ಳುವವರಿಗೆ ಶಾಲು ಹೊದೆಸಿ ಸನ್ಮಾನಿಸಲಾಗುತ್ತದೆ; ಉಳಿದವರಿಗೆ ತೊನೆಯಪ್ಪ ಕಚ್ಚಿಬಿಡುತ್ತಾನೆ; ತೊನೆಯಪ್ಪ ಕಚ್ಚಿದರೆ ಅವನ ವಿಷ ಜೀವವನ್ನೆ ತೆಗೆದುಬಿಡುತ್ತದೆ ಎಂಬ ಜೀವಭಯ ಹಲವರಲ್ಲಿದೆ.

ಸಮಾಜದ ಹಣವನ್ನೆ ನುಂಗಿ, ಸಂಪತ್ತು, ಅಧಿಕಾರ, ಅಹಂಕಾರಗಳಿಂದ ಸಮಾಜ ಬಾಂಧವರನ್ನೆ ಬೆದರಿಸಿ ಅಧರ್ಮವನ್ನೆ ಧರ್ಮವೆಂದು ಹೇಳುವ ಅರ್ಜುನ ಸನ್ಯಾಸಿಯನ್ನು ಮಟ್ಟಹಾಕುವ ಕಾಲ ಬರುವ ಅಕ್ಟೋಬರ್ ಅಂತೆ. ಇದನ್ನು ತಿಳಿದಾಗಿಂದ ಮತ್ತೆ ವಾಮಾಚಾರಗಳು ಚುರುಕುಗೊಂಡಿರಬಹುದು. ಏನೇ ವಾಮಾಚಾರ ನಡೆಸಿದರೂ ಅಂತ್ಯವೊಂದು ಇರಲೇಬೇಕಲ್ಲ. ಪೂರ್ವದ ಪುಣ್ಯ ಇರುವವರೆಗೆ ಒಳಗೂ ಹೊರಗೂ ಹೋರಿ ಹಾರಾಡುತ್ತಲೆ ಇರುತ್ತದೆ. ಪುಣ್ಯದ ಬ್ಯಾಟರಿ ಡಿಸ್ಚಾರ್ಜ್ ಆದಮೇಲೆ ಯಾವ ವಾಮಾಚಾರಿಗಳೂ ಮೂಸೋದಿಲ್ಲ.

ಈಗಾಗಲೆ ಅದರ ಕುರುಹು ಸಾಕಷ್ಟು ಸಿಕ್ಕಿದೆ. ಮಾಸ್ವಾಮ್ಗಳು ಎತ್ತರಕ್ಕೆ ಎತ್ತರಕ್ಕೆ ಏರುತ್ತ ಹೋದರೂ, ಈ ಛತ್ರಿ ಸಾಮ್ಗಳಿಗೆ ಯಾವ ಧರ್ಮಮಯ ದೇವಸ್ಥಾನದಲ್ಲೂ ಪೂರ್ಣಕುಂಭ, ಛತ್ರಿ ಹಿಡಿದು ಬಂದಿಲ್ಲ! ಅಲ್ಲಿರೋ ಜನ ಈ ಕಳ್ಳ ಸನ್ಯಾಸಿಯ ಯೋಗ್ಯತೆ ಇಷ್ಟೇ ಎಂದು ಬರೆದುಕೊಂಡುಬಿಟ್ಟಿದ್ದಾರೆ! ಹಾಗಾಗಿ ಹತ್ತಿರ ಹತ್ತಿರಕ್ಕೆ ಹೋದರೂ ಆ ದೇವರು ಹತ್ತಿರಕ್ಕೆ ಬಿಟ್ಟುಕೊಳ್ಳಲೆ ಇಲ್ಲ!

Thumari Ramachandra
23/04/2017
source: https://www.facebook.com/groups/1499395003680065/permalink/1946510888968472/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s