ಬೇಲಿಯೇ ಎದ್ದು ಹೋಲ ಮೇಯುತ್ತಿರುವಾಗ ಬೇರೆಯವರು ಏನು ಮಾಡಲು ಸಾಧ್ಯ?

ಬೇಲಿಯೇ ಎದ್ದು ಹೋಲ ಮೇಯುತ್ತಿರುವಾಗ ಬೇರೆಯವರು ಏನು ಮಾಡಲು ಸಾಧ್ಯ?

Prove -ರುಜುವಾತು- ಪ್ರಮಾಣದ ಕೊರತೆಯಿಂದ ಇನ್ನೂ ಇನ್ನೂ ಅವರ ಶಿಷ್ಯರು ನರಳುತ್ತಿದ್ದಾರೆಂದು ಅವರ ಕಾಮೆಂಟ್ ಗಳಿಂದ ನಾವು ಅರ್ಥೈಸಬಹುದು.ಯಾವನೋ ಒಬ್ಬ ಬರಿತಾನೆ, ಆಕ್ರಮ ಸಂಬಂಧ ಇತ್ತು ಎಂದಾಕ್ಷಣ ಸಂಭೋಗ ಮಾಡಿದರು ಎನ್ನುವುದಕ್ಕೆ ಏನು ಆಧಾರ ಇದೆ ಅಂತ.girl friend ಇರುತ್ತಾರಲ್ಲ ಹಾಂಗೆ ಇರಬಹುದು ಎಂದು ಅವನ ಅಭಿಪ್ರಾಯವಾಗಿರಬಹುದು.ಅಕ್ರಮ ಸಂಬಂಧ ಎಂಬಲ್ಲಿ ಸಂಬಂಧ ಎನ್ನುವ ಶಬ್ಧವು ಸಂಭೋಗ ಎಂಬ ಶಬ್ಧದ ಬದಲು ನಾಗರಿಕ ಸಮಾಜದ ಎದರು ಉಪಯೋಗಿಸಿದ ಗೌರವಾನ್ವಿತ ಶಬ್ಧವೇ ಹೊರತು ಅದಕ್ಕಿಂತ ಭಿನ್ನವಾಗಿ ಉಪಯೋಗಿಸಿದ್ದಲ್ಲ.ದೈಹಿಕ ಸಂಬಂಧ,ಅಕ್ರಮ ಸಂಬಂಧ ಸಮ್ಮತಿಸಂಬಂಧ, ಒಪ್ಪಿತ ಸಂಬಂಧ ಇವೇಲ್ಲಾ ಇಲ್ಲಿ ಅಕೆಯನ್ನು ನಾಲ್ಕು ವರ್ಷಗಳ ಕಾಲ ಭೋಗಿಸಿದ್ದನ್ನೇ ಹೇಳುತ್ತದೆ.

ಅತ್ಯಾಚಾರದ ಕಂಪ್ಲೇಂಟ್ ಹಾಕುತ್ತಾರೆ ಎಂದು ತಿಳಿದ ಕೂಡಲೆ ಸಮಾಜದ ಹಿರಿಯರು ಸ್ವಾಮಿಗಳನ್ನು ಬೇಟಿಮಾಡಿದಾಗ ಹಿಮಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದ್ದು ಮೊದಲನೇಯ ಪ್ರಮಾಣ.ಹಿಮಾಲಯಕ್ಕೆ ಹೋಗುವ ವಿಚಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ.ಜವಾಬ್ದಾರಿಯುತವಾದ ಹತ್ತೇ ಜನರೆದುರಿಗಾದರೂ ಸ್ವಾಮಿಗಳು ಅತ್ಯಾಚಾರ ಮಾಡಿದ್ದನ್ನು ಒಪ್ಪಿಕೊಂಡಿದ್ದರು.ನಂತರ ಅಪರಾಧಿ ತಿರುಗಿ ಬಿದ್ದರು.ಅಪರಾಧ ಮಾಡಿದವರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ ಎಂಬುದು ಸ್ವಾಬಾವಿಕ.ಮೊಟ್ಟ ಮೊದಲನೆ ಪ್ರಮಾಣವಾಗಿ ಇದನ್ನು ಸಾರ್ವತ್ರಿಕವಾಗಿ ಒಪ್ಪಿಕೊಳ್ಳ ಬೇಕಾಗಿತ್ತು.ಇದೊಂದು ಆಧ್ಯಾತ್ಮಿಕ ಕ್ಷೇತ್ರವಾಗಿದ್ದರಿಂದ ಕೋರ್ಟ್ ಕಛೇರಿ ಎಲ್ಲಕ್ಕಿಂತ ನಮ್ಮ ನಮ್ಮೊಳಗೆ ಇತ್ಯರ್ಥವಾಗ ಬಹುದಾದ್ದರಿಂದ ಪಂಚಾಯಿತರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದರಿಂದ ಇದು ಸರ್ವಮಾನ್ಯ ಪ್ರಮಾಣ ವಾಗಬೇಕಾಗಿತ್ತು.ಆದರೆ ಇದಕ್ಕೆ ವಿರುದ್ಧವಾಗಿ ನಿಂತರು.ಧರ್ಮದ ಚೌಕಟ್ಟಿನಿಂದ ಕಳಚಿಕೊಂಡರು.ಒಂದೋಮ್ಮೆ ಈ ಹಂತದಲ್ಲಿ ಪಂಚಾಯಿತುದಾರರನ್ನು ಒಪ್ಪಿಕೊಳ್ಳದಿದ್ದರು ಧರ್ಮವನ್ನು ಒಪ್ಪಿ ಬೇರೆ ಪಂಚಾಯಿತುದಾರರನ್ನು ಸ್ವೀಕರಿಸಲಾದರೂ ಒಪ್ಪಿಕೊಳ್ಳ ಬೇಕಾಗಿತ್ತು.ಈ ಹಂತದಲ್ಲಿ ಬೇರೆ ಬೇರೆ ಪೀಠಾಧಿಪತಿಗಳನ್ನೇ ಬೇಕಾದರೂ ಸಂಪರ್ಕಿಸ ಬಹುದಿತ್ತು.ಆದರೆ ಧರ್ಮಕ್ಕೆ ತಲೆಬಾಗಲಿಲ್ಲ.ಧರ್ಮವನ್ನು ಅವಹೇಳನ ಮಾಡಿದರು.ಕಾನೂನು ತೆಕ್ಕೆಗೆ ಜಾರಿದರು.ಬಲಾತ್ಕಾರದಿಂದ ಎದರು ಪಾರ್ಟಿಯನ್ನು ಬಗ್ಗಿಸುವ ಪ್ರಯತ್ನವಾಗಿ ಬ್ಲಾಕ್ ಮೇಲ್ ಯೋಜನೆಯನ್ನು ರೂಪಿಸಿದರು.

ಅತ್ಯಾಚಾರ ಪ್ರಕರಣದಲ್ಲಿ ದೂರುದಾರಳು metirial evidence ಅನ್ನು ಮುಂದೆ ಮಾಡಿದಾಗ ಅದರಲ್ಲಿ ಇದ್ದಿದ್ದು ಸ್ವಾಮಿಗಳ ವೀರ್ಯ ಎಂದು ಹೇಳಲ್ಪಟ್ಟಿತ್ತು.ಸ್ವಾಮಿಗಳೇ ಹೇಳಿಕೊಂಡಂತೆ ವೀರ್ಯಸ್ಖಲನವಾದರೆ ಪೀಠಾಧಿಪತಿಯಾಗಿ,ಸನ್ಯಾಸಿಯಾಗಿ ಮುಂದುವರಿಯ ಬರುವುದಿಲ್ಲ.ಇವರ ವೀರ್ಯವೇ ಅಲ್ಲಿತ್ತು ಎಂದಾಗ ಅದನ್ನು ಎರಡನೇ ಪ್ರಮಾಣವಾಗಿ ಸ್ವೀಕರಿಸಿಕೊಳ್ಳಲು ಸಾಕಾಗಿತ್ತು.ಬಾಕಿದೇನೆ ಇರಲಿ ಅವಳ ವಸ್ತ್ರದ ಮೇಲೆ ಇವರ ವೀರ್ಯ ಇದೆ ಎಂದಾದರೆ ಇವರು ಪೀಠ ಖಾಲಿ ಮಾಡಬೇಕಾಗಿತ್ತು.

ಆಕ್ರಮ ಸಂಬಂಧ ಎಂಬ ಮೂರನೇಯ ಪ್ರಮಾಣ ಪ್ರಕಟವಾಯಿತು.ಸ್ವಾಮಿಗಳ ಕಡೆಯಿಂದ ಹಾಗೆ ಬರದೇ ಇಲ್ಲ ಎಂಬ ರೀತಿಯಲ್ಲಿ ಗೊಂದಲ ಎಬ್ಬಿಸಲಾಯಿತು.ಹಾಗಾದರೆ ಕೊರ್ಟ್ ಎನು ಬರೆದಿದೆ ಎಂದು ಮುಂದಿನ ಕೋರ್ಟ್ ನಲ್ಲಿ ವಿಚಾರಿಸುವ ಸಾಹಾಸಕ್ಕೆ ಕೈ ಹಾಕಲಿಲ್ಲ.ಕೋರ್ಟ್ನಲ್ಲಿ ಪ್ರಶ್ನಿಸದೆ ಹೋದದ್ದೆ ಒಂದು ಪ್ರಮಾಣವಾಯಿತು.

ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಸಲ್ಲಿಸಲ್ಪಟಿತು.ಅದರಲ್ಲಿ ಅಕ್ರಮ ಸಂಬಂಧ ಮಾಡಿಕೊಂಡಿದ್ದರಿಂದ °°°°° ( ಇವರು ನಮ್ಮ ಪೀಠಾಧಿಪತಿಯಾಗಿ ಬೇಡ) .ಆಕ್ರಮ ಸಂಬಂಧ ಮಾಡಿಕೊಂಡಿದ್ದಾರೆ ಎಂಬುದನ್ನು ಕೆಳ ಕೊರ್ಟ್ ಬರೆದಿದೆ ಎಂದು ಒಪ್ಪಿ ಹೈಕೋರ್ಟ್ ಈ ಅರ್ಜಿಯನ್ನು ಮುಂದಿನ ವಿಚಾರಣೆಗಾಗಿ ಸ್ವೀಕರಿಸಿತು.ಈ ಅರ್ಜಿಯ ಸ್ವೀಕಾರ ಮಾತ್ರದಿಂದ ಅಕ್ರಮ ಸಂಬಂಧ ಎಂಬ ಸೇಷನ್ ಕೋರ್ಟ್ ನ ಉಲ್ಲೇಖವನ್ನು ಹೈ ಕೋರ್ಟ ಒಪ್ಪಿಕೊಂಡಂತಾಯಿತು.ಇದರ ಜೊತೆ ಜೊತೆಗೆ ಆರ್ ಎಸ್ ಎಸ್ ನ ದಕ್ಷಿಣ ಮದ್ಯ ಕ್ಷೇತ್ರಿಯ ಸಂಘ ಚಾಲಕರು, ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶರು, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರು,ಟೀವಿ ಛಾನಲ್ ಗಳು ,ಪತ್ರಿಕೆಗಳು ಒಪ್ಪಿತ ಸಂಬಂಧವನ್ನು ಎತ್ತಿ ಹಿಡಿದವು.ಹೀಗೆ ಅಕ್ರಮ ಸಂಬಂಧ ಎಂಬ ಮೂರನೇಯ ಪ್ರಮಾಣ ಅತ್ಯಂತ ಪ್ರಬಲವಾಗಿ, ದೃಡವಾಗಿ ಸ್ವೀಕಾರಾರ್ಹವಾಗಿದ್ದಾಗಲೂ ಪೀಠಾಧಿಪತಿ ಕಂ ಕೀಂ ಗುಡಲಿಲ್ಲ.ಅವರ ಸಂಘಟನೆ ಅವರ ದುರ್ ವ್ಯವಾಹಾರಕ್ಕೆ ಬೆಂಗಾವಲಾಗಿ ನಿಂತಿತು.

ನಾಲ್ಕನೇಯ ಪ್ರಮಾಣವಾಗಿ ಬ್ಲಾಕ್ ಮೇಲ್ ಕೇಸ್ ನಲ್ಲಿ ಪ್ರೇಮಲತಾ ದಂಪತಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದ್ದು.ಅತ್ಯಾಚಾರದ ಕೇಸನ್ನು ಹಾಕಲಾಗದಂತೆ – ದುಂಡಾವರ್ತನೆಯಿಂದ ಅದನ್ನು ತಡೆಯಲು ಆದ ಪ್ರಯತ್ನವೇ ಬ್ಲಾಕ್ ಮೇಲ್ ಕೇಸ್.ತಾವೇ ತಮಗೆ ಇನ್ನೊಬ್ಬರ ಹೆಸರಿನಲ್ಲಿ ಪೋನ್ ಮಾಡಿಕೊಂಡಿದ್ದಾರೆಂದು ಮೊಬೈಲ್ ಟವರ್ ಲೋಕೇಷನ್ ಆಧಾರದ ಮೇಲೆ ನಿರ್ಣಿತವಾಯಿತು.ಇದರಿಂದಲೂ ಪೀಠಾಧಿಪತಿ ಪೀಠತ್ಯಾಗ ಮಾಡಲಿಲ್ಲ.ಅವರ ಬೆಂಗಾವಲು ಪಡೆ ಅವರ ರಕ್ಷಣೆಗೆ ಎಂದಿನಂತೆ ಹೆಗಲು ಕೊಟ್ಟು ನಿಂತಿದೆ.

ಭಗವತ್ಪಾದ ಶಂಕರಾಚಾರ್ಯರು ಹವ್ಯಕರೆಂಬ ಒಂದು ಜನಾಂಗಕ್ಕೆ ಅವರ ಉದ್ಧಾರಕ್ಕಾಗಿ ಧಾರ್ಮಿಕ ಮಾರ್ಗದರ್ಶನ ನೀಡಲು ಪೀಠವೊಂದನ್ನು ಅವರ ನೇರ ಶಿಷ್ಯರ ಮೂಲಕ ಸ್ಥಾಪಿಸಿದರು.ಈ ಪೀಠದ ಮೂವತ್ತಾರನೆ ಪೀಠಾಧಿಪತಿ ಹವ್ಯಕ ಜನರನ್ನು ಹಾಳು ಮಾಡಲಾಗಿಯೇ,ಹವ್ಯಕರ ಆಧ್ಯಾತ್ಮಿಕ ನಿಷ್ಟೆಯನ್ನು ನಾಶಮಾಡಲಾಗಿಯೇ ಪೀಠಾರೋಹಣ ಮಾಡಿದರು.ಹಾಳಾಗುವುದೇ ಇವರ ಹಣೆಯಲ್ಲಿ ಬರೆದಿದ್ದರೆ ಅದನ್ನು ತಪ್ಪಿಸುವ ಹೊಣೆಗಾರಿಕೆಯನ್ನು ಈ ನಾವ್ಯಾರು ಹೊತ್ತುಕೊಂಡಿಲ್ಲ.ನ್ಯಾಯವಾಗಿ ಉದ್ಧಾರ ಮಾಡಬೇಕಾದ ಹೊಣೆಗಾರಿಕೆಯನ್ನು ಹೋರಿಸಲ್ಪಟ್ಟವರೇ ಹಾಳು ಮಾಡುತ್ತಿರುವಾಗ, ಆಧ್ಯಾತ್ಮಿಕವಾಗಿ ತಪ್ಪು ಮಾರ್ಗದರ್ಶನ ನೀಡುತ್ತಿರುವಾಗ, ಬೇಲಿಯೇ ಎದ್ದು ಹೋಲ ಮೇಯುತ್ತಿರುವಾಗ ಬೇರೆಯವರು ಏನು ಮಾಡಲು ಸಾಧ್ಯ?

ನಾವು ಕೆಲವರಂತೂ ಕಳಚಿಕೊಂಡಿದ್ದೇವೆ.ಮಾನಸಿಕವಾಗಿ ಅವರಿಂದ ದೂರಾಗಿದ್ದೇವೆ.ಅವರ ಹುಚ್ಚು ದರ್ಭಾರಿಗೆ ಬೇಕಾದ ತನು ಮನ ಧನ ಸಹಾಯ ನಮ್ಮದಿಲ್ಲ.ನಾವು ಧರ್ಮದ ಪರ, ಸತ್ಯದ ಪರ. ಆದರೆ ಉಳಿದವರನ್ನೇಲ್ಲಾ ಸತ್ಯದ ದಾರಿಯಲ್ಲಿ ಕರೆದುಕೊಂಡು ಹೋಗುವ ಹೊಣೆಗಾರಿಕೆಯೇನೂ ನಮಗಿಲ್ಲ.ಸಮಕಾಲೀನ ಪ್ರಪಂಚ, ಪರೀಸ್ಥಿತಿ,ಸನ್ನಿವೇಶ ಅವರನ್ನು ಹಾಳಾಗಿಸಲಾಗಿಯೇ ಸೃಷ್ಟಿಯಾಗಿದ್ದರೆ ಹಾಳಾಗಲಿ ನಮಗೇನು ಎಂದು ಕೊಳ್ಳಬೇಕಷ್ಟೆ.

Ganapathi Bhatta Jigalemane
10/03/2017
source: https://www.facebook.com/groups/1499395003680065/permalink/1921239104828984/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s