ಪೇಸ್ಬುಕ್ ನಲ್ಲಿ ಕದನವಿರಾಮ ಘೋಷಿಸಿದ್ದಾರೆ.

ಪೇಸ್ಬುಕ್ ನಲ್ಲಿ ಕದನವಿರಾಮ ಘೋಷಿಸಿದ್ದಾರೆ.ನಮ್ಮ ಎದರು ಪಕ್ಷದವರಾದ -ನಾವಿದ್ದೇವೆ, ಸತ್ಯಮೇವ ಜಯತೇ- ಮುಂತಾದ ಯಾವ ಗುಂಪಿನಲ್ಲೂ ಯಾರು ಯಾವ ಪ್ರತಿಕ್ರಿಯೆಯನ್ನು ತೋರಿಸುತ್ತಿಲ್ಲ ಎಂದು ಚಿತ್ರಗುಪ್ತ ಎಂಬ ನಮ್ಮ ಬಾತ್ಮಿದಾರ ವರದಿ ಮಾಡುತ್ತಿದ್ದಾನೆ.ಪೇಸ್ಬುಕ್ ರಣಾಂಗಣದಿಂದ ಸದ್ಯದ ಮಟ್ಟಿಗೆ ಪಲಾಯನ ಗೈದಿದ್ದಾರೆ.ಹೀಗೆ ಪಲಾಯನ ಗೈಯಲು ಲೆಟರ್ ಹೆಡ್ ಸೂಚನೆ ಇದೆ ಎಂದು ವರದಿಗಾರ ಹೇಳುತ್ತಾನೆ.ಈ ಕದನ ವಿರಾಮ ಘೋಷಣೆಗೆ ಮುನ್ನ ನಮ್ಮನ್ನು consult ಮಾಡಿಲ್ಲ.ನಮ್ಮನ್ನು consult ಮಾಡಿದ್ದರೆ ನಾವು ಕೂಡ ಕೆಲವು ಷರತ್ತುಗಳೊಡನೆ ಅವರೊಂದಿಗೆ ಕದನವಿರಾಮ ಘೊಷಿಸಲು ಸಿದ್ಧರಾಗುತ್ತಿದ್ದೆವು.ನಮಗೇನು ಈ ಕದನ ಇಷ್ಟದಾಯಕವಾದ ವಿಚಾರವಲ್ಲ.ಹವ್ಯಕರ ಮಾನ ಮೂರು ಕಾಸಿಗೆ ಹರಜಾಗುವ ಲೇಖನಗಳನ್ನು ಪ್ರಕಟಿಸಬೇಕಾದ ಅನಿವಾರ್ಯತೆಯಿಂದ ಪಾರಾಗುವುದು ನಮಗೆ ಇಷ್ಟವೆ ಸರಿ. ನಮ್ಮ ಷರತ್ತುಗಳೇನು ಎಂದು ವಿಚಾರಿಸಿ ಕೊಳ್ಳಲು ಯಾರನ್ನು ಸಂಪರ್ಕಿಸಬೇಕೆಂಬ ಸಂಶಯ ನಿಮಗಿರಬಹುದು.ಮುಂದೆ ಓದಿ

ಬ್ಲಾಕ್ ಮೇಲ್ ಕೇಸಿನಲ್ಲಿ ನಾಲ್ಕು ಜನ ಹಳದಿ ತಾಲಿಬಾನುಗಳು ಕೈ ಹಾಕಿದ್ದು ನಮಗೆ ಲೆಖ್ಖ ಸಿಕ್ಕಿದೆ.ಪ್ರತ್ಯಕ್ಷವಾಗಿ ಇರುವಂತಹವರು ಈ ನಾಲ್ಕು.ಪರೋಕ್ಷವಾಗಿ
ಇನ್ನೆಷ್ಟು ಕೈಗಳು ಜೋಡಿಕೊಂಡಿದ್ದಾವೆಂದು ನಮಗೆ ಗೊತ್ತಿಲ್ಲ.ಈ ನಾಲ್ವರಲ್ಲಿ ಎರಡು ಜನ ಮಹಿಳೆಯರಿದ್ದಾರೆ.ತಾವು ಮಾಡುತ್ತಿರುವ ದ್ರೋಹದ ಗಂಭೀರತೆಯನ್ನು ಅವರು ಅರ್ಥ ಮಾಡಿಕೊಂಡಿಲ್ಲ ಎಂಬುದು ನಮ್ಮ ಊಹೆಯಾಗಿದೆ ಅವರನ್ನು ಕೋರ್ಟಿಗೆ ಎಳೆಯುವುದು ನಮಗೆ ಇಷ್ಟವಿಲ್ಲ.ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ.ಎನೂ ತಿಳಿಯದ ಮುಗ್ದ ಭಕ್ತಿಯಿಂದ, ತಮ್ಮ ಗುರುವನ್ನು ನಂಬಬೇಕಾದದ್ದಕಿಂತ ತೀರಾ ಹೆಚ್ಚು ನಂಬಿ ಈ ಯಡವಟ್ಟು ಮಾಡಿಕೊಂಡಿದ್ದಾರೆಂದು ನನ್ನ ಅನ್ನಿಸಿಕೆ.(ಪ್ರೇಮಲತಾಳದ್ದು ಅದೇ ದೋಷವಾಗಿತ್ತು.)
ಪೂರ್ವಪರ ಯೋಚನೆ,ಭವಿಷ್ಯತ್ತಿನಲ್ಲಿ ಪಡಬೇಕಾದ ಪಾಡು, ಇವುಗಳ ಕಲ್ಪನೆ ಅವರಿಗಿರಲಿಕ್ಕಿಲ್ಲ.ಆದ್ದರಿಂದ ಬ್ಲಾಕ್ ಮೇಲ್ ಕೇಸ್ ನಲ್ಲಿ ಮೊಬೈಲ್ ಟವರ್ ಲೋಕೇಷನ್ ಆಧಾರದ ಮೇಲೆ ಯಾರು ಯಾರು ಪೋನ್ ಮಾಡಲು ಹೊಗಿದ್ದರೆಂದು ದಾಖಲಾಗಿದಯೊ ಅವರ ಮೇಲೆ ಕೇಸ್ ಹಾಕುವೆವು ಎಂದು ಹೇಳುವವರಲ್ಲಿ ನನ್ನದೊಂದು ಮನವಿ ಏನೆಂದರೆ ಈ ಎರಡು ಜನ ಹೆಂಗಸರನ್ನು ಕೈ ಬಿಟ್ಟು , ಮಠದ ಮಹಾ ರಕ್ಷಣಾ ಪ್ರಬಂಧಕರಾದ ಬಿ ಆರ್ ಚಂದ್ರಶೇಖರ್ ಮತ್ತು ಡಾ| ಗಜಾನನ ಶರ್ಮಾ ಅವರನ್ನು ಮಾತ್ರ ನಿಮ್ಮ ಪ್ರತಿವಾದಿಯನ್ನಾಗಿ ಸ್ವೀಕರಿಸಬೇಕೆಂದು ವಿನಂತಿಸುತ್ತೇನೆ.ಈ ಹೆಂಗಸರನ್ನು ಪ್ರತಿವಾದಿಗಳಾಗಿ ಸ್ವೀಕರಿಸಿದರೆ ಮುಂದೊಂದು ದಿನ ಇವರನ್ನು ನಿಮ್ಮ ಕಾರಿನಲ್ಲಿಯೆ ಕೋರ್ಟಿಗೆ ಕರೆದುಕೊಂಡು ಹೋಗಬೇಕಾದ ಪರೀಸ್ಥಿತಿ ಎದರಾಗುತ್ತದೆ ಎಂದು ದೃಡವಾಗಿ ನಂಬುತ್ತೇನೆ.

ಈ ಹೆಂಗಸರು ಕೂಡ ತಾವು ಕೋರ್ಟಿಗೆ ಹೋಗಲು ಇಷ್ಟ ಪಡುವುದಿಲ್ಲ ಎಂದು ಹೇಳುವುದಾದರೆ ನಮ್ಮ ಕಡೆಯಿಂದ ಧರ್ಮಭೀರುಗಳು,ಸತ್ಯಸಂಧರು ಆದ ಸಂಪೇಕಟ್ಟೆ ಘನಪಾಠಿಗಳ ಮಕ್ಕಳನ್ನು[ ಅಖಿಲ ಹವ್ಯಕ ಒಕ್ಕೂಟದ ಕಾರ್ಯದರ್ಶಿಗಳು] ಸಂಪರ್ಕಿಸುವುದು ಉತ್ತಮ.ಸೋತು ಬಂದವರನ್ನು ತಿರಸ್ಕಾರ ಮಾಡುವ ಬುದ್ಧಿ ಅವರಿಗಿಲ್ಲ.ಎಲ್ಲಕ್ಕಿಂತ ಧರ್ಮವೇ ಪ್ರಧಾನ ಎಂದು ಭಾವಿಸುವವರು.ಅವರನ್ನು ಸಂಪರ್ಕಿಸಿದರೆ ನೀವು ಸಸಾರಕ್ಕೆ ಒಳಗಾಗುವುದಿಲ್ಲ.ಅವರನ್ನು ಯಾವುದಾದರೂ ರೀತಿಯಲ್ಲಿ ಅದಷ್ಟು ಬೇಗ ಸಂಪರ್ಕಿಸಿ ನೀವು ಪ್ರತಿವಾಧಿಗಳಾಗಲು ಇಷ್ಟ ಪಡುವುದಿಲ್ಲ ಎಂದು ತಿಳಿಸಿದರೆ, ತಿಳುವಳಿಕೆಯ ಕೊರತೆಯಿಂದ,ಬೇರೆಯವರು ಹಚ್ಚಿಕೊಟ್ಟ ಮಾತಿನಿಂದ ಪ್ರೇರಿತವಾಗಿ ಮಾಡಿದ ತಪ್ಪಿಗೆ ಪಶ್ಚಾತಾಪ ಪಟ್ಟುಕೊಂಡಿದ್ದೆನೆಂದು ಅವರಿಗೆ ಮನಗಾಣಿಸಿ ಕೊಟ್ಟರೆ ಹವ್ಯಕ ಹೆಣ್ಣುಮಕ್ಕಳಿಬ್ಬರನ್ನು ಕೋರ್ಟಿ ಗೆ ಎಳೆಯುವುದನ್ನು ತಪ್ಪಿಸಲು ಸಾದ್ಯವಿದೆ ಎಂದು ನನ್ನ ನಂಬಿಕೆ.

ವಿಚಾರಿಸದೆ ಸಂಪೇಕಟ್ಟೆ ಘನಪಾಠಿಗಳ ಮಕ್ಕಳನ್ನು ಹೊಣೆಗಾರರನ್ನಾಗಿಸಿದ್ದಕ್ಕೆ ಅವರ ಕ್ಷಮೆ ಕೋರಿ ಸರ್ವೇ ಜನಾಃ ಸುಖಿನೋ ಭವಂತು.

Ganapathi Bhatta Jigalemane
03/03/2017
source: https://www.facebook.com/groups/1499395003680065/permalink/1917648615188033/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s