ಧರ್ಮಯುದ್ಧದಲ್ಲಿ ಕೈಜೋಡಿಸಲು “ಸಮಾನ ಮನಸ್ಕ ವೇದಿಕೆಗೆ ಆತ್ಮೀಯ ಆಹ್ವಾನ”

ಧರ್ಮಯುದ್ಧದಲ್ಲಿ ಕೈಜೋಡಿಸಲು “ಸಮಾನ ಮನಸ್ಕ ವೇದಿಕೆಗೆ ಆತ್ಮೀಯ ಆಹ್ವಾನ”
**********************

ಅಂತೂ ಇಂತು ಶ್ರೀಕೃಷ್ಣ ಭಗವದ್ಗೀತೆ ಬೋಧಿಸಿ ಅರ್ಜುನನಿಗೆ ಕ್ಷತ್ರಿಯ ಧರ್ಮದ ಅವನ ಜವಾಬ್ದಾರಿಯನ್ನು,ಪಾಪ-ಪುಣ್ಯಗಳ ಮಾನದಂಡಗಳನ್ನೆಲ್ಲ ವಿವರಿಸಿ ಕುರುಕ್ಷೇತ್ರ ಯುದ್ಧಕ್ಕೆ ಹುರಿದುಂಬಿಸಿದ.ತನ್ನವರೊಡನೆಯೇ ಯುದ್ಧ ಮಾಡುವುದು ಹೇಗೆ ಎನ್ನುವ ಮೂಲ ಪ್ರಶ್ನೆಯೊಂದಿಗೆ ಹತಾಶನಾಗಿ ಕುಳಿತಿದ್ದ ಅರ್ಜುನನ ಮನಃಸ್ಥಿತಿ ಸಹಜ ಸ್ವಾಭಾವಿಕ ಮಾನವೀಯತೆಯ ಲಕ್ಷಣ.ಏನು ಮಾಡುವುದು ಎನ್ನುವ ತಾಕಲಾಟಗಳ ತುಮೂಲನದಲ್ಲಿ ಯುದ್ಧ ಭೂಮಿಯಲ್ಲೇ ಧನುಸ್ಸನ್ನು ಕೆಳಗಿಟ್ಟು ತನ್ನ ಹತಾಶೆಯನ್ನು ಶ್ರೀ ಕೃಷ್ಣನಲ್ಲಿ ಅರುಹಿದ್ದ. ಇದನ್ನೆಲ್ಲ ಮೊದಲೇ ಬಲ್ಲ ಶ್ರೀಕೃಷ್ಣ ಭಗವಧ್ಗೀತೆ ಭೋಧನೆಗೆ ಸಿದ್ಧನಾಗಿಯೇ ಬಂದಿದ್ದ ಎಂದು ಕಾಣುತ್ತದೆ. ಪರೋಕ್ಷವಾಗಿ ಭಗವಧ್ಗೀತೆಗೆ ವೇದಿಕೆ ಕಲ್ಪಿಸಿದ ಕೀರ್ತಿ ಕುರುಕ್ಷೇತ್ರ ಯುದ್ಧಕ್ಕೆ ಕಾರಣನಾದ ದುರ್ಯೋಧನನಿಗೇ ಸಲ್ಲುತ್ತದೆ. ಧರ್ಮ -ಅಧರ್ಮಗಳ ಯುದ್ಧದಲ್ಲಿ ಜಯ ಯಾವಾಗಲೂ ಧರ್ಮದ ಕಡೆಗಿರುತ್ತದೆ.. ನಿಜ ಎಂದು ಒಪ್ಪಿಕೊಳ್ಳೋಣ. ಆದರೆ ಧರ್ಮದ ಪರ ಯುದ್ಧದಲ್ಲಿ ಈ ಯೋಧ ಮುಂದೆ ನಿಂತು ಹೋರಾಡುತ್ತಾನೆ ಎನ್ನುವ ವಿಶ್ವಾಸವಿಟ್ಟಿದ್ದ ವ್ಯಕ್ತಿ ಕಡೆಯ ಕಾಲದಲ್ಲಿ ಕೈಯೆತ್ತಿ ಬಿಟ್ಟರೆ ಅಧರ್ಮದ ಕೈ ಮೇಲಾಗುತ್ತದೆ, ಧರ್ಮ ಮಕಾಡೆ ಮಲಗುತ್ತದೆ. ಬಹುಷಃ ಅರ್ಜುನನನ್ನು ಶ್ರೀಕೃಷ್ಣ ಭಗವಧ್ಗೀತೆಯ ಮೂಲಕ ಯುದ್ಧಕ್ಕೆ ಅಣಿಗೊಳಿಸದಿದ್ದರೆ ಕುರುಕ್ಷೇತ್ರ ಯುದ್ಧದ ಚಿತ್ರಣವೇ ಬದಲಾಗುತ್ತಿತ್ತೇನೋ.. ….

ಇಷ್ಟೆಲ್ಲ ಪೀಠಿಕೆ ಹಾಕಲು ಮುಖ್ಯ ಕಾರಣ ಹವ್ಯಕ ಸಮಾಜದ ಮಠವೊಂದರ ಸ್ವಾಮಿಯ ವಿಚಾರವಾಗಿ ನಡೆಯುತ್ತಿರುವ ಧರ್ಮ-ಅಧರ್ಮಗಳ ಹೋರಾಟದಲ್ಲಿ. ಕಳೆದೆರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟದಲ್ಲಿ ಅಧರ್ಮವೇ ಕೈ ಮೇಲಾದಂತೆ ಬಾಸವಾಗುತ್ತಿದೆ. ಹವ್ಯಕ ಸಂಸ್ಕೃತಿಯನ್ನೇ ಅಪಹರಣ ಮಾಡಿದ ಸ್ವಾಮಿಯ ವಿರುದ್ಧದ ಹೋರಾಟಗಾರರು ಮೇಲ್ನೋಟಕ್ಕೆ ಸಂಖ್ಯೆಯಲ್ಲಿ ಕಡಿಮೆ ಇರುವುದು ನಿಜ,..ಆದರೆ ಅರ್ಜುನ ಮನಸ್ಥಿತಿಯ ” ತನ್ನವರೊಡನೆಯೇ ಹೇಗೆ ಹೋರಾಡುವುದು” ಎನ್ನುವ ಮನೋಭಾವದಿಂದ ಹೊರಬರಲಾಗದೆ ತರೆಮರೆಯಲ್ಲಿ ಚಡಪಡಿಸುತ್ತಿರುವವರು ಭಗವದ್ಗೀತೆಯನ್ನು ನೆನಪಿಸಿಕೊಂಡು ನೇರವಾಗಿ ಯುದ್ಧಕ್ಕೆ ಧುಮಿಕಿದರೆ ಮುಂದಿನ ಪೀಳಿಗೆಗೆ ಹವ್ಯಕ ಸಂಸ್ಕೃತಿಯನ್ನು, ಹವ್ಯಕ ಮಠವನ್ನು ಉಳಿಸಿದ ತೃಪ್ತಿಯಾದರೂ ಉಳಿಯುತ್ತದೆ.

ಯು.ಆರ್ ಅನಂತಮೂರ್ತಿ ಬ್ರಾಹ್ಮಣರ ಬಗ್ಗೆ ಒಂದು ಮಾತನ್ನು ಹೇಳಿದ್ದರು…” ಬ್ರಾಹ್ಮಣರು ಬೆಕ್ಕಿದ್ದಂತೆ..ಎಷ್ಟು ಎತ್ತರದಿಂದ ಬಿದ್ದರೂ ಮೊದಲು ನೆಲಕ್ಕೆ ಕಾಲನ್ನೇ ಕೊಡುವುದು”..ವಿಶಾಲ ಅರ್ಥ ನೀಡುವ ಈ ಮಾತಿನಲ್ಲಿ ಎಂಥಹ ವಿಷಮ ಪರಿಸ್ಥಿತಿಯಲ್ಲೂ ತಮಗೆ ಮೈಕೈ ನೋವಾಗದ ಅನುಕೂಲ ಸಿಂಧು ದಾರಿಯನ್ನೇ ಹುಡುಕಿಕೊಳ್ಳುತ್ತಾರೆ ಎಂದೂ ಅರ್ಥೈಸಬಹುದು. ಎಲ್ಲಿ ಹವ್ಯಕ ಬ್ರಾಹ್ಮಣರಿದಾರೋ ಅಲ್ಲೆಲ್ಲಾ ಸಾಮಾಜಿಕ ಪರಿಸ್ಥಿತಿ ಮೇಲ್ಮಟ್ಟದಲ್ಲೇ ಇದೆ ಎನ್ನುವುದನ್ನು ಹವ್ಯಕ ಬ್ರಾಹ್ಮಣನಾಗಿ ಹೆಮ್ಮೆಯಿಂದ ಹೇಳುತ್ತೇನೆ.ಒಟ್ಟೂ ಸಮಾಜವಾಗಿ ಜಾಗತಿಕ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ ಸಾಗುವ ಗುಣ ಬೇರೆ ಜಾತಿಗಳೊಡನೆ ಬೆರೆತು ಬಾಳುತ್ತಿರುವ ರೀತಿಯಿಂದಲೇ ವೇಧ್ಯವಾಗುತ್ತದೆ. ಆದರೆ ತಮ್ಮದೇ ಸಮಾಜದೊಳಗಿನ ಪ್ರಶ್ನೆ ಬಂದಾಗ ಪಶ್ಚಿಮಕ್ಕೇ ಮುಖಮಾಡಿ ತಮ್ಮವರ ಮುಳುಗುವಿಕೆಯಲ್ಲೇ ಸಂತೋಷಪಡುವ ಮನೋಭಾವ ಮೊದಲಿನಿಂದಲೂ ಕಂಡುಬಂದ ಋಣಾತ್ಮಕ ಅಂಶ…..ಸಣ್ಣ ಸಣ್ಣ ವಿಚಾರಗಳನ್ನೂ ದೊಡ್ಡದು ಮಾಡಿ ವ್ಯಕ್ತಿಯ/ಕುಟುಂಬದ ತೇಜೋವದೆ ಮಾಡುತ್ತಾ ಸಾಗುವುದು, ಮುಖನೋಡಿ ಮಣೆಹಾಕುವುದು,ಎದುರಿಗೆ ನಮ್ಮವರಂತೆಯೇ ಇರುವುದು ಹಿಂದಿನಿಂದ ಆಡಿಕೊಳ್ಳುವುದು ಈ ಎಲ್ಲ ದುರ್ಗುಣಗಳು ಜಾತಿಯಲ್ಲೇ ಜಾತಿಯನ್ನು ದ್ವೇಷಿಸುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣ.ಸುಮಾರು 20 ವರ್ಷದ ಹಿಂದೆ ಹೋಗಿ ನೆನಪಿಸಿಕೊಳ್ಳಿ.. ಅದೆಷ್ಟು ಮದುವೆಯ ಸಂಬಂಧಗಳನ್ನು ಮೂಖರ್ಜಿ ಬರೆದು ತಪ್ಪಿಸಿದ್ದರು…ಕೇವಲ ಮದುವೆ ತಪ್ಪಿಸಬೇಕೆನ್ನುವ ಹುಳುಕು ಬುದ್ದಿಯಿಂದಲೇ ಬರೆದ ಊಹಾಪೋಹಗಳ ಮೂಖರ್ಜಿಯನ್ನು ಸತ್ಯವೆಂದು ನಂಬಿಯೇ ಸಂಬಂಧಗಳು ಕಡಿದ ಉದಾಹರಣೆ ಹವ್ಯಕ ಸಮಾಜದಲ್ಲಿ ಊರಿಗೆ ನಾಲ್ಕು ಸಿಗುತ್ತವೆ.. . .ಇಂಥಹ ಸಮಾಜ ಅವಿಚ್ಚಿನ್ನ ಪರಂಪರೆಯಲ್ಲಿ ಕುಳಿತು ಯತಿನಿಯಮ ಮೀರಿದ ಪೀಠದ ಸ್ವಾಮಿಯ ಮೇಲ್ನೋಟಕ್ಕೆ ಸಾಬೀತಾಗಿರುವ ಅನಾಚಾರದ ವಿರುದ್ಧ ಸಿಡಿದೇಳದಿರುವುದು- ಅನಂತಮೂರ್ತಿಯವರು ಹೇಳಿದ ಬೆಕ್ಕಿನ ಉಪಮೆಯ ತಾಜಾ ಉದಾಹರಣೆ.

ಮಠದಲ್ಲಿ ಗುಟ್ಟು ಗುಟ್ಟಾಗಿ ಕೇಳುತ್ತಿದ್ದ ಕಾಮದ ವಾಸನೆ ಹೊರಗಡೆಗೂ ಪಸರಿಸಿದ್ದು ಪಾನಿಪೂರಿ ಬಾವಯ್ಯನ ಪ್ರಕರಣದಲ್ಲಿ.ಸಮಾಜ ಬೇರೆ ಬೇರೆ ದಿಕ್ಕಿನಲ್ಲಿ ಸಂಘಟಿತವಾದ ಖುಷಿಯಲ್ಲಿದ್ದ ಹವ್ಯಕ ಸಮಾಜ ಅದನ್ನು ಅಷ್ಟಾಗಿ ಗಂಬೀರವಾಗಿ ಪರಿಗಣಿಸದೆ ನಿಬಾಯಿಸಿತು….ಆದರೆ ಹಾಲುಸಿಕ್ಕ ಖುಷಿಯಲ್ಲಿ ಕಣ್ಮುಚ್ಚಿಕೊಂಡು ಹೀರುತ್ತ, ತನ್ನನ್ನು ಯಾರೂ ಗಮನಿಸುತ್ತಿಲ್ಲ ಎನ್ನುವ ಬೆಕ್ಕಿನ ಮನೋಭಾವದಂತೆ ಧರ್ಮ ಪೀಠದಲ್ಲಿ ಕುಳಿತು ಮಾಡಿದ ಅನಾಚಾರಗಳು ಅನಾವರಣವಾಗುತ್ತ ಸಾಗಿ ನುಂಗಲಾರದ ಬಿಸಿತುಪ್ಪವಾಗಿತ್ತು…..ನುಂಗಿದರೆ ಮುಂದಾಗುವ ಅಪಾಯ ಅರಿತ ಸಮಾಜದ ಒಂದಷ್ಟು ಸಮಾನ ಮನಸ್ಕರ ಕಳೆದೆರಡು ವರ್ಷಗಳ ಅವಿರತ ಹೋರಾಟ ಸ್ವಾಮಿಯ ಕಾವಿಬಣ್ಣವನ್ನು ಜಗಜ್ಜಾಹೀರುಗೊಳಿಸಿದೆ.ಗುರಿಮುಟ್ಟಬೇಕಾದ ದಡ ಕಣ್ಣಿಗೆ ಕಾಣುತ್ತಿದೆ ಅಷ್ಟೆ …..ಗುರಿಮುಟ್ಟುವವರೆಗೂ ಕೈ ಬಡಿಯುತ್ತಲೇ ಇರಬೇಕು…

ಇತ್ತೀಚಿನ ವರೆಗಿನ ಬೆಳವಣಿಗೆಗಳನ್ನು ಎಲ್ಲ ಹವ್ಯಕರು/ಎಲ್ಲ ವರ್ಗದ ಸಮಾಜ ಕೂಲಂಕುಷವಾಗಿ ಗಮನಿಸಿದೆ….ಯಾವಾಗ ಅತ್ಯಾಚಾರ -ಬೆದರಿಕೆ ಪ್ರಕರಣ ದಾಖಲಾಗಿ ” ಸತ್ಯಸಂಗತಿ” ಎನ್ನುವ ಪುಸ್ತಕ ಹೊರಬಿತ್ತೋ ಅಂದೇ ಪ್ರಕರಣದ ಎಲ್ಲ ಮಸಲತ್ತುಗಳು ಹೆಚ್ಚಿನವರಿಗೆ ಮನವರಿಕೆಯಾಗಿತ್ತು. ಮುಂದಿನ ಎಲ್ಲಾ ಘಟನೆಗಳು ಹಸಿಗೋಡೆಯ ಮೇಲೆ ಅಂಗೈಯಿಟ್ಟು ಮೂಡಿಸಿದ ಚಿತ್ರದಂತೆ ಸ್ಪಷ್ಟವಾಗಿ ಜನರಲ್ಲಿ ಅಚ್ಚೊತ್ತಿದೆ. ಅಂಗೈ ಮುಂದಿಟ್ಟು ಮಾಡಿಸುವ ಎಲ್ಲಾ ಆಣೆ-ಪ್ರಮಾಣದ ಹಿಂದೆ ವಶೀಕರಣ ತಂತ್ರವೇ ಅಡಗಿದೆ….ಒಮ್ಮೆ ಯೋಚಿಸಿ ನೋಡಿ..ಇದು ಷಡ್ಯಂತ್ರ.. 169 ಸಾರಿ ಅತ್ಯಾಚಾರವಾದರೂ ಯಾಕೆ ಮತ್ತೆ ಮತ್ತೆ ಹೋದಳು ಎನ್ನುವ ಪ್ರಶ್ನೆ ಹಾಕಿಕೊಂಡು ಈಗಲೂ ಪರವಿರುವ ನೀವುಗಳು ಯಾಕೆ ಈಗಲೂ ಬೆಂಬಲಿಸುತ್ತಿದ್ದೀರಿ…ಸಿಡಿದು ಬರಲು ಸಾಧ್ಯವಾಗುತ್ತಿಲ್ಲ ಅಲ್ಲವೆ?…ಅದೇ ಪರಿಸ್ಥಿತಿಯಲ್ಲಿ ಆಕೆಯೂ ಬಲಿಪಶುವಾಗಿದ್ದಳು…ಸತ್ಯಸಂಗತಿ ಪುಸ್ತಕದಲ್ಲಿನ ಒಂದು ಪ್ರಶ್ನೆ ‘ಕಡೆಯ ಪಕ್ಷ ಆಕೆ ಒಬ್ಬಳಾದರೂ ಹೇಳುವ ದೈರ್ಯ ಮಾಡಿದಳಲ್ಲ!…ಇನ್ನೆಷ್ಟು ಜನ ಈಕೆಯಂತೆ ಅನುಭವಿಸುತ್ತಿದ್ದಾರೋ ಅಥವಾ ಹೊಂದಿಕೊಂಡು ಸಾಥ್ ನೀಡುತಿದ್ದಾರೋ ಎನ್ನುವ ನಿಮ್ಮೊಳಗಿನ ಅನುಮಾನಗಳನ್ನು ಇನ್ನೇನು ಬರಬಹುದಾದ ಎರಡನೇ ಅತ್ಯಾಚಾರದ ಪ್ರಕರಣ ದ CID Report ಗಟ್ಟಿಗೊಳಿಸಬಹುದು…

ಸತತ 2 ವರ್ಷಗಳಿಂದ ಕೆ.ಹೆಚ್ ಶ್ರೀನಿವಾಸ್,ಅಶೋಕ್ ಭಟ್,ಟಿ.ಟಿ ಹೆಗಡೆ,ಪಿಐಎಲ್ ದಾರರು ಮುಂತಾದವರ ನೇತೃತ್ವದಲ್ಲಿ ಹೋರಾಟಕ್ಕೆ ಒಂದು ಬಲ ಬಂದಿದೆ,ರೂಪ ಬಂದಿದೆ. ಯಾರದ್ದು ಷಡ್ಯಂತ್ರ ಎನ್ನುವುದು ಸ್ಪಷ್ಟವಾಗಿದೆ. ಆದರೆ ನಮ್ಮ ಹವ್ಯಕರಿಗೆ ಮುಜುಗರ ಸ್ವಲ್ಪ ಜಾಸ್ತಿ…ಇದುವರೆಗೆ ಹರೇರಾಮ ಹೇಳುತ್ತಾ ಬೆಂಬಲಿಸುತ್ತಿದ್ದವನು ಈಗ ಹೇಗೆ ಸಮಾನ ಮನಸ್ಕರ ಜೊತೆ ಹೋಗಲಿ..ಅಲ್ಲಿಂದ ಆಹ್ವಾನ ಬರದೆ ಹೇಗೆ ಹೋಗುವುದು ಈ ತರಹದ ಯಾವುದೇ ಗೊಂದಲದಿಂದ ಹೊರಬನ್ನಿ…ಸಮಾನ ಮನಸ್ಕ ವೇಧಿಕೆಯ ನ್ಯಾಯಯುತ ಹೋರಾಟದಲ್ಲಿ ಭಾಗವಹಿಸಿ ಶಂಕರ ಪೀಠದ ಪುಣ್ಯವನ್ನು ಗಳಿಸಲು ಎಲ್ಲರಿಗೂ ವೇಧಿಕೆ ಮುಕ್ತ ಆಹ್ವಾನವನ್ನು ಈ ಮೂಲಕ ನೀಡುತ್ತಿದೆ…ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಂದು ಭಾಗದಲ್ಲಿರುವ ಹವ್ಯಕ ಮುಖಂಡರು,ಮಠಕ್ಕೆ ಬೇರೆ ಬೇರೆ ರೀತಿಯಲ್ಲಿ ಸೇವೆಸಲ್ಲಿಸಿ ತಟಸ್ಥವಾಗಿರುವವರು ಕೂಡಲೆ ಕೈ ಜೋಡಿಸಿ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಿದ ಪುಣ್ಯಗಳಿಸಿಕೊಳ್ಳಿ. ಇಷ್ಟೆಲ್ಲ ನಡೆಯುತ್ತಿದ್ದರೂ ಸಾಗರದ ಹವ್ಯಕ ಮುಖಂಡರಾದ ಎಲ್ ಟಿ ಹೆಗಡೆಯವರು ಯಾಕೆ ಬರುತ್ತಿಲ್ಲ ಎನ್ನುವುದಕ್ಕೆ, ಮಠದ ಆಭರಣಗಳು ಎಲ್.ಟಿ ಹೆಗಡೆಯವರ ಮನೆಯಲ್ಲಿದೆ ಎನ್ನುವ ವದಂತಿಯೂ ಜನರ ಬಾಯಲ್ಲಿದೆ…ಅದೇ ಸತ್ಯವೆಂದು ಜನ ನಂಬುವಂತಾಗದಿರಲು ಕೂಡಲೇ ಹೋರಾಟಕ್ಕೆ ದುಮುಕಿ ನಿಮ್ಮ ನಿಲುವನ್ನು ಸ್ಪಷ್ಟಗೊಳಿಸುವುದು ಒಳ್ಳೆಯದು…

ಆ ತೆರಿಗೆ, ಈ ತೆರಿಗೆ, ವರಮಾನ ತೆರಿಗೆ ಎನ್ನುವ ಹೊಸ ಹೊಸ ಬೋಳೆಣ್ಣೆ ಸವರಿಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಿ…ನೆನಪಿಡಿ! ಈ 2 ವರ್ಷಗಳಲ್ಲಿ ಯಾವ ಪವಾಡವೂ ನಡೆದಿಲ್ಲ..ಅಥವಾ ಯಾರೊಬ್ಬರಿಗೂ ಶಾಪ ತಟ್ಟಿಲ್ಲ..ಶಂಕರ ಪೀಠವೇ ಎಲ್ಲರಿಗೂ ಶಕ್ತಿ ನೀಡಿ ಕಾಯುತ್ತಿದೆ ಎನ್ನುವ ವಿಶ್ವಾಸದಲ್ಲಿ ಭಯಬಿಟ್ಟು ಹೊರಬನ್ನಿ…ಕರಾಳ ಅಧ್ಯಾಯವೆಂದು ಮರೆತು ಈ ಮಠದ ಹವ್ಯಕ ಸಮಾಜವನ್ನು ಪುನರ್ನಿಮಿಸಿಕೊಳ್ಳಲು ಈಗಲೂ ಅವಕಾಶವಿದೆ…ಮೈಚಳಿಬಿಟ್ಟು ತಟಸ್ಥ ನಿಲುವಿನಿಂದ ಹೊರಬನ್ನಿ. ಗುರಿಮುಟ್ಟಲು ಕೈ ಜೋಡಿಸಿ…ಇದೋ ನಿಮಗೆ ಆತ್ಮೀಯ ಆಹ್ವಾನ..

Prakash Kakal
02/03/2017
source: https://www.facebook.com/groups/1499395003680065/permalink/1917040355248859/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s