ಇನ್ನು ಈ ಸಮಾಜಕ್ಕಿರುವುದು “ಪೀಠತ್ಯಾಗ ಮಾಡಿ ” ಎಂದು ಬೊಬ್ಬೆ ಹೊಡೆಯುವುದು..!

ಇನ್ನು ಈ ಸಮಾಜಕ್ಕಿರುವುದು “ಪೀಠತ್ಯಾಗ ಮಾಡಿ ” ಎಂದು ಬೊಬ್ಬೆ ಹೊಡೆಯುವುದು..!

ಹುಚ್ಚು ಎಂದು ಬೇಕಾದರೂ ಅಂದುಕೊಳ್ಳಿ ….
ಅನಿಸಿಕೆ ಮತ್ತು ಸಂಭವನೀಯತೆ….

ಈಗಾಗಲೇ ನಮ್ಮ ಸಮಾಜದ ಧರ್ಮ ಪೀಠದ ವ್ಯಕ್ತಿಯೊಬ್ಬ ತನ್ನ ಮೇಲೆ ಮೂರು ಕೋಟಿ ರೂಪಾಯಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಪ್ರಕರಣವನ್ನು ದಾಖಲಿಸಿ ಬಹುದಿನಗಳಾಗಿತ್ತು. ಅದರ ನಡುವೆ ಯಾರ ಮೇಲೆ ಬ್ಲಾಕ್ ಮೇಲ್ ಆರೋಪವನ್ನು ಹೊರಿಸಲಾಗಿತ್ತೋ ಆ ಮಹಿಳೆ ಒಂದು ಪ್ರಕರಣವನ್ನು ನ್ಯಾಯಾಲಯದಲ್ಲಿ ಸಲ್ಲಿಸಿ ತನ್ನ ಮೇಲೆ ಆ ಮಠದ ವ್ಯಕ್ತಿಯಿಂದ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದರು.

ಮಹಿಳೆ ಮಠದ ವ್ಯಕ್ತಿಯ ಮೇಲೆ ಸಲ್ಲಿಸಿದ ಅತ್ಯಾಚಾರದ ಆರೋಪವು ನ್ಯಾಯಾಲಯದಲ್ಲಿ (ಕೆಳ) ವಜಾಗೊಳಿಸಲ್ಪಟ್ಟಿದೆ. ಅಂದರೆ ಅತ್ಯಾಚಾರ ನಡೆದಿಲ್ಲವೆಂಬುದನ್ನು ನ್ಯಾಯಾಲಯ ತನ್ನ ವಜಾ ನೋಟ್ ನಲ್ಲಿ ತಿಳಿಸಿದೆ. ಇದರ ನಡುವೆ ಸಮಾಜದ ಕೆಲ ಧುರೀಣರು ನ್ಯಾಯಾಲಯದ ತೀರ್ಪಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಅದು ಅತ್ಯಾಚಾರವಲ್ಲ “ಒಪ್ಪಿತ ಸಂಬಂಧ ” ಎಂಬ ತೀರ್ಮಾನಕ್ಕೆ ಬಂದು ಸಮಾಜದಲ್ಲಿ ಬಹಿರಂಗವಾಗಿ ತಮ್ಮ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿಕೊಂಡು ಬಂದಿದ್ದಾರೆ. ಇರಲಿ ತೊಂದರೆಯಿಲ್ಲ.

ಇತ್ತೀಚೆಗೆ ಆ ಮಹಿಳೆಯ ಮತ್ತು ಇತರರ ಮೇಲೆ ಹಾಕಿದ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೇ ಸದರೀ ಆರೋಪಿತರು ನಿರ್ದೋಷಿಗಳೆಂದು ‘B’ ರಿಪೋರ್ಟ್ ಸಲ್ಲಿಕೆಯಾಗಿದೆ.
ಈಗ ಉಳಿದಿರುವುದು ಮುಂದಿನ ಬೆಳವಣಿಗೆ…..

ಅತ್ಯಾಚಾರ ಆರೋಪ ನಿರಾಧಾರವೆಂದು ಕೆಳನ್ಯಾಯಾಲಯ ಅದನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಸಮಾಜದ ಅತ್ಯಂತ ಧಾರ್ಮಿಕ ಸ್ಥಾನದಲ್ಲಿದ್ದರೂ ಆ ಆರೋಪಿತೆಯ ಮೇಲೆ ವಿನಾಕಾರಣ ಆರೋಪ ಮಾಡೀದ್ದಕ್ಕಾಗಿ ಯಾವುದೇ ಮಾನಹಾನಿ ಪ್ರಕರಣ ದಾಖಲಿಸಿಲ್ಲ. ಅದಕ್ಕೆ ನಾವ್ಯಾರೂ ಕಾರಣಕೇಳಬೇಕಾಗಿಲ್ಲ. ಅಗತ್ಯವೂ ಇಲ್ಲ. ಆದರೆ ಅತ್ಯಾಚಾರದ ಆರೋಪ ಮಾಡಿದವರು ನ್ಯಾಯಾಲಯದ ನಡೆಯನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದಾರೆ. ಅಂದರೆ ಕೆಳ ನ್ಯಾಯಾಲಯ ಹೇಳಿದ “ಅತ್ಯಾಚಾರವಲ್ಲ” ಎಂಬ ತೀರ್ಮಾನವಾಗಲೀ, ಸಮಾಜದವರು ಹೇಳಿದ ” ಒಪ್ಪಿತ ಸಂಬಂಧ ” ಎಂಬುದನ್ನಾಗಲೀ ಅವರು ಮನ್ನಿಸಿದಂತಿಲ್ಲ. ಏನೇ ಇರಲಿ.. ಅದು ಮುಗಿದ ಕಥೆ.

ಇತ್ತ ಬ್ಲಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೇ ಆರೋಪ ಮಾಡಿದವರಿಗೆ ಸೋಲಾಗಿದೆ. ಅವರ ಆರೋಪದಲ್ಲಿ ಹುರುಳಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಕೆಯಾಗಿದೆ. ಹೀಗಿರುವಾಗ ಯಾರ ಮೇಲೆ ಆರೋಪ ಮಾಡಲಾಗಿತ್ತೋ ಅವರು ತಮ್ಮ ಮಾನಹಾನಿಯಾಗಿದ್ದರ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಪಡೆದುಕೊಳ್ಲಲಿ.

ಒಪ್ಪಿತ ಸಂಬಂಧವೇ ಆಗಿದ್ದಲ್ಲಿ ಸಂತ್ರಸ್ಥೆಯ ಪತಿಯ ಕಡೆಯಿಂದ ಯಾವುದೇ ಪ್ರಕರಣವೂ ದಾಖಲಾಗಿಲ್ಲ…!

ಒಪ್ಪಿತ ಸಂಬಂಧವಲ್ಲ ಎಂಬುದಕ್ಕೂ ತನ್ನ ಮಾನ ಕಾಯ್ದುಕೊಳ್ಳುವ ಯಾವ ಪ್ರತಿ ಪ್ರಕರಣಗಳೋ ಅಥವಾ ನ್ಯಾಯಾಲಯದ ಆದೇಶದ ಪುನರ್ವಿಮರ್ಶೆಯ ಅರ್ಜಿಯೋ ದಾಖಲಾಗಿಲ್ಲ..!

ಇದೂವರೆಗೆ ಸಮಾಜ ಹೇಳಿಕೊಂಡು ಬಂದ “ಒಪ್ಪಿತ ಸಂಬಂಧ “ಎಂಬುದಕ್ಕೆ ಉತ್ತರದಾಯಿ ಯಾರು..? ಒಂದುವೇಳೆ ಮುಂದೆ ಬರಬಹುದಾದ ತೀರ್ಮಾನವನ್ನವಲಂಬಿಸಿಯೇ ನಿರ್ಣಯ ಕೈಗೊಳ್ಲಬೇಕಾದಲ್ಲಿ ಈ ಸಮಾಜ ಹೇಳುತ್ತಿರುವ ಆರೋಪವೂ ನಂಬಲರ್ಹವೆನ್ನಿಸುವುದಿಲ್ಲ ಅಲ್ಲವೇ..?

ಇಲ್ಲಿಗೆ ಸಮಾಜದಲ್ಲಿ ಭುಗಿಲೆದ್ದ ಒಮ್ದು ಕೆಟ್ಟ ವ್ಯವಹಾರದ ಸುಖಾಂತ್ಯವಾಗಿದೆಯೆಂದುಕೊಳ್ಳೋಣ. ಏಕೆಂದರೆ ಇಲ್ಲಿ ಮುಂದೆ ಪ್ರೇಮಲತಾ ದಿವಾಕರ್ ಅವರಾಗಲೀ, ಅಥವಾ ಮಠವಾಗಲೀ ಈ ಕುರಿತಾದ ಸಾಮಾಜಿಕ ಪರಿಧಿಯಲ್ಲಿ ನ್ಯಾಯಕ್ಕಾಗಿ ಕೇಳುವಂತಿಲ್ಲ.

ನನಗೆ ತಿಳಿದಂತೇ ಇನ್ನು ಪ್ರೇಮಲತಾ ದಿವಾಕರ್ ಅವರದ್ದಾಗಲೀ, ಅಥವಾ ಮಠದ ವ್ಯಕ್ತಿಯ ಕಡೆಯದ್ದಾಗಲೀ ಕೇವಲ ನ್ಯಾಯಕ್ಕಾಗಿನ ಹೋರಾಟವೇ ಹೊರತೂ ಸಮಾಜಕ್ಕೆ ನಿರುಮ್ಮಳವಾದಂತಾಯಿತು.ಏಕೆಂದರೆ ಈ ಸಮಾಜ ಹೇಳಿದ ಒಪ್ಪಿತ ಸಂಬಂಧವನ್ನು ಪ್ರೇಮಲತಾ ದಿವಾಕರ್ ಅವರು ಒಪ್ಪುವಂತಿಲ್ಲ. !! ಅತ್ಯಾಚಾರವಲ್ಲ ಎಂಬುದನ್ನು ನೀಡಿದ ತೀರ್ಪನ್ನು ಮುಂದೆ ಮಠೀಯರು ಪ್ರಶ್ನಿಸಲಿಲ್ಲ…!

ಇನ್ನು ಈ ಸಮಾಜಕ್ಕಿರುವುದು “ಪೀಠತ್ಯಾಗ ಮಾಡಿ ” ಎಂದು ಬೊಬ್ಬೆ ಹೊಡೆಯುವುದು..!

ಶಂಖ,
ಜಾಗಟೆ,..
ನ್ಯಾಯಿಕ ವಿಧಾನದಲ್ಲಿ ತಿಳಿದವರೊಬ್ಬರು ಹೇಳಿದ್ದು…!

ಕೆಳನ್ಯಾಯಾಲಯದ ತೀರ್ಪು ಅಥವಾ ತೀರ್ಮಾನ ಮೇಲಿನ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗುವ ವರೆಗೂ ಊರ್ಜಿತದಲ್ಲಿರುತ್ತದೆ….!!ಮೇಳಿನ ನ್ಯಾಯಾಲಯಗಳಲ್ಲಿ ತೀರ್ಮಾನವಾಗುವುದೆಂದರೆ. ಅದು “ಅತ್ಯಾಚಾರ” ಎಂದೋ. ಅಲ್ಲ ಎಂದೋ ಆಗಬೇಕಷ್ಟೇ.. ಅದನ್ನು ಕಾಯೋದು ಸಲೀಸು..!

ಜೈ ಹವ್ಯಕ ಸಮಾಜ..!

ಈಗಿರುವುದು ಶ್ರೀ ಎದುರ್ಕಳ ಈಶ್ವರ ಭಟ್ಟ ಮೊದಲಾದ ಪ್ರಮುಖರು ಸಲ್ಲಿಸಿದ PIL ಅದು ಎಷ್ಟರ ಮಟ್ಟಿಗೆ ಈ ವ್ಯಕ್ತಿಯನ್ನು ಆ ಪೀಠದಿಂದ ಕೆಳಗಿಳಿಸಲು ಸಮರ್ಥವಾಗಿದೆಯೋ ಗೊತ್ತಿಲ್ಲ..!
ಹವ್ಯಕ ಸಮಾಜಕ್ಕೆ ಜೈ..!

ಶುಭಮಸ್ತು.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ
26/02/2017
source: https://www.facebook.com/groups/161894837550032/permalink/222831731456342/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s