“ಅತ್ಯಾಚಾರದ” ಪ್ರಕ್ರಣವು ಸಿದ್ಧವಾದಂತಾಗಲಿಲ್ಲವೇ..?

“ಅತ್ಯಾಚಾರ”….. “ಒಪ್ಪಿತ ಸಂಬಂಧ”
ಸೆಶನ್ಸ್ ನ್ಯಾಯಾಲಯದ ಆರೋಪ ವಜಾ ಗೊಳಿಸಿದ ತೀರ್ಪು..!

ಹವ್ಯಕ ಸಮಾಜವು ಬಹುವಾಗಿ ಆರಾಧಿಸಿಕೊಂಡು ಬಂದಿದ್ದ ಧರ್ಮಪೀಠವೊಂದರ ಮೇಲೆ ಕುಳಿತ ವ್ಯಕ್ತಿಯಮೇಲೆ ಒಂದು ಗುರುತರವಾದ ಆಪಾದನೆ ಈ ಹಿಂದೆ ನ್ಯಾಯಾಲಯದಲ್ಲಿ ದಾಖಲಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಆ ನಂತರದ ಬೆಳವಣಿಗೆಗಳು ತಮಗೆಲ್ಲ ತಿಳಿದೇ ಇದೆ.
ಕೆಲದಿನಗಳ ಹಿಂದೆ ಮಾನ್ಯ ಸೆಶನ್ಸ್ ನ್ಯಾಯಾಲಯವು ಯಾವುದೇ ಸಾಕ್ಷ್ಯಗಳನ್ನು ವಿಚಾರಣೆಗೊಳಪಡಿಸದೇ ಸುದೀರ್ಘವಾದ ಹೇಳಿಕೆಗಳನ್ನೂ ದಾಖಲಿಸಿ ಅತ್ಯಾಚಾರ ಆರೋಪವನ್ನು ವಜಾಗೊಳಿಸಿದ್ದು ಎಲ್ಲರಿಗೂ ತಿಳಿದಿದೆ.

ಸೆಷನ್ ಕೋರ್ಟಿನ ನ್ಯಾಯಾಧೀಶರು ಯಾವುದೇ ಸಾಕ್ಷ್ಯಗಳನ್ನು ಪರಿಗಣಿಸದೇ ಏಕಮುಖವಾಗಿ ವರ್ತಿಸಿ ಅತ್ಯಾಚರವನ್ನು ಒಪ್ಪದೇ ಒಪ್ಪಿತ ಸಂಬಂಧ ಮತ್ತು ಒಪ್ಪಿತ ಸಂಬಂಧವನ್ನು ಹಣದ ಬೇಡಿಕೆಗಾಗಿ ಮಾಡಲಾಗಿತ್ತು ಅದಕ್ಕಾಗಿ ಮೂರು ಕೋಟಿ ಬೇಡಿಕೆ ಈಡೇರದೇ ಇದ್ದಾಗ ಈ ರೀತಿ ಅತ್ಯಾಚಾರದ ದೂರು ದಾಖಲಿಸಿದ್ದು ಇದು ಷಡ್ಯಂತ್ರ ಎಂದು ಷರಾ ಬರೆದು ಕೈತೊಳೆದುಕೊಂಡರು. ಅಲ್ಲದೇ ಯಾವ ನ್ಯಾಯಾಲಯ ಲೈಂಗಿಕ ವಿಷಯಗಳನ್ನು ವಿಜ್ರಂಭಿಸಬಾರದಿತ್ತೋಈ ಅದನ್ನೂ ರಂಜನಾತ್ಮಕವಾಗಿ ಬರೆದರು. ಆದರೆ ಒಪ್ಪಿತ ಸಂಬಂಧವನ್ನು ಸ್ಪಷ್ಟವಾಗಿ ನಿರಾಕರಿಸಿದ ದೂರುದಾರರು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರು(ಇನ್ನೂ ವಿಚಾರಣೆಯ ಹಂತದಲ್ಲಿದೆ). ಆ ಕಡೆ ಆರೋಪಿ ಆಸಾಮಿ(ಸ್ವಾಮಿ) ಒಪ್ಪಿತ ಸಂಬಂದವನ್ನು ನಿರಾಕರಿಸದೇ ಸ್ವೀಕರಿಸಿಬಿಟ್ಟ. ಅಲ್ಲಿಗೆ ಅವನ ನೈತಿಕತೆಯೂ ಹಾಳಾಯ್ತು. ಅವನೇ ಸ್ಪಷ್ಟವಾಗಿ ಒಪ್ಪಿಕೊಂಡಹಾಗಾಯ್ತು. ಇಲ್ಲಿ ಈಗ ಇರುವ ಪ್ರಶ್ನೆ ಎಂದರೆ ಹೊನ್ನಾವರದ ವ್ಯಕ್ತಿಯೊಬ್ಬನಿಗೆ ಕರೆಮಾಡಿ ಹಣದ ಬೇಡಿಕೆ ಇಟ್ಟಿದ್ದರು ಅಂತಾಗಿದ್ದರೆ ಪೋಲೀಸರು ಮೊದಲು ಎಲ್ಲಿಂದ ಕರೆ ಬಂತು ಎಂದು ಅದನ್ನು ಪತ್ತೆಮಾಡಿ ಆಮೇಲೆ ಹಣಕ್ಕೆ ಬೇಡಿಕೆ ಇಟ್ಟವರಿಗೆ ಯಾವುದೋ ನಿಗದಿತ ಸ್ಥಳಕ್ಕೆ ಬನ್ನಿ ಹಣ ಕೊಡುತ್ತೇವೆ ಎಂದು ದೂರುದಾರರಲ್ಲಿ ಹೇಳಿಸಿ ಅಲ್ಲಿ ಬೇಡಿಕೆ ಇಟ್ತವರನ್ನು ಕರೆಸಿ ಬಂಧಿಸಬೇಕಿತ್ತು. ಹಾಗೆ ಮಾಡದೇ ಏಕಾ ಏಕಿ ಮನೆಗೆ ಬಂದು ಬಂಧಿಸಿ ಕರೆದುಕೊಂಡು ಹೋದರು. ಹಣದ ಅವಶ್ಯಕತೆ ಇದ್ದಿದ್ದರೆ ನೇರವಾಗಿ ಮಠಕ್ಕೆ ಕರೆಮಾಡಿ ಆಸಾಮಿಯಲ್ಲೇ ಕೇಳುತ್ತಿದ್ದರಲ್ಲವೇ ? ಈಗ ಆ ಕೇಸಿಗೆ ಬಿ ರಿಪೋರ್ಟ್ ಬಿದ್ದಾಗಿದೆ ಈಗ ಎಲ್ಲವೂ ಷಡ್ಯಂತ್ರದಿಂದ ಹೊರಬಂದು ಅತ್ಯಾಚಾರದ ಕೇಸು ನಿಜ ಅಂತಾದ ಮೇಲೆ ಹಿಂದಿನ ಕೆಳ ನ್ಯಾಯಾಲಯದ ಆದೇಶಕ್ಕೆ ಯಾವ ಬೆಲೆ ಇದೆ ? ಷಡ್ಯಂತ್ರವೇ ಸುಳ್ಳಾದ ಮೇಲೆ ಅತ್ಯಾಚಾರದ ದೂರು ಕೊಟ್ಟವರ ದೂರಿನ ಅಂಶ ನಿಜವಾಯಿತು. ಅಲ್ಲಿಗೆ ದೂರು ದಾರರು ನಂಬಿರುವ ಸತ್ಯ ನಿಜ ಆಸಾಮಿ ಕೇವಲ ಆಸಾಮಿಯಲ್ಲ ಕಾಮಿ ಎಂದಾಯ್ತು. ಈಗ ಉಳಿದಿರುವುದು ಆಸಾಮಿ ಅತ್ಯಾಚಾರಿಯೂ ಹೌದು. ಹಾಗೂ ಅವರೆ ಒಪ್ಪಿಕೊಂಡ ಆದೇಶದ ಪ್ರಕಾರ ಒಪ್ಪಿತ ಸಂಬಂಧವೂ ಹೌದು (ಬೇರೆಯವರ ಜೊತೆ). ಅಲ್ಲಿಗೆ ಮುಂಬಯಿ ಹೈಕೋರ್ಟಿನ ಇತ್ತೀಚಿನ ಆದೇಶದಂತೆ (ಒಪ್ಪಿತ ಸಂಬಂಧವಾಗಿದ್ದರೂ ಪುರುಷ ಕುಡಿದ ಅಮಲು ಅಥವಾ ಮಹಿಳೆಗೆ ಮತ್ತು ಭರಿಸಿ ಸೇರಿದ್ದರೂ ಆಕೆಗೆ ಇಷ್ಟವಿಲ್ಲ ಅಂತ ಒಮ್ಮೆ ಹೇಳಿದರೂ ಅದು ಅತ್ಯಾಚಾರ ಎಂದು ತೀರ್ಪುಕೊಟ್ಟಿದೆ) ತಪ್ಪಿತಸ್ಥ ಎಂತಾಯಿತಲ್ಲವೇ ?

ಈಗ ಹೇಳಿ… ಸೆಶನ್ಸ್ ಕೋರ್ಟ್ ನೀಡಿದ ಒಪ್ಪಿತ ಸಂಬಂಧ ಎಂಬ ಹೇಳಿಕೆಯಾಗಲೀ, ಅಥವಾ ಅತ್ಯಾಚಾರ ನಡೆದಿಲ್ಲ. ಇದು ಕೇವಲ ಮೂರು ಕೋಟಿ ರೂಪಾಯಿಗಳಿಗೆ ದುಡ್ಡಿನಾಸೆಗೆ ಮಾಡಿದ ಆರೋಪ ಎಂಬುದಾಗಲೀ ಯಾವುದೂ ಸತ್ಯವಲ್ಲ ಎಂಬಲ್ಲಿಗೆ..“ಅತ್ಯಾಚಾರದ” ಪ್ರಕ್ರಣವು ಸಿದ್ಧವಾದಂತಾಗಲಿಲ್ಲವೇ..? ಬಲ್ಲವರಿಗೆ ಹೇಳಬೇಕಿಲ್ಲ..! ತಿಳಿಯದವ್ರಿಗೆ ಹೇಳಿದರೂ ಅರ್ಥವಾಗುವುದಿಲ್ಲ…!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ
28/02/2017
source: https://www.facebook.com/groups/161894837550032/permalink/223338491405666/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s