Pressure mounts on Raghaveshwara to step down: from Facebook

ಯಾರು 1200 ವರ್ಷಗಳ ಇತಿಹಾಸ ಇರುವ ಪೀಠಕ್ಕೆ ನಿಷ್ಟರೋ ಅವರೆಂದಿಗೂ ಈ ಧೋಖೇಭಾಜ್ ನಿಗೆ ನಿಷ್ಠರಾಗಲು ಸಾಧ್ಯವೇ ಇಲ್ಲ.ಪರಮ ಪವಿತ್ರವಾಗಿದ್ದ ಪೀಠವು ಇವರ ಆಳ್ವಿಕೆಗೆ ಒಳಪಟ್ಟು ಕಾಮುಕರ ಸಂತೆಯಾಗಿದೆ.

ಮಠಕ್ಕೆ ಹೋದರೆ ಅಲ್ಲಿ ನಡೆಯುವುದು ರಾಮ ಧ್ಯಾನವಲ್ಲ.ಕಾಮಧ್ಯಾನ.ಪೀಠಾಧಿಪತಿಯಿಂದ ಹಿಡಿದು ಕಸ ಗುಡಿಸುವ ಗಿಂಡಿ ಮಾಣಿಯವರೆಗೆ ಎಲ್ಲರೂ ಹಸಿದ ಕಾಮ ಪಿಪಾಸುಗಳು.ಕೀಚಕನ ಅಪರಾವಾತಾರಿಗಳು.ಬಂದವಳು ಯಾರು, ಅವಳ ಪೀಗರ್ ಹೇಗಿದೆ ಅವಳ ನೆಂಟರಿಷ್ಟರು ಯಾರು ,ಗಂಡನ ಮೇಲೆ ಅವಳ ನಿಯಂತ್ರಣ ಹೇಗಿದೆ, ಅವಳು ಹೇಗೆ ಕುಳಿತುಕೊಳ್ಳುತ್ತಾಳೆ,ಎಲ್ಲಿ ನಿಂತುಕೊಳ್ಳುತ್ತಾಳೆ,ಕುಳಿತು ನಿಂತು ಮಾಡುವಾಗ ಯಾವ ಯಾವ ಭಾಗ ಎಷ್ಟು ಎಷ್ಟು ತೋರ್ಪಡಿಸಲ್ಪಡುತ್ತದೆ,ಯಾರೋಡನೆ ನಕ್ಕಳು,ಬಂದವಳು ಎಷ್ಟು ಸೋಷಿಯಲ್ಲು.ಕೈ ಮೈ ತಾಕಿಸಿದರೆ ಪ್ರತಿಕ್ರಿಯೆ ಎನು ಬರುತ್ತಿದೆ,

ಇದನ್ನು ಇನ್ನಷ್ಟು ಇನ್ನಷ್ಟು ವರ್ಣಿಸ ಹೊರಟರೆ ಈ ಮುದುಕನಿಗೆ ಈ ವಯಸ್ಸಿನಲ್ಲಿ ಮಕ್ಕಳ ಮರಿಗಳ ಎದರು ಹಿಂಗೆಂತಕಾತು ಎಂದುಕೊಳ್ಳುತ್ತರೇನೋ? ಹೀಗೆ ಇದೆಲ್ಲವನ್ನು ಅಧ್ಯಯನ ಮಾಡಲಾಗುತ್ತದೆ.ಗಿಂಡಿ ಮಾಣಿಗಳಿಗೆ ಅದೇ ಕೆಲಸ.ಯಾರಿಗಾದರೂ ಒಂದು ನಗೆ ಸಿಕ್ಕಿಬಿಟ್ಟರೆ ಅವನಿಗೊಂದು ಬಂಪರ್ ಲಾಟರಿ ಹೊಡೆದಾಂಗೆ ಯಾರಿಗೆ ನಗು ಸಿಗಲಿಲ್ಲವೋ ಅವನು ಪಾಪಿಷ್ಠ.ಒಟ್ಟಿನಲ್ಲಿ ಇಡೀ ವಾತಾವರಣ ಕಾಮಮಯ,sexul feelings ನಿಂದ ತುಂಬಿ ತುಳುಕುತ್ತಿದೆ

ಮರ್ಯಾದೆವಂತ ಹೆಂಗಸರು ಮಠಕ್ಕೆ ಹೋಗುವಂತಯೇ ಇಲ್ಲ.ಇನ್ನೂ ಮಠಕ್ಕೆ ಹೋಗುತ್ತಿದ್ದಾರೆಂದರೆ ಅವರು ಮರ್ಯಾದೆವಂತರಲ್ಲಾ ಎಂದೇ ಹೇಳ ಬೇಕಾಗಿದೆ.ಯಾವುದೋ ಲೈಂಗಿಕ ಅತೃಪ್ತಿಯಿಂದ ಬಳಲುತ್ತಿರುವ ಅಂಗನೆಯರು ಈ ಮಠದ ಮೆಟ್ಟಿಲ್ಲನ್ನು ಪದೇ ಪದೇ ಹತ್ತಿ ಇಳಿಯುತ್ತಿರುತ್ತಾರೆ.ಇದನ್ನು ಹೀಗೆ ಘಂಟಘೋಷವಾಗಿ ಹೇಳುತ್ತಿರುವುದು ಬೀಜೇಪಿಯ ಹಿರಿಯ ವಕೀಲೆಗೆ ಇರಿಸುಮುರಿಸಾಗುತ್ತಿದೆ.ಅವಳು ನನ್ನನ್ನು ಇಪ್ಪತ್ನಾಲ್ಕು ಘಂಟೆಗಳಲ್ಲಿ ಬಂಧಿಸಲು ಕರೆ ಕೊಟ್ಟಿದ್ದಾಳೆ. ಅಲ್ಲಿ ನಡೆಯುತ್ತಿರುವುದು ಅವಳಿಗೆ ಸಹ್ಯ.ಅದನ್ನು ಹೇಳಿದರೆ ಅದು ಅಸಹ್ಯ.ಸ್ರೀಯರ ಸ್ಚಚ್ಛಂಧ ಪ್ರವೃತ್ತಿಯನ್ನು ಪ್ರಶ್ನಿಸುವ ಪುರುಷ ಪ್ರಧಾನ ಸಮಾಜದ ಕುರುಡು ಅಪಲಾಪ.

ಹೀಗೆ ಮಠವನ್ನು ಕಾಮುಕರ ಸಂತೆಯಾಗಿಸಿದ ಪೀಠಾಧಿಪತಿಗೆ ನಿಷ್ಠರಾದವರು ಎಂದಿಗೂ ಪೀಠದ ಮೇಲೆ ಅಭಿಮಾನವಿದ್ದವರಲ್ಲ.ಅಲ್ಲಿರುವ ಪುರಾತನ ರಾಮ ಪರಿವಾರದ ವಿಗ್ರಹಗಳಾಗಲಿ ,ಧರ್ಮ ಸಂಸ್ಕೃತಿಗಳಿಗಾಗಲಿ ನಿಷ್ಠೆ ಹೊಂದಿದವರಲ್ಲ.ಇವುಗಳೆಲ್ಲಾ ಅವರಿಗೆ ಪ್ರೀಯವಾದವುಗಳಲ್ಲ

ನಿಖಿಟ ಪೂರ್ವದಲ್ಲಿದ್ದ ಸ್ವಾಮಿಗಳನ್ನು ಕಂಡರೆ ಈ ಪೀಠಾಧಿಪತಿಗೆ ಆಗುತ್ತಿರಲಿಲ್ಲ.ಅವರ ಹಿತನುಡಿಗಳು ಇವರಿಗೆ ಕಾದ ಕಬ್ಬಿಣದ ರಸವನ್ನು ಕಿವಿಯ ಮೇಲೆ ಸುರಿದಂತೆ ಭಾಸವಾಗುತ್ತಿತ್ತು.ಅಂದರೆ ನಿಖಿಟ ಪೂರ್ವ ಸ್ವಾಮಿಗಳಿಗೆ ನಿಷ್ಠರಾದವರು ಈ ಧೋಖೇಭಾಜ್ ನಿಗೆ ನಿಷ್ಠೆಯನ್ನು ಪ್ರದರ್ಶಿಸಲು ಬರುವುದಿಲ್ಲ.

ಶೃಂಗೇರಿಗೆ ನಿಷ್ಠರಾದವರು ಈ ಧೋಖೇಭಾಜ್ ನಿಗೆ ನಿಷ್ಟರಾಗಲು ಬರುವುದಿಲ್ಲ.ಇವನಿಗೆ ಶೃಂಗೇರಿಯವರನ್ನು ಕಂಡರೆ ಮೈ ಉರಿಯುತ್ತದೆ.ಅನೇಕ ಭಾಷಣದಲ್ಲಿ ಅದನ್ನು ಕಾರಿಕೊಂಡಿದ್ದಾರೆ .ಎರಡೂ ಸಮಾನವಾಗಿ ಶಂಕರ ಅದ್ವೈತ ತತ್ತ್ವ ಪ್ರಸಾರಕ ಪೀಠಗಳಾಗಿದ್ದವು.ಆದರೆ ಈಗ ಧೋಖೇಭಾಜ್ ನ ಉಸ್ತುವಾರಿಯಲ್ಲಿರುವ ಪೀಠ ಅದ್ವೈತತತ್ತ್ವ ಪ್ರಸಾರಕ ಪೀಠವಾಗಿ ಉಳಿದಿಲ್ಲ.ಬದಲಾಗಿ ಜಗತ್ತೆ ಸತ್ಯ ,ಬ್ರಹ್ಮ ಮಿಥ್ಯ ಎಂಬ ತತ್ತ್ವವನ್ನು ಆಚರಣೆಗೆ ತಂದ ಮಠವಾಗಿದೆ ಹಾಗಾಗಿ ಯಾರು ಶೃಂಗೇರಿಗೆ ನಿಷ್ಠರೊ ಅವರೆಂದಿಗೂ ಈ ಶೀಲಗೆಟ್ಟವನಿಗೆ ನಿಷ್ಠರಾಗಲು ಸಾಧ್ಯವಿಲ್ಲ

ಸ್ವರ್ಣವಲ್ಲಿ,ಯಡತೊರೆ, ಹರಿಹರಪುರ,ದೀವಿಗೆ ಮುಂತಾದ ಬ್ರಾಹ್ಮಣಪೀಠಗಳನ್ನು ಇವರು ಆಗಾಗ ಅವಹೇಳನ ಮಾಡುತ್ತಲೆ ಇರುತ್ತಾರೆ.ಅವರಿಗೆ ತಮ್ಮನ್ನು ಕಂಡರೆ ಹೊಟ್ಟೆಕಿಚ್ಚು ಎಂದು ಹೇಳುತ್ತಾರೆ.ತಮ್ಮ ಏಳಿಗೆಯನ್ನು ಕೀರ್ತಿಯನ್ನು ಸಹಿಸದವರು ಎನ್ನುತ್ತಿರುತ್ತಾರೆ.ತಮಗೆ ಸಿಕ್ಕಿದ ಗೋಕರ್ಣದಿಂದಾಗಿ ಅವರೆಲ್ಲಾ ಹೊಟ್ಟೆ ಉರಿದು ಕೊಳ್ಳುತ್ತಾರೆ ಎಂಬುದು ಅವರ ವಾದ.ಹಾಗಾಗಿ ಈ ಮಠಗಳಿಗೆ ನಿಷ್ಠರಾದವರು ಧೋಖೇಭಾಜ್ ನಿಗೆ ನಿಷ್ಟರಾಗಲು ಬರುವುದಿಲ್ಲ.

ದೋಖೇಭಾಜ್ ನ 1200 ಸಂತ ಮಿತ್ರರಲ್ಲಿ ಬಹಳ ಜನ ಉತ್ತರ ದೇಶದ ಬೀದಿಗಳಲ್ಲಿ ಭಂಗಿ ಸೇದುತ್ತಾ ಕುಳಿತುಕೊಳ್ಳವವರು.ಹತ್ತಿರದ ಗೊತ್ತಿರುವ ಯಾವ ನೈಜ ಪೀಠಾಧಿಪತಿಯು ಇವರಿಗೆ ಉಪ್ಪು ಹಾಕುವುದಿಲ್ಲ.ಬ್ರಾಹ್ಮಣ ಪೀಠಾಧಿಪತಿಗಳಿಗಂತೂ ಇವರನ್ನು ಕಂಡರೆ ಹೇಸಿಕೆಯೇ ಆಗುತ್ತದೆ ಎಂುದನ್ನು ಅವರ ನಡೆನುಡಿ ಮಾತುಕತೆಗಳಿಂದ ಕಂಡುಕೊಳ್ಳಬಹುದು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಅದರ ಪರಿವಾರಕ್ಕೆ ನಿಷ್ಟರಾದವರು ದೋಖೇಭಾಜ್ ನಿಗೆ ನಿಷ್ಠರಾಗಲು ಬರುವದಿಲ್ಲ.ಸಂಘದ ತತ್ತ್ವಗಳನ್ನು ಗ್ರಹಿಸಲು ವಿಫಲವಾದ ಕೆಲವರು ಇವರೊಂದಿಗಿದ್ದಾರೆಂಬುದು ನಿಜ.ಸಂಘದಲ್ಲಿ ಯಾರನ್ನೂ ಹೊರಹಾಕುವ ಪದ್ಧತಿ ಇಲ್ಲ.ತತ್ತ್ವವನ್ನು ಅರ್ಥಮಾಡಿಕೊಂಡವನು ತತ್ತ್ವನಿಷ್ಟನಾಗಿ ನಡೆದರೆ ಅವನು ನಿಜವಾದ ಸ್ವಯಂಸೇವಕ.ಇನ್ನು ತತ್ತ್ವವನ್ನು ಆರ್ಥ ಮಾಡಿಕೊಳ್ಳಲಾಗದವನು ಒಂದಲ್ಲ ಒಂದು ದಿನ ಅರ್ಥ ಮಾಡಿಕೊಂಡು ಸ್ವಯಂಸೇವಕನಾಗುವವ. ದೋಡ್ಡ ದೊಡ್ಡ ಜವಾಬ್ಧಾರಿ ನಿರ್ವಹಿಸಿದವರು ಕೂಡ ಸಂಘ ತತ್ತ್ವವನ್ನು ಗ್ರಹಿಸುವಲ್ಲಿ ವಿಫಲವಾಗಿದ್ದಾರೆಂದು ದೋಖೇಭಾಜ್ ನೊಡನೆ ಸರಸವಾಡುತ್ತಿರುವ ಕೆಲವರನ್ನು ನೋಡಿದಾಗ ಅಂದಾಜು ಮಾಡಬಹುದು.

ಕಾಂಗ್ರೇಸ್ ಗೆ ನಿಷ್ಟರಾದವರು ಈ ಧೋಖೇಭಾಜ್ ನಿಗಿದ್ದ ನಿಷ್ಠೆಯನ್ನು ಹಿಂಪಡೆಯ ಬೇಕಾಗಿದೆ.” ಬಿ ” ರಿಪೋರ್ಟ್ ಬಂದ ಮೇಲೆ ಸರ್ಕಾರವನ್ನು ವಾಚಾಮಗೋಚರವಾಗಿ ಬಯ್ಯಲಾಗುತ್ತಿದೆ

ಹೀಗೆ ಪೀಠಕ್ಕೆ ನಿಷ್ಠರಾದವರು,ಮುಂಚಿನ ಪೀಠಾಧಿಪತಿಗಳಿಗೆ ನಿಷ್ಠರಾದವರು, ಶಂಕರ ಪರಂಪರೆಯ ಮಠಗಳಿಗೆ ನಿಷ್ಠರಾದವರು, ಅಕ್ಕ ಪಕ್ಕದ ಬ್ರಾಹ್ಮಣ ಮಠಗಳಿಗೆ ನಿಷ್ಠರಾದವರು, ಸಂಘ ಪರಿವಾರಕ್ಕೆ ನಿಷ್ಠರಾದವರುಕಾಂಗ್ರೇಸ್ ಗೆ ನಿಷ್ಠರಾದವರು ದೋಖೇಭಾಜ್ ನಿಗೆ ನಿಷ್ಠರಾಗಲು ಬರುವುದಿಲ್ಲ.ಎಲ್ಲದಕ್ಕೂ ನಿಷ್ಠೆ ಪ್ರದರ್ಶಿಸುತ್ತೇನೆ ಎನ್ನುವವರಿದ್ದಾರೆ ಅವರನ್ನು ಶತದಡ್ಡರು ಎಂದು ಹೇಳದೇ ಗತ್ಯಂತರವಿಲ್ಲ.

ಯಾರು ನಮ್ಮ ಧರ್ಮಪೀಠಕ್ಕೆ ನಿಜವಾಗಿ ನಿಷ್ಠರೋ ಅವರು ದೋಖೇಭಾಜ್ ನಿಗೆ ನಿಷ್ಠರಾಗಲು ಸಾಧ್ಯವೇ ಇಲ್ಲ ಎಂಬುದು ಅಂತಿಮವಾದ ಸಿದ್ಧಾಂತ

Ganapathi Bhatta
26/02/2017
source: https://www.facebook.com/groups/1499395003680065/permalink/1914946622124899/

ಸಿ ಐ ಡಿ ಯವರು ಏನು ಹೇಳುತ್ತಾರೆಂದರೆ ಯಾವ ಕಾಯಿನ್ ಬೂತ್ ನಿಂದ ದಿವಾಕರ ಶಾಸ್ತ್ರಿಯವರು ಮೂರು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಚಂದ್ರಶೇಖರ್ ಹೇಳುತ್ತಾರೋ ಅಲ್ಲಿ ಇದ್ದವರು ದಿವಾಕರ ಶಾಸ್ತ್ರಿಗಳಲ್ಲ.ದಿವಾಕರ ಶಾಸ್ತ್ರಿಗಳ ಮೋಬೈಲ್ ಟವರ್ ಲೋಕೇಷನ್ ಅವರು ಆಗ ಅಲ್ಲಿ ಇದ್ದಿದ್ದನ್ನು ತೋರಿಸುತ್ತಿಲ್ಲ.ಬದಲಾಗಿ ಆ ಕಾಯಿನ್ ಬೂತ್ ಹತ್ತಿರ ಆ ಹೊತ್ತಿಗೆ ಇದ್ದವರು ಚಂದ್ರಶೇಖರ್, ಶಂಕರಮೂರ್ತಿ ಬಾಳಿಗಾ,ಡಾ|| ಗಜಾನನ ಹೆಗಡೆ, ದೀಪಿಕಾಕುಮಾರಿ.ಇವರಲ್ಲಿ ಕೆಲವರ ಮೋಬೈಲ್ ಟವರ್ ಲೋಕೇಷನ್ ಅದನ್ನು ತೋರಿಸುತ್ತಿದೆ.ವೈಜ್ಞಾನಿಕ ತಳಹದಿಯ ಮೇಲೆ ಸಿ ಐ ಡಿ ಯವರು ಕಂಡು ಹಿಡಿದಿದ್ದು ಇದು.ಚಂದ್ರಶೇಖರ್ ಮೊದಲಾದ ಮೂರ್ನಾಲ್ಕು ಜನ ಆ ಕಾಯಿನ್ ಬಾಕ್ಸ್ ನಿಂದ ಮೂರು ಕೋಟಿ ರೂಪಾಯಿಗೆ ದಿವಾಕರ ಶಾಸ್ತ್ರಿಯ ಹೆಸರಿನಲ್ಲಿ ಬೇಡಿಕೆ ಇಟ್ಟಿದ್ದನ್ನು ಸಿ ಐ ಡಿ ಇಲಾಖೆ ವೈಜ್ಞಾನಿಕ ದಾಖಾಲೆಗಳ ಮೂಲಕ ಪತ್ತೆ ಹಚ್ಚಿದೆ.ಈ ನಾಲ್ವರ ಕೆಲವು ಮೊಬೈಲ್ ಟವರ್ ಲೋಕೆಷನ್ ಅವರು ಆ ಹೊತ್ತಿಗೆ ಅಲ್ಲಿದ್ದರು ಎಂದು ದೃಡಪಡಿಸಿದೆ

ಮತ್ತು ಆ ಹೊತ್ತಿಗೆ ದಿವಾಕರ ಶಾಸ್ತ್ರಿಯವರು ಬೆಂಗಳೂರಿನಲ್ಲಿ ಇದ್ದರು ಎಂಬುದನ್ನು ಕೂಡ ಮೋಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ಸಿ ಐ ಡಿ ಯವರು ದೃಡಪಡಿಸಿದ್ದಾರೆ.ಹಾಗಾಗಿ ದಿವಾಕರ ಶಾಸ್ತ್ರಿಯವರು ಮೂರು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ದೂರುದಾರರು ಹೇಳಿದ ಕಾಯಿನ್ ಬೂತ್ ನಿಂದ ಪೋನ್ ಮಾಡಲು ಶಕ್ಯವೇ ಇಲ್ಲ ಎಂದು ಸಿ ಐ ಡಿ ಸಾಭಿತು ಪಡಿಸಿದೆ. ಇದು ವೈಜ್ಞಾನಿಕ ತಳಹದಿಯ ಮೇಲೆ ಮಾಡಿದ ಸಂಶೋಧನೆಯ ಫಲವಾಗಿ ಸಿಕ್ಕಿದ ಪಲಿತಾಂಶದ ಆಧಾರದ ಮೇಲೆ ನಿಷ್ಕರ್ಷಿಸಲ್ಪಟ್ಟು ತಿರ್ಮಾನಗೊಂಡಂತಹ ವಿಷಯವಾಗಿದೆ.ಇದು ಅತ್ಯಂತ ಪ್ರಬಲವಾದ ಪುರಾವೆ ಗಳಿಂದ ಕೂಡಿದ ಸಾಕ್ಷ್ಯವಾಗಿದ್ದು ಬಾಯಿ ಮಾತಿನಲ್ಲಿ ಹೇಳಿದ ಸಾಕ್ಷ್ಯಗಳಂತಲ್ಲ.

ಇಂತಹ ಲುಚ್ಚ ಕೆಲಸವನ್ನು ಚಂದ್ರಶೇಖರ್, ಶಂಕರಮೂರ್ತಿ ಬಾಳಿಗಾ, ಡಾ|| ಗಜಾನನ ಹೆಗಡೆ ,ದೀಪಿಕಾ ಕುಮಾರಿ ಯವರು ಯಾಕೆ ಮಾಡಿದರು.ಯಾವ ಆಶೆ ಆಮಿಷಗಳಿಗೆ ಬಲಿಯಾಗಿ ಮಾಡಿದರು.ಹಣಕ್ಕಾಗಿ ಮಾಡಿದರೇ? ಕೀರ್ತಿಗಾಗಿ ಮಾಡಿದರೇ? ತಮಗಾಗಿ ಒಂದು ಆಧಿಕಾರ ಪಟ್ಟ ಕಟ್ಟಿದ್ದಾರೆ ಎಂದು ಮಾಡಿದರೆ?

ಈ ಕೆಟ್ಟ ಕೆಲಸ ಮಾಡಿದ್ದತ ಪರಿಣಾಮ ಅನುಭವಿಸಬೇಕಲ್ಲಾ.ಅದನ್ನು ಅವರೇ ಅನುಭವಿಸಬೇಕು.ಹಚ್ಚಿಕೊಟ್ಟವರ್ಯರು ಇವರ ಜೋತೆಯಲ್ಲಿ ಪಾಪದ ಫಲ ಅನಭವಿಸಲು ಬರುವುದಿಲ್ಲ.ಕರ್ಮ – ಕರ್ಮಫಲ ಸಿದ್ಧಾಂತವನ್ನು ಹಿಂದೂಧರ್ಮದ ಎಲ್ಲಾ ಆರು ದರ್ಶನಗಳು ನೂರಕ್ಕೆ ನೂರು ಒಪ್ಪಿಕೊಂಡಿವೆ.ಈ ನಾಲ್ಕು ಜನ ಮಾಡಿದ ಈ ಕಾರ್ಯಕ್ಕೆ ಏಳೇಳು ಜನ್ಮಗಳ ಪರ್ಯಂತ ಕೆಟ್ಟ ಕರ್ಮಫಲ ಉಣ್ಣುವಂತಹದನ್ನು ಯಾವ ಆಶೆಯಿಂದ ಪ್ರೇರಿತವಾಗಿ ಮಾಡಿಕೊಂಡರೆಂದು ನನಗೆ ಊಹಿಸಲು ಸಾಧ್ಯವಾಗಿಲ್ಲ.ಪೂರ್ವ ಸುಕೃತ ಪುಣ್ಯದ ಫಲವಾಗಿ ನಮಗೆ ಈ ದೇಹ, ಬುದ್ಧಿ ಮನಸ್ಸು ಸಹಿತ ಪರಿಸರ ವಾತಾವರಣ ಸಿಕ್ಕಿರುತ್ತದೆ.ಸಿಕ್ಕಿದ ಇದನ್ನು ಸದ್ವಿನಿಯೋಗ ಮಾಡಿಕೊಂಡು ಪುಣ್ಯ ಸಂಪಾದನೆಯಿಂದ ಮತ್ತಷ್ಟು ಉನ್ನತವಾದ ದೇಹ,ಬುದ್ಧಿ ಮನಸ್ಸು,ಸಂಪತ್ತು ಪರಿಸರಗಳನ್ನು ಹೊಂದ ಬೇಕಾದ್ದು ಮಾನವ ಜನ್ಮದಂತಹ ಉನ್ನತ ಜನ್ಮ ಪಡೆದವನ ಬುದ್ಧಿವಂತಿಕೆ ಅಥವಾ ವಿವೇಕ..ಪೂರ್ವಕೃತ ಕರ್ಮಫಲದಿಂದ ಸಿಕ್ಕ ಬುದ್ಧಿ ಮನಸ್ಸುಗಳನ್ನು ಯಾರದೋ ತಪ್ಪು ನಿರ್ದೆಶನದಿಂದ ಹೀಗೆ ಮಾಡಬಾರದ ಕೃತ್ಯದಲ್ಲಿ ಬಳಸಿದರೆ ಮುಂದೆ ಅದರ ಫಲವನ್ನು ತಾವೇ ಅನುಭವಿಸಿಕೊಳ್ಳ ಬೇಕಾಗುತ್ತದೆ.ಅನುಭವಿಸಲು ಹಚ್ಚಿಕೊಟ್ಟವರು ಬರುವುದಿಲ್ಲ.ತಿಂದಾಂಗಿಲ್ಲ ಉಂಡಾಗಿಲ್ಲ ಇಂತಹ ಒಂದು ಘನಘೋರ ಪಾಪಕೃತ್ಯ,ಕೊಲೆಗಡಕರು ಮಾಡುವ ಕಾರ್ಯಕ್ಕೆ ಸಮಾನಾದ ಕಾರ್ಯ ಈ ನಾಲ್ವರಿಂದ ಹೇಗೆ ಯಾಕೆ ಘಟಿಸಿತು ಎಂಬ ಯಕ್ಷ ಪ್ರಶ್ನೆ ರಾತ್ರಿ ಇಡೀ ನನ್ನನು ಕೊರೆಯಿತು.ಅಜ್ಞಾನವೇ ಕಾರಣವಾಗಿ ಮನುಷ್ಯ ಮಾಡಬಾರದ್ದನ್ನು ನಗುನಗುತ್ತಾ ಮಾಡಿ ನಂತರ ಒಂದಲ್ಲಾ ಒಂದು ದಿನ ಅಳು ಅಳುತ್ತಾ ಅನುಭವಿಸುತ್ತಾನೆ ಎಂಬ ಸಿದ್ಧಾಂತಕ್ಕೆ ಬಂದು ಉದ್ವಿಗ್ನ ಮನಸ್ಸು ಸಮಾಧಾನ ಪಡೆದುಕೊಂಡಿತು.ಹವ್ಯಕ ಬ್ರಾಹ್ಮಣರಂತಹ ಉನ್ನತ ಕುಲಗಳಲ್ಲಿ ಹುಟ್ಟಿದ ಇವರು ಯಾರೋ ಮಾಡಿದ ಅತ್ಯಾಚಾರವನ್ನು ಮುಚ್ಚಿಹಾಕಲು ವೈಯಕ್ತಿಕವಾಗಿ ಇಷ್ಟೊಂದು ದೊಡ್ಡ ಮಟ್ಟದ ಪಾಪಕಾರ್ಯ ಮಾಡುವ ಮೂಲಕ ಬಹು ದೊಡ್ಡ ಬೆಲೆ ತೆರಬೇಕಾಗಿ ಬಂದಿದ್ದು ಅವರ ದುರಂತ ಎನ್ನದೆ ಗತ್ಯಂತರವಿಲ್ಲ

ಇರಲಿ, ಇನ್ನು ಇಷ್ಟು ಪರ್ಪೆಕ್ಟ್ ಆಗಿ ಸಿಕ್ಕಿದ ವೈಜ್ಞಾನಿಕ ದಾಖಾಲೆಯ ಆಧಾರ ಇರುವುದರಿಂದ ದೂರುದಾರರು ಇನ್ನೇಂದಿಗೂ ಕಾನೂನು ಹೋರಾಟ ಕೈ ಗೊಳ್ಳುವ ಗೂಜಿಗೆ ಹೊಗುವುದಿಲ್ಲ.ಹೊದರೆ ಅದು ತಮಗೆ ಸುತ್ತಿ ಕೊಳ್ಳುತ್ತದೆ ಎಂಬುದನ್ನು ತಿಳಿಯಲು ಲಾಯರ್ ಗಳನ್ನು ಕನ್ಸಲ್ಟ್ ಮಾಡಬೇಕಾಗಿಲ್ಲ.ಸರ್ವಸಾಮಾನ್ಯನಿಗೂ ಅರ್ಥವಾಗುವಂತಿದೆ.

ಈ ಸಿ ಐ ಡಿ ದಾಖಾಲೆಯ ಜಾಡು ಹಿಡಿದು ನಮ್ಮವರ್ಯರಾದರೂ ಸ್ವಲ್ಪ ಉಮೇದು ಮಾಡಿ ಚಂದ್ರಶೇಖರ,ಬಾಳಿಗಾ,ಡಾ ಹೆಗಡೆ ಮತ್ತು ಕುಮಾರಿಯನ್ನು ಪ್ರತಿವಾದಿಯನ್ನಾಗಿಸಿ ಕೊಂಡು ಕೋರ್ಟ್ ಗೆ ಹೋದರೆ ಇವರು ನಿಸ್ಸಂಶಯವಾಗಿ ಕಂಬಿ ಎಣಿಸ ಬೇಕಾಗುತ್ತದೆ.ಇವರು ಕಂಬಿ ಎಣಿಸುವುದನ್ನು ತಡೆಯುವ ಶಕ್ತಿ ಯಾವ ಹಳದಿ ತಾಲಿಭಾನುಗಳಿಗಾಗಲಿ,ಅವರ ಗುರುಗಳಿಗಾಗಲಿ ಇರುವುದಿಲ್ಲ.ಯಾರನ್ನೋ ರಕ್ಷಿಸ ಹೋಗಿ ಈ ನಾಲ್ವರು ಬೇಡಿ ತೋಟ್ಟುಕೊಂಡು ಕೃಷ್ಣ ಜನ್ಮಸ್ಥಾನವನ್ನು ಸೇರಬೇಕಾಗಿ ಬರುವುದು ಪೀಠದ ಮಹಿಮೆಯೇ ಸರಿ.ಒಂದೊಮ್ಮೆ ದಿವಾಕರ ಶಾಸ್ತ್ರಿಯವರೇ ಪುನಃ ಈ ವಿಚಾರ ಎತ್ತಿಕೊಂಡು ಕೋರ್ಟಿಗೆ ಹೋದರು ಇವರು ಸಿಕ್ಕಿಕೊಳ್ಳುತ್ತಾರೆ.

ಸತ್ಯವನ್ನೇ ಸ್ವಾಗತಿಸುವ ಪೀಠಾಧಿಪತಿಗಳು ಮೋಬೈಲ್ ಟವರ್ ಲೋಕೇಷನ್ ಪ್ರಕರಣವನ್ನು ಸ್ವಾಗತಿಸಿ ವಿಫಲತೆಯ ತಪ್ಪನ್ನೆಲ್ಲಾ ಆ ನಾಲ್ವರ ಮೇಲೆ ಹಾಕಿ ಪೀಠ ಖಾಲಿ ಮಾಡುತ್ತಾರೆಂದು ನಿರೀಕ್ಷಿಸಿತ್ತೇವೆ.ಅವರು ಸತ್ಯವನ್ನು ಕಾನೂನನ್ನು ಗೌರವಿಸುತ್ತೇವೆಂದು ಕುಂತಲ್ಲಿ ನಿಂತಲ್ಲಿ ಹೇಳಿದ್ದಾರೆ.

ಸತ್ಯವನ್ನು ಸ್ವಿಕರಿಸುವುದು ಇಷ್ಟ ವಾಗದಿದ್ದರೆ ,ಕಾನೂನು ಹೋರಾಟ ಮಾಡಲು ಸಾಧ್ಯವಾಗದಿದ್ದರೆ,.ಇನ್ನು ಉಳಿದಿರುವುದು ಜನಾಂದೋಲನವೊಂದೇ.ಹಾಗೆ ಮಾಡಿ ಪೋಲಿಸರಿಂದ ಲಾಠಿ ಏಟು ತಿಂದರೆ ಮಾತ್ರ ದಪ್ಪ ಎಮ್ಮೆ ಚರ್ಮದ ಇವರಿಗೆ ವಾಸ್ತವ ಪರೀಸ್ಥಿತಿಯ ನಿಜವಾದ ಚಿತ್ರಣ ಕಲ್ಪನೆಗೆ ಸಿಕ್ಕಿ ಪೀಠ ಬಿಟ್ಟರೂ ಬಿಡಬಹುದು.

Ganapathi Bhatta Jigalemane
27/02/2017
source: https://www.facebook.com/groups/1499395003680065/permalink/1915452282074333/

ಇದು ಕೋರ್ಟ್ ನಲ್ಲಿ ಉಲ್ಲೇಖವಾದದ್ದು.ನೀವು ಆಕ್ರಮ ಸಂಬಂಧ ಹೊಂದಿದ್ದೀರಿ ಎಂದು ಕೊರ್ಟ್ ಉಲ್ಲೇಖಿಸಿದೆ.ಇಷ್ಟು confirm ಆದ ವಿಷಯವನ್ನು confuse ಮಾಡಲು ಇನ್ನಿಲ್ಲದಷ್ಷು ಪ್ರಯತ್ನ ಮಾಡಿದಿರಿ.ಆನೇಕ ಟಿ ವಿ ಛಾನಲ್ ಗಳು ಇದನ್ನು ಅನೇಕ ಸಾರಿ ಪ್ರಸಾರ ಮಾಡಿದವು.ಅನೇಕ ಪತ್ರಿಕೆಗಳು ಇದನ್ನು ಪ್ರಕಟಿಸಿದವು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘ ಚಾಲಕರು, ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶರು,ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಅಧ್ಯಕ್ಷರು,ಇದನ್ನು ಎತ್ತಿ ಹಿಡಿದರು.ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶರಂತೂ ನ್ಯಾಯ ಪೀಠದ ಮೇಲೆ ಕುಳಿತು ಧೋಖೇಭಾಜ್ ಎಂದು ಉದ್ಗರಿಸಿದರು.ಇಷ್ಟಾಗಿಯು ಒಂದು ಧಾರ್ಮಿಕ ಕೇಂದ್ರದ ಮುಖ್ಯಸ್ಥರಾಗಿ, ಕಾವಿಯಂತಹ ವಸ್ರ್ತ ತೊಟ್ಟವರಾಗಿ ಇದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ.

ಒಂದಿಷ್ಟು ಜನ ಹಳದಿ ತಾಲಿಭಾನ್ ಗಳ ಪಡೆ ಕಟ್ಟಿಕೊಂಡು 1200 ವರ್ಷಗಳ ಇತಿಹಾಸ ಇರುವ ಶಂಕರಾಚಾರ್ಯರ ನೇರ ಶಿಷ್ಯರಿಂದ ಸ್ಥಾಪಿತವಾದ ನಮ್ಮ ಧರ್ಮಪೀಠವನ್ನು ಅಪಹರಿಸಿದ್ದಿರಿ.ಪುಂಡರ ಸಂಘಟನೆಯ ಶಕ್ತಿಯ ಬಲದ ಮೇಲೆ ಹೈಜಾಕ್ ಮಾಡಿದ್ದೀರಿ.ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಸ್ತಿಯನ್ನು ಹೊಂದಿರುವ ನಮ್ಮ ಮಠಗಳ ಸಮ್ಮೂಹವನ್ನು ಅದರ ಆಸ್ತಿಯ ಆಶೆಗಾಗಿ ಒಳಹಾಕಿಕೊಂಡಿದ್ದೀರಿ.ಮಠವನ್ನು ನಿಮ್ಮ ಭೋಗ ತಣಿಸುವ ಕೇಂದ್ರವಾಗಿ ಪರವರ್ತಿಸಿಕೊಂಡಿದ್ದಿರಿ.ಆಧ್ಯಾತ್ಮಿಕ ಕೇಂದ್ರವೊಂದು ಇಷ್ಟೊಂದು ಮಾನಗೆಟ್ಟವರ ಕೈ ಗೆ ಎಂದೆಂದೂ ಸಿಕ್ಕಿರಲಿಲ್ಲ.ಕಲಿಯು ತನ್ನ ಮಹಿಮೆಯನ್ನು ತೋರಿಸುವ ಸಲುವಾಗಿ ಈ ಕಪಟ ಸನ್ಯಾಸಿಯ ಕೈಗೆ ಈ ಮಠ ಸಿಗುವಂತೆ ಮಾಡಿದ ಎಂದು ಜನರಾಡಿಕೊಳ್ಳುವುದನ್ನು ಸತ್ಯ ಮಾಡಿದಿರಿ.ಸನ್ಯಾಸಿಗಳ ಸಾದು ಸಂತರ ಆತ್ಮಜ್ಞಾನಿಗಳ ಆವಾಸ ಸ್ಥಾನ ವಾಗ ಬೇಕಾಗಿದ್ದ ಮಠವು ಪುಂಡರ ಪೋಕರಿಗಳ ಕಾಮುಕರ ಆವಾಸ ಸ್ಥಾನವಾಗಿ ಪರಿವರ್ತಿಸಿದಿರಿ.

ಸತ್ಯ ಧರ್ಮ ತನ್ನ ಮೇಲು ಗೈಯನ್ನು ನಿಧಾನವಾಗಿಯಾದರೂ ಪಡೆದುಕೊಳ್ಳಲಿ ಎಂದು ಭಗವಂತರಾದ ಶ್ರೀಧರ ಸ್ವಾಮಿಗಳಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ಓಂತತ್ಸತ್.

Ganapathi Bhatta Jigalemane
25/02/2017
source: https://www.facebook.com/groups/1499395003680065/permalink/1914387865514108/

ಅತ್ಯಂತ ವಿಶ್ವಾಸದಿಂದ ಬಂಧು ಮಿತ್ರರಿಗೆ ಕರೆ ಕೊಡುತ್ತಿದ್ದೇನೆ.ಪೀಠಾಧಿಪತಿ ತನ್ನ ತೆವಲುಗಳನ್ನು ತೀರಿಸಿ ಕೊಳ್ಳಲು ನಿಮಗೆ ಮೋಸ ಮಾಡುತ್ತಿದ್ದಾನೆ.ಸುಳ್ಳಿನ ಹೊಳೆಯನ್ನೇ ಹರಿಸುತ್ತಿದ್ದಾನೆ.ಸುಳ್ಳು ತಾಮ್ರ ಶಾಸನ ಅಂದ, ಸುಳ್ಳು ಐ ಎಸ್ ಒ ಅಂದ, ದನಕರುಗಳನ್ನು ವೃದ್ಧಿಸಲು ಕೊಟ್ಟ ದುಡ್ಡನ್ನು ತಿಂದ.ಮಠದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡು ಮಾರಾಟ ಮಾಡಿದ, ಮಠದ ಹಳೇ ಬಂಗಾರವೆಲ್ಲ ನೀರಿನಂತೆ ಕರಗುತ್ತಿದೆ.ಸ್ನಾನ ಸಂಧ್ಯಾದಿ ಗಳಿಗಿಂತ ಸಭೆ ಸಮಾರಂಭ ಮೀಟಿಂಗ್ ನಲ್ಲಿ ಕಾಲ ಕಳೆಯುತ್ತಿದ್ದಾನೆ.ಅನೇಕ ಹೆಂಗಳೆಯರ ಕೆನ್ನೆ ಮೊದಲಾದ ಭಾಗಗಳನ್ನು ತನ್ನ ಅಮೃತ ಹಸ್ತದಿಂದ ಸವರಿ ಮಡಿ ಮೈಲಿಗೆಗೆಲ್ಲಾ ತಿಲ ತರ್ಪಣ ಕೊಟ್ಟಿದ್ದಾನೆ.ತನ್ನ ವ್ಯಾಪ್ತಿಯ ಶಿಷ್ಯ ಸಮ್ಮಹಕ್ಕೆ ಸೇರಿದ ಬ್ರಾಹ್ಮಣರಿಗೆ ಚಪ್ಪಲಿ ಪೋರಕೆಗಳಿಂದ ಹೊಡೆಸುವ ಮೂಲಕ ಅವರ ಆತ್ಮಗ್ಲಾನಿ ಮಾಡಿದ್ದಾನೆ ಎಲ್ಲಿ ನೋಡಿದರೂ ಒಡಕನ್ನುಂಟು ಮಾಡುವ ಮೂಲಕ ವಿಚ್ಛಿದ್ದಕಾರಿ ಶಕ್ತಿಯಾಗಿದ್ದಾನೆ.ಈ ಎಲ್ಲದಕ್ಕು ತಿಲಕ ಇಟ್ಟಂತೆ ಒಪ್ಪಿಸಿ ಸಂಬಂಧಮಾಡಿಕೊಂಡಿದ್ದಾನೆಂದು ಕೊರ್ಟ್ ನಿಂದ ಹೇಳಿಸಿಕೊಂಡಿದ್ದಾನೆ.ಧೋಖೇಬಾಜ್ ಎಂಬ ಪ್ರಶಸ್ತಿ ಪತ್ರ ಮುಖ್ಯ ನ್ಯಾಯಾಧೀಶರಿಂದ ಪಡೆದುಕೊಂಡಿದ್ದಾನೆ.ಇಷ್ಟೇಲ್ಲಾ ಆದಮೇಲೂ ಇನ್ನೂ ಇನ್ನೂ ಮೋಸ ಹೋಗಬೇಡಿ.ನಿಮ್ಮ ಪೂಜೆ ಪುನಸ್ಕಾರಗಳಿಗೆ ಯೋಗ್ಯರಾದ ಯತಿಗಳು ದೇವಾಲಯಗಳು ಬೇಕಾದಷ್ಟಿದೆ.ಯಾಕೆ ಈ ಶೀಲಗೆಟ್ಟವನನ್ನು ಪ್ರೋತ್ಸಾಹಿಸಿ ಪಾಪ ಸಂಪಾದಿಸಿಕೊಳ್ಳುತ್ತಿರಿ.ಹೆಂಗಳೆಯರ ಚಿತ್ತಪಹಾರಕನಾದ ಈತ ನಿಮ್ಮ ವಿತ್ತಾಪಹಾರಕನಾಗಿ ಮಜ ಉಡಾಯಿಸುವುದು ಹೇಗೆಂಬ ಒಂದೇ ಚಿಂತೆಯಿಂದ ಬಳಲುತ್ತಿದ್ದಾನೆ.ಸತ್ಯವಾಗಿ ಹೇಳುತ್ತೇನೆ ಯಾವ ಸ್ವಾರ್ಥವು ಇಲ್ಲದೆ, ಯಾವುದೇ ಪ್ರಯೋಜನ ಬಯಸದೆ, ಯಾರನ್ನೂ ದ್ವೇಷಿಸದೆ,ಜಗತ್ತು ಧರ್ಮದಂತೆ ನಡೆದು ಸುಖ ಜೀವನ ನಡೆಸಲಿ ಎಂಬ ಒಂದೇ ಒಂದು ಆಶೆ ಇಟ್ಟುಕೊಂಡು ಹೇಳುತ್ತಿದ್ದೇನೆ.ಎಚ್ಚರಗೊಳ್ಳಿ ಜಾಗೃತರಾಗಿ.
ಓಂ ತತ್ಸತ್.

Ganapathi Bhatta Jigalemane
24/02/2017
source: https://www.facebook.com/groups/1499395003680065/permalink/1914080422211519/

ಈ ಬ್ಲಾಕ್ ಮೇಲ್ ಪ್ರಕರಣವೆಂಬುದು, ಅತ್ಯಾಚಾರ ಪ್ರಕರಣ ದಾಖಲಾಗುತ್ತದೆಂಬ ಪೂರ್ವ ಸೂಚನೆ ಸಿಕ್ಕಿದ ನಂತರ ದಾಖಲಾದ ಪ್ರಕರಣ, ಕ್ಷಿಪ್ರ-ತನಿಖೆ, ಆರೋಪಿಗಳ ಕ್ಷಿಪ್ರ-ಬಂಧನ, ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ತಡೆಯಾಜ್ಞೆ ಈ ಪ್ರಕರಣದ ವಿಶೇಷ. ಈ ಘಟನೆಯ ನಂತರ ದಾಖಲಾದ ರೇಪ್ ಪ್ರಕರಣದಲ್ಲಿ ಆರೋಪಿ ಕಡೆಯಿಂದಲೇ ಈ ಬ್ಲಾಕ್ ಮೇಲ್ ಪ್ರಕರಣ ಕುರಿತು ವಿವರಗಳನ್ನು ನೀಡಿರುತ್ತಾರೆ. ಹಾಗಾಗಿ ಇವೆರಡೂ ಪ್ರಕರಣಗಳಿಗೂ ಪರಸ್ಪರ ಸಂಬಂಧಗಳಿವೆ. ಸರಣಿ ಅತ್ಯಾಚಾರ ಆರೋಪಿ ಸಮಾಜದಲ್ಲಿ ಅತ್ಯಂತ ಪ್ರಭಾವಿ. ಸಮುದಾಯವೊಂದರ ಮಠದ ಪೀಠಾಧಿಪತಿ. ಈಗಾಗಲೇ ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ 5 ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈಗ ಪ್ರಸ್ತುತ ಪೀಠ-ತ್ಯಾಗದ ಕುರಿತು ವಿಚಾರಣೆ ನಡೆಯುತ್ತಿರುವ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠಾಧೀಶರಾದ ಮುಖ್ಯ ನ್ಯಾಯ ಮೂರ್ತಿಗಳ ಬಗ್ಗೆಯೇ ಆರೋಪಿಕಡೆಯಿಂದ ಆಪಾದನೆ ಮಾಡಿಸಿ ಹಿಂದೆ ಸರಿಯುವಂತೆ ಅರ್ಜಿ ಸಲ್ಲಿಸಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಗೋಕರ್ಣ ದೇವಸ್ಥಾನವನ್ನು ಈ ಆರೋಪಿ ಪೀಠಸ್ಥನಾಗಿರುವ ಮಠಕ್ಕೆ, ನ್ಯಾಯಾಲಯದ ಯಥಾಸ್ಥಿತಿ ಕಾಪಾಡಬೇಕೆಂಬ ಆದೇಶವಿದ್ದರೂ ಮುಜರಾಯಿಗೆ ಸೇರಿದ ದೇವಸ್ಥಾನವನ್ನು ಡಿ-ನೋಟಿಫಿಕೇಶನ್ ಮಾಡಿ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಮೇಲ್ಕಂಡ ಘಟನಾವಳಿಗಳು, ಅತ್ಯಾಚಾರ ಆರೋಪಿ ಸಮಾಜದಲ್ಲಿ ತನ್ನ ಪ್ರಭಾವವನ್ನು ಹೇಗೆ ಹೊಂದಿದ್ದಾನೆ ಎಂಬುದನ್ನು ನಿರೂಪಿಸುತ್ತದೆ. ಪ್ರಸ್ತುತ ಪತ್ರಿಕಾ ವರದಿಯು, ತಮಗೆ ಅನುಕೂಲಕರವಾದ ರೀತಿಯಲ್ಲಿ ತನಿಖೆ ನಡೆಯದಿದ್ದರೆ, ತನಿಖಾಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಜನಾಂದೋಲನ ನಡೆಸುವ ಸ್ಪಷ್ಟ-ಎಚ್ಚರಿಕೆಯನ್ನು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಈ ಅತ್ಯಾಚಾರ ಆರೋಪಿ ಉರುಫ್ ಪೀಠಾಧಿಪತಿಯು ಸಾಕ್ಷಿಗಳ ಮೇಲೆ ಮತ್ತು ತನಿಖಾಧಿಕಾರಿಗಳ ಮೇಲೆ ತನ್ನ ಪ್ರಾಭಾವವನ್ನು ಬೀರುತ್ತಾನೆಂದು ನಂಬಲು ಸಾಕಷ್ಟು ಕಾರಣಗಳು, ಆಧಾರಗಳು ಲಭಿಸಿದಂತಾಗಿದೆ. ಈ ಹಿಂದೆ ಸದರಿ ಅತ್ಯಾಚಾರ ಆರೋಪಿ ಬಹಿರಂಗವಾಗಿ ತನ್ನ ಭಕ್ತರನ್ನುದ್ದೇಶಿಸಿ ಪ್ರಚೋದನಕಾರಿ ಬಾಷಣಮಾಡಿದ ಧ್ವನಿಯ ಪ್ರತಿಯು ಸಾಮಾಜಿಕ ತಾಣಗಳಲ್ಲೂ ಲಭ್ಯವಿದೆ. ತನಿಖಾಧಿಕಾರಿಗಳ ವ್ಐದ್ಯಕೀಯ ತಪಾಸಣೆಗೆ ಹಾಜರಾಗದ ಆರೋಪಿ, ಬಹಿರಂಗ ಭಾಷಣ ಮಾಡುತ್ತಾ ತನ್ನ ಸಾಮರ್ಥವನ್ನು ಜನಾಂದೋಲನದ ಮೂಲಕ ಸಾಬೀತುಪಡಿಸುತ್ತಾ ಸರ್ಕಾರಕ್ಕೆ ನ್ಯಾಯಾಲಯಕ್ಕೆ ಸವಾಲೆಸೆಯುತ್ತಿದ್ದಾನೆ. ಅದೂ 2 ಸರಣಿ ಅತ್ಯಾಚಾರ ಆರೋಪ ಎದುರಿಸುತ್ತಾ, ನಿರೀಕ್ಷಣಾ ಜಾಮೀನಿನ ಷರತ್ತುಗಳಿಗೆ ಒಳಪಟ್ಟು!!!. ಈ ಹಿನ್ನೆಲೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯಲು ಅನುವಾಗುವಂತೆ ಹಾಗೂ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಯಾಗದಂತೆ ಈ ಕೂಡಲೇ ಅತ್ಯಂತ ಪ್ರಭಾವಿಯಾದ ಈ ಅತ್ಯಾಚಾರ ಆರೋಪಿಯನ್ನು ಕಸ್ಟಡಿಗೆ ಪಡೆದು ತನಿಖೆ ಮುಂದುವರೆಸಬೇಕು. ಈ ಎಲ್ಲಾ ಪ್ರಕರಣಗಳನ್ನು ಬೇರೆಲ್ಲಾ ಸಾಮಾನ್ಯ ಪ್ರಕರಣಗಳಂತೆ ಆರೋಪಿಯನ್ನು ಭಂಧಿಸಿ ವಿಚಾರಣೆನಡೆಸುವ ದಿಟ್ಟತನ ತೋರಬೇಕು. ಒಂದೊಮ್ಮೆ ಸರ್ಕಾರಕ್ಕೆ ಅಂತಹಾ ಸಾಮರ್ಥ್ಯ, ಅಥವಾ ರಾಜಕೀಯ ಇಚ್ಚಾಶಕ್ತಿ ಇಲ್ಲದಿದ್ದರೆ, ದಯವಿಟ್ಟು ಈ ಕರ್ನಾಟಕ ರಾಜ್ಯ ಎಂಬ ಹೆಸರಿಗೆ ಮಸಿಬಳಿಯಬೇಡಿ.
By Manjunath Hegade Hosabale

23/02/2017
source: https://www.facebook.com/cblhegde1955/posts/1333210026736481

ಬ್ಲಾಕ್ ಮೈಲ್ ಮಾಡಿ ಹಣ ಕೀಳಲು ಈ ಕೇಸ್ ಹಾಕಿದ್ದಾರೆ ಎಂಬುದು ನಿಮ್ಮ ವಾದವಾಗಿತ್ತು.ಆದರೆ ಇದು ಬ್ಲಾಕ್ ಮೈಲ್ ಮಾಡಿದ್ದಲ್ಲ, ಹಣ ಕೀಳಲು ಮಾಡಿದ್ದಲ್ಲ ಎಂಬುದು ಘೋಷಣೆಯಾಗಿದೆ.ಸಿ ಐ ಡಿ ಯವರು ಕ್ಲೀನ್ ಚಿಟ್ ಕೊಟ್ಟಿದ್ದರ ಅರ್ಥ ಇದು ಬ್ಲಾಕ್ ಮೈಲ್ ಕೇಸಲ್ಲ ಎಂದಲ್ಲವೇ?.ಅಂತು ಷಡ್ಯಂತ್ರ ಸಪ್ತಯಂತ್ರಗಳೆಲ್ಲಾ ಹಾರಿ ಹೊದಂತಾಯಿತು.

ಈಗ ಅತ್ಯಾಚಾರ ಮಾಡಿದ್ದನ್ನೇ ಉದ್ದೇಶವಾಗಿಟ್ಟುಕೊಂಡು ನಿಮ್ಮ ಮೇಲೆ ಕೇಸ್ ಹಾಕಿದ್ದಾರೆ ಎಂದು ಸಿ ಐ ಡಿ ರಿಪೋರ್ಟ್ ಹೇಳಿದಂತಾಯಿತು.ಇನ್ಯಾವಾ ಆಶೆ ಆಮಿಷಗಳು ಆ ದಂಪತಿಗಳಿಗೆ ಇರಲಿಲ್ಲ ಎಂದು ಘಂಟಘೋಷವಾಗಿ ಸಾರಿದಂತಾಯಿತು.

ಮೆಲ್ನೊಟಕ್ಕೆ ಆ ದಂಪತಿಗಳು ಹೇಳುತ್ತಿರುವುದು ಸತ್ಯವಾಗಿಯು, ನೀವು ಹೇಳುತ್ತಿರುವುದು ಸುಳ್ಳಾಗಿಯು ಕಾಣಲಾರಂಬಿಸಿದೆ.

ನಾಲ್ಕು ಗೋಡೆಯ ನಡುವೆ ಏನು ನಡೆದಿದೆ ಎಂಬುದಕ್ಕೆ ಅದರಲ್ಲಿದ್ದ ನಿವಿಬ್ಬರು ಮಾತ್ರ ಸಾಕ್ಷಿಗಳಾಗಿದ್ದಿರಿ.ನಿಮ್ಮಿಬ್ಬರಲ್ಲಿ ನಿಮ್ಮ ಮಾತು ಸುಳ್ಳಾಗುತ್ತಿದೆ.ಪ್ರೇಮಲತಾ ಮಾತು ಸತ್ಯವಾಗುತ್ತಿದೆ ನಾಲ್ಕು ಗೋಡೆಯ ನಡುವೇ ನಡೆದ ವ್ಯವಾಹಾರ ಅವಳು ಪ್ರಕಟಿಸಿದಂತೆ ಸತ್ಯ ಎಂದಂತಾಯಿತು.
ಆದ್ದರಿಂದ ನೀವು ಅವಳ ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಶ್ರದ್ಧೆಗಳನ್ನು ದುರುಪಯೋಗ ಮಾಡಿಕೊಂಡು ಅವಳ ದಿಕ್ಕು ತಪ್ಪಿಸಿ ಅತ್ಯಾಚಾರ ಮಾಡಿದ್ದಿರೆಂದು ಸ್ಪಷ್ಟವಾಗಿ ಕಾಣಲಾರಂಬಿಸಿದೆ.ಇದು ಸಿ ಐ ಡಿಯವರು ಅವಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದರ ಪರಿಣಾಮವಾಗಿ ಕಂಡುಬಂದ ಸತ್ಯ.

ಏನು ಹೇಳುತ್ತಿರೀ?

Ganapathi Bhatta Jigalemane
22/02/2017
source: https://www.facebook.com/groups/1499395003680065/permalink/1912996378986590/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s