ಹೊನ್ನಾವರ ಕೋರ್ಟಿಗೆ `ಬಿ’ ರಿಪೋರ್ಟ್ ಸಲ್ಲಿಸಿದ ಸಿಐಡಿ

ಹೊನ್ನಾವರ ಕೋರ್ಟಿಗೆ `ಬಿ’ ರಿಪೋರ್ಟ್ ಸಲ್ಲಿಸಿದ ಸಿಐಡಿ

February 23, 2017

ಶಾಸ್ತ್ರಿ ದಂಪತಿಯಿಂದ ಸ್ವಾಮಿಗೆ ಬ್ಲ್ಯಾಕ್ಮೇಲ್ ಪ್ರಕರಣ

ಹೊನ್ನಾವರ : ರಾಮಚಂದ್ರಾಪುರ ಮಠದ ರಾಮಕಥಾ ಗಾಯಕಿ ಪ್ರೇಮಲತಾ ಹಾಗೂ ದಿವಾಕರ ಶಾಸ್ತ್ರಿ ಮೇಲಿನ ಬ್ಲಾಕ್ಮೇಲ್ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ತಂಡ ಬುಧವಾರ ಹೊನ್ನಾವರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಭೇಟಿ ನೀಡಿ `ಬಿ’ರಿಪೋರ್ಟ್ ಸಲ್ಲಿಸಿದೆ. ಇದರಿಂದ ಪ್ರೇಮಲತಾ ದಿವಾಕರ್ ಶಾಸ್ತ್ರಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ ; ರಾಘವೇಶ್ವರ ಸ್ವಾಮಿ ಬಳಗಕ್ಕೆ ತೀವ್ರ ಹಿನ್ನಡೆಯುಂಟಾಗಿದೆ.

2014ರ ಆಗಸ್ಟ 26ರಂದು ರಾಮಚಂದ್ರಾಪುರ ಮಠದ ಪರವಾಗಿ ಮಠದ ಕಾರ್ಯದರ್ಶಿ ಚಂದ್ರಶೇಖರ ಹೆಗಡೆ ಅವರು ಮೊದಲ ಆರೋಪಿಯಾಗಿ ಪ್ರೇಮಲತಾ ದಿವಾಕರ್, ಎರಡನೇ ಆರೋಪಿಯಾಗಿ ದಿವಾಕರ್ ಶಾಸ್ತ್ರಿ ಹಾಗೂ ಮೂರನೇ ಆರೋಪಿಯಾಗಿ ನಾರಾಯಣ ಶಾಸ್ತ್ರಿ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಬ್ಲಾಕ್ಮೇಲ್ ದೂರು ದಾಖಲಿಸಿದ್ದರು.

ಪ್ರಕರಣದ ಹಿನ್ನೆಲೆ

2014 ಅಗಷ್ಟ್ ತಿಂಗಳಲ್ಲಿ ಸುಮಾರು 3 ಕೋಟಿ ರೂ ಹಣ ನೀಡುವಂತೆ ಒತ್ತಾಯಿಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗೆ ಬೆದರಿಕೆ ಕರೆ ಬಂದಿದೆ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಸ್ವಾಮಿಯ ಆಪ್ತ ಕಾರ್ಯದರ್ಶಿ ಚಂದ್ರಶೇಖರ ಹೆಗಡೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ದಿವಾಕರ್ ಶಾಸ್ತ್ರಿ ಹಾಗೂ ಅವರ ಪತ್ನಿ ಪ್ರೇಮಲತಾರನ್ನು ಬೆಂಗಳೂರಿನಲ್ಲಿ ಬಂಧಿಸಿ ಹೊನ್ನಾವರ ಪೊಲೀಸ್ ಠಾಣೆಗೆ ಕರೆತಂದಿದ್ದರು.

ವಿಚಾರಣೆ ವೇಳೆ ತನ್ನ ಮೇಲೆ ಅತ್ಯಾಚಾರವಾಗಿರುವುದು ಸತ್ಯ ಎಂದು ಪ್ರೇಮಲತಾ ನ್ಯಾಯಾಲಯದಲ್ಲಿ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಮಾರು 40 ಪುಟಗಳ ಪಟ್ಟಿಯನ್ನು ತಮ್ಮ ನ್ಯಾಯವಾದಿಗಳ ಮೂಲಕ ನ್ಯಾಯಾಧೀಶರಿಗೆ ಸಲ್ಲಿಸಿದ್ದರು. ಬಳಿಕ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಪ್ರಕರಣದ ತನಿಖೆಯನ್ನು ಸುಧೀರ್ಘವಾಗಿ ನಡೆಸಿದ ಸಿಐಡಿ ಅಧಿಕಾರಿಗಳು 600 ಪುಟಗಳ `ಬಿ’ ರಿಪೋರ್ಟನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

source: http://karavaliale.net/cid-files-b-report-in-raghaveshwara-blackmail-case/

ka_23022017_1c30b02

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s