ರಾಘವೇಶ್ವರ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್ ಪ್ರಕರಣ, ಬಿ– ರಿಪೋರ್ಟ್ ಸಲ್ಲಿಕೆ

ರಾಘವೇಶ್ವರ ಸ್ವಾಮೀಜಿಗೆ ಬ್ಲ್ಯಾಕ್‌ಮೇಲ್ ಪ್ರಕರಣ, ಬಿ– ರಿಪೋರ್ಟ್ ಸಲ್ಲಿಕೆ

ಸಾಕ್ಷ್ಯಾಧಾರ ಕೊರತೆ: ಪ್ರೇಮಲತಾ ದಂಪತಿಗೆ ಕ್ಲೀನ್‌ಚಿಟ್‌
ಪ್ರಜಾವಾಣಿ ವಾರ್ತೆ
23 Feb, 2017

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ಪೊಲೀಸರು, ಬುಧವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ‘ಬಿ’ ರಿಪೋರ್ಟ್‌ (ಆರೋಪ ಸಾಬೀತಾಗಿಲ್ಲ) ಸಲ್ಲಿಸಿದ್ದಾರೆ.

ಹೊನ್ನಾವರ (ಉತ್ತರ ಕನ್ನಡ): ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ಪೊಲೀಸರು, ಬುಧವಾರ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ‘ಬಿ’ ರಿಪೋರ್ಟ್‌ (ಆರೋಪ ಸಾಬೀತಾಗಿಲ್ಲ) ಸಲ್ಲಿಸಿದ್ದಾರೆ.

‘ಸ್ವಾಮೀಜಿ ಅವರಿಗೆ ₹ 3 ಕೋಟಿ ನೀಡುವಂತೆ ಬೇಡಿಕೆ ಇಟ್ಟು ಬೆಂಗಳೂರಿನ ದಿವಾಕರ ಶಾಸ್ತ್ರಿ, ಅವರ ಪತ್ನಿ ಪ್ರೇಮಲತಾ ಶಾಸ್ತ್ರಿ ಹಾಗೂ ಸೋದರ ನಾರಾಯಣ ಶಾಸ್ತ್ರಿ ಅವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ’ ಎಂದು ತಾಲ್ಲೂಕಿನ ಹಳದೀಪುರದ ಬಿ.ಆರ್‌. ಚಂದ್ರಶೇಖರ ಎಂಬುವವರು 2014 ಆಗಸ್ಟ್‌ 17ರಂದು ಪೊಲೀಸರಿಗೆ ದೂರು ನೀಡಿದ್ದರು.

ದೂರು ಆಧರಿಸಿ, ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಸಿಐಡಿ ತನಿಖಾ ತಂಡವು ಬಿ–ರಿಪೋರ್ಟ್ ಸಲ್ಲಿಸಿದೆ. ಇದರ ವಿರುದ್ಧ ದೂರುದಾರರು ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಡಿವೈಎಸ್‌ಪಿ ಮಲ್ಲೇಶ ನೇತೃತ್ವದಲ್ಲಿ ಸಿಐಡಿ ತಂಡ ಪ್ರಕರಣದ ತನಿಖೆ ಕೈಗೊಂಡಿತ್ತು.

source: http://www.prajavani.net/news/article/2017/02/23/473677.html

pv_b_b_gc23_pg04_1

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s