ರಾಘವೇಶ್ವರ ಶ್ರೀ ಪೀಠ ತ್ಯಾಗ ಮಾಡುವಂತೆ ಒತ್ತಡ ಹೇರಬೇಕು

ರಾಘವೇಶ್ವರ ಶ್ರೀ ಪೀಠ ತ್ಯಾಗ ಮಾಡುವಂತೆ ಒತ್ತಡ ಹೇರಬೇಕು

ka-2102017

 

source: Karavali Ale : 21-Feb-2017

ರಾಘವೇಶ್ವರ ಶ್ರೀ ಪೀಠತ್ಯಾಗ ಮಾಡುವಂತೆ ಒತ್ತಡ ಹೇರಬೇಕು
February 21, 2017

ನಿರ್ವಿಕಾರ ಚಿತ್ತದಿಂದ ಹೇಳುತ್ತಿದ್ದೇನೆ. ನನಗೀಗ 90 ವರ್ಷ. ಈ ಆಗು ಹೋಗುಗಳಲ್ಲಿ ಪಾಲುಗೊಂಡು ನನಗೇನೂ ಆಗಬೇಕಾಗಿಲ್ಲ. ಈಗ ಸಮಾಜ ಬಾಂಧವರು ರಾಘವೇಶ್ವರ ಸ್ವಾಮಿ ಬಗ್ಗೆ ಯಾರ, ಯಾವ ಒತ್ತಡಕ್ಕೂ, ಪ್ರಚೋದನೆಗೂ, ಧಾರ್ಮಿಕ ಭಾವನೆಗೂ ಒಳಗಾಗದೆ, ಪೂರ್ವಗ್ರಹ ಪೀಡಿತರಾಗದೆ, ನಿರ್ಮಲ ಚಿತ್ತದಿಂದ ಒಂದು ನಿರ್ಧಾರಕ್ಕೆ ಬಂದು ಮುಂದಿನ ಹೆಜ್ಜೆ ಇಡಬೇಕಾಗಿದೆ.

ಎರಡು ವಾರಗಳ ಹಿಂದೆ ನಾನು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಲೈಂಗಿಕ ಹಗರಣ ಹಾಗೂ ಅದರಿಂದ ಹವ್ಯಕ ಸಮಾಜದ ಮೇಲೆ ಉಂಟಾದ ಪರಿಣಾಮಗಳ ಬಗ್ಗೆ ಸಂಕ್ಷಿಪ್ತ ಲೇಖನವೊಂದನ್ನು ಬರೆದು ನಾಡಿನ ಎಲ್ಲಾ ಪತ್ರಿಕೆಗಳಿಗೆ ಕಳುಹಿಸಿದ್ದೆ.
ಮಂಗಳೂರಿನ `ಕರಾವಳಿ ಅಲೆ’ಯೊಂದನ್ನು ಬಿಟ್ಟರೆ ಬೇರೆ ಯಾವ ಪತ್ರಿಕೆಯೂ ಅದನ್ನು ಪ್ರಕಟಿಸಲಿಲ್ಲ. ಪ್ರಕಟಪಡಿಸದಂತಹ ಅಂತಹ ಆಕ್ಷೇಪಾರ್ಹ ಒಕ್ಕಣೆ ಅದರಲ್ಲಿಲ್ಲದಿದ್ದರೂ ಪತ್ರಿಕೆಗಳು ಸಾಮೂಹಿಕವಾಗಿ ಪ್ರಕಟಪಡಿಸದಿರಲು ಏನು ಕಾರಣವೆಂದು ಯೋಚಿಸುತ್ತಿದ್ದಾಗ ಕುಮಟಾದಿಂದ ಒಬ್ಬರು ಅಧ್ಯಾಪಕರು, ಇನ್ನೊಬ್ಬರು ಗೃಹಸ್ಥರು, ಗೋಕರ್ಣದಿಂದ ಇಬ್ಬರು ಅರ್ಚಕರು, ಹೊನ್ನಾವರದಿಂದ ಒಬ್ಬರು ಭಟ್ಟರು, ಸಾಗರದಿಂದ ಒಬ್ಬರು ಹೆಗಡೆಯವರು, ಪುತ್ತೂರಿಂದ ಇಬ್ಬರು ಹೇಳಿದ ಪ್ರಕಾರ ಸ್ವಾಮಿಗಳ ಕಡೆಯಿಂದ ಅವರ ವಿರೋಧಿಗಳ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ಗೂಂಡಾಗಿರಿ, ಕೊಲೆಯ ಬೆದರಿಕೆ, ಪತ್ರಿಕೆಗಳ ಮೇಲೆ ಅವರು ಹಾಕಿದ ಒತ್ತಡ, ನಿರ್ಬಂಧ, ಇತ್ಯಾದಿ ಕಾರಣಗಳಿಂದ ಅದು ಪ್ರಕಟವಾಗಲಿಲ್ಲವೆಂದು ಗೊತ್ತಾಯಿತು. ಅಲ್ಲದೆ, ಇತ್ತೀಚೆಗೆ 18-02-2017 ಶಿರಸಿಯ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆಯವರು ಹುಬ್ಬಳ್ಳಿಯಲ್ಲಿ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಉಪಸ್ಥಿತಿಯಲ್ಲಿ ಶ್ರೀ ಕಡೆಯವರು ಸ್ವಾಮೀಜಿಯ ವಿರುದ್ಧ ಗಾಯಕಿ ಪ್ರೇಮಲತಾ ಮಾಡಿರುವ ಅತ್ಯಾಚಾರ ಆರೋಪದ ಕುರಿತು ಯಾವುದೇ ವರದಿಯಾಗದಂತೆ ಪ್ರಮುಖ ಪತ್ರಿಕೆಗಳ ಸಂಪಾದಕರಿಗೆ 4 ಕೋಟಿ ರೂ ಹಣ ಸಂದಾಯ ಮಾಡಿ ಮತ್ತಷ್ಟು ಆಮಿಷ ಒಡ್ಡಿದ್ದರು ಎಂಬ ವಿಚಾರ ಬಹಿರಂಗಪಡಿಸಿದ ಮೇಲೆ ನನ್ನ ಸಂಶಯ ಮತ್ತಷ್ಟು ದಟ್ಟವಾಯಿತು. ನನ್ನ ಲೇಖನ ಪ್ರಕಟಗೊಳ್ಳದಿರಲು ಇರುವ ಹಿಂದಿನ ರಹಸ್ಯವೂ ಬಯಲಾಯಿತು.
ಒಟ್ಟಿನಲ್ಲಿ ಹೇಳುವುದಾದರೆ, ಎಲ್ಲಾ ಆಯಾಮಗಳ ಕೇಂದ್ರ ಬಿಂದು ಸ್ವಾಮೀಜಿಯವರ ಲೈಂಗಿಕ ಹಗರಣ. ಅದನ್ನು ಅತ್ಯಾಚಾರ ಎನ್ನಿ ಅಥವಾ ಬೇರಾವುದೇ ರೀತಿಯಲ್ಲಿ ಕರೆಯಿರಿ… ಲೈಂಗಿಕ ಕ್ರಿಯೆ ನಡೆದದ್ದಂತೂ ನೂರಕ್ಕೆ ನೂರು ಸತ್ಯ. ನಿರ್ವಿಕಾರ ಚಿತ್ತದಿಂದ ಹೇಳುತ್ತಿದ್ದೇನೆ. ನನಗೀಗ 90 ವರ್ಷ. ಈ ಆಗು ಹೋಗುಗಳಲ್ಲಿ ಪಾಲುಗೊಂಡು ನನಗೇನೂ ಆಗಬೇಕಾಗಿಲ್ಲ. ಹಿಂದೆ ಶ್ರೀಗಳ ಪರಮ ಭಕ್ತನಾಗಿದ್ದೆ. ಕೆಲವು ವರ್ಷಗಳ ಹಿಂದೆ ಶ್ರೀಗಳಿಗೆ ಹಿಂದಿ ಕಲಿಸಲು ಮಠಕ್ಕೆ ಬರಬೇಕೆಂದು ಕರೆ ಬಂದಾಗ ಒಪ್ಪಿಕೊಂಡಿದ್ದೆ. ಆದರೆ ಅನಾರೋಗ್ಯ ಕಾರಣದಿಂದ ಕರೆಯನ್ನು ನೆರವೇರಿಸಲು ಸಾಧ್ಯವಾಗಿರಲಿಲ್ಲ.
ಈಗ ಸಮಾಜ ಬಾಂಧವರು ಸ್ವಾಮೀಜಿ ಲೈಂಗಿಕವಾಗಿ ವರ್ತಿಸಿದ್ದು `ಹೌದು, ಅಲ್ಲ’ ಎಂಬುದನ್ನು ಯಾರ, ಯಾವ ಒತ್ತಡಕ್ಕೂ, ಪ್ರಚೋದನೆಗೂ, ಧಾರ್ಮಿಕ ಭಾವನೆಗೂ ಒಳಗಾಗದೆ, ಪೂರ್ವಗ್ರಹಪೀಡಿತರಾಗದೆ, ನಿರ್ಮಲ ಚಿತ್ತದಿಂದ ಒಂದು ನಿರ್ಧಾರಕ್ಕೆ ಬಂದು ಮುಂದಿನ ಹೆಜ್ಜೆ ಇಡಬೇಕಾಗಿದೆ.
ಪಾಟೀಲ ಪುಟ್ಟಪ್ಪನವರು `ಒಬ್ಬ ವ್ಯಕ್ತಿಯ ಪಾಪಕೃತ್ಯದಿಂದ ಬ್ರಾಹ್ಮಣ ಸಮುದಾಯಕ್ಕೆ ಕಳಂಕ ಬಂದಿದೆ, ಆದ್ದರಿಂದ ಶ್ರೀಗಳು ಪೀಠತ್ಯಾಗ ಮಾಡುವುದು ಒಳ್ಳೆಯದು’ ಎಂದು ಹೇಳಿದ್ದರೂ, ಶ್ರೀಗಳು ತಾನಾಗಿ ಪೀಠತ್ಯಾಗ ಮಾಡುವುದು ಅಸಂಭವವಾದುದರಿಂದ ಸಮಾಜ ಒಂದಾಗಿ ಪೀಠತ್ಯಾಗ ಮಾಡುವಂತೆ ಅವರ ಮೇಲೆ ಒತ್ತಡ ಹೇರಬೇಕು. ನಮಗೆ ಒಬ್ಬ ಕಳಂಕಿತ, ವ್ಯಭಿಚಾರಿ ಸ್ವಾಮೀಜಿ ಮುಖ್ಯವಲ್ಲ. ಸಭ್ಯತೆಗೆ, ಸೌಜನ್ಯಕ್ಕೆ, ಅತಿಥಿ ಸತ್ಕಾರಕ್ಕೆ, ಪರೋಪಕಾರಕ್ಕೆ, ನಿರ್ಲಿಪ್ತತೆಗೆ ಹಾಗೂ ಶಾಲೀನತೆಗೆ ಪ್ರಖ್ಯಾತವಾದ ಹವ್ಯಕ ಸಮಾಜಕ್ಕೆ ಅಂಟಿದ ಕಳಂಕವನ್ನು ಮೈಕೆಡಹಿ ಎದ್ದು ನಿಂತು, ಇಂದೇ ತೊಳೆಯಲು ಮುಂದಾಗೋಣ.
ನೆನಪಿರಲಿ, “ನಿಂದಂತು ನೀತಿ ನಿಪುಣಾಃ ಯದಿವಾಸ್ತುವಂತೊ, ಲಕ್ಷ್ಮೀಃ ಸಮಾವಿಶತು ಗಚ್ಛತುವಾ ಯಥೇಷ್ಟಂ, ಅದೈವವಾಮರಣಮಸ್ತು ಯುಗಾಂತರೇವ, ನ್ಯಾಯಾತ್ ಪಥ: ಪ್ರಚಲಂತಿ ಪರಂ ನ ಧೀರಾಃ ಸಂಭಾವಿತಸ್ಯಚಾಕೀರ್ತಿಃ ಮರಣಾದತಿರಿಚ್ಯತಿ ಏನೇ ಬಂದೊರಗಿದರೂ ಧೀರರು, ಸತ್ಯ ಸಂಧರು, ನ್ಯಾಯದ ಹಾದಿಯಿಂದ ಎಂದೂ ತೊಲಗರು
ಇದು ಶ್ರೀಗಳಿಗೆ ಗೊತ್ತಿರದ ವಿಚಾರವೇನಲ್ಲ

ಎಂ ವಿ ಭಟ್, ಮಿತ್ತೂರು
ದೂರವಾಣಿ: 9480431134

ಶಿರಸಿಯ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆಯವರು ಹುಬ್ಬಳ್ಳಿಯಲ್ಲಿ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಉಪಸ್ಥಿತಿಯಲ್ಲಿ ಶ್ರೀ ಕಡೆಯವರು ಸ್ವಾಮೀಜಿಯ ವಿರುದ್ಧ ಗಾಯಕಿ ಪ್ರೇಮಲತಾ ಮಾಡಿರುವ ಅತ್ಯಾಚಾರ ಆರೋಪದ ಕುರಿತು ಯಾವುದೇ ವರದಿಯಾಗದಂತೆ ಪ್ರಮುಖ ಪತ್ರಿಕೆಗಳ ಸಂಪಾದಕರಿಗೆ 4 ಕೋಟಿ ರೂ ಹಣ ಸಂದಾಯ ಮಾಡಿ ಮತ್ತಷ್ಟು ಆಮಿಷ ಒಡ್ಡಿದ್ದರು ಎಂಬ ವಿಚಾರ ಬಹಿರಂಗಪಡಿಸಿದ ಮೇಲೆ ನನ್ನ ಸಂಶಯ ಮತ್ತಷ್ಟು ದಟ್ಟವಾಯಿತು. ನನ್ನ ಲೇಖನ ಪ್ರಕಟಗೊಳ್ಳದಿರಲು ಇರುವ ಹಿಂದಿನ ರಹಸ್ಯವೂ ಬಯಲಾಯಿತು.

source: http://karavaliale.net/raghaveshwara-seer-must-be-pressurised-to-relinquish-peetha/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s