ಮಾಡಿದ್ದೆ ಮಾಟ ಆಡಿದ್ದೆ ಆಟವಾಗಿ ಮೇರೆಯುತ್ತಿದ್ದಾರೆ

ಮಾಡಿದ್ದೆ ಮಾಟ ಆಡಿದ್ದೆ ಆಟವಾಗಿ ಮೇರೆಯುತ್ತಿದ್ದಾರೆ

ಯಾವುದಾದರೊಂದು ಸಂಸ್ಥೆಯನ್ನು ಹುಟ್ಟುಹಾಕುವಾಗ ಅದಕ್ಕೊಂದು ಬೈಲಾ ಸಿದ್ಧಪಡಿಸುವುದು ಒಂದು ಪ್ರಥಮ ಸಿದ್ಧತೆ.ಅದರಲ್ಲಿ ಹಕ್ಕು ಬಾಧ್ಯತೆಗಳನ್ನು ಕಾಣಿಸಲಾಗುತ್ತದೆ.

ರಾಮಚಂದ್ರಾಪುರ ಮಠ ಯಾವ ಬೈಲಾದ ಆಧಾರದ ಮೇಲೆ ನಡೆಯುತ್ತಿದೆ? ಅದರ ಪೀಠಾಧಿಪತಿಯ ಹಕ್ಕು ಬಾಧ್ಯತೆಗಳೇನು ಎಂದು ಚಿಂತಿಸಲಾಗುತ್ತಿದೆ.

ಅನೇಕ ತಲೆಮಾರುಗಳಿಂದ ಬಂದ , 1200 ವರ್ಷಗಳ ಇತಿಹಾಸವಿರುವ ಅನೇಕ ಬ್ರಹ್ಮಜ್ಞರನ್ನು ಪಡೆದುಕೊಂಡಿದ್ದ ,ಶಂಕರ ಪರಂಪರೆಯ ರಾಮಚಂದ್ರಾಪುರ ಮಠದ 36 ನೇ ತಲೆಮಾರಿನಲ್ಲಿ – ಯಾವನೋ ಒಬ್ಬ ಕಾಡುಕೂಸು,ಹಳ್ಳಿಗುಗ್ಗು ಜಿಗಳೇಮನೆ ಎಂಬ ಮುದುಕರೇ ಬಹುಸಂಖ್ಯಾತರಾದ ಗ್ರಾಮವೊಂದರಲ್ಲಿ ಕುಳಿತು ಪೇಸ್ಬುಕ್ ನಲ್ಲಿ ” ಬೈಲಾ ಏನು” ಎಂದು ಪ್ರಶ್ನಿಸುತ್ತಿದ್ದಾನೆಂದು ನಗಬೇಡಿ ಉನ್ನತ ಪರಂಪರೆಯ ಬಹು ಹಿಂದಿನ ಮಠ ಒಂದಕ್ಕೆ ಪ್ರಶ್ನಿಸುವ ಕಾಲ ಓದಗಿಬಂದಿದೆ.

ಅದ್ವೈತ ತತ್ತ್ವ ಸ್ವೀಕರಿಸಿದ, ಶಂಕರ ಪರಂಪರೆಯ ರಾಮಚಂದ್ರಾಪುರ ಮಠ ಈ ಹಿಂದಿನ ಸ್ವಾಮಿಗಳ ವರೆಗೆ ” ಧರ್ಮ ” ದ ಆಳ್ವಿಕೆಗೆ ಒಳ ಪಟ್ಟಿತ್ತು.ಧರ್ಮವನ್ನೇ ಅದರ ಬೈಲಾವನ್ನಾಗಿ ಸ್ವೀಕರಿಸಿತ್ತು.ಧರ್ಮವನ್ನೇ ಅದರ ಸಂವಿಧಾನವಾಗಿ ಅಂಗೀಕರಿಸಿಕೊಂಡಿತ್ತು.ಧರ್ಮ ಜಿಜ್ಞಾಸೆಯಿಂದ ಅದಕ್ಕೆ ಸಂಬಂಧ ಪಟ್ಟವರ ಹಕ್ಕು ಬಾಧ್ಯತೆಗಳು ನಿರ್ದರಿಸಲ್ಪಟ್ಟದ್ದವು.

ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಮಾನನೀಯ ಗುರೂಜಿಯವರು ತಮ್ಮ ಚಿಂತನಗಂಗಾ (Bunch of Thoghts) ಎಂಬ ಪುಸ್ತಕದಲ್ಲಿ — ಅರ್ ಎಸ್ ಎಸ್ ನ ಕಲ್ಪನೆಯಲ್ಲಿ ಸಂಘ ಪೂರ್ಣವಾಗಿ ಗುರಿಯನ್ನು ಮುಟ್ಟಿದಾಗ ಈ ದೇಶ ಏನಾಗಬಹುದು,ಯಾವ ರೀತಿಯ ಶಾಸನದ ವ್ಯವಸ್ಥೆ ಇರಬಹುದು ಎಂಬುದನ್ನು ವಿಶ್ಲೇಸಿಸುತ್ತಾ ಈ ದೇಶ ಧರ್ಮದ ಆಡಳಿತಕ್ಕೆ ಒಳ ಪಟ್ಟುಕೊಳ್ಳುತ್ತದೆ .ಪ್ರತಿಯೊಬ್ಬರು ತಮ್ಮ ತಮ್ಮ ಧರ್ಮವನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯುತ್ತಾರೆ ಎಂಬರ್ಥದಲ್ಲಿ ಹೇಳಿದ್ದಾರೆ.

ಈಗ ರಾಮಚಂದ್ರಾಪುರ ಮಠ ಧರ್ಮದ ಅಂಕುಶದಿಂದ ಮುಕ್ತವಾಗಿದೆ.ಅದು ಧರ್ಮವನ್ನು ತನ್ನ ಬೈಲಾ ಅಥವಾ ಸಂವಿಧಾನವಾಗಿ ಒಪ್ಪಿಕೊಳ್ಳುತ್ತಿಲ್ಲ.ಅದರ ಬದಲು ಸಂಘಟನೆಯೊಂದನ್ನು ಕಟ್ಟಿಕೊಂಡು ಅದರ ಬಲದ ಮೇಲೆ ಧಮನಕಾರಿಯಾದ ಆಡಳಿತ ನಡೆಸುತ್ತಿದ್ದಾರೆ.ಒಂದು ಸೇನಾಆಡಳಿತ ಬಂದಂತಾಗಿದೆ.ಸೇನೆಯ ಮುಖ್ಯಸ್ಥರಾದ ಪೀಠಾಧಿಪತಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.ಯಾವುದಾದರೊಂದು ವಿಷಯವನ್ನು ಚರ್ಚಿಸಿ ಮನಗಾಣಿಸಿ ಕೊಡುವ ಸೂತ್ರದ ಬದಲು ಹೊಡಿ ಬಡಿ ಕಡಿ ಎಂಬ ಸೂತ್ರವನ್ನು ಜಾರಿಗೆ ತಂದಿದ್ದಾರೆ.ಈ ಸೇನೆಯಲ್ಲಿ ಹಂತ ಹಂತವಾಗಿ ಅಧಿಕಾರ ಹಂಚಲ್ಪಟ್ಟಿದ್ದು ಪಾಳೇಗಾರರು ಸಾಮಂತರು ಎಂದೆಲ್ಲ ವಿಂಗಡನೆಗೊಂಡು ತಮತಮಗೆ ಸಿಕ್ಕ ಅಧಿಕಾರ ಅವಕಾಶಗಳನ್ನು ಬಳಸಿಕೊಂಡು ಹವ್ಯಕ ಜನಾಂಗದ ಮೇಲೆ ಸವಾರಿ ಹೊಡೆಯುತ್ತಿದ್ದಾರೆ.ಇವರನ್ನು ಹಳದಿ ತಾಲಿಬಾನುಗಳು ಎಂದು ಕರೆಯಲಾಗಿದೆ.ಸೈನ್ಯಕ್ಕೊಂದು ಯುನಿಪಾರಂ ಇದ್ದಂತೆ ಇವರಿಗೂ ಹಳದಿ ವಸ್ತ್ರಗಳ ಯುನಿಪಾರಂ ಇರುವುದರಿಂದ ಮತ್ತು ಅಪ್ಘಾನಿಸ್ಥಾನದ ತಾಲಿಬಾನುಗಳು ಯಾವ ಅಂಕುಶವು ಇಲ್ಲದೆ,ಎನನ್ನು ಮಾಡಲು ಬೇಕಾದರೂ ಹೇಸದಂತಹ ಮನೋಬಾವವುಳವರಾಗಿರುವಂತೆ ಇವರೂ ಕೂಡ ಅದೇ ರೀತಿಯ ಮನೋಬಾವ ಉಳ್ಳವರಾಗಿರುವುದರಿಂದ, ಅವರಷ್ಟೆ ಕ್ರೂರಿಗಳಾಗಿದ್ದು ದೌರ್ಜನ್ಯ ಮಾಡುತ್ತಿರುವುದರಿಂದ ಹಳದಿ ತಾಲಿಬಾನುಗಳು ಎಂಬುದು ಅನ್ವರ್ಥ ನಾಮವಾಗಿದೆ.ಇದರಲ್ಲಿ ಹೆಂಗಸರ ಸೈನ್ಯವು ಇದ್ದು ಆಧಿಕಾರ ಹಂಚಿಕೆಯಲ್ಲಿ ಪುರುಷರ ಸರಿಸಾಟಿ ಇದ್ದಾರೆ.ಧರ್ಮವನ್ನು ಸಂವಿಧಾನವಾಗಿ ಸ್ವೀಕರಿಸುವ ಬದಲು ರಾಮಚಂದ್ರಾಪುರ ಮಠ ಪುರುಷ ಮತ್ತು ಮಹಿಳೆಯರು ಸೇರಿದಂತಹ ಸೈನ್ಯವೊಂದನ್ನು ಕಟ್ಟಕೊಂಡು ಅದರ ಬಲದ ಮೇಲೆ ಹವ್ಯಕ ಜನಾಂಗದವರ ಮೇಲೆ ದಬ್ಬಾಳಿಕೆಯನ್ನು ಹೇರಿದ್ದಾರೆ.

ಈ ಹಿಂದಿನಿಂದಲೂ ರಾಮಚಂದ್ರಾಪುರ ಮಠಾಧಿಪತಿಗಳನ್ನು ನಿಯಂತ್ರಿಸಬಲ್ಲ ಯಾವೊಂದು ಸಮಿತಿ,ಬೋರ್ಡ್ ಆಪ್ ಡೈರೆಕ್ಟರ್ಸ,ಆಡಳಿತ ಮಂಡಳಿ ಇಂತಹದೊಂದು ಯಾವಾಗಲೂ ಇದ್ದಿದ್ದಿಲ್ಲ.ಧರ್ಮವೇ ಅವರನ್ನು ನಿಯಂತ್ರಿಸುತ್ತಿತ್ತು.ಧರ್ಮದಂಡ ಸದಾ ಅವರನ್ನು ಕಾಯುತ್ತಿತ್ತು.ಧರ್ಮವನ್ನು ಸದಾ ನೆನಪಿಸುತ್ತಿತ್ತು. ಧರ್ಮಪೀಠವೊಂದರ ಪೀಠಾಧಿಪತಿ ಧರ್ಮಕ್ಕಿಂತ ಬೇರೆಯಾಗಿ ಯಾವುದಾದರೊಂದರ ನಿಯಂತ್ರಣಕ್ಕೆ ಒಳಗಾಗ ಬೇಕಾದಂತಹ ಪರೀಸ್ಥಿತಿ ಬಂದೀತು ಎಂಬ ಕಲ್ಪನೆಯೇ ಇರಲಿಲ್ಲ.ಯಾಕೆಂದರೆ ಈ ಪೀಠಾಧಿಪತಿಯೇ ಎಲ್ಲೇಲ್ಲಿಯು ಧರ್ಮವನ್ನು ರಕ್ಷಿಸಲು, ಧರ್ಮವನ್ನು ಕಾಪಾಡಲು, ಅಧರ್ಮವನ್ನು ಹತ್ತಿಕ್ಕಲು ತಮ್ಮ ಪೂರ್ಣಾವಧಿಯನ್ನು ತೋಡಗಿಸಿ ಕೊಳ್ಳ ಬೇಕಾಗಿತ್ತು.ಧರ್ಮ ನಿರತರನ್ನು ತಮ್ಮ ಸುತ್ತಲೂ ಇಟ್ಟುಕೊಂಡು ಯಾವ ನಡೆ ಧರ್ಮ, ಯಾವುದು ಅಧರ್ಮ ಎಂದು ವಿಶ್ಲೇಷಿಸುತ್ತಾ ಧರ್ಮದಂತೆ ತನಗೆ ಸಂಬಂಧಪಟ್ಟ ಸಮಾಜವನ್ನು ಮುನ್ನೆಡೆಸುವ ಹೋಣೆಗಾರಿಕೆಯನ್ನು ಹೊತ್ತು ನಡೆಯುವುದು ಕರ್ತವ್ಯವಾಗಿತ್ತು.ಇಂತಹ ನಡೆಯನ್ನು ಈಗಲೂ ಶೃಂಗೇರಿ,ಸ್ವರ್ಣವಲ್ಲಿ ಮುಂತಾದೆಡೆ ಕಾಣುತ್ತಿದ್ದೇವೆ.

ರಾಮಚಂದ್ರಾಪುರ ಪೀಠಾಧಿಪತಿಯ ಸುತ್ತಮುತ್ತ ಧರ್ಮಾ ಜಿಜ್ಞಾಸುಗಳಿಗೆ, ಬ್ರಹ್ಮಜಿಜ್ಞಾಸುಗಳಿಗೆ ಪ್ರವೇಶವಿಲ್ಲ.ನಿಜವಾದ ಧರ್ಮ ನಿಷ್ಟರು ಅವರ ಮಠದ ಕಡೆ ಹಣಕಿಯು ನೋಡುತ್ತಿಲ್ಲ.ತಮ್ಮ ಸಮಾಜದಲ್ಲಿ ತಮ್ಮ ವ್ಯಾಪ್ತಿಗೆ ಒಳಪಟ್ಟಂತೆ ಬ್ರಹ್ಮಜಿಜ್ಞಾಸುಗಳು ಇದ್ದಾರೆ ಎಂದು ಹೇಳಿದರೆ ಸ್ವತಃ ಪೀಠಾಧಿಪತಿಗೆ ನಗು ಬರುತ್ತದೆ.ಅವರ ಸುತ್ತ ಸುತ್ತಿ ಕೊಂಡಿರುವವರೆಲ್ಲಾ ಯಾವ ರೀತಿ ಹಣ ಮಾಡಲಿ? ಯಾವ ರೀತಿ ಸುಖೋಪಭೋಗ ತೃಷ್ಣೆಗಳನ್ನು ತೀರಿಸಿಕೊಳ್ಳಲಿ ಎಂಬಂತಹವರೇ.ಸುಂದರ ಸಂಸ್ಕೃತ ಶಬ್ಧಗಳನ್ನು ಬಳಸಿ ಪತ್ರಿಕಗಳನ್ನು ಕರೆಯೋಲೆಗಳನ್ನು ರಚಿಸುವ ಈ ಭಟ್ಟಂಗಿಗಳು ಮಠವನ್ನು ಒಂದು ಧಾರ್ಮಿಕ ಕೇಂದ್ರವಾಗಿದ್ದನ್ನು ಲೇಡಿಸ್ ಕ್ಲಬ್ ಆಗಿ ಪರಿವರ್ತಿಸಿದ್ದಾರೆ.ತತ್ತ್ವಸಿದ್ಧಾಂತಗಳನ್ನೆಲ್ಲಾ ಗಾಳಿಯಲ್ಲಿ ತೂರಿಬಿಟ್ಟು ವ್ಯಕ್ತಿಯ ಆರಾಧಕಾರಾಗಿ ಸರ್ವಾಧಕಾರಿಯನ್ನು ಹಾಡಿಹೊಗಳುವ ಜೋಕರ್ ಗಳಿಂದ ಮಠ ತುಂಬಿ ತುಳುಕುತ್ತಿದೆ.

ಧರ್ಮ ಎಂಬ ಸಂವಿಧಾನವನ್ನು ಒಪ್ಪಿಕೊಳ್ಳದ ಈ ಪೀಠಾಧಿಪತಿಯು ಮಾಡಬಾರದ್ದನ್ನು ಮಾಡ ಹೋರಟಾಗ ನಿಯಂತ್ರಿಸುವುದು ಹೇಗೆ? ಧರ್ಮವನ್ನು ಒಪ್ಪಿಕೊಳ್ಳದಿದ್ದರೆ ಸಂವಿಧಾನವನ್ನಾದರೂ ಒಪ್ಪಿಕೊಳ್ಳುತ್ತಾರಾ ಎಂದು ಯೋಚಿಸಲಾಗುತ್ತಿದೆ.ಸಂವಿಧಾನದ ಅಂಕುಶಕ್ಕೆ ಓಳಪಡಿಸುವ ಪ್ರಯತ್ನವಾಗಿ ಅವರನ್ನು ಕೋರ್ಟ್ ಗೆ ಎಳೆಯಲಾಗುತ್ತಿದೆ. 20-25 ಕೇಸುಗಳಲ್ಲಿ ಅವರನ್ನು ಸಂವಿಧಾನದ ಅಂಕುಶಕ್ಕೆ ಒಳಪಡಿಸಲು ಪ್ರಯತ್ನಿಸಲಾಗುತ್ತಿದೆ

ಅತ್ಯಾಚಾರದ ಕೇಸೊಂದರಲ್ಲಿ ಸಂವಿಧಾನವೇ ಅಡ ಕತ್ತರಿಗೆ ಸಿಕ್ಕಿಕೊಂಡಿದೆ.ಅತ್ಯಂತ ಪ್ರಭಾವಿ ವ್ಯಕ್ತಿಯಾದ ಪೀಠಾಧಿಪತಿಯ ವಿರುದ್ಧ ದುರ್ಬಲ ಹೆಂಗಸೊಬ್ಬಳು ತನ್ನ ಮೇಲೆ ನಡೆದ ಮಾನಸಿಕ,ಬೌದ್ಧಿಕ ಹತಾರಗಳನ್ನು ಬಳಸಿ ಮಾಡಿದ ಅತ್ಯಾಚಾರಕ್ಕೆ ಬೇಕಾದಷ್ಟು ಸಾಕ್ಷಿ ಪುರಾವೆ ಒದಗಿಸಲು ವಿಫಲವಾಗಿದ್ದಾಳೆಂದು ಅನ್ನಿಸುತ್ತದೆ.ಕೋರ್ಟ್ ಅತ್ಯಾಚಾರವಲ್ಲ ಎಂದಿದೆ.ಆದರೆ ಅದೇ ಕೋರ್ಟ್ ಅಕ್ರಮ ಸಂಬಂಧ ಎಂದು ಉಲ್ಲೇಖಿಸಿದೆ.ಆದರೆ ಅಕ್ರಮ ಸಂಬಂಧ ಎಂಬುದು ಸಂವಿಧಾನ ಬಾಹಿರ ಕೃತ್ಯವಲ್ಲ.ಅಕ್ರಮ ಸಂಬಂಧ ಈ ಧರ್ಮ ಪೀಠದ ದೃಷ್ಟಿಯಿಂದ ಧರ್ಮಬಾಹಿರ ಕೃತ್ಯವಾಗಿದ್ದು ಅದನ್ನು ಸಂವಿಧಾನ ಅಥವಾ ಕೋರ್ಟ್ ಹೇಳಲು ಬರುವುದಿಲ್ಲ.ಇವರು ಧರ್ಮವನ್ನು ಸ್ವೀಕರಿಸದ ಧರ್ಮ ಪೀಠದ ಪೀಠಾಧಿಪತಿಯಾಗಿದ್ದರಿಂದ ನುಣುಚಿಕೊಳ್ಳುತ್ತದ್ದಾರೆ.ಅಕ್ರಮ ಸಂಬಂಧ ಹೊಂದಿದ ಪೀಠಾಧಿಪತಿಯನ್ನು ಅವರ ಪೀಠದಿಂದ ಇಳಿಸುವ ಸಾಮರ್ಥ್ಯವನ್ನು ಸಂವಿಧಾನ ಹೊಂದಿಲ್ಲ.ಅದು ಎಲ್ಲರಿಗೂ ಸಮಾನ ಸೂತ್ರವನ್ನು ಅಳವಡಿಸಿಕೊಂಡಿದೆ.ಜನಸಾಮಾನ್ಯರಿಗೆ ಇರುವ ನಿಯಮವು ಪೀಠಾಧಿಪತಿಗೂ ಅನ್ವಯಿಸುತ್ತದೆ ಅದರಲ್ಲಿ.ಪೀಠಾಧಿಪತಿಯೊಬ್ಬರು ಅಕ್ರಮ ಸಂಬಂಧ ಹೊಂದಿದ್ದರೆ ಅವರು ಅಂತಹ ಪೀಠದಲ್ಲಿ ಮುಂದುವರೆಯುವಂತಿಲ್ಲ ಎಂದು ಸಂವಿಧಾನ ಬಾಯಿಬಿಟ್ಟು ಹೇಳುತ್ತಿಲ್ಲ.ಅದ್ದರಿಂದ ಅಕ್ರಮ ಸಂಬಂಧ ಎಂಬ ಕೋರ್ಟ್ ನ ಉಲ್ಲೇಖವನ್ನು ಅವಹೇಳನ ಮಾಡುತ್ತಿದ್ದಾರೆ.ಅದಕ್ಕೆ ಯಾವ ಉಪ್ಪು ಸೊಪ್ಪು ಹಾಕುತ್ತಿಲ್ಲ. ಪೀಠಾಧಿಪತಿಯೋಬ್ಬರು ಅಕ್ರಮಸಂಬಂಧ ಹೊಂದಿದರೆ ಅವರು ಪೀಠದಲ್ಲಿ ಮುಂದುವರೆಯುವಂತಿಲ್ಲ ಎಂದು ಧರ್ಮಶಾಸ್ತ್ರಗಳು ಬಾಯಿಬಿಟ್ಟು ಹೇಳಿದರೂ ಅದಕ್ಕೆ ಇವರು ಉಪ್ಪು ಸೊಪ್ಪು ಹಾಕುತ್ತಿಲ್ಲ.ಅಂತೂ ಯಾವ ಅಂಕುಶವೂ ಇಲ್ಲದೆ ಮಾಡಿದ್ದೆ ಮಾಟ ಆಡಿದ್ದೆ ಆಟವಾಗಿ ಮೇರೆಯುತ್ತಿದ್ದಾರೆ
ಓಂ ತತ್ಸತ್

Ganapathi Bhatta
31/01/2017

source: https://www.facebook.com/groups/1499395003680065/permalink/1900592836893611/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s