ವಿಚಿತ್ರವಾದರೂ ಇದು ಸತ್ಯ

ವಿಚಿತ್ರವಾದರೂ ಇದು ಸತ್ಯ. ಈ ಸ್ವಾಮಿ ಪಟ್ಟಕ್ಕೆ ಬಂದಿದ್ದು ೧೯೯೯ ರ ಆಸು ಪಾಸಿನಲ್ಲಿ. ಪಟ್ಟಕ್ಕೆ ಬಂದಾಗ ಯಾವುದೇ ಗೋ ಸಮಂದಿತ ಕಾರ್ಯಕ್ರಮಗಳಾಗಲಿಲ್ಲ. ಇವ ಮೊದಲು ಮಾಡಿದ್ದು ರಾಮಸತ್ರ ಕಾರ್ಯಕ್ರಮ. ಬಹಳಷ್ಟು ರಾಜಕಾರಣಿಗಳು ರಾಮಸತ್ರ ಕಾರ್ಯಕ್ರಮಕ್ಕೆ ಬಂದರು. ಆವಾಗಲೂ ಸ್ವದೇಶೀ ಗೋ ತಳಿ ಅಥವಾ ಗೋವಿ ಗೆ ಸಮಂದಿಸಿದ ಯಾವುದೇ ಪ್ರಚಾರ ಇರಲಿಲ್ಲ. ಬಹುಷಃ ಇದೇ ಸಂದರ್ಭದಲ್ಲಿ ನಮ್ಮ ವಿಶ್ವೇಶ್ವರ ಭಟ್ರು ಮತ್ತು ಎರಡು ರೇಪ್ ಕೇಸ್ ಗಳಲ್ಲಿ ಆರೋಪಿಯಾಗಿರುವ ರಾಘವೇಶ್ವರ ಸ್ವಾಮಿಗಳು ತುಂಬಾ ಆತ್ಮೀಯರಾದರು. ಅಲ್ಲಿಂದ ಪ್ರಾರಂಭವಾಯಿತು ನೋಡಿ ಸ್ವದೇಶೀ ಗೋ ತಳಿ ಪ್ರಚಾರ. ಅವರು ಆಯೋಜಿಸಿದ ಎರಡನೇ ಕಾರ್ಯಕ್ರಮವೇ ವಿಶ್ವ ಗೋ ಸಮ್ಮೇಳನ. ಇಲ್ಲಿ ವಿಶ್ವೇಶ್ವರ ಭಟ್ಟರೇ ಅವರಿಗೆ ಈ ಐಡಿಯಾ ಕೊಟ್ಟವರು ಅಂತಲೂ ಕೆಲವು ಭಕ್ತರು ಹೇಳುತ್ತಾರೆ. ಈ ಸಂದರ್ಭದಲ್ಲಿ ಗೋ ತುಲಾಭಾರ, ಗೋ ತಳಿ ಸಂರಕ್ಷಣೆ, ಗೋ ಸೇವೆ ಅಂತ ನಾನಾ ರೂಪದಲ್ಲಿ ಧನ ಸಂಗ್ರಹವು ಆಯಿತು. ಇಲ್ಲಿ ಎಷ್ಟು ಧನ ಸಂಗ್ರಹ ವಾಯಿತು, ಅದರಲ್ಲಿ ಎಷ್ಟು ಖರ್ಚಾಯಿತು, ಯಾರ ಯಾರ ಎಷ್ಟು ಹಣವನ್ನ ತಮ್ಮ ಸ್ವಂತಕ್ಕೆ ಬಳಸಿಕೊಂಡರು ಇದು ಯಾವ ಲೆಕ್ಕವೂ ಹೊರ ಬರಲೇ ಇಲ್ಲ. ಇದೆ ಸಂದರ್ಭದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಿಶ್ವೇಶ್ವರ ಭಟ್ಟರ ಒಂದು ದೊಡ್ಡ ಕಟ್ಟಡವು ತಲೆ ಎತ್ತಿತು. ಬೆಂಗಳೂರಿನಲ್ಲಿ ಗೋ ಆರತಿ ಅಂತ ಮಾತೆಯರ ಹತ್ತಿರ ಆರತಿ ಎತ್ತಿಸಿದರು. ಅಲ್ಲೂ ಹಣ ಸಂಗ್ರಹವಾಯಿತು. ದೂರದರ್ಶನ ಚಂದನ ವಾಹಿನಿಯಲ್ಲಿ ಮಹೇಶ ಜೋಶಿಯವರು ಇದನ್ನ ನೇರ ಪ್ರಸಾರ ಮಾಡಿಸಿದರು. ಗೋ ಹತ್ಯಾ ನಿಷೇಧ ದ ಕುರಿತು ಒಂದು ಮನವಿಯನ್ನುಆಗ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಅವರಿಗೆ ಒಪ್ಪಿಸಿದರು. ಅಲ್ಲಿಗೆ ಗೋವಿನ ಕಾರ್ಯಕ್ರಮವು ಮುಕ್ತಾಯವಾಯಿತು. ಈ ಸಮಯದಲ್ಲಿ ಎಷ್ಟು ದೇಸಿ ತಳಿಗಳು ಅಭಿವೃದ್ಧಿ ಗೊಂಡವೋ, ಎಲ್ಲಿ ಹೊಸ ತಳಿ ಸ್ರಷ್ಟಿಗೊಂಡವೋ, ದೇವರಿಗೆ ಗೊತ್ತು. ಆದರೆ ರಾಜರಾಜೇಶ್ವರಿ ನಗರದಲ್ಲಿ ವಿಶ್ವೇಶ್ವರ ಭಟ್ಟರ ಕಟ್ಟಡ ವಾಸಕ್ಕೆ ರೆಡಿ ಆಗಿದ್ದೆಂತೂ ಸತ್ಯ. ಅಲ್ಲಿಂದ ಮುಂದೆ ಗೋ ಪ್ರಚಾರ ಕಡಿಮೆ ಆಯಿತು ರಾಮಕಥಾ ಹೆಚ್ಚು ಪ್ರಚಾರಕ್ಕೆ ಬರತೊಡಗಿತು. ಇದನ್ನು ಒಂದು ನಾಟಕದ ಕಂಪನಿ ತರ ಮಾಡಿಕೊಂಡು ಒಂದು ರಾಮಕಥಾ ಕಾರ್ಯಕ್ರಮ ಕ್ಕೆ ಇಷ್ಟು ಲಕ್ಷ ಅಂತ ದರ ಪಟ್ಟಿಯು ಸಿದ್ದವಾಯಿತು. ಯಾವಾಗ ರಾಮಕಥಾ ದಲ್ಲಿ ಇವರು ಮಾಡಿದ ಅನಾಚಾರಗಳು ಹೊರಬರುವ ಸೂಚನೆಗಳು ಸಿಕ್ಕವೋ ಆಗ ಪ್ರಾರಂಭವಾಯಿತು ಇವರ ಹಿಮಾಲಯಕ್ಕೆ ಏಕಾಂತಕ್ಕೆ ಹೋಗುವ ಕಥೆ. ಶಿಷ್ಯರಿಗೆ ಇದು ಅರ್ಥವಾಗುವ ಮೊದಲೇ ಪ್ರೇಮಲತಾ ದಂಪತಿಗಳ ಮೇಲೆ ಬ್ಲಾಕ್ಮೇಲ್ ಕೇಸ್ ಹಾಕಿಸಿ ಅವರನ್ನ ಅರೆಸ್ಟ್ ಮಾಡಿಸಿ ತಮ್ಮ ಅನಾಚಾರಗಳು ಹೊರಬರದಂತೆ ಪ್ರಯತ್ನಿಸಿದರು. ತನ್ನ ಮೇಲೆ ದಾಖಲಾದ ಅತ್ಯಾಚಾರದ FIR ನ್ನೇ ತೆಗೆದು ಹಾಕುವಂತೆ ನ್ಯಾಯಾಲಯಕ್ಕೆ ಹೋಗಿ ಅಲ್ಲಿ ಉಚ್ಚ ನ್ಯಾಯಾಲಯದಲ್ಲಿ ಉಗಿಸಿಕೊಂಡು ಸ್ವಾಮೀಜಿ ಎಂಬ ಒಂದೇ ಒಂದು ಕಾರಣಕ್ಕೆ ದಂಡ ಕಟ್ಟುವದನ್ನು ತಪ್ಪಿಸಿಕೊಂಡರು. ಮುಂದೆ CID ತನಿಖೆ ನಡೆದು ಆರೋಪ ಪಟ್ಟಿ ಕೋರ್ಟನಲ್ಲಿ ಸಲ್ಲಿಸಿದಾಗ ವಿಚಾರಣೆಯನ್ನು ಹಿಂದೆ ಹೊಸನಗರದ ನ್ಯಾಯಾಲಯದಲ್ಲಿ ತಮಗೆ ಸಹಾಯ ಮಾಡಿದ, ಬೆಂಗಳೂರಿನ ಸೇಶನ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ ಮುದಿಗೌಡರ ಎದುರು ವಿಚಾರಣೆಗೆ ಬರುವಂತೆ ನೋಡಿಕೊಳ್ಳುವಲ್ಲಿ ಸಫಲರಾದರು. ಇನ್ನೇನು ತಾನು ಕೇಸ್ ಗೆದ್ದೇಬಿಟ್ಟೆ ಅಂತ ಆತ್ಮ ವಿಶ್ವಾಸದಲ್ಲಿದ್ದ ಅವರಿಗೆ, ಯಾವಾಗ ಪಬ್ಲಿಕ್ ಟಿವಿ ಯಲ್ಲಿ ಇದು ಅತ್ಯಾಚಾರ ಅಲ್ಲ ಅನಾಚಾರ ಅಂತ ನ್ಯೂಸ್ ಬರತೊಡಗಿತೋ ಆವಾಗ ಇವರು judgment ನ ಪ್ರತಿ ಓದಿದರೂ. ಪಾಪ ಇವರ ವಕೀಲರು ಮಹಾಭಾರತದಲ್ಲಿ ಶ್ರೀಕೃಷ್ಣನು ‘ಕುಂಜರಃ’ ಅಂತ ಧರ್ಮರಾಜನು ಹೇಳಿದ್ದು ದ್ರೋಣಾಚಾರ್ಯರಿಗೆ ಕೇಳಿಸದಂತೆ ನೋಡಿಕೊಂಡನೋ ಹಾಗೆ ‘ಅನಾಚಾರ’ ದ ಬಗ್ಗೆ ಮುದಿಗೌಡರ್ judgment ನಲ್ಲಿ ಬರೆದದ್ದನ್ನು ವಕೀಲರು ಹೇಳಲೇ ಇಲ್ಲ. ಯಾವಾಗ ಇದು ಅತ್ಯಾಚಾರ ಅಲ್ಲ ಅನಾಚಾರ ವಂತೆ ಅಂತ ಭಕ್ತರು ಮಾತಾಡತೊಡಗಿದರೋ ಆಗ ಭಕ್ತರನ್ನು ಮೂರ್ಖರನ್ನಾಗುಸುವದಕ್ಕೆ ಮತ್ತೆ ಮೊರೆ ಹೋಗಿದ್ದು ಗೋ ಸಮ್ಮೇಳನಕ್ಕೆ. ಆದರೆ ಈಗಾಗಲೇ ಇವರ ಅನಾಚಾರಗಳು ಜಗದ್ ಜಾಹೀರಾಗಿದ್ದಕ್ಕೆ ಹಿಂದೆ ವಿಶ್ವ ಗೋ ಸಮ್ಮೇಳನದ ಸಮಯದಲ್ಲಿ ಜೊತೆಗಿದ್ದ ಹೆಚ್ಚಿನವರು ಬರಲೇ ಇಲ್ಲ. ಹೀಗಾಗಿ ಕಲ್ಲಡಕ ಪ್ರಭಾಕರ ಭಟ್ಟರನ್ನು ಮುಂದೆ ಮಾಡಿಕೊಂಡು ಗೋ ಕಿಂಕರ ಯಾತ್ರೆ ಅಂತ ಪ್ರಾರಂಭಿಸಿದರು. ಇದರ ಉದ್ದೇಶ ಗೋವಿನ ಮೇಲಿರುವ ಪ್ರೀತಿ ಅಲ್ಲ ಆದರೆ ಅದನ್ನು ಬಳಸಿಕೊಂಡರೆ ಜನ ಅನಾಚಾರದ ವಿಷಯ ಮರೆಯುತ್ತಾರೆ ಮತ್ತೆ ಎರಡನೇ ಅತ್ಯಾಚಾರ ಕೇಸ್ ನಿಂದ ತಪ್ಪಿಸಿಕೊಳ್ಳಬಹುದೆಂಬ ದುರಾಲೋಚನೆ ಅಷ್ಟೇ. ಜನರೇ ಎಚ್ಚತ್ತು ಕೊಳ್ಳಿ ಇಂತ ಸ್ವಾಮಿಗಳಿಂದ ದೂರವಿರಿ.

Shatharam Hegdekatte
26/01/2017
source: https://www.facebook.com/groups/1499395003680065/permalink/1897920917160803/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s