ಹಿಂದೂ ಸ್ವಾಮಿ ಏನು ಮಾಡಿದರೂ ಧರ್ಮದ ಹೆಸರಿನಲ್ಲಿ ಸುಮ್ಮನಿರಬೇಕು ಅಂತ ಕೆಲವರ ವಾದ

ಹಿಂದೂ ಸ್ವಾಮಿ ಏನು ಮಾಡಿದರೂ ಧರ್ಮದ ಹೆಸರಿನಲ್ಲಿ ಸುಮ್ಮನಿರಬೇಕು ಅಂತ ಕೆಲವರ ವಾದ. ನಿಮ್ಮ ತಾಯಿ ಹೆಂಡತಿ ಮಗಳ ಮೈಮೇಲೆ ಕೈ ಹಾಕಿದರೆ? ಆಗಲೂ ಸುಮ್ಮನಿರುತ್ತೀರಾ ? ಹೌದಂತಾದರೆ ಆ ಧರ್ಮ ಯಾಕೆ?

ಸತ್ಯ ದೇವತಾ ಧರ್ಮ ದೇವತಾ ಹೆಸರಿನಲ್ಲಿ ದಕ್ಷಿಣ ಕನ್ನಡದ ಅತ್ಯಂತ ಫೇಮಸ್ ದೇವಸ್ಥಾನದಲ್ಲಿ ನನ್ನೊಳಗೆ ನಡೆದ ಘಟನೆಯಿದು. ಸಾಕ್ಷಿ ಬೇಕು ಸಾಕ್ಷಿ ಬೇಕು ಅಂತೀರಲ್ಲ ನಾನೇ ಸಾಕ್ಷಿ.

ನಾನಾಗ ಆರನೇ ಕ್ಲಾಸ್ ನಲ್ಲಿ ಓದುತ್ತಿದ್ದೆ. ಮನೆಯ ಎಲ್ಲರೂ ಸೇರಿ ಸತ್ಯ ದೇವತಾ ಧರ್ಮ ದೇವತಾ ದರ್ಶನ ಕ್ಕೆ ಹೋಗಬೇಕು ಅಂತಾಯಿತು. ಏನೋ ಕೆಲಸದ ಮೇರೆಗೆ ನನ್ನ ತಂದೆ ತಾಯಿ ಬರಲಾಗಲಿಲ್ಲ. ನನ್ನ ಚಿಕ್ಕಮ್ಮ ಮತ್ತು ಸಂಬಂಧಿಕರಲ್ಲೇ ಇನ್ನೂ ಮೂರು ಹೆಂಗಸರು ನನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋದರು.

ಮೊದಲು ನಮ್ಮ ಪೈಕಿ ಒಂದಿಬ್ಬರು ಒಬ್ಬೊಬ್ಬರಾಗಿ ಒಳಗೆ ಹೋಗಿ ಬಂದರು. ನನ್ನ ಚಿಕ್ಕಮ್ಮ ನ ಸರದಿ ಬಂದಾಗ ನಾನೂ ಅವರ ಜೊತೆಯಲ್ಲೇ ಹೋದೆ. ಅಲ್ಲಿ ದೇವಸ್ಥಾನದ ಪಾತ್ರಿಗೆ ದೇವರು ಮೈಮೇಲೆ ಬಂದಿತ್ತು . ಹಾ ಹೂ ಅಂತಾ ಏನೇನೋ ಹೇಳಿದ. ಒಳ್ಳೆಯದಾಗುತ್ತದೆ ಅಂದ. ನನ್ನ ಕೈಯಲ್ಲಿ ಒಂದು ಕಾಯಿ ಕೊಟ್ಟು ತಿರುಗಿ ನಿಂತು ಕಣ್ಣು ಮುಚ್ಚಿಕೊಳ್ಳುವಂತೆ ಹೇಳಿದ. ಅಷ್ಟೇ. ಒಂದೇ ನಿಮಿಷದ ನಂತರ ನನ್ನ ಚಿಕ್ಕಮ್ಮ ಅವನಿಗೆ ಬೈದು ನನ್ನ ಕೈಯಲ್ಲಿದ್ದ ಕಾಯಿ ಬೀಸಾಡಿ ನನ್ನನ್ನು ಎಳೆದುಕೊಂಡು ಹೊರಬಂದರು. ಏನೂ ಮಾತಾಡಲಿಲ್ಲ. ಉಳಿದ ಒಬ್ಬರು ಒಳಗೆ ಹೋದರು.

ನಂತರ ಕಾರಿನಲ್ಲೂ ಅರ್ಧ ದಾರಿ ತನಕ ಚಿಕ್ಕಮ್ಮ ಮಾತನಾಡಲಿಲ್ಲ. ಕೊನೆಗೆ ಬಾಯಿ ಬಿಟ್ಟರು. ಪೂಜಾರಿ ಅವರನ್ನು ಮಗಳೇ ತಬ್ಬಿಕೊಂಡನಂತೆ. ಮಗಳೇ ಅಂತ ಹೇಳಿದ್ದು ದೇವಿ ಅಂತ ಹೆದರಿ ಸುಮ್ಮನಿದ್ದರು. ಆದರೆ ದೇವಿ ಗಂಡು ಅಂತ ಗೊತ್ತಾಗಲು ಕೆಲವೇ ಸೆಕೆಂಡ್ ಬೇಕಾಯಿತು. ನಿತ್ಯಾನಂದ ಆಸಾರಾಮ ರಾಘವೇಶ್ವರ ಎಲ್ಲರಂತೇ ಈ ದೇವಿಯೂ ಮೈಮೇಲೆ ಕೈ ಹಾಕಿದ್ದಳು. ಕಾರಿನಲ್ಲಿ ಒಬ್ಬೊಬ್ಬರಾಗಿ ಎಲ್ಲರೂ ಬಾಯಿ ಬಿಟ್ಟರು. ಎಲ್ಲಾ ಹೆಂಗಸರಿಗೂ ಇದೇ ಅನುಭವ ಆಗಿತ್ತು. ನನಗೆ ಮಾತನಾಡಲು ಧೈರ್ಯ ಇರಲಿಲ್ಲ ವಾದರೂ ಏನಾಗಿತ್ತು ಅಂತ ತಿಳಿಯುವಷ್ಟು ಬುದ್ಧಿ ಇತ್ತು.

ಮನೆಯಲ್ಲಿ ಹೇಳಿದರೆ ಬೈಯ್ಯುತ್ತಾರೆ ಅಂತ ಎಷ್ಟೋ ವರ್ಷ ಇದು ಹಾಗೇಯೇ ಉಳಿಯಿತು. ದೇವರ ಶಾಪದ ಹೆದರಿಕೆ ಕೂಡ. ನಂತರ ಅಂತೂ ಇಂತೂ ದೇವಸ್ಥಾನಕ್ಕೆ ಆರ್ಕುಟ್ ಮೂಲಕ ವಿಷಯ ತಿಳಿಸಿದೆವು. ದೇವಸ್ಥಾನದ ಜನ ನಮ್ಮನ್ನು ಹಿಂದೂ ವಿರೋಧಿ ಅಂತ ಬಾಯಿಗೆ ಬಂದಹಾಗೆ ಬೈದರು. ಇದು ದೇವರ ತಪ್ಪಲ್ಲ ಪೂಜಾರಿ ತಪ್ಪು ಅಂತ ಎರಡು ಮೂರು ಜನ ಹೇಳಿದರು.

ಇದೇ ಸತ್ಯ ದೇವತಾ ಧರ್ಮ ದೇವತಾದಲ್ಲಿ ಪೂಜಾರಿ ನಾವು ಒಳಗೆ ಹೋದ ತಕ್ಷಣ, ನಾವು ಏನೂ ಹೇಳುವ ಮೊದಲೇ ನಾವು ಇಂತಿಂಥ ಕಾರಣಕ್ಕಾಗಿಯೇ ಬಂದಿದ್ದು ಅಂತ ಹೇಳುತ್ತಾನೆ.

ಇದೂ ಒಂದು ಪುಟ್ಟ ಟ್ರಿಕ್. ಮೊದಲು ಭಜನೆ ನಡೆಯುತ್ತದೆ. ಆಗ ನಮ್ಮ ಜೊತೆಯೇ ಭಜನೆ ಮಾಡುತ್ತಾ ಕುಳಿತವನೊಬ್ಬ ಮಾತಿಗಾರಂಭಿಸಿ ಹೆ ಹೆ ಹೆ ನೀವೇನು ಯಂತಕ್ಕೆ ಬಂದಿದ್ದು ಅಂತ ಕೇಳುತ್ತಾನೆ. ಇವನೇ ಇನಫಾರಮಿಂಗ್ ಏಜಂಟ್. ನಾವು ಒಳಗೆ ಹೋದ ತಕ್ಷಣ, ಈತ ನಾವು ಬಂದ ಕಾರಣದ ಬಗ್ಗೆ ಚೀಟಿ ಕಳಿಸುತ್ತಾನೆ. ಅದನ್ನು ಓದಿದ ಪೂಜಾರಿ ನಾವು ಏನೂ ಹೇಳುವ ಮೊದಲೇ – “ಓ ನೀನು ನಿನ್ನ ಮಗಳ ಅನಾರೋಗ್ಯದ ಬಗ್ಗೆ ಬಂದಿದ್ದೀಯ. ಆರು ದಿನಗಳಿಂದ ಆಕೆಗೆ ಜ್ವರ. ದೇವಿಗೆ ಎಲ್ಲ ಗೊತ್ತು ” ಅಂತಾನೆ. ಇದೇ ಪವಾಡ.

ಇದು ಯಾವ ದೇವರು ? ಈ ದೇವರು ಬೇಕಾ?

Mamata Naik
21/01/2017
source: https://www.facebook.com/photo.php?fbid=364397150608802&set=a.111042652610921.1073741828.100011155596472&type=3

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s