ರಾಘವೇಶ್ವರ ಎಂಬ ಚಡ್ಡಿ ಹರುಕ ಸ್ವಾಮಿ ಭಾರೀ ಪವಾಡ ಮಾಡುತ್ತಿದ್ದಾನಂತೆ.

ಭಾರತೀಯರಾದ ನಾವು ಅತ್ಯಂತ ಮೂರ್ಖರು. ನಮ್ಮನ್ನು ಸುಲಭವಾಗಿ ಮೋಸ ಮಾಡಬಹುದು. ರಾಘವೇಶ್ವರ ಎಂಬ ಚಡ್ಡಿ ಹರುಕ ಸ್ವಾಮಿ ಭಾರೀ ಪವಾಡ ಮಾಡುತ್ತಿದ್ದಾನಂತೆ. ಯಾರದ್ದೋ ಮನೆಗೆ ಬೆಂಕಿ ಬಿದ್ದು ಸುಟ್ಟು ಹೋದರೂ ಇವನ ಫೋಟೋ ಮಾತ್ರ ಸುಡಲಿಲ್ಲವಂತೆ. ಹರಿವಾಣದಲ್ಲಿ ಪಾದದ ಗುರುತು ಮೂಡಿತಂತೆ. ಗೋರಕ್ಷೆ ಅಂತ ಮಾಡಿದ ಹಣ ತಿನ್ನುವ ಕಾರ್ಯದಲ್ಲಿ ಮಾಡಿದ ಚಪಾತಿಯ ಮೇಲೆ ಇವನ ಚಿತ್ರ ಮೂಡಿತಂತೆ.

ಚಪಾತಿಯ ಮೇಲೆ ಚಿತ್ರ ಮೂಡಿದರೆ ಯಾರಿಗೇನು ಲಾಭ ? ಜಗತ್ತಿನ ತುಂಬಾ ರೋಗ ರುಜಿನ ಭಯೋತ್ಪಾದನೆ ಯುದ್ಧ ತಾಂಡವವಾಡುತ್ತಿವೆ. ಕೋಟ್ಯಾಂತರ ಜನಕ್ಕೆ ಒಪ್ಪತ್ತಿನ ಊಟಕ್ಕೂ ತತ್ವಾರ ಆಗಿದೆ. ಈಗ ಇವನ ಚಿತ್ರ ಚಪಾತಿಯಲ್ಲಿ ಮೂಡಿದ್ದೇ ನಿಜ ಅಂದುಕೊಳ್ಳೋಣ ಏನು ಮಾಡುವುದು? ಅದನ್ನು ನೆಕ್ಕಬೇಕಾ ? ಪಾಕಿಸ್ತಾನ ದಾಳಿ ಮಾಡಿದರೆ ಈ ಚಪಾತಿ ತೋರಿಸಬೇಕಾ ?

ಈ ತರ ಏಸುವಿನ ಚಿತ್ರ ಬ್ರೆಡ್ ಮೇಲೆ ಮೂಡಿತು ಅಂತ ವಿದೇಶಗಳಲ್ಲಿ ಜನ ದುಡ್ಡು ಮಾಡಿದರು. ಭಾರತದಲ್ಲಿ ಅನಕ್ಷರತೆ ಜಾಸ್ತಿ. ಕೇಳಬೇಕಾ ? ಏಸುವಿನ ಚಿತ್ರ ಬರುವುದು ಕೊನೆ ಕೊನೆಗೆ ಅತೀ ಆಗಿ ಶೌಚ ಮಾಡಿದಾಗಲೆಲ್ಲ ಮೇರಿ ಇತ್ಯಾದಿಗಳು ಮೂಡಿದವು. ಫ್ಲಶ್ ಮಾಡಲು ತಡ ಆಗಿದ್ದು ಬಿಟ್ಟರೆ ಬೇರೆ ಏನೂ ಲಾಭ ಇಲ್ಲದ ಚಿತ್ರಗಳಿವು.

ಪ್ಲೂಟೋ ನಲ್ಲಿ ಅರಾಬಿಕ್ ಅಕ್ಷರ ಇವೆ ಅಂತ ಬಾಂಧವರು ಗುಲ್ಲೆಬ್ಬಿಸಿದರು. ಮಂಗಳನ ಮೇಲೆ ಮುಖ ಕಾಣಿಸಿತು.

ಹೆಚ್ಚಿನವು ಬೇಕಂತಲೇ ಮಾಡಿದ ಮೋಸ. ಈಗ ಬ್ರೆಡ್ ಮೇಲೆ ಚಿತ್ರ ಮೂಡಿಸುವ ಮಷೀನ್ ಕೂಡ ಬಂದಿದೆ. ದೋಸೆ ಮಾಡುವಾಗ ಮುಖ ಮೂಡಿಸುವ ಕಲೆಯ ವೀಡಿಯೋ ಇವೆ. ಇದಲ್ಲದೇ
Pareidolia ಅಂತ ಒಂದಿದೆ. ಅದು ನಮ್ಮ ಮೆದುಳು ಅಸಂಬದ್ಧ ಪ್ಯಾಟರ್ನಗಳಲ್ಲಿ ಪ್ಯಾಟರ್ನ್ ಹುಡುಕುವದರ ಹೆಸರು.

ಆದರೆ ಈ ದೇವಾಂಶ ಸಂಭೂತರು ಯಾಕೆ ಚಿಕ್ಕ ಪುಟ್ಟ ಪವಾಡ ಮಾಡುತ್ತಾರೆ? ಈಗ ಅಂದುಕೊಳ್ಳಿ ನಾನು ದೇವರ ಅವತಾರ, ನಿಮ್ಮೆದುರು ನಿಂತಿದ್ದೇನೆ. ನಾನು ದೇವರು ಅಂತ ನಿಮಗೆ ಪ್ರೂವ್ ಮಾಡಬೇಕಿದೆ. ಈಗ ನಾನು ಏನು ಮಾಡಬಹುದು ? “ನಿಮ್ಮ ಕಿಸೆಯಲ್ಲಿದ್ದ ಎಂಟಾಣೆ ಮಾಯ ಮಾಡುತ್ತೇನೆ , ನಿಮ್ಮ ಶರ್ಟಿನ ಗುಂಡಿ ಬಿದ್ದು ಹೋಗುವಂತೆ ಮಾಡುತ್ತೇನೆ, ಎಷ್ಟೇ ಪ್ರಯತ್ನಿಸಿ ದರೂ ನಿಮ್ಮ ಸಿಗರೇಟಿಗೆ ಬೆಂಕಿ ತಾಗದಂತೆ ಮಾಡುತ್ತೇನೆ. ಕೈಯಿಂದ ಬೂದಿ ತೆಗೆದು ಕೊಡುತ್ತೇನೆ. “. . . ಇಷ್ಟೇನಾ ? ಇದಕ್ಕೂ ದೊಡ್ಡದೇನನ್ನೂ ಮಾಡಲು ದೇವರಿಗೆ ಸಾಧ್ಯವಿಲ್ಲವೇ ?

“ದೇವರಿಗೆ ಮಾನವನಿಂದ ಅವಿತು ಕೂರಲು ಯಾವುದೇ ಕಾರಣವಿಲ್ಲ ” ಹಾಗೊಂದು ವೇಳೆ ಆತ ಆತನದ್ದೇ ಕಾರಣಗಳಿಂದ ನಮ್ಮಿಂದ ಅವಿತಿದ್ದರೆ , ತನ್ನ ಇರುವಿಕೆ ಸಾಬೀತು ಪಡಿಸಲು ಈ ನಾಲ್ಕಾಣೆ, ಎಂಟಾಣೆ ಮ್ಯಾಜಿಕ್ ಯಾಕೆ ಮಾಡುತ್ತಿರುತ್ತಾನೆ ? ಏಸು ಸ್ವಲ್ಪ ನೀರನ್ನು ವೈನ್ ಮಾಡಿದನಂತೆ. ಸಮುದ್ರವನ್ನೇ ವೈನ್ ಮಾಡಿದ್ದಿದ್ದರೆ ನಂಬಬಹುದಿತ್ತು. ಹೀಗೆ ಇವನು ಚಿಕ್ಕ ಚಿಕ್ಕ ಮ್ಯಾಜಿಕ್ ಮಾಡುತ್ತಿರಬೇಕಾದರೆ , ಕ್ರಿಶ್ಚಿಯನ್ನರು ಬೇಡ ಅಂತ ಬಿಟ್ಟು ಹೋದ ಮರುಭೂಮಿ ಯಲ್ಲಿ ಬಾಂಧವರಿಗೆ ಎಣ್ಣೆ ಬಾವಿ ಸಿಕ್ಕಿತು. ಏಸುವೇ ಪೆಟ್ರೋಲ್ ಮಾಡಬಹುದಿತ್ತು. ಬಾಂಧವರ ಸಂಸ್ಥಾಪಕ ರೆಕ್ಕೆ ಇದ್ದ ಚಿಕ್ಕ ಕುದುರೆಯ ಮೇಲೆ ಕುಳಿತು ದಿನಾ ರಾತ್ರಿ ಮಕ್ಕಾ ಮದೀನಾ ನಡುವೆ ಆಕಾಶ ಮಾರ್ಗವಾಗಿ ಹಾರುತ್ತಿದ್ದರಂತೆ. ನಮ್ಮ ಸಾಯಿಬಾಬಾ ರೋಲೆಕ್ಸ್ ವಾಚ್ ನ ತಯಾರಕನಿಗೇ ಆತನದ್ದೇ ಇನ್ನೂ ರಿಲೀಸ್ ಆಗದ ವಾಚ್ ಕೊಟ್ಟೆ ಅಂತ ರೀಲು ಬಿಟ್ಟು ಸಿಕ್ಕಿ ಬಿದ್ದಿದ್ದರು.

ಚಪಾತಿಯ ಮೇಲೆ ಚಿತ್ರ ಮೂಡಿಸುವುದು ಅತೀ ಸುಲಭದ ಕೆಲಸ. ಹಿಟ್ಟಿನಲ್ಲಿ ಆಕಾರ ಮೂಡಿಸಿ ಹೆಚ್ಚು ಬೇಯುವಂತೆ ಮಾಡಿದರೆ ಆಕಾರ ಮೂಡುತ್ತದೆ.

ಆದರೆ ಈ ಆಕಾರಗಳಿಂದ ಯಾವುದೇ ಉಪಯೋಗ ಇಲ್ಲ. ಮರದಲ್ಲಿ ಗಣಪತಿ ಮೂಡಿದ ಅಂತ ದೇವಸ್ಥಾನ ಕಟ್ಟುತ್ತೇವೆ. ಕಟ್ಟಿದವರು ಹಣ ಮಾಡುತ್ತಾರೆ. ಜಗತ್ತಿನ ಕಷ್ಟಗಳು ಹಾಗೆಯೇ ಇರುವುದೇ ಆದರೆ ಈ ಗಣಪತಿ ಮೂಡುವುದೇನಕ್ಕೆ ?

ಎಲ್ಲರ ಮನೆ ಸುಟ್ಟು ಹೋದರೂ ಯಾವುದೋ ದೇವರ ಮೂರ್ತಿ ಸುಡಲಿಲ್ಲ ಅಂತ ಫೋಟೋ ಹಾಕುತ್ತಾರೆ. ನೆರೆ ಹಾವಳಿಯಲ್ಲಿ ನೂರಾರು ಮನೆ ಕೊಚ್ಚಿ ಹೋಗಿ ಜನ ಸತ್ತು ಹೋದರೂ ಯಾವುದೋ ಒಂದು ದೇವಸ್ಥಾನದಲ್ಲಿ ನೀರು ಬರಲಿಲ್ಲ ಅಂತಲೂ. ಇವೆಲ್ಲ ಏನು ಮಹಾ ಪವಾಡ? ಜನ ಸತ್ತರೂ ತನ್ನನ್ನು ತಾನೇ ಕಾಯ್ದುಕೊಳ್ಳುವ , ಜನರ ಮನೆ ಹೋದರೂ ತನ್ನ ಮನೆ ಮಾತ್ರ ರಕ್ಷಣೆ ಮಾಡಿಕೊಳ್ಳುವ ದೇವರು ಯಾಕೆ ಬೇಕು ?

ಪಾಕಿಸ್ತಾನದ ಬಾರ್ಡರನಲ್ಲಿ ಒಂದು ದೇವಿ ಇದೆ. ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಾವಿರಾರು ಜನ ಸತ್ತರು. ಆದರೆ ಇವಳ ದೇವಸ್ಥಾನಕ್ಕೆ ಮಾತ್ರ ಏನೂ ಆಗಿಲ್ಲ ಅಂತ ಕತೆ ಇದೆ. ಇವಳು ಯಾವ ಸೀಮೆ ದೇವಿ ಅನ್ನುವುದು ಸಾಯಲಿ. ಇದು ಆಗಿದ್ದು ಏಳೆಂಟು ದಶಕಗಳ ಹಿಂದೆ. ಪಾಕಿಸ್ತಾನದ ಶಸ್ತ್ರಗಳು ಆಗಿನ್ನೂ ತುಂಬಾ ದೂರ ಹೋಗುವ ಶಕ್ತಿ ಹೊಂದಿರಲಿಲ್ಲ. ಹೆಚ್ಚಿನ ಬಾಂಬ್ ದೇವಸ್ಥಾನದ ಹತ್ತಿರ ಬಿದ್ದಿಲ್ಲ. ಬಿದ್ದವು ಢಂ ಆಗಿಲ್ಲ. ಇದೇ ದೊಡ್ಡ ಪವಾಡ. ಈಗ ಒಂದು ಬಾಂಬ್ ಬಿದ್ದರೆ ಈಕೆ ಮತ್ತು ದೇವಸ್ಥಾನ ಎರಡೂ ಇರುವುದಿಲ್ಲ.

ಮೋಸ ಹೋಗುವವರು ಇರುವ ವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ.

Mamata Naik
20/01/2017
source: https://www.facebook.com/mamata.naik.9638/posts/364010430647474

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s