ನಮ್ಮ ಹವ್ಯಕ ಸಮಾಜಕ್ಕೆ ಹತ್ತಿದ ಕಾಯಿಲೆ ಪ್ರಮುಖವಾಗಿ ಒಂದು

ನಮ್ಮ ಹವ್ಯಕ ಸಮಾಜಕ್ಕೆ ಹತ್ತಿದ ಕಾಯಿಲೆ ಪ್ರಮುಖವಾಗಿ ಒಂದು

ಆಯುರ್ವೇದ ಪುಸ್ತಕದಲ್ಲಿ ಸಾವಿರಾರು ರೋಗಗಳ ಗುಣ ಲಕ್ಷಣಗಳನ್ನು ವರ್ಣಿಸುತ್ತಾರೆ.ಮತ್ತು ಈ ಸಾವಿರಾರು ರೋಗಗಳಿಗೆ ಸಾವಿರಾರು ಗಿಡ ಮೂಲಿಕೆಗಳಿಂದಾದ ಸಾವಿರಾರು ಔಷಧಿಗಳನ್ನು ಪ್ರಯೋಗಿಸುವ ವಿಧಿವಿಧಾನಗಳನ್ನು ವರ್ಣಿಸಿರುತ್ತಾರೆ.

ಆದರೆ ಆಯುರ್ವೇದ ಪುಸ್ತಕದಲ್ಲಿರುವ ಎಲ್ಲ ರೋಗಗಳು ಒಂದು ದೇಹದಲ್ಲಿ ಇರುವುದಿಲ್ಲ.ಎಲ್ಲೊ ಒಂದೋ ಎರಡೋ ಕಾಹಿಲೆ ಇದ್ದು ಪೀಡೆ ಕೊಡುತ್ತಿರುತ್ತದೆ.ಅದನ್ನು ಸರಿಯಾಗಿ ಗುರ್ತಿಸಿ ಅದಕ್ಕೆ ಬೇಕಾದ ಔಷಧ,ಪಥ್ಯ ಹೇಳಿದರೆ ಸಾಕು.ಬೇರೆ ಎಷ್ಟೇ ಔಷಧ ಕೊಟ್ಟರು ಕಾಹಿಲೆ ಶಮನವಾಗುವ ದೃಷ್ಟಿಯಿಂದ ಪ್ರಯೋಜನವಿಲ್ಲ.

ನಮ್ಮ ಹವ್ಯಕ ಸಮಾಜಕ್ಕೆ ಹತ್ತಿದ ಕಾಯಿಲೆ ಪ್ರಮುಖವಾಗಿ ಒಂದು.ಅದು ಎಂದರೆ ಒಬ್ಬ ಕಳ್ಳಕೂಡಿಕೆ ಮಾಡಿಕೊಂಡವನನ್ನು ಅಂಧಶ್ರದ್ಧೆಯಿಂದ ಹಿಂಬಾಲಿಸುತ್ತಿರುವುದು.ಇವರು ಈ ರೀತಿ ಹಿಂಬಾಲಿಸುತ್ತಿರುವುದರಿಂದ ಧರ್ಮದ ದೃಷ್ಟಿಯಿಂದ ಇವರೆಲ್ಲಾ ಅಧೋಪತನ ರಾಗುತ್ತಿದ್ದಾರೆ.ಕೆಳಮುಖವಾಗಿ ಚಲಿಸುತ್ತಿದ್ದಾರೆ.ಎಷ್ಟೇ ಹೋಮ ಹವನ ಮಾಡಲಿ,ಜಪತಪ ಮಾಡಲಿ, ಪೂಜೆ ಪುನಸ್ಕಾರ ಹಬ್ಬ ಹರಿದಿನಗಳನ್ನು ಆಚರಿಸಲಿ,ಗೋಸೇವೆ ದೇಶಸೇವೆ ಮಾಡಲಿ,ಈ ಮೂಲಭೂತವಾದ ಮಾರ್ಗದಲ್ಲಿ ತಪ್ಪಿ ನಡೆಯುತ್ತಿರುವುದರಿಂದ ಸರ್ವಬಣ್ಣ ಮಸಿ ನುಂಗಿತು ಎಂಬಂತೆ ಅವರ ಎಲ್ಲಾ ಧಾರ್ಮಿಕ ಅನುಷ್ಟಾನಗಳು ನಿಷ್ಪ್ರಯೋಜಕವಾಗಿ ಪರಿವರ್ತಿತವಾಗುತ್ತಿದೆ.ಪರದಲ್ಲಿ ಇವರಿಗೆ ಆಗುತ್ತಿರುವ ನಷ್ಟವನ್ನು ಇವರು ಅರ್ಥಮಾಡಿಕೊಳ್ಳುತ್ತಿಲ್ಲ.ಗುರುಪೀಠದಲ್ಲಿ ಧರ್ಮದ ಅವಸಾನ ಮತ್ತು ಅದಕ್ಕೆ ಇವರ ಬೆಂಬಲದಿಂದಾಗಿ ಇವರು ಮುಂದಿನ ಜನ್ಮಗಳಲ್ಲಿ ನತದೃಷ್ಟರಾಗಿ ಹುಟ್ಟಬೇಕಾಗುತ್ತದೆ ಎಂಬ ಕಟುಸತ್ಯ ಇವರ ಗಮನಕ್ಕೆ ಬರುತ್ತಿಲ್ಲ.ಅದನ್ನು ಹೇಳಿದರೆ ಕೇಳುವಂತಹ ಸ್ಥಿತಿಯಲ್ಲಿ ಇವರಿಲ್ಲ.

ಹವ್ಯಕ ಜನಾಂಗಕ್ಕೆ ಧರ್ಮ ಭೋಧಿಸುವವರು ಅನೇಕರು ಇದ್ದಾರೆ.ಅನೇಕ ಮಠ ಮಂದಿರಗಳು ಇದ್ದಾವೆ.ಆದರೆ ಅವರೆಲ್ಲಾ ಈ ಪ್ರಮುಖ ಕಾಯಿಲೆಯನ್ನು ಗುರ್ತಿಸಿ ಔಷಧ ಕೊಡುತ್ತಿಲ್ಲ.ಇರುವ ಕಾಯಿಲೆಯೇ ಒಂದು ಕೊಡುತ್ತಿರುವ ಔಷಧಿ ಮತ್ತೋಂದಕ್ಕೆ ಎಂಬಂತಾಗಿದೆ.ಹವ್ಯಕ ಜನಾಂಗದ ಮೇಲೆ ನಿಜವಾದ ಪ್ರೀತಿ ವಿಶ್ವಾಸ ಇದ್ದಿದ್ದೇ ಹೌದಾದರೆ ದಿಕ್ಕು ತಪ್ಪಿ ಹೋಗುತ್ತಿರುವ ಈ ಜನಾಂಗವನ್ನು ಪಾರು ಮಾಡಲು,ಅವರ ಕಾಯಿಲೆಗೆ ತಕ್ಕ ಔಷಧ ಕೊಡಬೇಕಾದ್ದು ಪ್ರತಿಯೊಬ್ಬ ಧರ್ಮ ಪ್ರಚಾರಕನ ಕರ್ತವ್ಯ ಎಂದು ನಾನು ಬರೆದರೆ ಅದು ಆಧಿಕಪ್ರಸಂಗ ಎಂದು ಕಾಣಬಹುದು.ಈ ಆಧೋಗತಿಯಿಂದ ಈ ಜನಾಂಗವನ್ನು ಪಾರು ಮಾಡದ ವೇದಾಂತ ಆಧ್ಯಯನ ಶೀಲರು,ವಿವಿಧ ಭೂಮಿಕೆಯಲ್ಲಿರುವ ಸಾಧಕರು,ಜ್ಞಾನಿಗಳು, ಸೇವಾತತ್ಪರರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ ಎಂದು ವಿಷಾಧದಿಂದ ಹೇಳ ಬೇಕಾಗಿದೆ.ಜ್ಞಾನಿಗಳಿಗಂತೂ ಯಾವ ಭಯ ಇರಲು ಸಾಧ್ಯವೇ ಇಲ್ಲ.ನಿರ್ಭಯತೆಯೇ ಜ್ಞಾನಿಯ ಲಕ್ಷಣವಲ್ಲವೇ? . ಭಯ ಮತ್ತು ಜ್ಞಾನ ಒಟ್ಟಿಗಿರಲು ಸಾಧ್ಯವಿಲ್ಲ.ಸಮಕಾಲಿನ ಪ್ರಪಂಚದಲ್ಲಿ ಇದ್ದುಕೊಂಡಿರುವ ದೃಷಿಸ್ವರೂಪರು ಮೌನವಾಗಿ ಇದನ್ನೆಲ್ಲಾ ಸಹಿಸಿಕೊಂಡು ಅವಧೂತರಾಗಿರುವುದು ಹವ್ಯಕ ಜನಾಂಗದ ದುರಾದೃಷ್ಟವೇ ಸರಿ.

ಇಡೀ ಈ ಹವ್ಯಕ ಜನಾಂಗವನ್ನು ತಿದ್ದಿತೀಡಿ ಸರಿಯಾಗಿ ಮುನ್ನೆಡೆಸ ಬೇಕಾಗಿದ್ದವರು ತಮ್ಮ ಇಂದ್ರಿಯ ನಿಗ್ರಹಿಸಿಕೊಳ್ಳಲಾಗದ ತಪ್ಪಿಗೆ ,ಆ ತಪ್ಪನ್ನು ಮುಚ್ಚಿಹಾಕಲು ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ನೋಡಿಯೂ ಈ ಪ್ರಾಜ್ಞರು ಮೂಕ ಪ್ರೇಕ್ಷಕರಾಗಿರುವುದನ್ನು ನೋಡಿದರೆ ವಿಸ್ಮಯವಾಗುತ್ತದೆ.ಆತ್ಮಾನೋ ಮೋಕ್ಷಾರ್ಥ ಜಗದ್ದಿತಾಯ ಚ ಎಂಬಲ್ಲಿ ಜಗತ್ತಿನ ಹಿತದ ಚಿಂತೆ ಇದ್ದಿದ್ದೆ ಹೌದಾದರೆ ಒಬ್ಬ ಶೀಲಗೆಟ್ಟವನಿಂದಾಗಿ ಇಡೀ ಹವ್ಯಕ ಸಮ್ಮೂಹ ಅಂಧಶ್ರದ್ಧೆಯಿಂದ, ಭಯದಿಂದ ಧರ್ಮಚ್ಯುತರಾಗುವುದನ್ನು ತಪ್ಪಿಸಲು ಬೇಕಾದ ಕ್ರಮ ಕೈ ಗೊಳ್ಳಲು ಕೈ ಜೋಡಿಸಬೇಕು.ಇಲ್ಲದಿದ್ದರೆ ಅವರು ತಮ್ಮಷ್ಟಕ್ಕೆ ತಾವು ಉದ್ಧಾರದ ಹಾದಿ ಕಂಡುಕೊಂಡು ತಮ್ಮ ಬಂಧುಮಿತ್ರರನ್ನು, ಜಾತಿಬಾಂಧವರನ್ನು ಪ್ರಪಾತದ ಹಾದಿಯಲ್ಲಿ ಹೋಗಲು ಬಿಟ್ಟಂತಾಗುತ್ತದೆ.

ಕೋರ್ಟ್ ಒಪ್ಪಿತ ಸಂಬಂಧ ಎಂದು ಉಲ್ಲೇಖಿಸಿದ ಮೇಲೆ ಇನ್ನು ” ಪ್ರಮಾಣ” ದ ಕೊರತೆಯಿಂದ ನರಳ ಬೇಕಾಗಿಲ್ಲ.ರಾಷ್ಟ್ರಿಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಸಂಘ ಚಾಲಕರು ,ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶರು, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಯವರು, ಕೆಲವು ಟಿವಿ ಛಾನಲ್ ಗಳು ಕೆಲವು ಪತ್ರಿಕೆಗಳು ಇವರೆಲ್ಲಾ ಇದು ಒಪ್ಪಿತ ಸಂಬಂಧ ಎಂಬ ಕೆಳಕೋರ್ಟಿನ ಉಲ್ಲೇಖವನ್ನು ಎತ್ತಿಹಿಡಿದಿದ್ದರಿಂದ, ಪೀಠಾಧಿಪತಿಯು ಚಾರಿತ್ರ್ಯಹೀನರು ಎಂಬುದು ನೂರಕ್ಕೆ ನೂರು ಸಿದ್ಧವಾದ ಪ್ರಮಾಣವಾಗಿದೆ.

ಹವ್ಯಕ ಸಮಾಜ ಅನುಭವಿಸುತ್ತಿರುವ ಈ ಕಾಯಿಲೆಗೆ ಔಷಧ ಕೊಡಲು ಎಲ್ಲಾ ಧರ್ಮಾಸಕ್ತ ಮಠಾಧಿಪತಿಗಳು,ಸಾದುಸಂತರು,ಜ್ಞಾನಿಗಳು, ವೈಧಿಕರು ಸಮಾಜಸೇವಕರು ಕಾರ್ಯತತ್ಪರರಾಗಬೇಕೆಂದು ಕಳಕಳಿಯಿಂದ ಗಣಪತಿಭಟ್ಟನು ವಿನಂತಿಸಿಕೊಳ್ಳುತ್ತಾನೆ.
ಓಂತತ್ಸತ್

Ganapathi Bhatta
11/01/2017
source: https://www.facebook.com/groups/1499395003680065/permalink/1888870651399163/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s