ಒಬ್ಬ ಸನ್ಯಾಸಿಯಾದವರು ಮಾಡ ಬೇಕಾದ ಕಾರ್ಯವಾ ಇದು?

ಖುಷ್ಕಿ ಜಮಿನೊಂದನ್ನು ಖರೀಧಿ ಮಾಡ ಹೊರಡುತ್ತಾರೆ.ಮಠದ ಗೋ ಶಾಲೆ ಮಾಡ್ತಿವಿ ಎನ್ನುತ್ತಾರೆ.ಇಂತಹ ಜಾಗದಲ್ಲಿ ಇಂತಹ ಜಮೀನು ಇಂತಿಂಥ ಸೌಕರ್ಯ ಹೊಂದಿದೆ ಎಂದು ವರ್ಣಿಸಿ ಪಾಂಡಿತ್ಯ ಪೂರ್ಣ ಶಬ್ಧ ಜಾಲ ಬಳಸಿ ಕಣ್ಣು ಕೋರೈಸುವಂತೆ,ಕಿವಿ ಅವುಡುಗಚ್ಚುವಂತೆ ಪ್ರಚಾರ ಮಾಡುತ್ತಾರೆ.ಯಥೇಚ್ಛ ಹಣ ಸಂಗ್ರಹಿಸುತ್ತಾರೆ.ಆ ಆಸ್ತಿಗೆ ಕೊಟ್ಟ ಹತ್ತು ಪಟ್ಟು ಹಣ ಸಂಗ್ರಹವಾಗುತ್ತದೆ.ಇದರಲ್ಲಿ ಹತ್ತನೆ ಎರಡು ಭಾಗ ಪ್ರಚಾರಕ್ಕಾಗಿ ಖರ್ಚಾಗಿರುತ್ತದೆ.ಮಠದಿಂದ ಭಾರಿ ಭಾರಿ ಯೋಜನೆಗಳು ಕಾರ್ಯಗತವಾಗುತ್ತಿದೆ ಎಂದು ಜನ ಮೂಗಿನ ಮೇಲೆ ಕೈ ಇಟ್ಟು ಆಶ್ಚರ್ಯ ವ್ಯಕ್ತ ಪಡಿಸುತ್ತಾರೆ.

ಆಸ್ತಿಯನ್ನು ಸ್ವಂತ ಹೆಸರಿಗೆ ಖರೀಧಿ ಮಾಡುತ್ತಾರೆ. ಒಂದಷ್ಟು ದಿನ ಗೋಶಾಲೆ ನಡೆಯುತ್ತದೆ.ಈ ಸಂದರ್ಭದಲ್ಲಿ ಕೆಲವರಿಗೆ ಪ್ರಶಸ್ತಿ ಪತ್ರಗಳು ಕೊಡಲ್ಪಡುತ್ತದೆ.ಒಂದೆರಡು ಕಾರ್ಯಕ್ರಮ ಮಾಡಿ ಜನ ನಾಯಕರಿಂದ ಭಾಷಣ ಮಾಡಿಸಿ ಹಾರ ತುರಾಯಿಗಳು ಸಮರ್ಪಿಸಲ್ಪಡುತ್ತದೆ.ಮತ್ತೆ ಇದಕ್ಕೆಲ್ಲಾ ಪಂಡ್ ಸಂಗ್ರಹ ಆಗಿರುತ್ತದೆ.

ನಂತರ ದನಕರುಗಳು ಮಾಯವಾಗುತ್ತದೆ.ಗೊಬ್ಬರದವರೆಗೆ ಎಲ್ಲವೂ ಎತ್ತಂಗಡಿ ಯಾಗುತ್ತದೆ. ಆ ಜಾಗವನ್ನು ಮಾರಿ ಕೊಳ್ಳುತ್ತಾರೆ.ಬರುವ ದುಡ್ಡಿನಲ್ಲಿ ಜಬರ್ದಸ್ ಗೋಯಾತ್ರೆ ಮಾಡುತ್ತಾರೆ.

ದಾಖಲೆ ಸಹಿತ ಇವೆಲ್ಲವನ್ನು ಪ್ರಕಟ ಪಡಿಸ್ತಿದ್ದಾರೆ

ಒಬ್ಬ ಸನ್ಯಾಸಿಯಾದವರು ಮಾಡ ಬೇಕಾದ ಕಾರ್ಯವಾ ಇದು? ಸರ್ವ ಸಂಗ ತ್ಯಾಗಿ ತಮ್ಮ ಹೆಸರಿಗೆ ವೈಯಕ್ತಿಕವಾಗಿ ಜಮೀನು ಬರೆಸಿ ಕೊಳ್ಳುವ ಆವಶ್ಯಕತೆ ಏನಿದೆ? ಕೋಳ್ಳುವಾಗಲೇ ಮಾರುವ ಪೂರ್ವ ಯೋಜನೆಯ ಚಿಂತನೆ ಇದು.ಎಷ್ಟೊಂದು ಜನರನ್ನು ಎಷ್ಟು ದಿಕ್ಕು ತಪ್ಪಿಸುತ್ತಾರಿವರು.ಹಗುರಾಗಿ ಮಠದ ಆಸ್ತಿಯನ್ನೆಲ್ಲಾ ಒಂದೊದಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳುತ್ತಾ ಮನಸೊ ಇಚ್ಛೆ ಮಾರಿ ಕೊಳ್ಳುತ್ತಾರೆ.ಹಣವನ್ನು ತಾವು ಮಾಡಿದ ತಪ್ಪು ಮುಚ್ಚಿಕೊಳ್ಳಲು ಕೋರ್ಟ್ ಕಛೇರಿ ಗೋ ಯಾತ್ರೆ ಮಣ್ಣು ಮಸಿಗೆಲ್ಲಾ ಬಳೆಸುತ್ತಾರೆ.

ಎಲ್ಲೋ ಒಬ್ಬಿಬ್ಬರು ಇಂತಹದನ್ನೆಲ್ಲಾ ಪ್ರಶ್ನೆ ಮಾಡಲು ಹೊರಟರೆ ತಮ್ಮೆಲ್ಲಾ ಶಕ್ತಿಯನ್ನು ಬಳಸಿ ,ಪ್ರಯೋಗಿಸಿ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕುತ್ತಾರೆ.ರಾಜ್ಯಮಟ್ಟದ ರಾಜಕೀಯ ನಾಯಕರನ್ನು ಕಿರು ಬೆರಳಿನಲ್ಲಿ ಕುಣಿಸುವ ಇವರ ಎದರು ನಿಲ್ಲುವುದೆಂದರೆ ಭೋರ್ಗರಿವ ಸಮುದ್ರದ ತೆರೆಗೆ ದಂಡೆ ಕಟ್ಟಲು ಹೊರಟಂತೆ.ಸುನಾಮಿಯಾಗುತ್ತೆನೆಂದು ಅವರು ಆಗಾಗ ಹೇಳುವುದನ್ನು ತಾವು ಕೇಳಿರಬಹುದು.

ಎಷ್ಟು ದಾಖಲೆ ಗಳಿದ್ದರೂ ಇವರ ಕುಕೃತ್ಯಗಳನ್ನು ಬಯಲುಮಾಡಿ ಜನಾಭಿಪ್ರಾಯ ರೂಪಿಸಲಾಗುತ್ತಿಲ್ಲ.ಮಾಧ್ಯಮಗಳು, ಛಾನಲ್ ಗಳು ಬೆಂಬಲಿಸುತ್ತಿಲ್ಲ.

ನಿರಾಶೆ ಬೇಡ.ಸತ್ಯಶೋಧನ ಮಿತ್ರ ಮಂಡಳಿ ಇದೆ .ಪೇಸ್ಬುಕ್ ಮೂಲಕ ಬಯಲಿಗೆಳೆಯುತ್ತಿದ್ದಾರೆ.ಸತ್ಯ ಒಂದಲ್ಲ ಒಂದು ದಿನ ವಿಜಯ ಪತಾಕೆ ಹಾರಿಸುತ್ತದೆ.

Ganapathi Bhatta
18/01/2017
source: https://www.facebook.com/groups/1499395003680065/permalink/1893056064313955/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s