ಒಂದು ಹೊಸ್ದಾದ್ ಹ್ಳೇಯ್ ಸುದ್ದಿಃ

ಒಂದು ಹೊಸ್ದಾದ್ ಹ್ಳೇಯ್ ಸುದ್ದಿಃ
ಶ್ರೀ ಚಿ ಛೀ. ರೋಗ್ವೇಶ್ ರವರು ಕಳೆದ 2015ನೇ ವರ್ಷ ಸಪ್ಟೆಂಬರ್ ತಿಂಗಳ ಒಂದು ಶುಭ ದಿನಾಂಕದಂದು ಘಟ್ಟದ ಮೇಲಿನ ಪ್ರಾಂತವೊಂದರ ಪಟ್ಟಣದ ಒಂದು ಶ್ರೀ ರಾಮಕೃಷ್ಣ ಮಿಶನ್ ಕಡೆಯಿಂದ ನಡೆಸಲ್ಪಡುತ್ತಿರುವ ಹಾಗೂ ಆ ಪಂಥದ ಗುರು ಪರಂಪರೆಯಂತೆ ರಚಿತವಾದ ಮಠವೊಂದರ ಗುರುವನ್ನು ಹೆದರಿಸಿ ಬೆದರಿಸಿ ಅವರ ಮಠ ಮತ್ತು ಆಸ್ತಿಯನ್ನು ಲಪಟಾಯಿಸುವ ಸಲುವಾಗಿ ಒಂದು ಅಗ್ರಿಮೆಂಟ್ ಮಾಡಿಕೊಂಡಿದ್ದು ಬೆಳಕಿಗೆ ಬರುತ್ತಿದೆ. ಅದು ಏನೆಂದರೆ,
ಶ್ರೀ…… ರೋಗ್ವೇಶ್ ಸ್ವಾಮಿ …ಮಠ…. ಅಂಚೆ. ಆದ ನಾನು ಶ್ರೀ ಶ್ರೀ ಶ್ರೀ …ಸ್ವಾಮೀಜಿಯವರ ಸನ್ನಿಧಾನದಲ್ಲಿ ಪೊಡಮಟ್ಟು ಬಿನ್ನವಿಸಿಕೊಂಡು ಬರೆದುಕೊಡುವ ಪತ್ರವೆಂದರೆ, ನಾನು ಇಂದಿನಿಂದ ತಮ್ಮ ಶ್ರೀ ಮಠದ ಸಂಪೂರ್ಣ ಶಿಷ್ಯನಾಗಿದ್ದು, ಮಠದ ಪರಂಪರೆಯಂತೇ ಮುಂದಿನ ಜೀವನವನ್ನು ಸದರೀ ಮಠೀಯ ಪದ್ಧತಿಯಂತೇ ಸನ್ಯಾಸಿಯಾಗಿ ಕಳೆಯುತ್ತೇನೆ. ನನ್ನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಕೃಪೆ ತೋರಬೇಕಾಗಿ ವಿನಮ್ರ ವಿನಂತಿ
ಇಂತಿ ತಮ್ಮ ಆಜ್ಞಾಧಾರಕ ಶಿಷ್ಯ
……ಛೀ ಛೀ..
ಸಹಿ/ಇದೆ
……
ಅದರಂತೆ ಆ ಮಠದ ಸ್ವಾಮಿಗಳು…
ಶ್ರೀ …… ಸ್ವಾಮೀಜಿ ಆದ ನಾಣು ಈ ಮೂಲಕ ಬರೆದು ಕೊಡುವುದೇನೆಂದರೆ, ನನ್ನ ಹಾಗೂ ನಮ್ಮ ಮಠದ ಭಕ್ತರ ಅಭೀಪ್ಸೆಯಂತೇ ನಾನು ಈಗಾಗಲೇ ವಯೋಸಹಜ ಶಾರೀರಿಕ ದೌರ್ಬಲ್ಯಕ್ಕೆ ತುತ್ತಾಗುತ್ತಿರುವುದರಿಂದ ಮಠದ ಯಾವತ್ತೂ ವ್ಯವಹಾರಗಳನ್ನು ಮುನ್ನಡೆಸಲು ಅಶಕ್ತನಾಗುತ್ತಿರುವುದರಿಂದ ಛೀ..ಛೀ.. ಸ್ವಾಮಿಗಳನ್ನು ನಮ್ಮ ಮಠದ ಶಿಷ್ಯರನ್ನಾಗಿ ಸ್ವೀಕರಿಸಿ ದೀಕ್ಷೆಯನ್ನಿತ್ತು, ನನ್ನ ಮುಂದಿನ ಮಠದ ಯಾವತ್ತೂ ಜವಾಬ್ದಾರಿಗಳನ್ನು ಛೀ.. ಛೀ ಗಳಿಗೆ ವಹಿಸುತ್ತಿದ್ದೇನೆ. ಇನ್ನು ಮುಂದೆ ನಮ್ಮ ಮಠದ ಯಾವತ್ತೂ ಸ್ಥಿರ ಚರ ಸ್ವತ್ತುಗಳ ರಕ್ಷಣೆ ಹಾಗೂ ಭಕ್ತರ ವ್ಯವಹಾರಗಳನ್ನು ನೋಡಿಕೊಂಡು ಶ್ರೀ ಮಠದ ಪೂಜಾದಿ ಕೈಂಕರ್ಯಗಳನ್ನು ನಡೆಸಿಕೊಂಡು ಬರಲು ಎಲ್ಲ ಅಧಿಕಾರವನ್ನೂ ಮನಸಾ ಒಪ್ಪಿ ಹಸ್ತಾಂತರಿಸುತ್ತಿದ್ದೇನೆ.
ಶ್ರೀ….. ಸ್ವಾಮಿಗಳು
…..ಮಠ…
ಸಹಿ ಇದೆ.
………………….
ಈ ಪತ್ರಕವು ಕಾಯಿದೆ ಶೀರ್ ನೋಟರಿಯವರಿಂದ ದಾಖಲಾಗಿರುತ್ತದೆ.
………………………………………..
ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶ್ರೀ ಶಂಕರ ಭಗವತ್ಪಾದರ ಶಿಷ್ಯ ಪರಂಪರೆಯ ಒಂದು ಧರ್ಮ ಪೀಠದ ಧರ್ಮಾಧ್ಯಕ್ಷ್ಯನೂ ಶಂಕರ ಪರಂಪರೆಯ ಸಂನ್ಯಾಸ ದೀಕ್ಷಾಬದ್ಧನೂ ಆದ ವ್ಯಕ್ತಿಯೊಬ್ಬ ಅವೈದಿಕ ವ್ಯವಹಾರಗಳಿಂದಲೂ , ಶ್ರೀ ಶಂಕರ ಸಂನ್ಯಾಸ ಧರ್ಮಕ್ಕೆ ತಕ್ಕುದಲ್ಲದ ಒಂದು ಮಠದ ಶಿಷ್ಯತ್ವವನ್ನು ಸ್ವೀಕರಿಸಿದ್ದಲ್ಲದೇ ಅದನ್ನು ಮುನ್ನಡೇಸಿಕೊಂಡು ಹೋಗುವ ಮುಚ್ಚಳಿಕೆಯನ್ನೂ ಬರೆದು ಕೊಡುತ್ತಾನೆಂದರೆ, ಈ ಸಂನ್ಯಾಸಿ ಯಾವ ಜಾತಿಯವನು..?
……………………………..

20/01/2017
source: https://www.facebook.com/groups/1499395003680065/permalink/1894183250867903/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s