ಹೀಗೇ ಬೇಸಿಗೆ ರಜೆಯಲ್ಲಿ ಕಳೆದ ವರ್ಷ ಊರಿಗೆ ಹೋದಾಗ ಓರ್ವ ಗುರುಭಕ್ತ ಮನೆಗೆ ಬಂದಿಳಿದ..

ಹೀಗೇ ಬೇಸಿಗೆ ರಜೆಯಲ್ಲಿ ಕಳೆದ ವರ್ಷ ಊರಿಗೆ ಹೋದಾಗ ಓರ್ವ ಗುರುಭಕ್ತ ಮನೆಗೆ ಬಂದಿಳಿದ.. ( ಎಲ್ಲ ನನ್ನ ಮುಂದೆಯೇ ಚೆಡ್ಡಿ ಕಟ್ಟಲು ಕಲಿತವರು.. ಮಹಾಪುರುಷರೇನಲ್ಲ..!)
ಅಂಥವರಿಗೆ ಎಂದೂ ಬಹುವಚನವೋ ಗೌರವದಿಂದಲೋ ಮಾತನಾಡಿಸಿ ಅಭ್ಯಾಸವೇ ಇಲ್ಲದ ನಾನು ಪ್ರಶ್ನಿಸಿದೆ…
ಓಹ್ ಯಾವಾಗ್ ಬಂದ್ಯೋ…?
ನಾನು ಯಾವಾಗಂದ್ರೆ ಆವಾಗ್ ಬರ್ತಾ ಇರ್ತೇನೆ…
ನೀನೂ ಹೊಟೇಲಿನಲ್ಲಿ ಉಳಕೊಂಡು ಬಾಡಿಗೆ ಕಾರಲ್ಲಿ ಸಂಜೆ ಹೊತ್ತು ಮನೆಗೆ ಬಂದು ಹೋಗುವವನೋ…?
ಹೂಂ.. ಅಲ್ಲೇ ಪೇಟೆಯಲ್ಲೇ ರೂಮಲ್ಲಿ ಮಡುಗಿದ್ದೇನೆ.. ಮತ್ತೆ ರಾತ್ರಿ ಅಲ್ಲೇ ಹಾಲ್ಟ್.ನಾನು ತಿಂಗಳಿಗೊಂದಾವರ್ತಿ ಬಂದು ಎರಡು ದಿನ ಇದ್ದು ಹೋಗ್ತೇನೆ.. ಆವಾಗೆಲ್ಲಾ ಹೀಗೇ ಹೋಟೇಲಿನಲ್ಲೇ ಇರೋದು..!. ಎಂದ ಭೂಪ..!
ಯಾಕೋ ಇವನ ಮೇಲೊಂದು ಕಣ್ಣಿಟ್ಟಿದ್ದೆ..!
ಹೌದು… ಸಂಜೆಯಾಗುತ್ತಿದ್ದಂತೇ ತನ್ನ ಬಾಡಿಗೆ ಕಾರು ಹತ್ತಿ ಪೇಟೆಗೆ ದೌಡಾಯಿಸಿದ..
ನನಗೂ ಅಲ್ಲೊಂದು ನೆಂಟರ ಮನೆಗೆ ಹೋಗಬೇಕಿತ್ತಾದ್ದರಿಂದ ಅದೇ ಕಾರಿನಲ್ಲೇ ಹೋದೆ..!
ಇವನು ಹೋಟೇಲ್ ಎದುರಿಗೆ ಕಾರು ಇಳಿಯುವ ಹೊತ್ತಿಗೇ ಅಲ್ಲಿ ನಾಲ್ಕಾರು ಜನ ಇವನಿಗಾಗಿ ಬರಹಾಯುತ್ತಿದ್ದರು.. ಅಂತೂ ಅದೇನೋ.. ಅತ್ಲಾಗಿ ಹವ್ಯಕವೂ ಅಲ್ಲದ.. ಇತ್ಲಾಗಿ ಬ್ರಾಹ್ಮಣವೂ ಅಲ್ಲದ ಭಾಷೆಯಲ್ಲಿ ಏನೇನೋ ಹಾಯ್ ಹೂಯ್..! ನಾನು ಹೊರಡುತ್ತೇನೆಂದು ಕೈಬೀಸಿ ಮುಂದಕ್ಕೆ ಸಾಗಿದೆ. ನನ್ನ ಬಂಧುಗಳ ಮನೆ ಸೇರಿದೆ.
************************
ಸಂಜೆ ಕತ್ತಲಾಗುತ್ತಿದ್ದಂತೇ ನನ್ನ ಬಂಧುಗಳ ಮನೆಯ ಕಾರ್ಯ ನಿಮಿತ್ತ ನಾನು ಮತ್ತೆ ಪುನಃ ಅದೇ ಹೊಟೇಲಿನ ದಾರಿಯಲ್ಲಿ ಬರಬೇಕಾಯ್ತು..
ಆಗ ಕಂಡ ದೃಶ್ಯ ಅತ್ಯಂತ ಕುತೂಹಲಕಾರಿಯಾಗಿತ್ತು…
ಹೋಟೇಲಿನ ಪಕ್ಕದಲ್ಲೇ ಒಂದು ದಂಡು ನಿಂತಿತ್ತು.. ಅದೇನೇನೋ ಮಾತುಕಥೆಗಳು ನನ್ನ ಜೊತೆಗೆ ನನ್ನ ಬಂಧುಗಳೂ ಇದ್ದುದರಿಂದ ಹತ್ತಿರ ಹೋಗಲಾಗಲಿಲ್ಲ.. ಆದರೂ ತೂರಾಡುತ್ತ.. ಕೇಕೆ ಹಾಕುತ್ತಿದ್ದುದು ಗೋಚರಿಸಿತು… ಅರೇ..! ಅಲ್ಲೊಬ್ಬನ ಕೈಯ್ಯಲ್ಲಿ ಅದೇನೋ ಕರಿದ ಮೀನಿನ ತುಣುಕು..! ಅಯ್ಯೋ ಖರ್ಮವೇ.. ಎಂದುಕೊಂಡು ಅತ್ತ ತಿರುಗಿ ಹೊರಡಬೇಕೆನ್ನುವಷ್ಟರಲ್ಲಿ ನಮ್ಮೂರಿನ ಹೈದ ನನ್ನನ್ನು ಗಮನಿಸಿದ್ದ..!
*******************************
ಅಂತೂ ಬೆಳಿಗ್ಗೆ ಪುನಃ ನನ್ನೂರು ಸೇರಿ ಮನೆಯ ತೋದಲ್ಲಿ ಏನೋ ಕೆಲಸ ಮಾಡಿಸುತ್ತಿದ್ದಾಗ ಕಾರಿನಿಂದ ಬಂದಿಳಿದ ಊರ ಗುರುಭಕ್ತ.. ತೋಟದೊಳಕ್ಕೆ ಬಂದು…. ನನ್ನಲ್ಲಿ ಬಿನ್ನವಿಸಿಕೊಳ್ಳುತ್ತಿದ್ದ… ರಾಮಣ್ಣಾ.. ನಿನ್ನೆ ಘಟನೆ ಇಲ್ಲೆಲ್ಲೂ ಹೇಳಬೇಡ…!!!
ಅಯ್ಯೋ… ಮಾಡಿದ್ದೇ ಇದೆಯಂತೆ ಇನ್ನು ಹೇಳಿದ್ದರಿಂದ ನಿನ್ನ ಮಾನಹೋಗುತ್ತೇನೋ ಪಿಶಾಚಿ..! ಎಂದೆ..
ಅಲ್ಲಾ ಈಗೆಲ್ಲಾ ಫ್ರೆಂಡ್ಸ್ ಸರ್ಕಲ್ ಅಂದ್ರೆ ಇದೆಲ್ಲಾ ಇರುತ್ತೆ ರಾಮಣ್ಣಾ…
ಹೌದೌದು.. ಆದರೆ ನಮ್ಮೂರಿನ ಕೆಲ ಬ್ರಾಹ್ಮಣರಾಗಿದ್ದವ್ರು ಮದ್ಯ ಕುಡಿದು ತೂರಾಡಿದ್ದನ್ನು ನೋಡಿದ್ದೆ.. ಆದರೆ ಮೀನು ತಿಂದಿದ್ದು ನೋಡಿರಲಿಲ್ಲ..! ಥೂ..ಹೊಲಸ..ತೊಲಗಿಲ್ಲಿಂದ..! ಎಂದೆ… ಸಾರಾಯಿ ಕುಡಿದು ತೂರಾಡಿದ್ದಲ್ಲದೇ ಆ ಹೊಲಸು ನಥದ ಮೀನೂ ತಿಂತೀರಲ್ಲೋ.. ನೀವೇನು ಬ್ರಾಹ್ಮಣರೋ.. ಅಥವಾ..? ಎಂದೆ..
ಅದಕ್ಕವನು ಅದೆಲ್ಲಾ ಕಾಮನ್ ರಾಮಣ್ಣಾ.. ತೀರ್ಥ ತಕ್ಕೊಳ್ಳುವಾಗ ಪ್ರಸಾದ ಚೂರು ಕಟುವಾಗಿರೋದು ಬೇಕೇ ಬೇಕು.. ಅನ್ನೋದಾ…!!
ಕೈಯ್ಯಲ್ಲಿ ಯಾವುದೋ ಬಡಿಗೆಯಿತ್ತು… ಇನ್ನೊಂದು ಮಾತಾಡಿ ಇಲ್ಲೇ ನಿಂತರೆ ನಿನ್ನನ್ನುಸೊಂಟ ಮುರೀತೇನೆ..ಮೊದಲು ತೊಲಗು ಇಲ್ಲಿಂದ ಎಂದೆ…
ರಾಮಣ್ಣಾ ಯಾರಿಗೂ ಊಹೂಂ.. ಎಂದು ಕೈಯ್ಯ ಬೆರಳನ್ನು ತನ್ನ ಬಾಯಿಗಿಟ್ಟು ಹೇಳಬೇಡ ಎಂದು ಸನ್ನೆ ಮಾಡೂತ್ತ ಓಡಿಹೋದ..!
***********************
ಇದು ನಮ್ಮ ಧರ್ಮ ಕೇಂದ್ರಗಳಲ್ಲಿದ್ದು ಸಂಸ್ಕಾರಪೂತವಾದ ಯುವ ಜನಾಂಗದ ಕಥೆ..!
ಇವರು ಊರಿಗೆ ಬಂದರೂ ಪೇಟೆಯಲ್ಲಿ ಹೋಟೇಲಿನಲ್ಲಿ ಕೊಠಡಿ ಮಾಡಿ ಉಳಿಯುವುದಕ್ಕೆ ಕಾರಣ..! ಅನುಷ್ಠಾನ ಮಾಡುವುದಕ್ಕೆ ಮನೆಯಲ್ಲಿ ಆಗುವುದಿಲ್ಲವಲ್ಲಾ..!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ‎
28/12/2016

source: https://www.facebook.com/groups/112978152162634/permalink/1171985569595215/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s