“ಸಾಮಾನು ಸಾಚಾ” ಎಂಬ ಸರ್ಟಿಫಿಕೇಟ್ ತೋರಿಸ್ತಾನಂತೆ ತೊನೆಯಪ್ಪ! ಹಹಹ..

“ಸಾಮಾನು ಸಾಚಾ” ಎಂಬ ಸರ್ಟಿಫಿಕೇಟ್ ತೋರಿಸ್ತಾನಂತೆ ತೊನೆಯಪ್ಪ! ಹಹಹ..
[ನೂತನ ಜಗದ ಜಾಣಪದ ಕಥೆ]

ಅಲ್ರಪಾ, ಅದೊಂದು ಕಾಲದಾಗ ಶ್ರಾದ್ಧ ಭಟ್ಟನ ಪಿಳ್ಳೆಮರಿ ಪಿಂಡವೊಂದು ಹುಲುಸಾಗಿ ಮೇವುಳ್ಳ ಮಠವನ್ನು ಕಂಡು ಸ್ವಾಮಿಯಾಗಲು ಮುಂದೆ ಬಂತಂತೆ. ಆ ಮಠಕ್ಕೋ ಆಗ ಹತ್ತಾರು ಹೆಗಡೆಗಳು! ಯಾರೊಬ್ಬರ ಮಾತನ್ನೂ ಇನ್ನೊಬ್ಬರು ಒಪ್ಪುತ್ತಿರಲಿಲ್ಲ. ಪ್ರತಿಯೊಬ್ಬರೂ ತಾವು ಹೇಳಿದವನನ್ನೇ ಮುಂದೆ ಸ್ವಾಮಿ ಮಾಡಬೇಕು ಅಂತ ಹಠ ಹಿಡಿದಿದ್ರಂತೆ.

ಮರದಮೇಲಿದ್ದ ಕಾಗೆಯ ಬಾಯಲ್ಲಿದ್ದ ಮಾಂಸದ ತುಂಡನ್ನು ಕಂಡ ನರಿ,” ಕಾಗಕ್ಕಾ ಕಾಗಕ್ಕಾ ನಿನ್ನ ರಾಗ ಬಾಳ ಚಂದ ಐತಿ…ಒಮ್ಮೆ ಹಾಡು ನೋಡುವಾ” ಅಂತ ಕಾಗೆಗೆ ಪಂಪುಹೊಡೆದು, ಬಾಯಿಬಿಡಿಸಿ, ಪೆದ್ದ ಕಾಗೆ “ಕಾ..ಕಾ..ಕಾ” ಎಂದಾಗ, ಕೆಳಗೆ ಬಿದ್ದ ಮಾಂಸದ ತುಂಡನ್ನು ಕಚ್ಚಿಕೊಂಡು ಓಡಿಹೋಯಿತಂತಲ್ಲ? ಅದರಂತೆ ಮಠದಲ್ಲಿ ಮರಿಸ್ವಾಮಿ ಮಾಡೋ ವಿಚಾರಕ್ಕೆ ಮುಂದಾದ ಸಮಿತಿಯ ವಿಷಯ ಶ್ರಾದ್ಧಭಟ್ಟನ ಕಿವಿಗೆ ಬಿದ್ದುಬಿಟ್ಟಿತು. ಬಹಳಕಾಲದಿಂದ ಹಣದದಾಹದಲ್ಲಿದ್ದ ಶ್ರಾದ್ಧಭಟ್ಟ ತನ್ನ ಪಿಂಡವನ್ನು ವಶೀಲಿಯ ಮುಖಾಂತರ ಮಠದ ಸನ್ಯಾಸಿ ಮಾಡಿದ್ದೇ ಮುಂದೆ ಬಹುದೊಡ್ಡ ದುಷ್ಟಕೂಟದ ಕತೆಗೆ ನಾಂದಿಹಾಡಿಬಿಟ್ಟಿತು!

ತಾವು ಹೇಳಿದ್ದೇ ಪರಮವೇದ ಎಂದುಕೊಂಡಿದ್ದ ಸಮಿತಿಯ ಬೋಳೆ ಸದಸ್ಯರಿಗೆ ಬೋಳೆಣ್ಣೆ ಹಚ್ಚಿ, “ನೀವು ಹೇಳಿದಂಗೆ ಕೇಳ್ತಾನೆ, ತಾವುಗಳು ಕೃಪಾ ಮಾಡಬೇಕು” ಅಂತ ಅಡ್ಡಡ್ಡ ಬಿದ್ದು ಕೈಮುಗಿದು, ಗಣನೆಗೆ ಬೇಕಾದಂತೆ ತಿದ್ದಿತಯಾರಿಸಿದ ಜಾತಕವನ್ನು ಅವರ ಮಡಿಲಿಗೆ ಹಾಕಿ, ನವರಂಧ್ರಗಳಲ್ಲೂ ಅತಿವಿನಯವನ್ನು ಸೂಸುತ್ತ ನಿಂತ ಶ್ರಾದ್ಧಭಟ್ಟನಿಗೆ ಮರಿ ಪಿಂಡವನ್ನು ಕರೆತರುವಂತೆ ಆದೇಶ ಸಿಕ್ಕಿದ್ದೇ ಸಿಕ್ಕಿದ್ದು, ಅರೆಕ್ಷಣದಲ್ಲಿ ಮಾಯಾ ಜಿಂಕೆಯಂತೆ ಚಂಗನೆ ಜಿಗಿದು ಮನೆಗೋಡಿ, ಮೊದಲೇ ತಲೆತುಂಬಿ ತಯಾರಿಯಿಟ್ಟಿದ್ದ ಪಿಂಡವನ್ನು ಮಠಕ್ಕೆ ಕರೆತಂದುಬಿಟ್ಟ.

ಅಲ್ಲಿಂದಾಚೆಗೆ ನಡೆದದ್ದೆಲ್ಲ ಎಂತೆಂತಹ ಘನಂದಾರಿ ಕಚ್ಚೆಹರುಕು ಕೆಲಸಗಳೆಂಬುದನ್ನು ಸಮಾಜದ ಎಲ್ಲರೂ ಬಲ್ಲರಾದರೂ, ದುಷ್ಟಕೂಟದ ದುರಾಡಳಿತದಲ್ಲಿ ಮರ್ಯಾದೆಗೆ, ಬಹಿಷ್ಕಾರಕ್ಕೆ ಅಂಜಿ ಷಂಡರಂತೆ ಬದುಕುತ್ತ ಅರ್ಧದಶಕವನ್ನು ಕಳೆದಿದ್ದು, ರಾವಣೇಶ್ವರನ ಪ್ರಜೆಗಳ ಬದುಕಿನ ಕತೆಯಂತೆ ಇತಿಹಾಸ ನಿರ್ಮಿಸಿದೆ! ಪಾನಿಪೂರಿ ಬಾವಯ್ಯ ಮಠದ ದಿವಾನನಾಗಿ ಠಿಕಾಣಿ ಹೂಡಿದಮೇಲೆ ಭಕುತ ಜನರ ಕಿವಿಗೆ ಹೂವಿಡಲು ಮೊದಲಿಟ್ಟ ಹಾವಾಡಿಗ ಮಠದ ಹಾದರದ ಚಾದರದ ವೀರ್ಯವಾಸನೆ ಈಗ ಎಲ್ಲೆಲ್ಲೂ ಬಹಳ ಘಾಟನ್ನು ಬೀರುತ್ತಿದೆ.

ಮಾಸ್ವಾಮಿ ತೊನೆಯಪ್ಪನವರು ವೀರ್ಯವಾಸನೆಯ ಚಾದರದಮೇಲೆ ದನವನ್ನು ಮಲಗಿಸಿ ಸಗಣಿ ನಾತದಿಂದ ಅದನ್ನು ಮುಚ್ಚಲು ಮಹಾಪ್ರಯತ್ನ ನಡೆಸುತ್ತಿದ್ದರೂ, ಸಗಣಿ ವಾಸನೆಯನ್ನೂ ಮೀರಿಸಿ ಹೊರಸೂಸುತ್ತಿರುವ ವೀರ್ಯದ ಕಮಟು ವಾಸನೆಯನ್ನು ಅನುಭವಿಸುತ್ತಿರುವ ಜನ, ಗುಸುಗುಸು ಪಿಸುಪಿಸು ಆಡಿಕೊಳ್ತಿರೋದು ಮಾಸ್ವಾಮಿಗಳ ಕಿವಿಗೆ ಬಿದ್ದಾಗ, ಅಂತಹ ಜನರನ್ನೆಲ್ಲ ಮಟ್ಟಹಾಕಲು ಮಾಸ್ವಾಮಿಗಳು ಹಾದರ ಸೇವಾ ಮಹಾಮಂಡಳವನ್ನೇ ನಿರ್ಮಿಸಿದ್ದಾರೆ! ದಾಖಲೆಗೆ ಸಿಗದಂತೆ ಮರೆಯಲ್ಲಿ ನಿಂತು ಸಕಲ ರೀತಿಯಲ್ಲೂ ಪ್ರಚೋದನೆ ನೀಡುತ್ತಿದ್ದಾರೆ ದಕ್ಷಿಣದ ರಾಂಪಾಲರು!

ಜನಮರುಳೋ ಜಾತ್ರೆ ಮರುಳೋ ಇಮ್ಮಡಿ ವಿಶ್ವೇಶ್ವರಯ್ಯನ ಗ್ಯಾಂಗು ಮರುಳೋ ಗೊತ್ತಾಗಲಿಲ್ಲ! ಅಂತೂ ಹಾಗೊಂದು ಗಾದೆ ಹುಟ್ಟಿಕೊಂಡಿದ್ದಂತೂ ನಿಜ. ಸಾಮಾನುಸ್ವಾಮಿಯ ಅಖಂಡ ಸಾಮಾನು ಭಜನೆಗೆ ಕುಳಿತ ಇಮ್ಮಡಿ ವಿಶ್ವೇಶ್ವರಯ್ಯ ಪತ್ರಮಂಡಲಿ ಜನತೆಯನ್ನು ಹಳ್ಳಕ್ಕೆ ನೂಕುವ ಸರ್ವಸಾಹಸ ನಡೆಸುವುದಕ್ಕೆ ಹಾವಾಡಿಗ ಮಠದಿಂದ ಧುರವೀಳ್ಯ-ಗುತ್ತಿಗೆಯನ್ನು ಪಡೆದಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಸಾಮಾನುಸ್ವಾಮಿಯ ಸೋ ಕಾಲ್ಡ್ ಭಜಕರು ಯಾರ ವಿರುದ್ಧ ಏನನ್ನು ಬೇಕಾದರೂ ಹೇಳಬಹುದು; ಆದರೆ ಸರ್ವಸಂಗ ಪರಿತ್ಯಾಗಿಯೆಂಬ ಅಂಗಿ ಧರಿಸಿದ ಕಾವಿವೇಷಧಾರಿ ತೊನೆಯಪ್ಪ ಮರೆಯಲ್ಲಿ ಸಾಮಾನು ಝಳಪಿಸುವುದನ್ನು ಮಾತ್ರ ಯಾರೂ ಕಂಡರೂ ಕಾಣಬಾರದು; ತಮ್ಮ ಮಠದ ಪೀಠದ ಸ್ವಾಮಿ ಹೀಗೆ ಕಚ್ಚೆಹರುಕನೆಂಬುದು ಗೊತ್ತಾದ ಮೇಲೂ ಕಾಣಿಕೆಕೊಟ್ಟು ಕಾಲಿಗೆ ಬಿದ್ದು ಬಣ್ಣದ ಅಕ್ಕಿ ಪಡೆಯಲು ಮುಂದೆ ಬರಬೇಕು, ಬರುತ್ತಲೇ ಇರಬೇಕು, ತನ್ನ ಹಾದರದ ಚಟುವಟಿಕೆಗಳಿಗೆ ಹಣ ಹರಿಯುತ್ತಲೇ ಇರಬೇಕು, ಸಭೆ-ಸಮಾರಂಭಗಳಲ್ಲಿ ತನಗೆ ಜೈಕಾರ ಹಾಕುತ್ತಲೇ ಇರಬೇಕು, ಭಕ್ತರ ಮನೆಯ ಮಹಿಳೆಯರೊಡನೆ ಸಂಭೋಗಿಸೋದು ತನ್ನ ಹಕ್ಕು, ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ ಎಂಬ ಧೋರಣೆ ಸಾಮಾನುಸ್ವಾಮಿಯದ್ದು.

ಕೆಲವು ದೇಶಗಳಲ್ಲಿರುವ ಸೋ ಕಾಲ್ಡ್ ಯೂನಿವರ್ಸಿಟಿಗಳು ಕಣ್ಣಿಗೆ ಕಾಣದ ಯಾವುದೋ ದೇಶದ ಗೊತ್ತುಗುರಿ ಇಲ್ಲದ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಿಬಿಡ್ತಾರಲ್ಲ? ಅಂತಹ ಗೌಡಾ ಪಡೆದ ವ್ಯಕ್ತಿಯ ಘನಂದಾರಿ ಕೆಲಸ-ಸಾಧನೆ ಅಕ್ಕಪಕ್ಕದೋರಿಗೂ ಗೊತ್ತಿರೋದಿಲ್ಲ!! ಅಲ್ಲವೇ? ಅದರಂತೆ ಸಾಮಾನುಸ್ವಾಮಿಗಳ ಸದ್ಯದ ಕೆಲವು ವಸಾಹತುಗಳಿಗೆ ಅದಾರೋ ಸರ್ಟಿಫಿಕೇಟು ಕೊಟ್ಟವ್ರಂತೆ ಕಣ್ರೀ.

“ನಮಗೆ ಸರ್ಟಿಫಿಕೇಟೇನೂ ಬೇಕಾಗಿರಲಿಲ್ಲ. ಆದರೆ ನಮ್ಮ ವಿರುದ್ಧ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಹೇಳುತ್ತ ಷಡ್ಯಂತ್ರ ಮಾಡೋರ ವಿರುದ್ಧ ನಾವು ಸರಿಯಿದ್ದೇವೆ, ನಮ್ಮದೆಲ್ಲ ಸರಿಯಿದೆ ಎಂದು ತೋರಿಸೋದಕ್ಕೆ ದಾಖಲೆ ಇರಲಿ ಅಂತ ಹಾಗೆ ಪಡೆದುಕೊಂಡಿದ್ದೇವೆ. ನಾವು ಮಾಡ್ತಿರೋದೆಲ್ಲ ಪಕ್ಕಾ ಟ್ರಾನ್ಸ್ಪರೆಂಟ್ ಕೆಲಸ. ಯಾವಾಗ ಯಾರು ಬೇಕಾದರೂ ಸರ್ಟೀಫಿಕೇಟು ನೋಡಿ ತಿಳಿದುಕೊಳ್ಳಬಹುದು” ಅಂತ ಮಾಸ್ವಾಮಿಗಳು ಅದಾವನನ್ನೋ ಬಿಟ್ಟು ಪ್ರಬಂಧ ಬರೆಸಿದ್ರಂತೆ.

ಅಲ್ಲರೀ, ಮಠಗಳ ಅಥವಾ ಸನ್ಯಾಸಿಗಳ ಬಗ್ಗೆ ಅಥವಾ ಧಾರ್ಮಿಕ ವಸಾಹತುಗಳ ವ್ಯವಹಾರ ವೈಖರಿಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಯಾರೋ “ಅದರ ಒಳಹೊರಗನ್ನೆಲ್ಲ ಅಳೆದು ಕೊಟ್ಟಿದ್ದೇವೆ” ಅಂತ ಹೇಳಿದರೆ, ಅಮೆರಿಕದ ರಾಬರ್ಟ್ ಜಾನು “ಗುಮ್ಮಣ್ಣ ಹೆಗಡೇರ ಪಕ್ಕದ ಮನೆಯ ಸುಬ್ಬಣ್ಣ ಹೆಗಡೇರ ನಿತ್ಯಮನೆವಾರ್ತೆ ಕೆಲಸವನ್ನೆಲ್ಲ ಅರಿತು ಸರ್ಟಿಫಿಕೇಟು ಕೊಡುತ್ತಿದ್ದೇವೆ” ಅಂತ ಹೇಳಿದ ಹಾಗಲ್ಲವೇ?

ಸುಬ್ಬಣ್ಣ ಹೆಗಡೇರು ನಿತ್ಯ ಏನೇನು ಮಾದ್ತಾರೆ, ಅವರ ಆದಾಯ ಮೂಲ ಯಾವ್ಯಾವುದು? ಅವರು ಮನೆಯಲ್ಲಿ ಎಷ್ಟು ಹೊತ್ತು ಇರ್ತಾರೆ? ಅವರಿಗೆ ಮನೆಯಲ್ಲಿ ಧರ್ಮಪತ್ನಿ ಇರುವಂತೆ ಬೇರೆಡೆಗೂ ಅದನ್ನೇ ಹೋಲುವ ಸಂಬಂಧಗಳಿದ್ದಾವೋ? ಅಜ್ಜನ ವಯಸ್ಸಿನ ಸುಬ್ಬಣ್ಣನವರ ಕಚ್ಚೆ ಗಟ್ಟಿ ಇದೆಯೋ ಹೇಗೆ? ಮನೆಯ ಆದಾಯದ ಲೆಕ್ಕಕ್ಕೇ ಸಿಗದ ಆದಾಯವನ್ನು ಅವರು ಯಾವುದಕ್ಕೆಲ್ಲ ಬಳಕೆ ಮಾಡ್ತಾರೆ? ಊರಲ್ಲಿರಬಹುದಾದ ಸೆರಗು ಹಾಸುವ ಸಖಿಯರಿಗೆ ಬಂಗಾರ ಮಾಡಿಸಿಕೊಟ್ಟರೋ? ಅಥವಾ ನಗದನ್ನೇ ಕೊಟ್ಟರೋ? ಇಂಥದ್ದೆಲ್ಲ ಪಕ್ಕದಲ್ಲೇ ವಾಸಿಸುವ ಗುಮ್ಮಣ್ಣ ಹೆಗಡೇರಿಗೇ ತಿಳಿಯೋದಿಲ್ಲ, ಅಂತಾದ್ರಲ್ಲಿ ಅಮೆರಿಕ ವಾಸಿ ರಾಬರ್ಟ್ ಜಾನು, “ಸುಬ್ಬಣ್ಣ ಹೆಗಡೇರು ವ್ಯಾವಹಾರಿಕವಾಗಿ ಬಹಳ ಟ್ರಾನ್ಸ್ಪರೆಂಟು” ಅಂತ ಸರ್ಟಿಫಿಕೇಟು ಕೋಡೋದು ಹಾಸ್ಯಾಸ್ಪದ ಅಲ್ಲವೇ? ಇಮ್ಮಡಿ ವಿಶ್ವೇಶ್ವರಯ್ಯನವರು ಇದಕ್ಕೇನಂತಾರೆ?

“ಆ ಹಾಳಾದ್ ಹಾದರದ ಸಾಮಾನುಸ್ವಾಮಿಯನ್ನೇಕೆ ಸಪೋರ್ಟ್ ಮಾಡ್ತೀಯಯ್ಯಾ? ನಿಂಗೆ ಮಾಡೋಕೆ ಬೇರೆ ಕೆಲಸ ಇಲ್ಲವಾ?” ಅಂತ ಧರ್ಮಣ್ಣನೋರು ಪಾಂಡ್ಯನನ್ನು ಚೆನ್ನಾಗಿ ಗದರಿಕೊಂಡರಂತೆ ಅಂತ ಸುದ್ದಿ. ಪಾಪ ಸಾಮಾನುಸ್ವಾಮಿಯ ಹಾವಾಡಿಗ ಮಠದಲ್ಲಿ ಅದೆಷ್ಟು ಕಳ್ಳಹಣ ಇಟ್ಟಿದ್ದನೋ ಅವನವಸ್ಥೆ ಅವನಿಗಷ್ಟೇ ಗೊತ್ತು! ಇಟ್ಟ ಹಣ ಮರಳಿ ಬರಲೆಂಬುದಕ್ಕೆ ಪ್ರಯತ್ನವಂತೂ ನಡೆದಿತ್ತು; ಆದರೆ ಈಗೀಗ ಅದನ್ನೂ ಬಹಳ ಬಿರುಸಾಗಿ ಕೇಳುವಂತಿಲ್ಲ; ಗೊತ್ತಾದರೆ ಮೈಕು ಹಿಡಿದವರು ಬರ್ತಾರೆ! ಅಂತೂ ಅಲ್ಲಲ್ಲಿ, ಅಲ್ಲಲ್ಲಿ ಮುಸುಕಿನ ಗುದ್ದಾಟಗಳು ನಡೀತಾ ಇದಾವೆ ಅನ್ನೋದೇ ಸಮಾಧಾನ ಅಂತಿದ್ರು ನಮ್ಮ ಗುಮ್ಮಣ್ಣ ಹೆಗಡೇರು.

“When wealth is lost, nothing is lost; when health is lost, something is lost; when character is lost, everything is lost.” ಅಂತದೆ ಇಂಗ್ಲೀಷ್ ಗಾದೆ. ಬಹುವಿವಾಹ ಪದ್ಧತಿಯನ್ನು ಒಪ್ಪಿಕೊಂಡು ವಿವಾಹ ಮತ್ತು ವಿಚ್ಛೇದನಗಳಲ್ಲೇ ಜೀವನದ ಬಹಳ ಕಾಲ ಹಾಳುಮಾಡಿಕೊಳ್ಳುವಂತಹ ಜನರಿರುವ ದೇಶದಲ್ಲೇ ಇಂತಹ ಗಾದೆಯೂ ಇದೆ; ಅದೂ ಜನಸಾಮಾನ್ಯರಿಗೆ! ಸುಸಂಸ್ಕೃತ ಸಂಸ್ಕೃತಿಯನ್ನು ಹೊಂದಿರುವ, ರಾಮಜೀವನವನ್ನು ಆದರ್ಶವೆಂದು ಪರಿಗಣಿಸಿದ ದೇಶದಲ್ಲಿ ಸರ್ವಸಂಗ ಪರಿತ್ಯಾಗಿಯಾಗಿ ಬದುಕಲಿಚ್ಚಿಸುವ ಸನ್ಯಾಸಿಯೊಬ್ಬ ಬದುಕೋದಕ್ಕೆ ನಿಯಮಗಳಿರಬೇಕಲ್ಲವೇ?

ಹಾಗಾದರೆ ಇಲ್ಲಿನ ಕೆಲವರು ಮದುವೆಯಾಗಿ ಕೆಲವು ಕಾಲ ಸಂಸಾರ ಮಾಡಿ, ನಂತರ ಸನ್ಯಾಸಿಯಾದ ದಾಖಲೆ ಇದೆಯಲ್ಲ ಅಂತ ನೀವು ಪ್ರಶ್ನಿಸಬಹುದಲ್ಲ? ಸನ್ಯಾಸಿಗಳಲ್ಲಿ ಹಲವು ವಿಧಗಳು ಮತ್ತು ಪರಂಪರೆಗಳು ಇವೆ. ಆಯಾಯ ಪರಂಪರೆಗೆ ಅದರದ್ದೇ ಆದ ಮಹಾನುಶಾಸನ ಎಂಬುದಿರುತ್ತದೆ. ಪರಂಪರೆಯ ಮೂಲಪುರುಷ ಅದನ್ನು ಹೇಳಿರುತ್ತಾರೆ. ಹಾಗಿದ್ದಾಗ, ಸನ್ಯಾಸಿಯಾದವ ತನ್ನ ಪರಂಪರೆಯ ರೀತಿರಿವಾಜುಗಳಿಗೆ ಧಕ್ಕೆಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಲ್ಲವೇ?

ನಿತ್ಯ ಮೂರು ಹೊತ್ತು ಮಹಿಳೆಯರೊಂದಿಗೆ ’ಏಕಾಂತ’ವಾಡುತ್ತ, ಮುಂದೆ ಕೆಲವೇ ದಿನಗಳಲ್ಲಿ ವಿದೇಶೀ ಕಂಪನಿಗಳಿಂದ “ಸ್ವಾಮಿಗಳ ಸಾಮಾನು ವ್ಯವಹಾರ ನೂರಕ್ಕೆ ನೂರರಷ್ಟು ಟ್ರಾನ್ಸ್ಪರೆಂಟ್ ಆಗಿದೆ” ಎಂದು ಸರ್ಟಿಫಿಕೇಟ್ ಪಡೆಯಬಹುದು; ಯಾಕೆಂದರೆ ಈ ಜಗತ್ತಿನಲ್ಲೀಗ ಪ್ರಶಸ್ತಿ, ಸರ್ಟಿಫಿಕೇಟುಗಳಿಗೆ ಬೆಲೆಯೇ ಇಲ್ಲ ಎಂಬಂತಾಗಿದೆ; ಇಮ್ಮಡಿ ವಿಶ್ವೇಶ್ವರಯ್ಯನವರೇ ಹೇಳಿದಂತೆ ಪಡೆದುಕೊಳ್ಳಲಾಗದವರು ಹೊಡೆದುಕೊಳ್ತಾರೆ. ಹೊಡೆದುಕೊಳ್ಳುವ ಯೋಜನೆ ರೂಪಿಸುವ ದುಷ್ಟಕೂಟಕ್ಕೆ ’ಸುವರ್ಣ ಮಂತ್ರಾಕ್ಷತೆ’ ನೀಡಿ ಗೌರವಿಸಲಾಗುತ್ತದೆ!

ಈಗೀಗ ಸಾಮಾನುಸ್ವಾಮಿಯ ದಬ್ಬಾಳಿಕೆ ಹೇಗಿದೆ ಮತ್ತು ಎಷ್ಟರಮಟ್ಟಿಗಿದೆ ಎಂಬುದರ ’ರುಚಿ’ ಪಾಪ ಕೆಲವರಿಗೆ ಅನುಭವಕ್ಕೆ ಬಂದಿದೆಯಂತೆ. ಅಂಗೈ ಕೊಟ್ಟರೆ ಮುಂಗೈ ನುಂಗುವ ಸಾಮಾನುಸ್ವಾಮಿ ತನ್ನನ್ನು ದೀರ್ಘಕಾಲ ರಕ್ಷಿಸಿದ್ದ ’ಮನೆಮಂದಿ’ಯನ್ನೆಲ್ಲ ಆಡಿಕೊಂಡಿದ್ದಾನೆ; ಅಷ್ಟಾಗಿ ದಾಖಲೆಗೆ ಸಿಗದ ನಾಜೂಕುತನದಲ್ಲಿ ತನ್ನ ಬಳಗದಿಂದ ಅಟ್ಯಾಕ್ ಮಾಡಿಸಿದ್ದಾನೆ. ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಎಲ್ಲಿಗೆ ಹೋಗಬಹುದು ಅಂತ ನೋವನ್ನು ಅನುಭವಿಸಿದವರು ಹೇಳಿಕೊಳ್ಳುತ್ತಿದ್ದಾರೆ.

ಸಾಕಷ್ಟು, ಬೇಕಷ್ಟು ಅವ್ಯಾಹತ ಪುರಾವೆಗಳು ಸಿಗುತ್ತಲೇ ಇದ್ದರೂ, ಒಮ್ಮೆಯೂ ಎಳೆದೊಯ್ದು ಏರೋಪ್ಲೇನ್ ಹತ್ತಿಸಿ ವಿಚಾರಿಸದೆ, ಕಳ್ಳಯ್ಯ-ಕುಳ್ಳಯ್ಯರನ್ನು ರಕ್ಷಿಸಿದ ತಪ್ಪಿಗೆ, ರಕ್ಷಣೆ ನೀಡಿದವರನ್ನೆ ಕಂದಕಕ್ಕೆ ತಳ್ಳುವ ಖತರ್ನಾಕ್ ಪ್ಲಾನುಗಳು ರೆಡಿಯಾಗುತ್ತಿವೆ ಹುಷಾರು! ಎಲ್ಲಿಯವರೆಗೆ ಶತಮಾನಗಳಿಂದ ಭಕ್ತರು ಕೊಟ್ಟಿದ್ದ ಬಂಗಾರವು ಕರಗಿ ಖರ್ಚಾಗುವುದಿಲ್ಲವೋ ಅಲ್ಲೀವರೆಗೆ ನಾವಿದ್ದೇವೆಗಳನ್ನು ಸಲಹುತ್ತ ಸಾಮಾನುಸ್ವಾಮಿ ಹಾರಾಡುತ್ತಲೇ ಇರುತ್ತಾನೆ.

Thumari Ramachandra
28/12/2016

source: https://www.facebook.com/groups/1499395003680065/permalink/1882178658735029/

source: https://thumari.wordpress.com

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s