ರಾಮಚಂದ್ರಾಪುರ ಮಠಕ್ಕೆ ಆಡಳಿತಅಧಿಕಾರಿ ನೇಮಿಸುವ ಸ್ಥಿತಿ ಬಂದಿಲ್ಲ

ರಾಮಚಂದ್ರಾಪುರ ಮಠಕ್ಕೆ ಆಡಳಿತಅಧಿಕಾರಿ ನೇಮಿಸುವ ಸ್ಥಿತಿ ಬಂದಿಲ್ಲ

ಉದಯವಾಣಿ, Dec 16, 2016, 10:43 AM IST

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಆಡಳಿತ ಸಂಪೂರ್ಣ ಪಾರದರ್ಶಕವಾಗಿದ್ದು, ಆಡಳಿತಾಧಿಕಾರಿ ನೇಮಿಸುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮುಂದೆ ಮಠದ ಪರ ವಕೀಲರು ವಾದ ಮಂಡಿಸಿದ್ದಾರೆ.

ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರ ಮುಂದೆ ವಾದ ಮಂಡಿಸಿದ ವಕೀಲರು, ಅರ್ಜಿದಾರರು ಯಾವುದೇ ಪುರಾವೆಗಳಿಲ್ಲದೆ ಮಠದ ಬಗ್ಗೆ ದೋಷಾರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಇದಕ್ಕೂ ಮುನ್ನ ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲರು, ರಾಘವೇಶ್ವರ ಭಾರತೀ ಸ್ವಾಮೀಜಿಯವರು ಲೌಕಿಕ ವ್ಯವಹಾರಗಳಲ್ಲಿ ಭಾಗಿಯಾಗಿ¨ªಾರೆ. ಹಲವಾರು ಟ್ರಸ್ಟ್‌ಗಳನ್ನು ಹುಟ್ಟುಹಾಕಿ ಹಣ ಸಂಗ್ರಹಿಸಿದ್ದು, ಆ ಹಣ ಏನಾಯಿತು ಎಂಬ ಮಾಹಿತಿ ಇಲ್ಲ. ಅಲ್ಲದೆ, ನ್ಯಾಯಾಲಯದ ಆದೇಶದಲ್ಲಿ ಬರೆದಿರುವಂತೆ ಮಹಿಳೆಯ ಜೊತೆ ಒಪ್ಪಿತ ಸಂಬಂಧ ಹೊಂದಿದ್ದರು. ಆದ್ದರಿಂದ ಅವರು ಒಂದು ಸಾರ್ವಜನಿಕ ಸಂಸ್ಥೆಯಾದ ಮಠದ ಪ್ರಮುಖರಾಗಿ ಮುಂದುವರಿಯಬಾರದು ಎಂದು ಹೇಳಿ ಈ ಕುರಿತು ಲಿಖೀತ ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಠದ ಪರ ವಕೀಲರು, ಅರ್ಜಿದಾರರು ಯಾವುದೇ ಪುರಾವೆಗಳಿಲ್ಲದೆ ದೋಷಾರೋಪಣೆ ಮಾಡುತ್ತಿ¨ªಾರೆ. ಈ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ. ಮೇಲಾಗಿ ರಾಮಚಂದ್ರಾಪುರ ಮಠವು ಸಾರ್ವಜನಿಕ ಸಂಸ್ಥೆಯಲ್ಲ. ಮಠಕ್ಕೆ ಬಂದು ಹೋಗಲು ಹಾಗೂ ದೇಣಿಗೆ ಕೊಡಲು ಯಾವುದೇ ಒತ್ತಡ ಯಾರ ಮೇಲೂ ಇಲ್ಲ. ಸ್ವಾಮೀಜಿಯವರ ನೇಮಕಾತಿಯನ್ನು ಯಾವುದೇ ಸಮಿತಿ ಮಾಡುವುದಲ್ಲ. ಹಿಂದಿನ ಗುರುಗಳು ಉತ್ತರಾಧಿಕಾರಿಯನ್ನು ನೇಮಿಸಿದ್ದರು ಎಂದು ಹೇಳಿದರಲ್ಲದೆ, ರಾಮಚಂದ್ರಾಪುರ ಮಠದ ಎಲ್ಲಾ ಹಣಕಾಸಿನ ಲೆಕ್ಕ ಪತ್ರಗಳು ಪರಿಣತ ಲೆಕ್ಕಪರಿಶೋಧಕರಿಂದ ದೃಢೀಕೃತವಾಗಿದ್ದು, ಕಾನೂನಿನನ್ವಯ ಇವೆ ಎಂದು ವಿವರಿಸಿದರು.

ರಾಘವೇಶ್ವರ ಸ್ವಾಮೀಜಿಯವರ ಮೇಲೆ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣ ಸುಳ್ಳು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದ ನಂತರವೂ ಒಪ್ಪಿತ ಸಂಬಂಧ ಎಂದು ಹೇಳಿದೆ ಎಂದು ವಾದಿಸುವುದು ಸರಿಯಲ್ಲ. ಈ ವಿಚಾರದಲ್ಲಿ ಅರ್ಜಿದಾರರು ನ್ಯಾಯಾಲಯದ ಆದೇಶವನ್ನು ತಿರುಚಿ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರಲ್ಲದೆ, ತಮ್ಮ ವಾದ ಸಮರ್ಥಿಸಿಕೊಳ್ಳಲು ತೀರ್ಪಿನ ಪ್ರತಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದರು. ಬಳಿಕ ಮುಖ್ಯ ಕಾರ್ಯದರ್ಶಿಯವರು ವಿಚಾರಣೆಯನ್ನು ಡಿ. 19ಕ್ಕೆ ಮುಂದೂಡಿದರು.

source: http://www.udayavani.com/kannada/news/state-news/185239/math-was-never-hire-ramachandrapura-adalitaadhikari

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s