‘ಲಾಜಿಕ್’ ಚೆನ್ನಾಗಿದೆ…..!

‘ಲಾಜಿಕ್’ ಚೆನ್ನಾಗಿದೆ…..!

ಪ್ರಕರಣದ ವಿಚಾರಣೆ ನಡೆಸುತ್ತಿರುವವರು ಈ ರಾಜ್ಯದ ಉಚ್ಚ ನ್ಯಾಯಾಲಯದ ಉಚ್ಚ ನ್ಯಾಯಾಧೀಶರು.

ಅವರು ಮೂಲತಃ ಮನುಷ್ಯರು..!

ಮನುಷ್ಯನಾದವನಿಗಿರಬೇಕಾದ ಸಹಜ ಸ್ವಭಾವಗಳಾದ ಸ್ವಧರ್ಮ ಪಾಲನೆಯಂತಹ ಎಲ್ಲ ಕರ್ತವ್ಯಗಳಿಗೆ ಅವರೂ ಬದ್ಧರು.

ಮಾನ್ಯ ನ್ಯಾಯಾಧೀಶರು ಮನುಷ್ಯ ಸಹಜ ನಂಬಿಕೆಯಾದ ಧರ್ಮಾಚರಣೆಗೆ ಸಂಬಂಧಿಸಿದಂತೇ ಶ್ರೀ ಸ್ವರೂಪಾನಂದಭಾರತೀ ಶ್ರೀಗಳ ಭಕ್ತರಾಗಿದ್ದು ಅವರ ಶಿಷ್ಯತ್ವ ಗ್ರಹಣ ಮಾಡಿದ್ದಾರೆ. ಆದರೆ ಒಬ್ಬ ಸರಕಾರದ ಉನ್ನತ ವ್ಯಕ್ತಿಯಾಗಿ ಅವರು ಈ ದೇಶದ ಆಧಾರ ಸ್ಥಂಭವಾದ ಧಾರ್ಮಿಕ ವ್ಯವಸ್ಥೆಯೊಳಗೆ ಎಲ್ಲ ಮಠ ಮಾನ್ಯಗಳಿಗೂ ದೇವಸ್ಥಾನಗಳಿಗೂ ತಮ್ಮ ಶಕ್ತ್ಯಾನುಸಾರ ಭೇಟಿಯಿತ್ತು ಅಲ್ಲಿ ಆಶೀರ್ವಾದ ಪಡೆದಿರುವುದು ಸಹಜ. ಅದರಂತೇ ನಮ್ಮ ರಾಜ್ಯಕ್ಕಾಗಮಿಸಿದಾಗ ಅವರು ನಮ್ಮ ಉಡುಪಿ, ಶೃಂಗೇರಿಯಂತಹ ಮಠಗಳಿಗೂ ಕೊಲ್ಲೂರು, ಧರ್ಮಸ್ಥಳದಂತಹ ದೇವಾಲಯಗಳಿಗೂ ಭೇಟಿಯಿತ್ತಿರುವುದು ಸಹಜವಾಗಿದೆ.

ಸ್ವರೂಪಾನಂದ ಭಾರತೀ ಶ್ರೀಗಳು ಈ ದೇಶದ ಸನಾತನ ಪರಂಪರೆಯ ಧರ್ಮಪೀಠಗಳೆನ್ನಿಸಿದ ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ ಚತುರಾಮ್ನಾಯ ಪೀಠದ ಸಂನ್ಯಾಸಿ ಯತಿಗಳು. ಅವರೂ ಮನುಷ್ಯರು. ಅವರ ಇನ್ನಿತರೇ ವಿಚಾರಗಳೇನೇ ಇದ್ದರೂ ಜಗದ್ಗುರು ಸ್ಥಾನದಲ್ಲಿದ್ದ ಓರ್ವ ಸಂನ್ಯಾಸಿಗಳು ಎಂಬುದನ್ನು ಮರೆಯಬಾರದು..!

ಶ್ರೀ ಶಂಕರಭಗವತ್ಪಾದರಿಂದ ರಚಿತವಾಗಿದೆಯೆನ್ನಲಾದ ರಾಮಚಂದ್ರಾಪುರ ಮಠವನ್ನು ಅವರು ಅದು ಶಂಕರಾಚಾರ್ಯ ಪೀಠವಲ್ಲ ಎಂದು ಎಲ್ಲಿ ಹೇಳಿದ್ದರೋ ತಿಳಿದಿಲ್ಲ. ಅದಕ್ಕೆ ಸಾಕ್ಷ್ಯ ನೀಡಬೇಕಿದೆಯಷ್ಟೇ….!

ಶ್ರೀ ಸ್ವರೂಪಾನಂದ ಭಾರತೀ ಸ್ವಾಮಿಗಳ ಶಿಷ್ಯರಾದ ಮಾನ್ಯ ನ್ಯಾಯಾಧೀಶರು ನ್ಯಾಯಪೀಠದ ಮೇಲೆ ಕುಳಿತಾಗ ಅವರ ಶಿಷ್ಯತ್ವದ ಆಧಾರದಲ್ಲಿಯೇ ತೀರ್ಪು ಯಾ ವಿಚಾರಣೆ ನಡೆಸುತ್ತಾರೆ ಎಂದು ಹೇಗೆ ನಿರ್ಣಯಿಸಿದರೋ ಗೊತ್ತಿಲ್ಲ..! ಅದಕ್ಕೂ ಪುರಾವೆಯೊದಗಿಸಬೇಕಾಗುತ್ತದೆ…!
ಸ್ವರೂಪಾನಂದ ಭಾರತೀ ಶ್ರೀಗಳು ಈಗ್ಗೆ ಕೆಲದಿನಗಳ ಹಿಂದೆ ಕರ್ನಾಟಕದ ಹಾಸನ ನಗರಕ್ಕಾಗಮಿಸಿದ ಸಂದರ್ಭದಲ್ಲಿ ಗೋಕರ್ಣ ಮತ್ತು ರಾಮಚಂದ್ರಾಪುರ ಮಠ ವಿಚಾರವಾಗಿ ಅವರು ರಾಮಚಂದ್ರಾಪುರ ಮಠದ ನಿಲುವುಗಳಿಗೆ ಪೂರಕವಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ಇತ್ತಿದ್ದರು. ಇದರಿಂದ ಶ್ರೀಗಳಲ್ಲಿ ರಾಮಚಂದ್ರಾಪುರ ದ ಬಗ್ಗೆ ಸದಭಿಪ್ರಾಯವಿದೆ ಎಂಬುದು ತಿಳಿಯುತ್ತದೆ. ಅದೂ ಅಲ್ಲದೇ ಇದನ್ನು ರಾಮಚಂದ್ರಾಪುರ ಮಠದ ಭಕ್ತರು ಅದನ್ನು ಜಾಲತಾಣಗಳಲ್ಲಿ ಪತ್ರಿಕಾವರದಿಗಳೊಂದಿಗೆ ಉಲ್ಲೇಖಿಸಿದ್ದಾರೆ…!

ಇದಾದ ಕೆಲವೇ ದಿನಗಳಲ್ಲಿ ಮಾನ್ಯ ಮುಖ್ಯ ನ್ಯಾಯಾಧೀಶರು ವಿಚಾರಣೆಯ ಸಂದರ್ಭದಲ್ಲಿ ತಾವು ಮಾಡಿದ ‘ಆಬ್ಸರ್ವೇಶನ್’ ಸಮಯದಲ್ಲಿ ಈ ಮಠೀಯ ವ್ಯಕ್ತಿಯ ಕುಕೃತ್ಯಗಳ ಕುರಿತಾಗಿ ತುಂಬ ಮಾರ್ಮಿಕವಾದ ಮಾತುಗಳನ್ನಾಡಿದ್ದಾರೆ. ಇದರಿಂದ ಇದೂವರೆಗೆ ನ್ಯಾಯಾಧೀಶರ ಕುರಿತು ಏನೊಂದೂ ಅಭಿಪ್ರಾಯವನ್ನು ವ್ಯಕ್ತ ಪಡಿಸದ ಮಠೀಯ ವ್ಯಕ್ತಿಯಾಗಲೀ( ಆರೋಪಿ) ಅಥವಾ ಆರೋಪಿತನ ಭಕ್ತರೆಂದುಕೊಳ್ಳುವವರಾಗಲೀ ಈಗ ಏಕಾಏಕಿ ಮಾನ್ಯ ನ್ಯಾಯಾಧೀಶರನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೇ ಮನವಿ ಸಲ್ಲಿಸುತ್ತಾರೆ. ಅದೂ ಸರಿಯಾದುದಲ್ಲದ ಮಾರ್ಗದಲ್ಲಿ…!

ವಸ್ತುತಃ ಒಂದು ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡಿರುವಾಗ ದೂರುದಾರ ಅಥವಾ ಆರೋಪಿಗಳಿಬ್ಬರಲ್ಲಿ ಒಬ್ಬರಿಗೆ ತನ್ನ ಪ್ರಕರಣದ ವಿಚಾರಣೆಯು ಈಗಿರುವ ನ್ಯಾಯಾಧೀಶರಿಂದ ನಡೆದರೆ ತನಗೆ ನ್ಯಾಯ ದೊರೆಯುವ ಭರವಸೆಯಿಲ್ಲ ಎಂದು ಕಂಡುಬಂದ ಪಕ್ಷದಲ್ಲಿ ಸ್ವಃ ನ್ಯಾಯಾಲಯಕ್ಕೆ ಇಂತಹ ಮನವಿಯನ್ನು ಸಲ್ಲಿಸಬಹುದಾಗಿದೆ. ಹಾಗಿದ್ದರೂ ಅದನ್ನು ಮಾನ್ಯ ಮಾಡಲೇಬೇಕೆಂಬ ಯಾವ ನಿಯಮವೂ ಇಲ್ಲ. ಏಕೆಂದರೆ ಇದು ಒಂದು ಚಾಳಿಯಾಗಿ ಮುಂದೆ ಎಲ್ಲ ನ್ಯಾಯಾಧೀಶರನ್ನೂ ಇದೇ ರೀತಿ ಪರಿಭಾವಿಸಬಹುದಾದ ಲಕ್ಷಣಗಳಿವೆ.
ಇಲ್ಲಿ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಮನವಿ ಮಾಡಿಕೊಳ್ಳುವ ವ್ಯಕ್ತಿ ದೂರುದಾರನೂ ಅಲ್ಲ, ಆರೋಪಿಯೂ ಅಲ್ಲ. ಅದೂ ಅಲ್ಲದೇ ಅದಕ್ಕೆ ಕೊಡುವ ಕಾರಣಗಳು ಮುಖ್ಯವಾಗಿ ಮಾನ್ಯ ನ್ಯಾಯಮೂರ್ತಿಗಳ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡ ಧರ್ಮದ ವಿಚಾರವನ್ನೇ ಪ್ರಶ್ನೆ ಮಾಡಿದಂತಿದೆ. ಕಾರಣ ಇದು ನ್ಯಾಯಾಂಗ ನಿಂದನೆಗಿಂತ ಘೋರವಾದ ಅಪರಾಧವೆಂದೇ ಪರಿಗಣಿತವಾಗಬೇಕು…!

ಇನ್ನು ಪೂಜ್ಯ ಸ್ವರೂಪಾನಂದ ಭಾರತೀ ಶ್ರೀಗಳು ಈ ದೇಶದ ಧಾರ್ಮಿಕ ವ್ಯವಸ್ಥೆಯೊಳಗಿನ ವ್ಯವಹಾರಗಳಲ್ಲಿ ಮಾತನಾಡಬಲ್ಲ ಅಧಿಕಾರವುಳ್ಳವರು. ಸಮಾಜದ ಎಲ್ಲ ಸ್ಥರ ದ ಜನರೂ ಅವರನ್ನು ಗೌರವಿಸುವುದು ಅವರ ಸಂದರ್ಶನ ಸಂಪರ್ಕ ಹೊಂದುವುದು ಸಾಮಾನ್ಯ. ಆ ನಿಟ್ಟಿನಲ್ಲಿ ಅವರನ್ನು ಯಾರು ಬೇಕಾದರೂ ಸಂದರ್ಶಿಸಬಹುದಾಗಿದೆ.

ಈ ರಾಮಚಂದ್ರಾಪುರ ಮಠದ ಆರೋಪಿ ವ್ಯಕ್ತಿಯ ಮೇಲೆ ಆರೋಪ ಮಾಡಿದ ಮಹಿಳೆಯ ಸಂಬಂಧಿಗಳು ಈ ದೇಶದಲ್ಲಿ ನಡೆಯುತ್ತಿರುವ ಸಂಸ್ಕೃತ ವಿಷಯಕವಾದ ವಿಚಾರದಲ್ಲಿ ಮಹತ್ವದ ವ್ಯಕ್ತಿಗಳಾಗಿದ್ದವರು. ಕಾರಣ ಸಂಸ್ಕೃತ ಮತ್ತು ಮಠಮಾನ್ಯಗಳ ಸಂಬಂಧ ಹೊಸತೇನಲ್ಲ.. ಅದರಂತೇ ಮಾನ್ಯ ಚ.ಮೂ.ಕೃಷ್ಣಶಾಸ್ತ್ರಿಗಳು ಪೂಜ್ಯ ಸ್ವರೂಪಾನಂದ ಭಾರತೀ ಶ್ರೀಗಳನ್ನು ಭೇಟಿಯಾಗಿರಬಹುದು. ಅದನ್ನು ಈ ಪ್ರಕರಣದ ಜೊತೆ ಜೋಡಿಸಲು ಹೊರಟಿರುವ ದೂರುದಾರರು ಸೂಕ್ತ ಪುರಾವೆ ಕೊಡಬೇಕಾಗುತ್ತದೆ.

ಒಂದು ವೇಳೆ ಘನ ನ್ಯಾಯಾಲಯವು ಇದನ್ನು ಅಲಕ್ಷಿಸಿದಲ್ಲಿ….! ಮುಂದೆ ತನ್ನ ಪ್ರಕರಣವನ್ನು ವಿಚಾರಣೆ ನಡೆಸಲು ತನ್ನ ಭಕ್ತಗಡಣದಲ್ಲೇ ಇರುವ ಓರ್ವ ನ್ಯಾಯಾಧೀಶರಿಗೆ ಪ್ರಕರಣವನ್ನು ವಹಿಸಿ ಎಂದೂ ಕೇಳಿಕೊಳ್ಲಬಹುದಾಗಿದೆ….!

ಹಾಗೊಂದುವೇಳೆ ಮುಖ್ಯ ನ್ಯಾಯಾಧೀಶರು ಪೂಜ್ಯ ಸ್ವರೂಪಾನಂದ ಭಾರತಿಗಳು ಹೇಳಿದಂತೇ ನ್ಯಾಯಾಲಯದಲ್ಲಿ ತೀರ್ಪುಗಳನ್ನು ಕೊಡುತ್ತಾರೆ ಎಂದು ಪರೋಕ್ಷವಾಗಿಯೂ ಭಾವಿಸುವುದು ಭಾರತೀಯ ಮಾನಸಿಕತೆಗೆ ತಕ್ಕುದಲ್ಲ. ಅವರ ಮೇಲೆ ಇಂತಹ ಕಿಂಚಿತ್ ಆರೋಪವನ್ನು ಮಾಡುವುದರ ಮೂಲಕ ಅವರು ಈ ಪ್ರಕರಣದ ವಿಚಾರಣೆಯಿಂದ ನ್ಯಾಯ ಪೀಠ ಬಿಟ್ಟುಕೊಡಬೇಕು ಎಂಬ ಮನಸ್ಥಿತಿತ್ಯುಳ್ಲವರು ಅದೇ ತನ್ನ ಆರಾಧ್ಯ ದೈವ ಎಂದುಕೊಂಡ ಮಠೀಯ ವ್ಯಕ್ತಿ ಅತ್ಯಾಚಾರದಂತಹ ಗುರುತರ ಆರೋಪಕ್ಕೆ ಒಳಗಾಗಿದ್ದರೂ ಒಮ್ದು ಧರ್ಮ ಪೀಠದ ಸಂನ್ಯಾಸಿಯಾದವನಿಗೆ ತಕ್ಕುದಲ್ಲದ ವ್ಯವಹಾರ ಅದೆಂದು ತಿಳಿದಿದ್ದರೂ ಪೀಠದಿಂದ ಕೆಳಗಿಳಿದು ಹೋಗಬೇಕು ಎಂದು ಏಕೆ ಹೇಳುವುದಿಲ್ಲ..!

ಅಲ್ಲದೇ ಮೂರನೇ ವ್ಯಕ್ತಿಯಾಗಿ ಘನ ನ್ಯಾಯಾಲಯ ಹಾಗೂ ನ್ಯಾಯಾಧೀಶರ ಗೌರವಕ್ಕೆ ಧಕ್ಕೆ ತರುವ ಮಾತುಗಳನ್ನು ಮಾಧ್ಯಮಗಳಲ್ಲಿ ಹೇಳಿರುವುದರಿಂದ ತಕ್ಕ ವಿಚಾರಣೆಯನ್ನು ನಡೆಸಬೇಕಿದೆ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ
20/11/2016

source: https://www.facebook.com/groups/161894837550032/permalink/193357371070445/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s