ರಾಘವಶ್ರೀ ಕೇಸ್‌ ಸಿಜೆ ವಿಚಾರಣೆ ವಿರೋಧಿಸಿ ಹೈಕೋರ್ಟಿಗೆ ಅರ್ಜಿ

ರಾಘವಶ್ರೀ ಕೇಸ್‌ ಸಿಜೆ ವಿಚಾರಣೆ ವಿರೋಧಿಸಿ ಹೈಕೋರ್ಟಿಗೆ ಅರ್ಜಿ

ಉದಯವಾಣಿ, Nov 20, 2016, 3:45 AM IST

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಸ್ಥಾನದಿಂದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಕೆಳಗಿಳಿಸಬೇಕು ಮತ್ತು ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬೇಕು ಎಂದು ಕೋರಿ ಕೆಲವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿ ಎಸ್‌. ಕೆ. ಮುಖರ್ಜಿ ಹಿಂದೆ ಸರಿಯಬೇಕು ಎಂದು ಅಖೀಲ ಹವ್ಯಕ ಮಹಾಸಭಾ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.

ರಾಮಚಂದ್ರಾಪುರ ಮಠವು ಶಂಕರಾಚಾರ್ಯರ ಹೆಸರು ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ದ್ವಾರಕಾ ಪೀಠದ ಸ್ವರೂಪಾನಂದ ಸ್ವಾಮೀಜಿಯವರ ಜತೆ ಅರ್ಜಿದಾರರು ಸಂಪರ್ಕ ಹೊಂದಿದ್ದಾರೆ. ಜತೆಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ| ಎಸ್‌.ಕೆ. ಮುಖರ್ಜಿ ಅವರು ಸ್ವರೂಪಾನಂದ ಸ್ವಾಮೀಜಿಗಳ ಭಕ್ತರಾಗಿದ್ದಾರೆ. ಆದ ಕಾರಣ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಮನವಿ ಮಾಡಲಾಗಿದೆ.

ಮುಖರ್ಜಿ ಅವರು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ “ನಾನು ಸ್ವರೂಪಾನಂದ ಸ್ವಾಮೀಜಿಯವರ ಕಟ್ಟಾ ಅನುಯಾಯಿ. ಇಂದು ನಾನು ಈ ಸ್ಥಾನಮಾನ ಪಡೆದಿರುವುದಕ್ಕೆ
ಸ್ವರೂಪಾನಂದ ಸ್ವಾಮೀಜಿ ಅವರ ಆಶೀರ್ವಾದವೇ ಕಾರಣ’ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಸ್ವರೂಪಾನಂದ ಸ್ವಾಮೀಜಿ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ಮುಖ್ಯ ನ್ಯಾಯಮೂರ್ತಿಗಳು ಪದೇ ಪದೇ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದರು.

ಸ್ವರೂಪಾನಂದ ಸ್ವಾಮೀಜಿಗಳು ಮುಖ್ಯ ನ್ಯಾಯಮೂರ್ತಿಗಳ ಮನೆಯಲ್ಲಿ ಎರಡು ದಿನ ತಂಗಿದ್ದರು. ಹೀಗಾಗಿ ಅವರು ಈ ಅರ್ಜಿ ವಿಚಾರಣೆ ನಡೆಸಿದರೆ ನ್ಯಾಯ ಸಿಗುವುದಿಲ್ಲ ಎಂಬ ಅನುಮಾನ ಭಕ್ತರ ವಲಯದಲ್ಲಿದೆ ಎಂದು ಹೇಳಲಾಗಿದೆ.
ರಾಘವೇಶ್ವರ ಸ್ವಾಮೀಜಿಯವರನ್ನು ಪೀಠದಿಂದ ಕೆಳಗಿಳಿಸಿ ಮತ್ತು ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಎದುರ್ಕುಳ ಈಶ್ವರ ಭಟ್ಟ ಎಂಬುವರು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಅರ್ಜಿ ಸಂಬಂಧ ನ. 14ರಂದು ನಡೆದ ವಿಚಾರಣೆ ವೇಳೆ ರಾಘವೇಶ್ವರ ಸ್ವಾಮೀಜಿಯವರು ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಮೌಖೀಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿರುವ ಅಖೀಲ ಹವ್ಯಕ ಮಹಾಸಭಾದ ನಿರ್ದೇಶಕ ಮಹಾಬಲೇಶ್ವರ ಭಟ್‌ ಅವರು ಮುಖ್ಯ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುವಂತೆ
ಕೋರಿದ್ದು, ಅದಕ್ಕೆ ಕೆಲವು ಕಾರಣಗಳನ್ನು ನೀಡಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಮಾಡುವಂತೆಯೂ ಕೋರಿದ್ದಾರೆ.

ಪ್ರಮಾಣ ಪತ್ರದಲ್ಲಿ ಏನಿದೆ?: ಆಡಳಿತಾಧಿಕಾರಿ ನೇಮಕ ಮಾಡುವ ಕುರಿತ ಮನವಿ ಪರಿಗಣಿಸಿ ನಿರ್ಧಾರ ಪ್ರಕಟಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್‌ 2016ರ ಏಪ್ರಿಲ್‌ 28ರಂದು ಆದೇಶ ಮಾಡಿದೆ. ಮರುದಿನವೇ ಮಠದ ಪರ ವಕೀಲರು ಹಾಜರಾಗಿ ಆ ಆದೇಶ ಹಿಂಪಡೆಯುವಂತೆ ಕೋರಿ ಮಧ್ಯಂತರ ಅರ್ಜಿ
ಸಲ್ಲಿಸಿದರೂ, ಈವರೆಗೆ ಆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿಲ್ಲ. ಅಧೀನ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ರಾಘವೇಶ್ವರ ಸ್ವಾಮೀಜಿ ಅವರು ರಾಮಕಥಾ ಗಾಯಕಿಯೊಂದಿಗೆ ಒಪ್ಪಿತ ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದಾಗಿ ಉಲ್ಲೇಖೀಸಿದೆ ಎಂದು ಅರ್ಜಿದಾರರ ಪರ ವಕೀಲರು ನ. 14ರಂದು ನಡೆದಿದ್ದ ಅರ್ಜಿ ವಿಚಾರಣೆ ವೇಳೆ ಹೇಳಿದ್ದರು.

ಆದರೆ, ಅದು ತಪ್ಪಾಗಿ ಅರ್ಥೈಸಿದ ಹೇಳಿಕೆಯಾಗಿದೆ. ಈ ವಿಷಯವನ್ನು ಸ್ವಾಮೀಜಿ ಪರ ವಕೀಲರು ಸರಿಯಾಗಿ ವಿವರಿಸಲು ಮುಂದಾದಾಗ ಅದನ್ನು ಅರ್ಜಿದಾರರ ಪರ ವಕೀಲರು ತಡೆದರು. ಹೀಗಿರುವಾಗ ಅರ್ಜಿದಾರರ ಪರ ವಕೀಲರ ಹೇಳಿಕೆ ಆಧರಿಸಿ “ರಾಘವೇಶ್ವರ ಸ್ವಾಮೀಜಿ ಕೆಳಗಿಳಿಯವುದು ಒಳಿತು’ ಎಂದು ಮುಖ್ಯ ನ್ಯಾಯಮೂರ್ತಿಗಳು
ಮೌಖೀಕ ಹೇಳಿಕೆ ನೀಡಿದ್ದಾರೆ. ಅರ್ಜಿಯನ್ನು ಸಂಪೂರ್ಣವಾಗಿ ವಿಚಾರಣೆ ನಡೆಸಿ ಪರಿಶೀಲಿಸದೆ ಇಂತಹ ಹೇಳಿಕೆ ನೀಡುವ ಮೂಲಕ ಮುಖ್ಯ ನ್ಯಾಯಮೂರ್ತಿಗಳು ಮಠದ ಧಾರ್ಮಿಕ ಭಾವನೆ ಮತ್ತು ಅನುಯಾನಿಯಮಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಮತ್ತು ಸ್ವರೂಪಾನಂದ ಸ್ವಾಮೀಜಿ ಅವರು ಜತೆಗಿರುವ ಫೋಟೋಗಳನ್ನು ಪ್ರಮಾಣಪತ್ರದಲ್ಲಿ ಲಗತ್ತಿಸಲಾಗಿದೆ.

source: http://www.udayavani.com/kannada/news/state-news/179932/cj-high-court-hearing-the-case-filed-against-raghavasri

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s