ಜೈಲಿಗೆ ಹೋಗಲೂ ಸಿದ್ಧ: ರಾಘವಶ್ರೀ ಭಕ್ತರು

ಜೈಲಿಗೆ ಹೋಗಲೂ ಸಿದ್ಧ: ರಾಘವಶ್ರೀ ಭಕ್ತರು

ಉದಯವಾಣಿ, Nov 21, 2016, 3:45 AM IST

ಬೆಂಗಳೂರು: ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಪೂರ್ವಾಗ್ರಹ ಪೀಡಿತರಾಗಿ ಹೇಳಿಕೆ ನೀಡಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಮತ್ತೂಮ್ಮೆ ಒತ್ತಾಯಿಸಿರುವ ಅಖೀಲ ಹವ್ಯಕ ಮಹಾಸಭಾದ ನಿರ್ದೇಶಕ ಮಹಾಬಲೇಶ್ವರ ಭಟ್‌ ಮತ್ತು ವಕೀಲ ದಿನೇಶ್‌, ಈ ವಿಚಾರದಲ್ಲಿ ನ್ಯಾಯಾಂಗ ನಿಂದನೆ ಎದುರಾದರೆ ಜೈಲಿಗೆ ಹೋಗಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶನಿವಾರ ಹೈಕೋರ್ಟ್‌ಗೆ ಮಹಾಬಲೇಶ್ವರ ಭಟ್‌ ಪ್ರಮಾಣಪತ್ರ ಸಲ್ಲಿಸಿದ್ದರು. ಇದೇ ವಿಚಾರ ಸಂಬಂಧ ಭಟ್‌ ಮತ್ತು ವಕೀಲ ದಿನೇಶ್‌ ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಪ್ರಮಾಣಪತ್ರದಲ್ಲಿನ ಸಾಕ್ಷ್ಯಗಳ ಕುರಿತು ವಿವರಿಸಿದರು. ಅತ್ಯಾಚಾರ ಆರೋಪದಿಂದ ರಾಘವೇಶ್ವರ ಸ್ವಾಮೀಜಿಯನ್ನು ಮುಕ್ತಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಮಕಥಾ ಗಾಯಕಿ ಸಲ್ಲಿಸಿದ ಮೇಲ್ಮನವಿ ಬೇರೊಂದು ಪೀಠದಲ್ಲಿ ವಿಚಾರಣೆ ಆರಂಭವಾಗುವ ಮುನ್ನವೇ ಮುಖ್ಯ ನ್ಯಾಯಮೂರ್ತಿಗಳು ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

ಅಲ್ಲದೆ, ತಾವು ದ್ವಾರಕಾ ಪೀಠಾಧ್ಯಕ್ಷ ಸ್ವರೂಪಾನಂದ ಸ್ವಾಮೀಜಿಯ ಪರಮ ಶಿಷ್ಯರು ಎಂದು ಸ್ವತಃ ಎಸ್‌.ಕೆ.ಮುಖರ್ಜಿ ಒಪ್ಪಿಕೊಂಡಿದ್ದು, ಅವರು ಒಟ್ಟಿಗೆ ಇರುವ ಫೋಟೋಗಳು ಮಾಧ್ಯಮದಲ್ಲಿ ವರದಿಯಾಗಿವೆ. ಇನ್ನು ರಾಮಚಂದ್ರಾಪುರ ಮಠದ ವಿರುದ್ಧ ಷಡ್ಯಂತ್ರ ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಎದುರ್ಕಳ ಈಶ್ವರ ಭಟ್ಟ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಸಲಹೆಗಾರ ಮತ್ತು ರಾಮಕಥಾ ಗಾಯಕಿಯ ಭಾವ ಚ.ಮೂ.ಕೃಷ್ಣಶಾಸಿŒ, ಎಂ.ಎನ್‌.ಭಟ್‌, ಸಿಎಚ್‌ಎಸ್‌ ಭಟ್‌ ಅವರು ಸ್ವರೂಪಾನಂದ ಸ್ವಾಮೀಜಿಯನ್ನು ಭೇಟಿ ಮಾಡಿ, ರಾಘವೇಶ್ವರ ಸ್ವಾಮೀಜಿ ಪೀಠದಿಂದ ಕೆಳಗಿಳಿಸುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ನ್ಯಾಯಮೂರ್ತಿ ಮೇಲೆ ಪ್ರಭಾವ ಬೀರುವಂತೆ ಕೋರಿದ್ದಾರೆ ಎಂದು ದೂರಿದರು.

ಮಹಾಬಲೇಶ್ವರ್‌ ಭಟ್‌ ಮಾತನಾಡಿ, ಪ್ರಕರಣವನ್ನು ಕೂಲಂಕಷವಾಗಿ ಪರೀಕ್ಷಿಸದೆಯೇ ಮುಖ್ಯ ನ್ಯಾಯಮೂರ್ತಿಗಳು ರಾಘವೇಶ್ವರ ಸ್ವಾಮೀಜಿ ವಿರುದ್ಧ ಪೂರ್ವಾಗ್ರಹ ಪೀಡಿತರಾಗಿ ಹೇಳಿಕೆ ನೀಡಿರುವುದರಿಂದ ಮಠದ ಭಕ್ತಾದಿಗಳಲ್ಲಿ ಆತಂಕ ಮೂಡಿದೆ. ಹಾಗೆಯೇ, ಸ್ವರೂಪಾನಂದ ಸ್ವಾಮೀಜಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರಿರುವ ಮತ್ತು ಅವರ ಪೀಠದಲ್ಲಿ ವಿಚಾರಣೆ ಪಾರದರ್ಶಕವಾಗಿಲ್ಲ ನಡೆಯುತ್ತಿಲ್ಲ ಎಂಬ ಅನುಮಾನ ಭಕ್ತಾದಿಗಳ ವಲಯದಲ್ಲಿ ಗಾಢವಾಗಿ ಮೂಡಿದೆ. ಹೀಗಾಗಿ, ನಾವು ಪ್ರಮಾಣಪತ್ರ ಸಲ್ಲಿಸಿ ಪೂರಕ ದಾಖಲೆ ಸಲ್ಲಿಸಿದ್ದೇವೆ. ಸೋಮವಾರ ನಡೆಯಲಿರುವ ಅರ್ಜಿ ವಿಚಾರಣೆ ವೇಳೆ ಮತ್ತಷ್ಟು ಅಂಶ ಕೋರ್ಟ್‌ ಗಮನಕ್ಕೆ ತರಲಾಗುವುದು ಎಂದರು.

ಜತೆಗೆ, ಅರ್ಜಿ ಮುಖ್ಯ ನ್ಯಾಯಮೂರ್ತಿ ಅವರ ಪೀಠದಲ್ಲಿ ವಿಚಾರಣೆ ಮುಂದುವರಿದರೆ ರಾಮಚಂದ್ರಾಪುರ ಮಠಕ್ಕೆ ಅನ್ಯಾಯವಾಗುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇಲ್ಲ. ಆದ್ದರಿಂದ ಅರ್ಜಿ ವಿಚಾರಣೆಯಿಂದ ಮುಖ್ಯ ನ್ಯಾಯಮೂರ್ತಿಗಳು ಹಿಂದೆ ಸರಿದು, ಬೇರೊಂದು ಪೀಠಕ್ಕೆ ವಿಚಾರಣೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ರಾಮಚಂದ್ರಾಪುರ ಮಠದ ಪೀಠದಿಂದ ಕೆಳಗಿಳಿಸಬೇಕು ಮತ್ತು ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಎದುರ್ಕಳ ಈಶ್ವರ ಭಟ್ಟ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ತಮ್ಮನ್ನು ಪ್ರತಿವಾದಿಯಾಗಿ ಸೇರ್ಪಡೆಗೊಳಿಸುವಂತೆ ಕೋರಿ ಅಖೀಲ ಹವ್ಯಕ ಮಹಾಸಭಾದ ನಿರ್ದೇಶಕ ಮಹಾಬಲೇಶ್ವರ ಭಟ್‌ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳು ಮುಖ್ಯ ನ್ಯಾ.ಎಸ್‌.ಕೆ.ಮುಖರ್ಜಿ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆ ಹಂತದಲ್ಲಿದೆ. ಅರ್ಜಿಯ ಸಂಬಂಧ ಅ.14ರಂದು ನಡೆದಿದ್ದ ವಿಚಾರಣೆ ವೇಳೆ ರಾಘವೇಶ್ವರ ಸ್ವಾಮೀಜಿಯವರು ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು. ಸ್ವಾಮೀಜಿ ವಿರುದ್ಧ ರಾಮಕಥಾ ಗಾಯಕಿ ಮಾಡಿರುವ ಆರೋಪ ಸುಳ್ಳು ಎಂದು ಸೆಷನ್ಸ್‌ ನ್ಯಾಯಾಲಯ ಮಾಡಿದ ಆದೇಶ ರದ್ದುಪಡಿಸುವುದಾಗಿ ಮೌಖೀಕವಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಮಹಾಬಲೇಶ್ವರ ಭಟ್‌, ಶ್ರೀರಾಮಚಂದ್ರಾಪುರ ಮಠಕ್ಕೆ ಅಡಳಿತಾಧಿಕಾರಿ ನೇಮಕ ಮಾಡಲು ಆದೇಶಿಸುವಂತೆ ಕೋರಿರುವ ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಒತ್ತಾಯಿಸಿದ್ದಾರೆ.

source: http://www.udayavani.com/kannada/news/state-news/180033/ready-to-go-to-jail-raghavasri-devotees

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s