“ಅವಿವೇಕಿಗಳ ಸಮಾಜ” ಅಂದ ಅವನು! ಮುಂದೆ ಹಾಗಾಗಲು ಬಿಡಬೇಡಿ

“ಅವಿವೇಕಿಗಳ ಸಮಾಜ” ಅಂದ ಅವನು! ಮುಂದೆ ಹಾಗಾಗಲು ಬಿಡಬೇಡಿ

ಗುಮ್ಮಣ್ಣ ಹೆಗಡೇರು ಸಮಾಜದ ನಗಣ್ಯ ವ್ಯಕ್ತಿಯೇನಿಲ್ಲ. ಹಾಗಂತ ಸಮಾಜದಲ್ಲಿ ನಗಣ್ಯರಿಲ್ಲವೇ? ಬಹಳ ಕಡಿಮೆ. ಆದರೆ ನಗಣ್ಯರು ಎನಿಸಿಕೊಂಡವರು ತಮ್ಮ ಸ್ವಂತ ಬೌದ್ಧಿಕ ಸಾಮರ್ಥ್ಯದ ಅರಿವಿಲ್ಲದೆ ಮೋಡಕವಿದ ಸೂರ್ಯನಂತಿದ್ದಾರಷ್ಟೆ. ಆಮೂಲಾಗ್ರವಾಗಿ ಗ್ರಹಿಸಿದಾಗ ಇಡೀ ಸಮಾಜವೂ ಪ್ರತಿಭಾವಂತರಿಂದಲೇ ಕೂಡಿದೆ; ಬುದ್ಧಿ ಹೆಚ್ಚಾದಲ್ಲಿ ಪ್ರತಿಯೊಬ್ಬರಲ್ಲೂ ತಾವೇ ಲೀಡರ್ ಎಂಬ ದುರಭಿಮಾನ ಹೊಮ್ಮುತ್ತದೆ.

“ಛೆ ಛೆ! ಅವನನ್ನು ಕೇಳಿಕೊಂಡು ನಾನು ಮಾಡ್ಬೇಕೆ?”, “ಆ ಮನೆ ಹಾಳಾದ ನಾಲ್ಕೂರ್ ಹೆಗಡೆ ಮಾತನ್ನ ಯಾರು ಕೇಳ್ತಾರೆ”, “ಆಚಮನೆ ಗಣಪತಿ ಭಟ್ಟನ ಯಜಮಾನಿಕೆಯಾದ್ರೆ ನಾನಂತೂ ಬರೋದಿಲ್ಲ”, “ಮುಂದಾಳತ್ವ ನಿಮ್ಗೇ ಕೊಟ್ಟಿದ್ರೆ ಕಾರ್ಯಕ್ರಮ ಎಷ್ಟು ಚೆನ್ನಾಗಿ ಹೆಂಗಿರ್ತಿತ್ತು ಅಂತ ನಮ್ಮೂರವ್ರೆಲ್ಲ ನನ್ನ ಹತ್ರ ಹೇಳ್ತಾ ಇದ್ದಾರೆ.” ಇದೇ ರೀತಿಯ ಮಾತುಗಳು. ಯಾವುದೇ ಕಾರ್ಯದಲ್ಲೂ ಒಬ್ಬನ ನಾಯಕತ್ವವನ್ನು ಒಪ್ಪಿಕೊಳ್ಳುವ ಇಂದಿರಾ ಕಾಂಗ್ರೆಸ್ಸಿನಂತಲ್ಲ ಈ ಸಮಾಜ. ಇಲ್ಲಿ ಬ್ರಿಗೇಡ್ ಗಳದ್ದೇ ಕಾರುಬಾರು; ಮನೆಮನೆಗೂ ಒಂದೊಂದು ಬ್ರಿಗೇಡು!

ಹಿಂದೆಯೂ ಹಾಗಾಗಿದ್ದಕ್ಕೆ ಅತಿಚಿಕ್ಕ ಸಮುದಾಯಕ್ಕೆ ಮೂರು ಮೂರು ಮಠಗಳು; ಯಾಕೆ ಬೇಕಿತ್ತು? ಯಾಕೆ ಬೇಕಿತ್ತು ಅಂದರೆ ತಿಮ್ಮಣ್ಣ ಹೆಗಡೇರಿಗೆ ಗುಮ್ಮಣ್ಣ ಹೆಗಡೇರ ಮುಖಂಡತ್ವ ಹಿಡಿಸ್ತಿರಲಿಲ್ಲ. ಶಂಭು ಭಟ್ಟರಿಗೆ ಶಂಕರ ಭಟ್ಟರನ್ನು ಕಂಡರೆ ಆಗ್ತಿರಲಿಲ್ಲ. ಒಂದೇ ಮಠದಲ್ಲಿ ಮುಖಮುಖ ನೋಡಿಕೊಂಡು ಇರೋದಕ್ಕೆ ಬೇಜಾರು. ಮಠದ ಸ್ವಾಮಿಗಳು ಯಾರೋ ಒಬ್ಬರ ಜೊತೆ ಎರಡು ಮಾತಾಡಿಬಿಟ್ರೆ ಮೂರನೇ ದಿನಕ್ಕೇ ಮತ್ತೊಂದು ಮಠವನ್ನು ಕಟ್ಟುವ ದುರಭಿಮಾನ!! ಹಾಗಾಗೇ ಸಮಾಜ ಹಿಂದೆ ಆ ಮಠ ಈ ಮಠ ಅಂತ ಹೋಳಾಗಿದ್ದು. ವಾಸ್ತವವಾಗಿ ಆಮ್ನಾಯ ಮಠವೇ ಸಾಕಾಗಿತ್ತು; ಇವೆಲ್ಲ ಡೊಂಬರಾಟಗಳ ಅವಶ್ಯಕತೆಯಿರಲಿಲ್ಲ.

ಚಂದವಿರುವ ಸನ್ಯಾಸಿ ಬೇಕೆಂದರೆ ಸಮಾಜದಲ್ಲಿ ಬಹಳಜನ ತಯಾರಾಗಿಬಿಡ್ತಾರೆ ಈಗ! ಯಾಕೆಂದರೆ ಎಲ್ಲರಿಗೂ ಗೊತ್ತಾಗಿಬಿಟ್ಟಿದೆ ಜನರ ವೀಕ್ ನೆಸ್ಸು. ಸನ್ಯಾಸಿ ವೇಷದಲ್ಲಿ ಇದ್ದರಾಯ್ತು, ಎಲ್ಲಿದ್ದರೇನು? ಯಾವುದೋ ನೌಕರಿಯಲ್ಲಿ ನಸುಕಿನಿಂದ ಮಧ್ಯರಾತ್ರಿಯವರೆಗೆ ಗುದ್ದಾಡೋದಕ್ಕಿಂತ ಅದೇ ಜಾಬು ಆರಾಮೆಂದು ಕಣ್ಣು ಹಾಕಿದೋರು ಬಹಳ ಮಂದಿ ಇದ್ದಾರೆ ಈಗ; ಅದೆಲ್ಲ ಸಾಮಾನುಸ್ವಾಮಿಗಳ ಮಹಿಮೆ!!

ಸ್ವಾಮಿಗಳು ಚಂದ ಇರೋದು, ಸುಂದರವಾಗಿ ನಗೋದು, ಐಪ್ಯಾಡ್ ಭಾಷಣ ಬಿಗಿಯೋದು ಮುಖ್ಯವಲ್ಲ; ಮಠವನ್ನು ಲೌಕಿಕವಾಗಿ ದೊಡ್ಡ ರಾಜಕೀಯ ಸಂಸ್ಥೆಯಂತೆ ನಡೆಸೋದೂ ಮುಖ್ಯವಲ್ಲ; “ಅಲ್ಲಿದೆ ನಮ್ಮ ಮನೆ-ಇಲ್ಲಿರುವುದು ಸುಮ್ಮನೆ”-ದಾಸರು ಹೇಳಿದಂತೆ ಅಲ್ಲಿನ ನಮ್ಮ ಮನೆಯಲ್ಲಿ ದೀಪ ಬೆಳಗುವ ವ್ಯಕ್ತಿ ನಮಗೆ ಬೇಕು. ಆತ ಜ್ಞಾನಿಯಾಗಿರಬೇಕು. ಯಾವ ಜ್ಞಾನ? ಅಂತರ್ಜಾಲದಲ್ಲಿ ವಿಹರಿಸುವ ಜ್ಞಾನವೋ? ’ಸುವರ್ಣ ಮಂತ್ರಾಕ್ಷತೆ’ ಕೊಟ್ಟು ಅಭಿಮಾನಿ ಬಳಗ ಕಟ್ಟಿಕೊಳ್ಳುವ ಜ್ಞಾನವೋ? ಮಹಿಳೆಯರ ಚಂದ್ರನಾಡಿ ಎಲ್ಲಿರುತ್ತದೆ ಮತ್ತು ಅದನ್ನು ಉದ್ದೀಪಿಸುವುದು ಹೇಗೆಂಬ ಜ್ಞಾನವೋ? ಸುದ್ದಿಮನೆಗಳ ಜನರನ್ನು ಕಾಂಟ್ರಾಕ್ಟ್ ಮೇಲೆ ಬಳಸಿಕೊಳ್ಳುವ ಜ್ಞಾನವೋ? ಎತ್ತುವಳಿಗಾಗಿ ಬೋಳೆಣ್ಣೆಹಚ್ಚುವ ಯೋಜನೆಗಳನ್ನು ಹಾಕಬಲ್ಲ ಜ್ಞಾನವೋ? ಮಠವನ್ನು ಸ್ವಂತ ಆಸ್ತಿಯಂತೆ ಭೋಗಿಸಬಲ್ಲ ಭೋಗವರ್ಧನವಾಲನಾಗುವ ಜ್ಞಾನವೋ? ಇದಾವುದೂ ಅಲ್ಲ.

ಹಿಂದೆ ನಮ್ಮವರು ಆಯ್ಕೆಯಲ್ಲಿ ಎಡವಿದ್ದು ಇಲ್ಲೇ-ಹಲವರು ಮುಖಂಡರು, ನಾಲ್ಕು ಜಿಲ್ಲೆಗಳ ಪ್ರಾಂತಭೇದ, ಜಾತಕವನ್ನೇ ಸಂಪೂರ್ಣ ಆಧಾರವಾಗಿ ತೆಗೆದುಕೊಳ್ಳುವಿಕೆ, ವಟುವಿನ ಪೂರ್ವಾಪರಗಳ ಮಾಹಿತಿಯ ಕೊರತೆ ಇಂತಹ ಹಲವು ಕಾರಣಗಳಿಂದಲೇ ಮಠಕ್ಕೆ-ಪೀಠಕ್ಕೆ ವಕ್ಕರಿಸಿಕೊಂಡವ ತೊನೆಯಪ್ಪ ಭಸ್ಮಾಸುರ. ನಮ್ಮ ಜನರಲ್ಲಿ ಸರಿಯಾದ ಹೊಂದಾಣಿಕೆ ಇದ್ದರೆ ಹೀಗಾಗಲು ಸಾಧ್ಯವೇ ಇರಲಿಲ್ಲ.

ಅಂತೂ ಇಡೀ ಸಮಾಜದ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ ತೊನೆಯಪ್ಪ ಮಠ ಬಿಟ್ಟು ತೆರಳುವ ಕಾಲ ಸಮೀಪ ಬರುತ್ತಿದೆ; ಎಷ್ಟೇ ವಾಮಾಚಾರಗಳನ್ನು ನಡೆಸಿ ತಪ್ಪಿಸಿಕೊಳ್ಳಬೇಕೆಂದರೂ ದೇವರೆಂಬ ಶಕ್ತಿ ಇನ್ನೊಂದು ದಾರಿಯಲ್ಲಿ ಸಾತ್ವಿಕರನ್ನು ರಕ್ಷಿಸುತ್ತದೆ. ಹಾಗಾಗಿಯೇ ತೊನೆಯಪ್ಪನ ಸುಭದ್ರ-ಅಭೇದ್ಯ ಕೋಟೆಯ ಆಯಕಟ್ಟಿನ ಜಾಗದ ಮೊದಲ ಆಧಾರಸ್ತಂಭ ಗಡ ಗಡನೆ ಅಲುಗಾಡ್ತಾ ಇದೆ ಈಗ.

ಒಂದನ್ನು ನೆನಪಿಟ್ಟುಕೊಳ್ಳಬೇಕು-ವಿಚ್ಛಿನ್ನ-ಅವಿಚ್ಛಿನ್ನ ಇದೆಲ್ಲ ಬೇಕಾಗಿಲ್ಲ. ಕಚ್ಚೆಹರುಕ ಸ್ವಾಮಿಯಾದರೆ ಪರಂಪರೆ ವಿಚ್ಛಿನ್ನವಾಗಿಯೇ ಹೊಸದಾಗಿ ಮುಂದುವರಿಯೋದು ಒಳಿತು. ಈ ಭಸ್ಮಾಸುರನ ಕೈಲಿ ಯಾರಿಗೂ ದೀಕ್ಷೆ ಕೊಡಿಸಬೇಡಿ. ದೀಕ್ಷೆ ಎಂಬುದು ವೇದಾಂತ ದರ್ಶನದ ಅತ್ಯಂತ ಮಹತ್ವದ ಕಾರ್ಯ. ಆತ್ಮಶ್ರಾದ್ಧವನ್ನು ನಡೆಸಿಕೊಂಡು ನಂತರ ಮರುಜನ್ಮವನ್ನು ಅಥವಾ ಮೂರನೇ ಜನ್ಮವನ್ನು ಪಡೆದಂತಾಗುವುದು ಅಲ್ಲಿನ ವಿಶೇಷ. [ಹುಟ್ಟು ಮೊದಲ ಜನ್ಮ, ಉಪನಯನ ಎರಡನೆ ಜನ್ಮ, ದೀಕ್ಷೆ ಮೂರನೆಯ ಜನ್ಮ]. ಈ ಮುಖೇಡಿಯಿಂದ ದೀಕ್ಷೆ ಪಡೆದರೆ ಪಡೆದವ ಕೂಡ ಮುಂದೆ ಇವನಂತೆ ಹಾದರೇಶ್ವರನಾಗ್ತಾನೆ.

ಸಮಾಜದಲ್ಲಿರುವ ಪ್ರಾಂತ ಭೇದವನ್ನು ಮೊದಲು ಅಳಿಸಿ. ಇಬ್ಭಾಗವಾದ ಸಮಾಜದ ಮುಂದಾಳುಗಳ ನಡುವೆ ಒಂದು ಮಾತುಕತೆ ನಡೆಯಬೇಕಾಗಿದೆ ಈಗ. ಇಷ್ಟುದಿನ ಡಿವೈಡ್ ಅಂಡ್ ರೂಲ್ ಪಾಲಿಸಿಯಲ್ಲಿ ಸಮಾಜವನ್ನು ಇಷ್ಟು ಅಧೋಗತಿಗಿಳಿಸಿದ ಪಾಪಿಯ ಸಮಗ್ರ ಚೋರತ್ವದರ್ಶನ ಎಲ್ಲರಿಗೂ ಆಗಬೇಕಾಗಿದೆ. ಅವನ ಯಾತ್ರೆಗಳೆಲ್ಲ ಸಾಕು. ಅವನ ಯೋಜನೆಗಳೂ ಸಾಕು. ಪೀಠದಲ್ಲಿ ನಮಗೆ ತಪಸ್ಸು ಮಾಡಿ ಹರಸುವ, ಧರ್ಮಮಾರ್ಗವನ್ನು ತೋರಿಸುವ ವ್ಯಕ್ತಿ ಬೇಕು, ಯಾಕೆಂದರೆ ಅದು ವಾಣಿಜ್ಯ ಕೇಂದ್ರವಲ್ಲ. ಅಲ್ಲಿ ವಾಣಿಜ್ಯ ವ್ಯವಹಾರ ಇರಲೇಬಾರದು.

ಪೀಠ ಒಂದೈದ್ ವರ್ಷ ಖಾಲಿ ಬಿದ್ರೆ ಏನೂ ತೊಂದ್ರೆ ಇಲ್ಲ; ದಿನಾ ಸಾಯೋರಿಗೆ ಅಳೋರ್ಯಾರು ಅಂತ ಒಂದು ಗಾದೆ ಇದೆ, ಪೀಠ ಖಾಲಿ ಬೀಳ್ತದೆ ಅಂತ ಮತ್ತೆ ಸಾಮಾನುಸ್ವಾಮಿ ಥರದವರನ್ನು ಆಯ್ಕೆಮಾಡಿದರೆ ಯಾವ ಕೋರ್ಟೂ ನಮ್ಮ ಸಹಾಯಕ್ಕೆ ಬರೋದಿಲ್ಲ.

ಮುಂದಿನ ಆಯ್ಕೆಯಲ್ಲಿ ನಾವು ಎಡವಬಾರದು. ನಾಲ್ಕರಲ್ಲಿ ಯಾವ ಪ್ರಾಂತದ ವ್ಯಕ್ತಿಯಾದರೂ ಪರವಾಗಿಲ್ಲ, ಅವನಲ್ಲಿ ಬಾಲ್ಯದಿಂದಲೇ ವಿರಕ್ತಿಯ ಕುರುಹು ಇರಬೇಕು. ವೇದ-ಶಾಸ್ತ್ರಗಳನ್ನು ಅವನು ಚೆನ್ನಾಗಿ ಅಭ್ಯಸಿಸಿ ತೇರ್ಗಡೆಯಾಗಿರಬೇಕು. ಶೃಂಗೇರಿಯಂತಹ ಪರಿಶುದ್ಧ ಪರಿಸರದಲ್ಲಿ ಅವರ ಓದು, ವಾಸ್ತವ್ಯ ನಡೆಯಬೇಕು, ಅವರ ನಡತೆಗಳನ್ನು ಅಲ್ಲಿನ ವಿದ್ವನ್ಮಣಿಗಳು ಸ್ವತಃ ಕಂಡು “ಯತಿಯಾಗಲು ಯೋಗ್ಯ” ಎಂದು ತೀರ್ಮಾನಿಸಬೇಕು. ರಾಮಕೃಷ್ಣಾಶ್ರಮದಂತಹ ಮಠಗಳಲ್ಲಿ ವಟುವು ಕೆಲವು ತಿಂಗಳಾದರೂ ತಂಗಿದ್ದು ಅಲ್ಲಿನ ಸನ್ಯಾಸಿಗಳೊಡನೆ-ವಿರಾಗಿಗಳೊಡನೆ ಸತ್ಸಂಗ ನಡೆಸಬೇಕು.

ದೀಕ್ಷೆ ಪಡೆದಮೇಲೆ ಈರುಳ್ಳಿ ಉಪ್ಪಿಟ್ಟು ತಿನ್ನುತ್ತ “ವೇದ ಓದಿದ್ದೇವೆ ನಾವು’ ಎಂದು ಭೋಂಗು ಬಿಡುವಂತಾಗಬಾರದು. ಜಾತಕವೇ ಎಲ್ಲದಕ್ಕೂ ಪ್ರಮಾಣವಲ್ಲ; ಅದು ಭಾಗಶಃ ಮಾತ್ರ. ವಟುವಿನ ಪೂರ್ವಾಪರಗಳನ್ನು ಆಯ್ಕೆಯ ಸಮಿತಿ ಆಮೂಲಾಗ್ರವಾಗಿ ಪರಿಶೋಧಿಸಬೇಕು. ಅವನ ವಂಶದಲ್ಲಿ ’ವಾಸು’ಗಳು ಅಂದರೆ ಕಚ್ಚೆಹರುಕರು ಯಾರಾದರೂ ಇದ್ದಾರೋ ಎಂಬುದನ್ನು ಎಲ್ಲಕ್ಕಿಂತ ಮೊದಲು ನೋಡಬೇಕು. ಆಯ್ಕೆಯಲ್ಲಿ ಯಾರದೇ ಒತ್ತಡ, ಪ್ರಲೋಭನೆ, ಪೂರ್ವಾಗ್ರಹ ಇರಬಾರದು.

ಸ್ವಾಮಿಯಾಗುವವ ಕಂಡಿದ್ದಕ್ಕೆಲ್ಲ ಹಲ್ಕಿಸಿಯಬಾರದು; ಅದು ವೈರಾಗ್ಯದ ಲಕ್ಷಣ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ. ಭಗವಾನ್ ಶ್ರೀಧರ ಸ್ವಾಮಿಗಳೂ ಸಹ ಭಕ್ತರೊಂದಿಗೆ ನಗುತ್ತಿದ್ದರು; ಅನೇಕ ಮುನಿಜನರು ನಗುತ್ತಾರೆ; ಆದರೆ ಅಂತಹ ನಗುವಿನ ಲಕ್ಷಣಕ್ಕೂ ತೊನೆಯಪ್ಪನ ನಗುವಿನ ಲಕ್ಷಣಕ್ಕೂ ಬಹಳ ವ್ಯತ್ಯಾಸಗಳಿವೆ. ವಿರಾಗಿಗಳ ಮುಖದಲ್ಲಿ ಅಟ್ಟಹಾಸದ ನಗು, ಅಣಕು ನಗು, ಸಂಕೇತಿಸುವ ನಗು, ಹುಬ್ಬುಹಾರಿಸಿ ಆಹ್ವಾನಿಸುವ ನಗು ಇದೆಲ್ಲ ಇರೋದಿಲ್ಲ.
ನಮ್ಮ ಪರಂಪರೆಗೆ ಸಂಬಂಧಿಸಿದಂತೆ ಯತಿಗಳು ರುದ್ರಾಕ್ಷಿಮಾಲೆಯನ್ನು ಧರಿಸುತ್ತಾರೆ; ರುದ್ರಾಕ್ಷಿ ಗುಣದಲ್ಲಿ ಬಂಗಾರದ ಮಹತ್ವವನ್ನು ಹೊಂದಿದೆ, ವೈರಾಗ್ಯಕ್ಕೆ ಅದೊಂದು ಶೋಭೆ. ವಿರಾಗಿಗಳು ಕಾವಿಧರಿಸುವುದೂ ಕೂಡ ಅದಕ್ಕೇ. ಕಾವಿ ಅಗ್ನಿಯ ಬಣ್ಣ. “ಇದಂ ನ ಮಮ” ಎಂದು ಅಗ್ನಿಯಲ್ಲಿ/ಹೋಮದಲ್ಲಿ ನಾವು ಹಲವು ವಸ್ತುಗಳನ್ನು ಹಾಕುತ್ತೇವೆ-ಅದು ತ್ಯಾಗ.

ಅದರಂತೆಯೇ ತನ್ನಾತ್ಮವನ್ನೇ ಅಗ್ನಿಯೆಂದು ಭಾವಿಸಿ ಇಹ ಜೀವನದ ಎಲ್ಲ ಸುಖೋಪಭೋಗಗಳನ್ನು ಆ ಅಗ್ನಿಗೆ ಅರ್ಪಿಸಿಬಿಡುತ್ತಾನೆ-ಸನ್ಯಾಸಿ. ಅದೂ ಸಹ ತ್ಯಾಗವೇ. ಆ ತ್ಯಾಗದಲ್ಲಿ ಎರಡು ಫಲಗಳಿವೆ-ಒಂದು ತನಗೆ ಮೋಕ್ಷ ಪಡೆಯುವ ಹಾದಿಯಲ್ಲಿ ಮುನ್ನಡೆ ಮತ್ತು ಇನ್ನೊಂದು ತನ್ನನ್ನು ದರ್ಶಿಸುವ ಅನುಯಾಯಿಗಳನ್ನೇ ತನ್ನ ಪ್ರಜೆಗಳೆಂದು, ತನ್ನ ಸಂಸಾರವೆಂದು ಇಹ-ಪರಗಳಲ್ಲಿ ಅವರ ಉನ್ನತಿಗೆ ಧರ್ಮಮಾರ್ಗ ಬೋಧಿಸುವುದು.

ತೊನೆಯಪ್ಪನ ಲಲನೆಯರು “ರುದ್ರಾಕ್ಷಿ ಚೆನ್ನಾಗಿ ಕಾಣಿಸೋದಿಲ್ಲ, ಹಾಕ್ಕೋಬೇಡಿ” ಅಂದಿರಬೇಕು; ಅದಕ್ಕೇ ತೊನೆಯಪ್ಪ ವೈರಾಗ್ಯ ಸೂಸುವ ರುದ್ರಾಕ್ಷಿಸರವನ್ನು ಬಳಸುವುದೇ ಇಲ್ಲ. “ಕಾವಿ ಚೆನ್ನಾಗಿ ಕಾಣೋದಿಲ್ಲ, ಜೀನ್ಸ್ ಹಾಕಿಕೊಳ್ಳಿ” ಅಂತ ಕೆಲವು ಲಲನೆಯರಾದರೂ ಹೇಳಿರಬಹುದು; ಏಕಾಂತದಲ್ಲಿ ಜೀನ್ಸ್ ಹಾಕ್ಕೊಂಡಿದ್ದೇನೋ ಸರಿ, ಜೀನ್ಸ್ ಧಾರಿಯಾಗಿ ಹೊರಗೆ ಬಂದರೆ ಅವನ ಅಸಲೀಯತ್ತು ಗೊತ್ತಾಗಿಹೋಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಜೀನ್ಸ್ ಹಾಕಿಕೊಳ್ಳಲಿಲ್ಲ-ಸಾಮಾನುಸ್ವಾಮಿ. ಭಸ್ಮ ವೈರಾಗ್ಯದ ಇನ್ನೊಂದು ಲಕ್ಷಣ. ತೊನೆಯಪ್ಪ ಸ್ವಾಮಿಗಳಿಗೆ ಭಸ್ಮವೆಂದರೆ ಅಸಹ್ಯ. ಶಾಸ್ತ್ರಕ್ಕೆ ಹಣೆಯಲ್ಲಿ ಮಾತ್ರ ಅಲ್ಪ ಸ್ವಲ್ಪ ಭಸ್ಮ.

ಲಕ್ಷಣಗಳು ಮತ್ತು ಬಾಡಿ ಲ್ಯಾಂಗ್ವೇಜ್ ಇವ ಸ್ವಾಮಿಯಲ್ಲ ಕಾಮಿ ಎಂಬುದನ್ನು ಎಂದೋ ಹೇಳಿಬಿಟ್ಟಿವೆ; ಆದರೆ ಜನ ಆತ ನಡೆಸುವ ಸಮೂಹಸನ್ನಿಗೆ, ಆತನ ನಗೆಗೆ, ಆತನ ಐಪ್ಯಾಡ್ ಭಾಷಣಗಳಿಗೆ ಮಾರುಹೋಗಿದ್ದಾರೆ. ತಾನು ನಡೆದ ಮಾರ್ಗವೇ ಸರಿ ಎನ್ನುವಾಗ ಜೈಕಾರ ಹಾಕ್ತಾರೆ. ಒಂದಷ್ಟುಜನ ಅವನ ಕೀಚಕತನವನ್ನು ಕಂಡು ಸ್ವಾಮಿಯಲ್ಲವೆಂದು ವಿರೋಧಿಸಿದಾಗ ಸಮಾಜವನ್ನೇ ಒಡೆದಾಳುವ ಸೂತ್ರ ರೂಪಿಸಿದ ಮಾಗಧ ಅವನು.

ಸಮಾಜದಲ್ಲಿ ಈಗಾಗಲೇ ಹಲವರಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ-ಪೀಠ ಬಿಟ್ಟುಹೋದರೂ ಪರಂಪರೆಯಲ್ಲಿ ಅವನ ಹೆಸರನ್ನು ಹಾಗೇ ಇರಿಸಿಕೊಳ್ಳಬೇಕೋ ತೆಗೆದುಹಾಕಬೇಕೋ, ಅವ ಸತ್ತರೆ ಹೂಳಬೇಕೋ, ಸುಡಬೇಕೋ? ನಂತರ ಅವನ ಆರಾಧನೆ ಮಾಡಬೇಕೋ ಅಥವಾ ಬಿಡಬೇಕೋ ಎಂಬಲ್ಲಿಯವರೆಗಿನ ಮಾತುಕತೆಗಳೂ ನಡೆಯುತ್ತಿವೆ ಎಂದು ಗುಮ್ಮಣ್ಣ ಹೆಗಡೇರು ಹೇಳಿದ್ದಾರೆ. ಅವನ ಕತೆ ಹಾಳಾಗಿ ಹೋಗಲಿ, ಅವನು ಎಲ್ಲಿಗಾದರೂ ಹೋಗಲಿ, ಸದ್ಯಕ್ಕೆ ಅವನನ್ನು ಪರಪ್ಪವನಕ್ಕೆ ಕಳಿಸಬೇಕು ಮತ್ತು ಹಿಂದೆ ನಡೆದಿದ್ದೆಲ್ಲವನ್ನು ಮಂಪರುಪರೀಕ್ಷೆಯಲ್ಲಿ ಬಾಯ್ಬಿಡಿಸಬೇಕು. ಕಠಿಣ ಶಿಕ್ಷೆ ವಿಧಿಸುವ ಮೂಲಕ ಇನ್ನುಮುಂದೆ ನಮ್ಮ ಪರಂಪರೆಯ ಯಾವುದೇ ಯತಿ ಕಚ್ಚೆ ಸಡಿಲಗೊಳಿಸಲು ಹೆದರಿಕೊಳ್ಳಬೇಕು-ಹಾಗಿರಬೇಕು ಶಿಕ್ಷೆ.

ಪೀಠಕ್ಕೆ ಬರುವ ಸ್ವಾಮಿಯದ್ದೇ ಸರ್ವಾಧಿಕಾರ ಆಗಿರಬಾರದು, ಮಠಕ್ಕೊಂದು ಸಮಿತಿ ಇರಬೇಕು; ಅದರ ಸದಸ್ಯರು ಆಗಾಗ ಚುನಾಯಿತವಾಗಬೇಕು. ಸ್ವಾಮಿ ಲೌಕಿಕ ವ್ಯವಹಾರಗಳಿಗೆ ಕೈಹಾಕಬಾರದು; ಕೇವಲ ಸಲಹೆಗಳನ್ನು ಕೊಡಬಹುದು. ಹೀಗೆ ಮಾಡಿನೋಡಿ, ಮಠಕ್ಕೆ ಸ್ವಾಮಿಯಾಗಲು ಸರಿಯಾದ ವಟುಗಳು ವಿರಾಗಿಗಳು ಮಾತ್ರ ಬರುತ್ತಾರೆ. ಕೀಲಿಕೈ ಸಿಗುತ್ತದೆ, ಆಸ್ತಿಪಾಸ್ತಿ ಹೊಡೆದುಕೊಳ್ಳಬಹುದು ಎಂದು ಕಂಡರೆ ಜಾತಕ ತಿದ್ದಿಸಿಕೊಂಡು ಸ್ತ್ರೀನಿವಾಸ ಭಟ್ಟನ ಪಿಂಡದಂತವರೇ ಬರುತ್ತಿರುತ್ತಾರೆ.

ಸಾಮಾನುಸ್ವಾಮಿಯ ವಿರೋಧಿಗಳು ಪೀಠದ ವಿರೋಧಿಗಳಲ್ಲ. ಪೀಠದ ಯಾವುದೇ ಸ್ಥಿರ-ಚರ ಆಸ್ತಿಗಳನ್ನು ಹೊಡೆದುಕೊಳ್ಳುವ ಹುನ್ನಾರ ಅವರಾರಲ್ಲೂ ಇಲ್ಲ; ಈಗಿನ ’ಸನ್ಯಾಸಿ’ ಪೀಠದಲ್ಲಿರೋದು ಮತ್ತು ಸಮಾಜಕ್ಕೆ ಗುರುವೆನಿಸಿಕೊಂಡು ಮುಂದೆಯೂ ಅಸಂಖ್ಯಾತ ಮಹಿಳೆಯರ ಶೀಲಹರಣ ಮಾಡೋದು, ಅದೆಲ್ಲ ತಿಳಿದೂ ಸಮಾಜದವರೆಲ್ಲ ಅವಿವೇಕಿಗಳಾಗಿ ಅವನ ಕಾಲಿಗೆ ಬೀಳೋದು ಎಚ್ಚೆತ್ತವರಿಗೆ ಇಷ್ಟವಾಗುತ್ತಿಲ್ಲ.

ಈ ಸ್ವಾಮಿಯನ್ನು ನೋಡಿದ ಅನ್ಯ ಸಮಾಜದ ಧೀಮಂತ ವ್ಯಕ್ತಿಯೊಬ್ಬ ನಮ್ಮ ಸಮಾಜವನ್ನು “ಅವಿವೇಕಿಗಳ ಸಮಾಜ” ಎಂದಿದ್ದನಂತೆ-ಅದು ಏಳೆಂಟು ವರ್ಷಗಳ ಹಿಂದೆಯೇ. ನೋಡಿದರೆ ಇಲ್ಲಿಯವರೆಗೆ ಅದು ಸುಳ್ಳಲ್ಲ ಎನಿಸುತ್ತದೆ. ಒಬ್ಬ ಸ್ವಾಮಿ ತನ್ನ ಚಟಸಾಮ್ರಾಜ್ಯ ವರ್ಧನೆಗಾಗಿ ಮಠದ ದುಡ್ಡನ್ನು ಚೇಲಾಗಳಿಗೆ ಕೊಡ್ತಾನೆ; ಮೂರು ಬಸ್ಸಿನ ಸ್ತ್ರೀಕುಮಾರ ಮೂವತ್ತೈದಕ್ಕಿಂತ ಹೆಚ್ಚಿಗೆ ಬಸ್ಸು ಖರೀದಿಸುತ್ತಾನೆ, ಕಜ್ಜಿಗೆ ಚಿಕಿತ್ಸೆ ನೀಡುವ ವೈದ್ಯ ಏಕಕಾಲಕ್ಕೆ ಕೋಟ್ಯಂತರ ಖರ್ಚುಮಾಡಿ ಇಪ್ಪತ್ತಕ್ಕೂ ಹೆಚ್ಚು ಶಾಖೆಗಳ ಮಸ್ಸಾಜ್ ಸೆಂಟರ್ ಮಾಡ್ತಾನೆ. ಸಾಮಾನುಸ್ವಾಮಿ ಕಾಸು ಕೊಡ್ತಾನೆ; ಅವನ ರಕ್ಷಣೆಗೆ ಅಂಥವರೆಲ್ಲ ನಿಂತುಬಿಡ್ತಾರೆ ಅಂದರೆ ಹೇಳೋರು ಕೇಳೋರು ಇಲ್ಲದ ಮಠ ಮತ್ತು ಸಮಾಜ ಅಂತ ಹೇಳದೇ ಬೇರೆ ದಾರಿಯಿಲ್ಲ.

ಸಮಾಜದ ಸಭೆಗೆ ಚುನಾವಣೆ ನಡೆದಾಗ ಸಾಮಾನುಸ್ವಾಮಿಯ ಚೇಲಾಗಳ ಗುಂಪೇ ಗೆದ್ದು ಅಧಿಕಾರ ಹಿಡಿಯುತ್ತದೆ ಮತ್ತು ಸಮಾಜದ ಸಂಸ್ಥೆಯಲ್ಲಿ ಇತರ ಮಠಗಳ ಶಿಷ್ಯರೂ ಇದ್ದಾರೆಂಬುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಏಕಾಏಕಿಯಾಗಿ ಸಾಮಾನುಸ್ವಾಮಿಯ ಪರ ಬ್ಯಾಟಿಂಗ್ ಮಾಡುತ್ತಾರೆ. ಹಾಗಾಗಿ ಅದೀಗ ಅವಿವೇಕಿಗಳ ಮಹಾಸಭೆಯಾಗಿದೆ

ಇದು ಮುಂದೊಂದು ದಿನ ಹೀಗಾಗುತ್ತದೆ ಎಂಬ ಮುಂಧೋರಣೆಯನ್ನು ಹೊಂದಿದ್ದ ಅನ್ಯ ಸಮಾಜದ ಧೀಮಂತ ವ್ಯಕ್ತಿ “ಅವಿವೇಕಿಗಳ ಸಮಾಜ” ಎಂದಿದ್ದರಲ್ಲಿ ತಪ್ಪೇನೂ ಕಾಣಲಿಲ್ಲ. ನಡೆಯುವವರು ಎಡವದೆ ಕುಳಿತವರು ಎಡವುತ್ತಾರೆಯೇ? ಏನೋ ನಮ್ಮ ಸಮಾಜಕ್ಕೆ ಇಂತಹ ಕಳಂಕವೊಂದು ತಟ್ಟಬೇಕೆಂದು ಬರೆದಿತ್ತು; ಎಡವಿದ್ದಾಗಿದೆ, ಈಗಲಾದರೂ ಸುಧಾರಿಸಿಕೊಳ್ಳದಿದ್ದರೆ, ಸಾಮಾನುಸ್ವಾಮಿಯನ್ನು ಶಿಕ್ಷೆಗೆ ಗುರಿಪಡಿಸದಿದ್ದರೆ, ಯೋಗ್ಯ ವಿರಾಗಿಯನ್ನು ಹುಡುಕಿಕೊಳ್ಳದಿದ್ದರೆ ನಮ್ಮ ಸಮಾಜ ಅವಿವೇಕಿಗಳ ಸಮಾಜ ಎಂಬುದರಲ್ಲಿ ಎರಡು ಮಾತೇ ಇರೋದಿಲ್ಲ.

Thumari Ramachandara

source: https://www.facebook.com/groups/1499395003680065/permalink/1859981730954722/

source: https://thumari.wordpress.com

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s