ರಾಮಚಂದ್ರಾಪುರಮಠಕ್ಕೆ ಆಡಳಿತ ಅಧಿಕಾರಿ: ಮಾಹಿತಿ ಕೇಳಿದ ಕೋರ್ಟ್

ರಾಮಚಂದ್ರಾಪುರಮಠಕ್ಕೆ ಆಡಳಿತ ಅಧಿಕಾರಿ: ಮಾಹಿತಿ ಕೇಳಿದ ಕೋರ್ಟ್

ಉದಯವಾಣಿ, Nov 15, 2016, 3:45 AM IST

ಬೆಂಗಳೂರು: ಹಣಕಾಸು ಅವ್ಯವಹಾರ ನಡೆಸಿದ ಹಾಗೂ ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹೊಸ ನಗರ ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಕೋರಿ ಸಲ್ಲಿಕೆಯಾಗಿರುವ ಮನವಿ ಕುರಿತಂತೆ ಕೈಗೊಳ್ಳುವ ನಿರ್ಧಾರ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಸಿ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎದುರ್ಕುಳ ಈಶ್ವರ ಭಟ್ಟ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಮತ್ತು ನ್ಯಾ. ಕೆ. ಸೋಮಶೇಖರ್‌ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ರಾಘವೇಶ್ವರ ಸ್ವಾಮೀಜಿಗಳು ಮಹಿಳೆಯೊಬ್ಬರ ಜೊತೆಗೆ ಒಪ್ಪಿತ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಅಧೀನ ಕೋರ್ಟ್‌ ಹೇಳಿದ್ದರೆ, ಪೀಠಾಧ್ಯಕ್ಷ ಸ್ಥಾನದಲ್ಲಿ ಸ್ವಾಮೀಜಿ ಹೇಗೆ ಮುಂದುವರಿಯುತ್ತಿದ್ದಾರೆ? ಅನೈತಿಕ ಸಂಬಂಧ ಹೊಂದಿದ್ದದ್ದು ತೀರ್ಮಾನವಾಗಿದ್ದರೆ ನಿಜವಾಗಿ ಪೀಠಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸ್ವಾಮೀಜಿ ಅನರ್ಹರು.

ಹೀಗಾಗಿ ಸ್ವಾಮೀಜಿ ಪೀಠಾಧ್ಯಕ್ಷ ಸ್ಥಾನವನ್ನು ತ್ಯಜಿಸುವುದೇ ಉತ್ತಮ. ಇಲ್ಲವೇ ಮಠದ ಭಕ್ತರು ಸ್ವಾಮೀಜಿಯನ್ನು ಪೀಠದಿಂದ ಕೆಳಗಿಸಿ ಎಂದು ಮುಖ್ಯ ನ್ಯಾಯಮೂರ್ತಿಗಳು ಮೌಖೀಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇನ್ನೂ ಏಕೆ ಈಶ್ವರಭಟ್ಟರ ಅರ್ಜಿ ಸಂಬಂಧ ನಿರ್ಧಾರ ತೆಗೆದು ಕೊಳ್ಳಲು ಇನ್ನಷ್ಟು ಸಮಯ ಬೇಕು? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

ಬಳಿಕ ಯಾವಾಗ ಅರ್ಜಿದಾರರ ಮನವಿ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೀರಾ? ಎಂಬುದನ್ನು ಸೋಮವಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಬೇಕು ಎಂದಿತು.

source: http://www.udayavani.com/kannada/news/%E0%B2%B0%E0%B2%BE%E0%B2%9C%E0%B3%8D%E0%B2%AF/178811/%E0%B2%B0%E0%B2%BE%E0%B2%AE%E0%B2%9A%E0%B2%82%E0%B2%A6%E0%B3%8D%E0%B2%B0%E0%B2%BE%E0%B2%AA%E0%B3%81%E0%B2%B0%E0%B2%AE%E0%B2%A0%E0%B2%95%E0%B3%8D%E0%B2%95%E0%B3%86-%C2%A0%E0%B2%86%E0%B2%A1%E0%B2%B3%E0%B2%BF%E0%B2%A4-%E0%B2%85%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF-%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%95%E0%B3%87%E0%B2%B3%E0%B2%BF%E0%B2%A6-%E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s