ಈ ವ್ಯಕ್ತಿಯ ಬೆನ್ನಹಿಂದೆ ನಿಂತು ಬ್ಯಾಟಿಂಗ್ ನಿರ್ವಹಿಸುತ್ತಿದ್ದ ಒಬ್ಬೊಬ್ಬರನ್ನೂ ಹೆಸರಿಡಿದು ಕೇಳಲೇಬೇಕಿದೆ..

ಈ ವ್ಯಕ್ತಿಯ ಬೆನ್ನಹಿಂದೆ ನಿಂತು ಬ್ಯಾಟಿಂಗ್ ನಿರ್ವಹಿಸುತ್ತಿದ್ದ ಒಬ್ಬೊಬ್ಬರನ್ನೂ ಹೆಸರಿಡಿದು ಕೇಳಲೇಬೇಕಿದೆ..

ಕಳೆದ ಕೆಲದಿನಗಳ ಹಿಂದೆ ಕೆಳ ನ್ಯಾಯಾಲಯವು ಈ ವ್ಯಕ್ತಿಯ ಮೇಲೆ ಇರುವ ಆರೋಪವನ್ನು ವಜಾಗೊಳಿಸಿದ್ದಲ್ಲದೇ ಅದಕ್ಕೆ ಕಾರಣಗಳನ್ನು ಕೊಡುವ ಭರದಲ್ಲಿ ಈ ವ್ಯಕ್ತಿ ನಡೆಸಿರಬಹುದೆನ್ನಲಾದ ಅನೈತಿಕ ಸಂಬಂಧಗಳ ವಿಚಾರವನ್ನು ಕೆಲವರು ಹೇಳುತ್ತಿದ್ದಾಗ ಅವರಿಗೆ ನ್ಯಾಯಾಲಯದ ಆದೇಶವನ್ನು ಅರ್ಥಮಾಡಿಕೊಳ್ಳುವುದಕ್ಕೆ ಬರುವುದಿಲ್ಲ ಎಂದು ಹೇಳುತ್ತಾ ಎಂದಿನಂತೇ ತನ್ನ ಸಭೆ ಸಮಾರಂಭಗಳಲ್ಲಿ ಅವರಿವರ ಮೇಲೆ ಷಡ್ಯಂತ್ರದ ಕಥೆಯನ್ನು ಹೆಣೆಯುತ್ತಿದ್ದ. ಇದು ಸಾಲದೆಂಬಂತೇತನ್ನ ಪಟಾಲಂಗಳನ್ನು ಬಿಟ್ಟು ಸಮಾಜದ ಸಜ್ಜನರ ಮಾನ ಕಳೆಯುವ ಪ್ರಯತ್ನವನ್ನೂ ನಡೆಸಿದ್ದ. ಆದರೆ ಅದೆಲ್ಲಕ್ಕೂ ತಿಲಾಂಜಲಿಯಿಕ್ಕುವಂತೇ ಇಂದು ಮಾನ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳ ಬಾಯಲ್ಲಿ ಬಂದ ಮಾತುಗಳು ಇದೂವರೆಗೆ ಯಾರು ಯಾವ ಅರ್ಥದಲ್ಲಿ ತಿಳಿದುಕೊಂಡಿದ್ದರೋ ಅದು ಸರಿಯಾಗಿಯೇ ಇದೆ ಎಂದು ತಿಳಿದುಬಂತು….!

ಈಗ ಇದುವರೆಗೆ ಈ ವ್ಯಕ್ತಿಯ ಬೆನ್ನಹಿಂದೆ ನಿಂತು ಬ್ಯಾಟಿಂಗ್ ನಿರ್ವಹಿಸುತ್ತಿದ್ದ ಒಬ್ಬೊಬ್ಬರನ್ನೂ ಹೆಸರಿಡಿದು ಕೇಳಲೇಬೇಕಿದೆ. ಎಂದೆನಿಸುವುದಿಲ್ಲವೇ…?

ಉಡುಪಿಯ ಶ್ರೀ ಪೇಜಾವರ ಮಠಾಧೀಶರು, ಸಂಸದರಾದ ಅನಂತಕುಮಾರ್ ಹೆಗಡೆಯವರು, ಶಾಸಕರಾದ ಶ್ರೀ ಕಾಗೇರಿ ವಿಶ್ವೇಶ್ವರ ಹೆಗಡೆಯವರು, ಶಾಸಕರಾದ ಶ್ರೀ ಮಂಕಾಳ ವೈದ್ಯರು, ಸಂಘ ಮತ್ತು ಸಂಗ ಪರಿವಾರದ ವ್ಯಕ್ತಿಗಳಾದ ಶ್ರೀ ಜಗದೀಶ್ ಕಾರಂತರು, ಶ್ರೀ ಕಲ್ಲಡ್ಕ ಪ್ರಭಾಕರಭಟ್ಟರು, ಶ್ರೀ ಪ್ರಮೋದ್ ಮುತಾಲಿಕ್ ರವರು.ಬೆನ್ನಿಗೆ ನಿಂತು ಪೋಟೋ ತೆಗೆಸಿಕೊಂಡ ಸಹಸ್ರ ಸಂತರು..!. ಹೀಗೇ ತನ್ನ ಪ್ರಭಾವವನ್ನು ಬಳಸಿ ಸಮಾಜದ ಧುರೀಣರುಗಳಿಂದ ತನ್ನ ಮೇಲಿನ ಆರೋಪವನ್ನು ನ್ಯಾಯಾಲಯದ ಹೊರಗೆ ನಿವಾರಿಸಿಕೊಳ್ಲಲು ಪ್ರಯತ್ನಿಸಿದ್ದು ಈ ಸಮಾಜ ಇನ್ನೂ ಮರೆತಿಲ್ಲ.. ಇದೆಲ್ಲಕ್ಕಿಂತ ಹೆಚ್ಚಾಗಿ ಇಡೀ ಹವ್ಯಕ ಸಮಾಜಕ್ಕೆ ದಾರಿ ದೀಪವಾಗಿದ್ದ ’ಅಖಿಲ ಹವ್ಯಕ ಮಹಾಸಭಾ’ ಈ ಸಮಾಜಕ್ಕೆ ಉತ್ತರ ಕೊಡಬೇಕಿದೆ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/191681514571364/

ಕನ್ಯಾಸಂಸ್ಕಾರದ ಚಟ ಅಂಟಿಸಿಕೊಂಡ ಧರ್ಮಪೀಠದ ಸಂನ್ಯಾಸಿಯೆಂದುಕೊಳ್ಳುವ ವ್ಯಕ್ತಯೊಬ್ಬ, ತಾನು ಕೆಟ್ಟಿದ್ದಲ್ಲದೇ ಕೋತಿ ವನವನ್ನೆಲ್ಲಾ ಕೆಡಿಸಿತು ಎಂಬಂತೆ .. ಸಮಾಜದ ಹೆಮ್ಮಕ್ಕಳಿಗೆ ಅದ್ಯಾವ್ಯಾವ ಸಂಸ್ಕಾರ ಕೊಟ್ಟನೋ ಪ್ರಭು ಶ್ರೀರಾಚಂದ್ರನಿಗೇ ಗೊತ್ತು… ಆದರೆ ಸಮಾಜದ ಗಂಡು ಹೆಣ್ಣುಗಳು ಭಕ್ತರೆಂದುಕೊಂಡು ಈ ನಾಡಿನ ಬಹುತೇಕ ಶಂಕರ ಪೀಠಗಳ ಸಾತ್ವಿಕ ಸಂನ್ಯಾಸಿಗಳ, ಸಮಾಜದ ಹಿರಿಯರ ಮಾನ ಕಳೆಯುವ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುತ್ತಿದ್ದಾರೆ, ಬಾಯಿ ತೆಗೆದರೆ ಅವಾಚ್ಯಗಳನ್ನಾಡುತ್ತ ಯಾವ ಮಾನ ಮರ್ಯಾದೆಯ ಲಂಗು ಲಗಾಮಿಲ್ಲದೇ ವ್ಯವಹರಿಸುವುದನ್ನು ನೋಡಿದರೆ ಸಿಕ್ಕ ಸಂಸ್ಕಾರ ಎಂತಹುದು ಎಂದು ಹುಬ್ಬೇರುವಂತೇ ಮಾಡುತ್ತಿದೆ. ಸ್ವರ್ನವಲ್ಲಿ ಶ್ರೀಗಳು, ಎಡತೊರೆ ಶ್ರೀಗಳು, ಶೃಂಗೇರಿ ಶ್ರೀಗಳು ಹೀಗೇ ಶಂಕರ ಪರಂಪರೆಯ ಯಾರೂ ಇವನ ಭಕ್ತರ ಬಾಯಿ ಚಪಲಕ್ಕೆ ಬೀಳದೇ ಇರಲಿಲ್ಲ… ಸ್ವತಃ ಶಾಂಕರ ಪರಂಪರೆಯ ಪೀಠಸ್ಥನಾಗಿ ‘ಬಾವಾಜಿ ‘ಗಳ ಸಂಗ ಕಟ್ಟುವ ದುರ್ಗತಿಗೆ ಇವ ಹಣೆಬಡಿದುಕೊಳ್ಳೋದು ಬಿಟ್ಟು ಮಕಾಡೆ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ ಎಂದು ಕುಣಿಯುವುದನ್ನು ನೋಡಿದರೆ ಇವನ ಸಂಸ್ಕಾರ ಎಂತಹುದು…?

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/190965981309584/

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s