ಎಎಸ್ಪಿ ನಿಶಾ ಜೇಮ್ಸ್‌ ರಿಂದ ಅಧಿಕಾರ ದುರುಪಯೋಗ

ಎಎಸ್ಪಿ ನಿಶಾ ಜೇಮ್ಸ್‌ ರಿಂದ ಅಧಿಕಾರ ದುರುಪಯೋಗ : ಆರೋಪ

ವಿಕ ಸುದ್ದಿಲೋಕ| Updated: Wed, 9 Nov 2016 09:11:00 +0530

ಶಿವಮೊಗ್ಗ: ಸಾಗರದ ಎಎಸ್ಪಿ ನಿಶಾ ಜೇಮ್ಸ್‌ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಹೋರಾಟಗಾರರು ಮತ್ತು ಸಾರ್ವಜನಿಕರ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಕಳುಹಿಸುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ದಲಿತ ಮುಖಂಡ ದೂಗೂರು ಪರಮೇಶ್‌ ಆರೋಪಿಸಿದ್ದಾರೆ.

ಮಂಗಳವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಾಗರ ಸಮೀಪದ ಹೆಗ್ಗೋಡಿನ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಬಾರದಂತೆ ತಾಲೂಕು ಆಡಳಿತಕ್ಕೂ ಒತ್ತಾಯ ಮಾಡಲಾಗಿತ್ತು. ಆದರೆ ಸಾಗರದ ಎಎಸ್ಪಿ ನಿಶಾ ಜೇಮ್ಸ್‌ ಅವರು ಮಠದವರೊಂದಿಗೆ ಶಾಮೀಲಾಗಿ ತಮ್ಮ ಹಳೆ ಕೇಸೊಂದರ ಮೇಲೆ ವಾರಂಟ್‌ ನೆಪಮಾಡಿಕೊಂಡು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.

ನಿಶಾ ಜೇಮ್ಸ್‌ ಅವರು ಈ ರೀತಿ ನಡೆದುಕೊಂಡಿದ್ದು ಗಮನಿಸಿದರೆ ರಾಘವೇಶ್ವರ ಸ್ವಾಮೀಜಿಯವರ ಭಕ್ತರಿಂದ ದೊಡ್ಡಮಟ್ಟದ ಡೀಲ್‌ ಆಗಿದ್ದಾರೆ ಎನ್ನುವ ಅನುಮಾನ ಬರುತ್ತಿದೆ. ತಾವು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರ ನೀಡಲಿದ್ದು, ಗೃಹಮಂತ್ರಿಗಳು ಕೂಡಲೆ ನಿಶಾಜೇಮ್ಸ್‌ ಅವರು ತಮ್ಮನ್ನು ಬಂಧಿಸುವ ಮುನ್ನ ಯಾರ ಯಾರ ಜತೆಗೆ ಸಭೆ ಮಾಡಿದ್ದರು, ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು ಎನ್ನುವುದರ ಬಗ್ಗೆ ತನಿಖೆಗೆ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮತ್ತೋರ್ವ ಹೋರಾಟಗಾರ ಎಚ್‌.ಬಿ.ರಾಘವೇಂದ್ರ ಮಾತನಾಡಿ, ಸಾಗರದಲ್ಲಿ ನಿಶಾಜೇಮ್ಸ್‌ ಅವರಿಂದ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪರಮೇಶ್‌ ದೂಗೂರರವರನ್ನು ಬಂಧಿಸುವಲ್ಲಿ ಪೂರ್ವಯೋಜಿತ ಪಿತೂರಿ ನಡೆದಿದೆ. ಅಮಾಯಕರು ಹಾಗೂ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸುತ್ತಾ ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಸಮಾಜವಾದಿ ಕಾಗೋಡು ತಿಮ್ಮಪ್ಪನವರ ಕ್ಷೇತ್ರದಲ್ಲಿಯೇ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದ್ದು, ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

“ರಾಜ್ಯದಲ್ಲಿ ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ನಂಬಿಕೆಯಿಲ್ಲದಂತಾಗಿದೆ. ಆರೋಪ ಹೊತ್ತಿರುವ ರಾಘವೇಶ್ವರ ಸ್ವಾಮೀಜಿಯನ್ನು ಜೈಲಿನಿಂದ ಹೊರಗಿಡುತ್ತಾರೆ. ಅತ್ಯಚಾರದ ಬಗ್ಗೆ ಪ್ರಶ್ನೆ ಮಾಡುವವರನ್ನು ಜೈಲಿಗೆ ಕಳುಹಿಸುತ್ತಾರೆ. ಕಾಂಗ್ರೆಸ್‌ ಸರಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಕೂಡಲೇ ಸ್ವಾಮೀಜಿ ಮತ್ತು ಅವರ ಪರವಾಗಿ ದೌರ್ಜನ್ಯಕ್ಕಿಳಿದಿರುವ ಅವರ ಪಟಾಲಂ ಮೇಲೆ ಕೇಸ್‌ ದಾಖಲಿಸಬೇಕು. ಇಲ್ಲವಾದರೆ ರಾಮಚಂದ್ರಪುರ ಮಠಕ್ಕೆ ಮುತ್ತಿಗೆ ಹಾಕುವ ಯೋಜನೆ ರೂಪಿಸಲಾಗುವುದು.”

ಕೆ.ಎಲ್‌.ಅಶೋಕ್‌, ಕೋಮುಸೌಹಾರ್ದ ವೇದಿಕೆ.

source: http://vijaykarnataka.indiatimes.com/district/shivamogga/-/articleshow/55314365.cms

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s