ಲಂಗಗಳಿಗೆ ಹತ್ತಿದ ಗಮ್ಮನ್ನು ಮರೆಮಾಚಿ ಮಂಗಮಾಡುವ ರಾಂಗ್ ವೇಷದ ಕೊನೆಯ ಯಾತ್ರೆ

ಲಂಗಗಳಿಗೆ ಹತ್ತಿದ ಗಮ್ಮನ್ನು ಮರೆಮಾಚಿ ಮಂಗಮಾಡುವ ರಾಂಗ್ ವೇಷದ ಕೊನೆಯ ಯಾತ್ರೆ

ನಮ್ಮ ಹಳ್ಳಿಗಳಲ್ಲಿ ಇಂದಿನ ಪರಿಸ್ಥಿತಿ ಹೇಗಿದೆ ಎಂದು ನೀವೊಮ್ಮೆ ನೋಡಬೇಕು. ಅಲ್ಲಿ ಹಸುಗಳನ್ನು ಸಾಕುವವರಿಲ್ಲ. ಸಾಕುವ ಕೆಲವೇ ಮಂದಿ ಹೈಬ್ರೀಡ್ ಜಾತಿಯ ಹಸುಗಳನ್ನು ಸಾಕುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇನು: ದನಗಳಿಗೆ ಮೇಯಲು ಮೊದಲಿನಂತೆ ಗೋಮಾಳಗಳಿಲ್ಲ. ದನಗಳ ಹೊಟ್ಟೆ ತುಂಬಿಸಲು ಬೇಕಾದ ಆಹಾರಗಳ ಧಾರಣೆ ಭೂಮಿಗಿಂತ ಆಕಾಶಕ್ಕೆ ಹತ್ತಿರ. ಮೇಲಾಗಿ ಕೊಟ್ಟಿಗೆ ಚಾಕರಿ ಮಾಡಲು ಯಾರೂ ಅಲ್ಲಿಲ್ಲ.

ಕೊಟ್ಟಿಗೆ ಚಾಕರಿ ಹಾಗಿರಲಿ, ವೃದ್ಧ ಅಪ್ಪ-ಅಮ್ಮಂದಿರನ್ನು ಬಿಟ್ಟರೆ ಮನೆಯಲ್ಲಿ ಯಾರೂ ಇಲ್ಲದ ಪರಿಸ್ಥಿತಿ ಇದೆ. ಆ ಅಪ್ಪ-ಅಮ್ಮ ಮಕ್ಕಳಿಗೆ ಹೊರೆಯಂತೆ ಕಾಣ್ತಾರೆ; ಯಾಕೆಂದರೆ ಹೊಸ ಕಾಲದ ಭೋಗ-ವೈಭೋಗಗಳಿಗೆ ಅಸ್ತು ಎನ್ನುವ ಜನ ಅವರಲ್ಲ; ದುಂದುವೆಚ್ಚ, ಆಡಂಬರಗಳಿಗೆ ಒಗ್ಗಿಕೊಳ್ಳದ ಜನ ಅವರು; ಮಗ-ಸೊಸೆ ಅಥವಾ ಮಗಳು-ಅಳಿಯ ಹೊಸ ತಲೆಮಾರಿಗರಾಗಿದ್ದು ಮುದಿಜನರ ಜೀವನ ವಿಧಾನ ಇವರಿಗೆ ಹಿಡಿಸೋದಿಲ್ಲ. ಈ ತಿಕ್ಕಾಟದಲ್ಲಿ ಮುದಿಜನರು ಊರಮನೆಗಳಲ್ಲಿ, ಉಳಿದವರು ಉದ್ಯೋಗದಲ್ಲಿ ಅನ್ಯ ಊರುಗಳಲ್ಲಿ.

ನಮ್ಮ ಹಳ್ಳಿ ಮನೆಗಳಲ್ಲಿ ಅನೇಕ ಮನೆಗಳು ಇಂದಿಗೂ ನೆಟ್ಟಗೆ ಬಣ್ಣ-ಸುಣ್ಣ ಕಂಡಿಲ್ಲ. ಕಿತ್ತುಹೋದ ಗಿಲಾಯಿ ವರ್ಷ ವರ್ಷ ರಿಪೇರಿ ಮಾಡಿಸಲೂ ಸಾಧ್ಯವಿಲ್ಲ. ನೆಲಕ್ಕೆ ಗ್ರಾನೈಟು, ಮಾರ್ಬಲ್ಲು ಇಲ್ಲ, ಉತ್ತಮ ಪೀಠೋಪಕರಣಗಳಿಲ್ಲ. ಆದರೂ ಆ ಜನ ಮಠಕ್ಕೆ ಪ್ರಾಮಾಣಿಕವಾಗಿ ನಡೆದುಕೊಳ್ತಾರೆ; ತಮ್ಮ ಅಸಹಾಯ ಸ್ಥಿತಿಯಲ್ಲೂ ಮಠದ ಅವ್ಯಾಹತ ಕರಗಳನ್ನು ಹೇಗೋ ಭರಿಸುತ್ತಲೇ ಇದ್ದಾರೆ. ರಾಂಗ್ ವೇಷದವನ ಮಠದ ಕರಗಳು ಈಗ ಅಷ್ಟಿಷ್ಟಲ್ಲ. ಕರಗಳನ್ನು ಹದಿನೆಂಟು ವರ್ಗಗಳ ಜನ ಕೊಡೋದಿಲ್ಲ; ಅದಕ್ಕೆ ಮಾತ್ರ ಒಂದೇ ವರ್ಗ ಬೇಕು ತೊನೆಯಪ್ಪನಿಗೆ.

ಒಂದೇ ಕರೆಗೆ ಜನ ಕೆಲಸ ಮಾಡ್ತಾರೆ ಏಕೆಂದರೆ ತೊನೆಯಪ್ಪನ ತಾಲೀಬಾನಿಗೆ ಹೆದರಿಕೊಂಡು ಹಾಗೆ ಮಾಡ್ತಾರೆ. ಕೆಲಸ ಮಾಡುವ ಮಂದಿಯಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ಅವರವರ ಮನೆಗೆಲಸಗಳಿಗೇ ಬೇರೆ ಜನ ಬೇಕು. ಹೀಗಿರುವಾಗ ತೊನೆಯಪ್ಪ ಗುಟುರಿದ ಎಂದರೆ ಆ ಸದ್ದು ಗುರಿಕಾರರೆಂಬ ಕಾಕಪೋಕರ ಮುಖಾಂತರ ಹಳ್ಳಿಗಳಲ್ಲಿ ಮಾರ್ದನಿಸುತ್ತದೆ.

ತಾನು ಹೇಳಿದ್ದನ್ನು ಅಲ್ಲಗಳೆಯುವ ಸಾಮರ್ಥ್ಯ ಇಲ್ಲದ್ದನ್ನು ಮನದಟ್ಟು ಮಾಡಿಕೊಂಡ ತೊನೆಯಪ್ಪ ಮನಸ್ಸು ಬಂದಾಗಲೆಲ್ಲ ಒಂದೊಂದು ರೀತಿಯಲ್ಲಿ ಗುಟುರುತ್ತಲೇ ಇರುತ್ತಾನೆ. ಜೀವನದಲ್ಲಿ ತಮಗಾಗಿ ಯಾವತ್ತೂ ವಿಶೇಷ ಪೂಜೆ-ಉಪಾಸನೆ ನಡೆಸದ ಜನ ಅವನ ಗುಟುರಿಗೆ ಬೆದರಿ ಹನುಮಾನ್ ಚಾಲೀಸು ಪಠಿಸಿದರು, ರಾಮತಾರಕ ಮಂತ್ರ ಜಪಿಸಿದರು, ಸೌಂದರ್ಯ ಲಹರಿಯ ಎಂಟನೇ ಅಧ್ಯಾಯವನ್ನು ಪಠಿಸಿದರು, ಆದಿತ್ಯ ಹೃದಯವನ್ನು ಪಠಿಸಿದರು. ಬಹಳಹೊತ್ತು ನೆಲದಮಟ್ಟದಲ್ಲಿ ಕಾಲು ಮಡಚಿ ಕುಳಿತುಕೊಳ್ಳಲಾಗದ ಮುದುಕರೂ ಸಹ ಬಲವಂತವಾಗಿ ಅದನ್ನು ನೋವನುಭವಿಸುತ್ತಲೇ ಆಚರಿಸಿದರು; ಅವೆಲ್ಲವೂ ರಾಂಗ್ ವೇಷದ ಕಚ್ಚೆ ಕಥೆಗಳನ್ನು ಮುಚ್ಚುವುದಕ್ಕೆ ಎಂಬುದು ಪಾಪ ಅವರಾರಿಗೂ ಗೊತ್ತಾಗಲೇ ಇಲ್ಲ!

ಚತುರ್ಮೋಸದಲ್ಲಿ ಕಂಡ ಕಂಡ ಬೀದಿ ಬಾವಾಜಿಗಳನ್ನೆಲ್ಲ ವೇದಿಕೆಗೆ ಕರೆದು ಫಲ-ತಾಂಬೂಲ ಕೊಟ್ಟು ಶಾಲು ಹೊದೆಸಿ ತನಗೆ ಬೆಂಬಲ ನೀಡಬೇಕೆಂದು ವಚನ ತೆಗೆದುಕೊಂಡ. ಪಾಪ ನಮ್ಮ ಪಾಪದ ಜನ ಧರ್ಮಯಾವುದೆಂದೇ ಅರಿಯದ ದುಷ್ಟಕೂಟದ ಹಲವರ ’ಪ್ರವಚನ’ಗಳಿಗೆ ಕಿವಿಯೊಡ್ಡಬೇಕಾಯ್ತು; ಅಂಥವರಿಗೆಲ್ಲ ಅಡ್ಡಬೀಳಬೇಕಾಯ್ತು. ಎಂತೆಂತೆಹ ವಯೋವೃದ್ಧ ಮುತ್ಸದ್ದಿ ಭಕ್ತರು ಪರಂಪರೆಯ ಪೀಠ ಎಂಬ ಮುಗ್ಧತೆಯಲ್ಲಿ ತೊನೆಯಪ್ಪ ಹೇಳಿದ್ದನ್ನೆಲ್ಲ ಮಾಡಿದರು.

ಈಗ ಚಿಂದಿ ಆಯಲು ಹೇಳಿದ್ದಾನೆ. ಮುಂದೊಂದು ದಿನ ಮಲ ಹೊರಲೂ ಹೇಳಬಹುದು. ಇದು ಅಂಥದ್ದೇ ’ಸ್ವಾಮಿ’!! “ವರ್ಣಾನಾಂ ಬ್ರಾಹ್ಮಣೋ ಗುರುಃ” ಎಂದಿದ್ದಾರೆ ಪೂರ್ವಜ ಋಷಿಗಳು. ಬ್ರಾಹ್ಮಣರೆಲ್ಲ ಬರಮಣ್ಣರಾಗುತ್ತ ನಡೆಯುವುದಕ್ಕೆ ಇವ ಪ್ರೇರೇಪಿಸುತ್ತಿದ್ದಾನೆ. ಬ್ರಾಹ್ಮಣರ ಆಚರಣೆ ಏನು? ಅವರ ಕರ್ತವ್ಯಗಳೇನು, ಅದೆಲ್ಲವನ್ನೂ ತಿಳಿಸೋದು ಬಿಟ್ಟು ತನಗೆ ಬೇಕಾದಂತೆಲ್ಲ ಅವರನ್ನು ದುರ್ಮಾರ್ಗಕ್ಕೆ ಬಳಸಿಕೊಳ್ಳುತ್ತಿದ್ದಾನೆ.

ಯಾವ ವಿಷಘಳಿಗೆಯಲ್ಲಿ ಈ ಸುಂದರ ರಾವಣ ಮಠವನ್ನು ಪ್ರವೇಶಿಸಿದನೋ ಅಂತ ಹಲವರು ಆಡಿಕೊಳ್ತಾ ಇದ್ದಾರೆ. ನೋಡೋದಕ್ಕೆ ಸುಂದರ ರಾವಣ, ವೇದಿಕೆಯ ಐಪ್ಯಾಡ್ ಭಾಷಣಗಳಲ್ಲಿ ಶಿಷ್ಯಸ್ತೋಮಕ್ಕಾಗಿ ತನ್ನ ಹಲ್ಲನ್ನೇ ಕಿತ್ತು ಕೊಡುವಂತಹ ಸಾಚಾತನ; ಆದರೆ ಪ್ರತಿನಿತ್ಯ ’ಏಕಾಂತ ಸೇವೆ’ ಮಾತ್ರ ಜರುಗಲೇಬೇಳು ಮುಂಡೇದಕ್ಕೆ! ಏಕಾಂತ ಸೇವೆಗೆ ಹೊತ್ತುಗೊತ್ತು ಇಲ್ಲ; ಅವಕಾಶ ಸಿಕ್ಕಿದಾಗಲೆಲ್ಲ ಅನುಭವಿಸುವ ಭೋಗವರ್ಧನವಾಲ.

ಆರಂಭದಿಂದಲೂ ಈ ಕಳ್ಳ-ಕುಳ್ಳ ಕಲಿತ ಮಹದ್ವಿದ್ಯೆ ಎಂದರೆ ಜನರಿಗೆ ಮಂಕುಬೂದಿ ಎರಚೋದು. ಜನ ಅತಿ ದಡ್ಡರಾದರೂ ಕಷ್ಟ, ಅತಿ ಬುದ್ಧಿವಂತರಾದರೂ ಕಷ್ಟ. ಇಬ್ಬರಿಗೂ ಬೇರೆಯವರು ಹೇಳೋದನ್ನು ಕೇಳೋದಕ್ಕೆ ಆಗೋದಿಲ್ಲ; ಆದರೆ ಮಠದ ಸ್ವಾಮಿಗೆ ಅವರನ್ನು ಮಂಗಮಾಡೋದು ಸುಲಭವಾಗಿಬಿಟ್ಟಿದೆ; ಯಾಕೆಂದರೆ ಎರಡೂ ರೀತಿಯವರು ತೊನೆಯಪ್ಪನ ಮಾತನ್ನು ಕೋಲೆ ಬಸವನಂತೆ ಕೇಳ್ತಾರೆ; ಎಷ್ಟರಮಟ್ಟಿಗೆ ಎಂದರೆ ಚಿಂದಿ ಆಯುವುದಕ್ಕೂ ಹಳದೀ ಶಾಲು ಹೊದ್ದೇ ಬಂದಿದ್ದಾರೆ ಪಾಪ!!

ಇಂದು ದೇಶವ್ಯಾಪಿ ಇರುವ ಗೋಮಾಂಸ ರಪ್ತು ಕಾರ್ಕಾನೆಗಳೆಲ್ಲ ಮೇಲ್ವರ್ಗದವರಿಗೆ ಸೇರಿದ್ದು ಎಂದು ಯಾರೋ ಈ ಹಿಂದೆ ಹೇಳಿದ್ದರಲ್ಲ: ಅದರ ಬಗ್ಗೆ ಈ ನಯವಂಚಕ ಚಕಾರ ಎತ್ತೋದಿಲ್ಲ. ಉತ್ತರಕರ್ನಾಟಕದಲ್ಲಿ ಮೇವು-ನೀರು ಇಲ್ಲದೆ ಪ್ರತಿನಿತ್ಯ ರಾಸುಗಳು ಮಾಲೀಕರಿಂದಲೇ ಕಸಾಯಿಖಾನೆಗೆ ಮಾರಲ್ಪಡುತ್ತಿದ್ದಾವೆ-ಆ ಬಗ್ಗೆ ಅವ ಮಾತಾಡೋದಿಲ್ಲ. ಇವನ ಒಂದು ಸಭೆಗೆ ವ್ಯಯಿಸುವ ಹಣದಿಂದ ಕನಿಷ್ಠ ನೂರು ಹಸುಗಳನ್ನು ಒಂದು ವರ್ಷ ಸಾಕಿ-ಸಲಹಬಹುದು; ಅಂತಹ ಅದೆಷ್ಟು ಸಭೆಗಳನ್ನು ಇವ ನಡೆಸಿಲ್ಲ? ಆದರೆ ಹಣವನ್ನು ಹಸುಗಳ ರಕ್ಷಣೆಗೆ ಅವ ಬಳಸೋದಿಲ್ಲ.
ಯಾರೋ ಕಥೆ ಬರೆದಿದ್ದನ್ನು ಓದಿದೆ-ಒಬ್ಬ ರೈತ ಎತ್ತಿನೊಡನೆ ಹೊಲಕ್ಕೆ ತೆರಳಿ, ಮರದ ಕೆಳಗೆ ಎತ್ತನ್ನು ಕಟ್ಟಿಹಾಕಿ, ಪಕ್ಕದಲ್ಲೆ ಬುತ್ತಿಗಂಟು ಇಟ್ಟು, ಬೇಸಾಯಕ್ಕೆ ಹೋಗುತ್ತಿದ್ದನಂತೆ. ಮರದಮೇಲೊಂದು ಮಂಗವಿತ್ತಂತೆ. ಅದು ಇದನ್ನೆಲ್ಲ ಗಮನಿಸುತ್ತಲೇ ಇತ್ತು. ಅದಕ್ಕೆ ರೈತನ ಬುತ್ತಿ ಗಂಟಿನಮೇಲೆ ಕಣ್ಣುಬಿತ್ತು.

ಬುತ್ತಿ ಗಂಟನ್ನು ಅಪಹರಿಸಿ ತಿಂದು, ಖಾಲಿಬುಟ್ಟಿಯನ್ನು ಮರಳಿ ಅಲ್ಲೇ ಇಡಬೇಕು-ಯಾಕೆಂದರೆ ಪ್ರತಿದಿನವೂ ಮತ್ತೆ ಬುತ್ತಿ ತನಗೆ ದೊರೆಯಬೇಕು. ಆದರೆ ತಾನು ತಿಂದಿದ್ದು ಎಂದು ರೈತನಿಗೆ ಗೊತ್ತಾಗಬಾರದು; ಹಾಗಾಗಿ ತಿಂದ ಕೈಯನ್ನು ಎತ್ತಿನ ಬಾಯಿಯ ಸುತ್ತ ಒರೆಸಿದರೆ ರೈತ ಮರಳಿದಾಗ, ಎತ್ತೇ ತನ್ನ ಬುತ್ತಿಯನ್ನು ಬಿಚ್ಚಿ ತಿಂದುಹಾಕಿದೆ ಎಂದುಕೊಳ್ಳಬೇಕು-ಇದು ಮಂಗನ ಪ್ಲಾನು.

ಸರಿ, ಪ್ಲಾನು ಕಾರ್ಯಗತಗೊಂಡಿತು. ಬುತ್ತಿ ಇಟ್ಟು ರೈತ ಅತ್ತ ತೆರಳಿದ ನಂತರ ಮಂಗ ಮರವಿಳಿಯಿತು. ಬುತ್ತಿ ತಿಂದು ಖಾಲಿ ಮಾಡಿ, ಚೂರುಪಾರು ಇರೋದನ್ನು ಎತ್ತಿನ ಬಾಯಿಯ ಸುತ್ತ ಒರೆಸಿತು. ಮತ್ತೆ ಮರವೇರಿ ಕುಳಿತುಕೊಂಡು ಮಜಾ ನೋಡಿತು. ಪಾಪದ ಎತ್ತು ದುಡಿದು ದಣಿದು ಸುಸ್ತಾಗಿದ್ದರಿಂದ ಮಲಗಿ ವಿಶ್ರಮಿಸಿತ್ತು. ರೈತ ಮರಳಿದ, ಬುತ್ತಿ ಹುಡುಕಿದ, ಗಂಟು ಖಾಲಿ; ಖಾಲಿಬುಟ್ಟಿ ಮಾತ್ರ ಇದ್ದಿತ್ತು. ಎತ್ತನ್ನು ಗಮನಿಸಿದ, ಎತ್ತಿನ ಬಾಯ ಹೊರಗೆ ಒಂದೆಡೆ ಬೆಣ್ಣೆ ಮೆತ್ತಿಕೊಂಡಿತ್ತು. ಬುತ್ತಿಯನ್ನು ಎತ್ತೇ ತಿಂದಿದೆ ಎಂದುಕೊಂಡ. ಎತ್ತಿಗೆ ಛಡಿಯೇಟು ಬಿತ್ತು.

ಮಾರನೇ ದಿನವೂ ಅದೇ ಮುಂದುವರಿಯಿತು. ನಂತರದ ಒಂದೆರಡು ದಿನಗಳಲ್ಲೂ ಸಹ. ಯಾವುದೋ ಒಂದು ಗಳಿಗೆಯಲ್ಲಿ ರೈತನ ಮನದಲ್ಲಿ ಸಂದೇಹ ಮೂಡಿತು. ಎಷ್ಟೆಂದರೂ ಎತ್ತು ರೈತನ ಜೀವಾಳ. ಅಷ್ಟು ಮುಗ್ಧ ಪ್ರಾಣಿ ಬೇರೆ ಯಾವುದೂ ಇಲ್ಲ. ಹಾಗಾದರೆ ಅಲ್ಲಿ ಏನು ನಡೆಯುತ್ತದೆ? ಗಮನಿಸುವ ಸಲುವಾಗಿ ಅಂದು ಯಥಾವತ್ತಾಗಿ ಮರದ ಕೆಳಗೆ ಎತ್ತು ಕಟ್ಟಿ, ಪಕ್ಕಕ್ಕೆ ಬುತ್ತಿಗಂಟು ಇಟ್ಟು ರೈತ ಹೊಲದೆಡೆಗೆ ತೆರಳಿದಂತೆ ಮಾಡಿ ಕೆಲವೇ ನಿಮಿಷಗಳಲ್ಲಿ ಮರಳಿಬಂದ.

ರೈತನನ್ನು ಮಂಗ ಮಾಡಿದ ಮಂಗರಾಜರು ಸರಸರನೆ ಮರವಿಳಿದು ಭರಭರನೆ ಬುತ್ತಿ ಬಿಚ್ಚಿ ತಿನ್ನಲು ತೊಡಗಿದ್ದರು! ದೂರದಿಂದ ಅದನ್ನು ಗಮನಿಸಿದವನೇ ಓಡುತ್ತ ಬಂದು ಮಂಗಕ್ಕೆ ಚೆನ್ನಾಗಿ ಥಳಿಸಿದ. ಮಾತನಾಡಲು ಬಾರದ ಎತ್ತಿನಲ್ಲಿ ಕ್ಷಮೆಯನ್ನು ಬೇಡಿದ.

ಈ ಕತೆ ನಮ್ಮ ಸಮಾಜದ ಇಂದಿನ ಸ್ಥಿತಿಗೆ ಪಕ್ಕಾ ಹೊಂದುತ್ತದೆ; ವ್ಯತ್ಯಾಸವಿಷ್ಟೆ-ಇಲ್ಲಿ ಮಂಗ ಪೀಠವನ್ನೇರಿ ಕುಳಿತಿದೆ. ಭಕ್ತರ ಕಾಣಿಕೆಯ ಬುತ್ತಿಗಂಟನ್ನು ಹೊಡೆದುಕೊಳ್ಳುತ್ತಿದೆ. ಗಂಟು ಕಟ್ಟಿಕೊಳ್ಳೋದಕ್ಕೆ ಬೇಕಾಗಿ ನೂರಾರು ಯೋಜನೆಗಳು; ತರಾವರಿ ಹೆಸರುಗಳು! ಒಂದೂ ದೇಡಗತಿ ಹತ್ತೋದಲ್ಲ.

ಹಿಮಾಲಯಕ್ಕೆ ಹೋಗುತ್ತೇನೆಂದು ಕಾಗೆ ಹಾರಿಸಿದ್ದ ಈ ಮಂಗ ಮುಂದೆ ಬೇರೆ ರೀತಿಯಲ್ಲಿ ಜನರನ್ನು ಮಂಗಮಾಡುವ ಯೋಜನೆಗಳನ್ನು ಹಾಕಿಕೊಂಡಿತು. ಜನರ ಕಿವಿಗಳ ಮೇಲೆ ಹೂವಿಡುತ್ತಲೇ ಬಂದಿತು. ಕಚ್ಚೆ ಕೇಸುಗಳು ಪೀಠವನ್ನೇ ಅಲುಗಾಡಿಸುತ್ತಿರುವಾಗ ಅದನ್ನು ಮುಚ್ಚುವ ಸಲುವಾಗಿ ನಾನಾವಿಧದ ಯೋಜನೆಗಳನ್ನು ಹಾಕಿಕೊಂಡಿತು.

ಹೊರಗಡೆ ಸಮಷ್ಟಿಯ ಜನತೆಗೇನು ಇವನೊಬ್ಬ ಮಹಾನ್ ಸಂತನೆಂಬಂತೆ ಕಾಣಿಸಬೇಕು; ಈ ಭೂಮಿಯಲ್ಲಿ ನಭೂತೋ ನ ಭವಿಷ್ಯತಿ ಎಂಬಂತಹ ಸಂತ ಇವನೆಂದು ಜನ ಅಂದುಕೊಳ್ಳಬೇಕು-ಅಂತಹ ಆಡಂಬರದ ಒಡ್ಡೋಲಗಗಳನ್ನು ಕೊಡುತ್ತಲೇ ಇದ್ದಾನೆ ತೊನೆಯಪ್ಪ. ವಾಸ್ತವದಲ್ಲಿ ಯತಿ ಮಾಡಬಾರದ ಅಷ್ಟೂ ಕರ್ಮಗಳಲ್ಲಿ ಇವ ಭಾಗಿಯಾಗಿದ್ದಾನೆ; ಎಲ್ಲದಕ್ಕಿಂತ ಹೆಚ್ಚಾಗಿ ಶಂಕರರ ಶಾಸನಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾನೆ. ತನ್ನ ತಪ್ಪನ್ನೆಲ್ಲ ಹಸುವಿನ ಮರೆಯಲ್ಲಿ ಮುಚ್ಚಲು ನೋಡುತ್ತಾನೆ. ಹಸುವನ್ನು ಅಡ್ಡಲಾಗಿ ನಿಲ್ಲಿಸಿಕೊಂಡು, ಆ ಕಡೆಯಲ್ಲಿ ನೆಲ ಅಗೆದು ಕೆಚ್ಚೆಕೇಸುಗಳನ್ನು ಮುಚ್ಚಿಬಿಡುವ ಭಯಂಕರ ಪ್ರಯತ್ನದಲ್ಲಿದ್ದಾನೆ.

ತಮಾಷೆಯೆಂದರೆ ಹಳ್ಳಿಗಳಲ್ಲಿ ಮುದಿ ಅಪ್ಪ-ಅಮ್ಮಂದಿರ ದೇಖರೇಖಿ ನೋಡಿಕೊಳ್ಳಲು ಆಗದ ಮಕ್ಕಳು, ಯುವಜನ ತೊನೆಯಪ್ಪನ ಸೇವೆಗೆ ನಿಂತುಬಿಡ್ತಾರೆ; ಅವ ಹೇಳಿದ್ದನ್ನೆಲ್ಲ ಮಾಡ್ತಾರೆ; ಅವನ ಕಣ್ಣು ಹೋದಲ್ಲಿ ಅವರು ಇರಬೇಕಂತೆ-ಹಾಗಂತಾನವ. ಯಾವ ಸುಂದರಿಯ ಮೇಲೆ ಅವನ ಕಣ್ಣು ನೆಡುತ್ತದೋ ಅವಳನ್ನು ಮಂಚಕ್ಕೆ ತರುವ ಜವಾಬ್ದಾರಿ ಶಿಷ್ಯರದ್ದು ಎಂಬುದು ಅವನ ಹೇಳಿಕೆಯ ಭಾವಾರ್ಥ. ಅವನ ಕೆಲವೇ ಭಾವಚಿತ್ರಗಳು ಸಾಕು-ಅದರಲ್ಲಿ ಅವನ ಮುಖ, ಮುಖದಲ್ಲಿನ ಭಾವ, ಕಣ್ಣುಗಳು ಯಾರಮೇಲೆ ನೆಟ್ಟಿವೆ ಎಂಬುದನ್ನೆಲ್ಲ ನೋಡಿದರೆ ಅವನೆಂಥ ಕಾಮುಕ ಎಂಬುದನ್ನು ಯಾರಾದರೂ ಹೇಳಿಬಿಡಬಹುದು.

ಯುವ ಜನತೆ ಯಾವ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾಗಿತ್ತೋ ಅದನ್ನೆಲ್ಲ ಮರೆಸಿ ಆಡಂಬರದ ನಾಟಕಗಳನ್ನು ನಡೆಸುತ್ತಾನೆ. ಹುಟ್ಟಿನಿಂದ ಇಲ್ಲಿಯವರೆಗೆ ಕೊಟ್ಟಿಗೆಗೆ ಕಾಲಿರಿಸದ ಯುವ ಜನ, ತೊನೆಯಪ್ಪ ಹೇಳಿದನೆಂದು ಯಾವುದೋ ಹಸುಗಳಿಗೆ ಪೂಜೆ ಮಾಡಿ ವೀಡಿಯೋ ಮಾಡಿಕೊಳ್ತಾರೆ. ಸಹಸ್ರಾರು ಸಂಖ್ಯೆಯಲ್ಲಿ ಅವನ ಬಾಡಬಡುಕರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅವನ ಪರವಾಗಿ ಬ್ಯಾಟಿಂಗ್ ಗೆ ನಿಂತುಬಿಡ್ತಾರೆ. ಅಲ್ಲೆಲ್ಲೋ ಹೋಗಿ ಚಿಂದಿ ಆಯುತ್ತಾರೆ. ಯಾವ್ಯಾವುದೋ ಬಾವಾಜಿಗಳ ಕಾಲಿಗೆ ಬೀಳ್ತಾರೆ.

ವೇದ ಗೊತ್ತಿಲ್ಲ, ಪುರಾಣಗಳು ಬದನೇಕಾಯಿಗಳಂತಾಗಿವೆ, ದರ್ಶನಗಳ ಬಗ್ಗೆ ಮಾಹಿತಿಯೇ ಇಲ್ಲ; ಪೀಠದಲ್ಲಿ ಕುಳಿತ ತೊನೆಯಪ್ಪನಿಗೆ ಅದೆಲ್ಲ ಗೊತ್ತಿದ್ದರಲ್ಲವೇ!! ಇಂತಹ ತಾಲಿಬಾನ್ ಪಡೆಗೆ ಸಂಧ್ಯಾವಂದನೆಯಂತಹ ಆಚರಣೆ ಗೊತ್ತಿಲ್ಲ, ಜನಿವಾರದ ಮಹತ್ವ ಗೊತ್ತಿಲ್ಲ, ಅಪ್ಪ-ಅಮ್ಮಂದಿರ ಕಷ್ಟದಲ್ಲಿ ಭಾಗಿಯಾಗೋದು ಬೇಕಾಗಿಲ್ಲ.

ಮಠಕ್ಕೆ ಬರ್ತಾರೆ; ಅಲ್ಲಿ ಹುಡುಗೀರು, ಹೆಂಗಸರು ಇರ್ತಾರಲ್ಲ-ಅವರೆದುರು ಮೆರೆಯೋದಕ್ಕಾಗುತ್ತೆ, ಬಿಟ್ಟಿ ಊಟ ಸಿಗುತ್ತೆ, ಐಪ್ಯಾಡ್-ಐಫೋನ್ ಏನೇ ಬೇಕಾದ್ರೂ ಬಳಸಬಹುದು, ಅಂತರ್ಜಾಲದಲ್ಲಿ ನೀಲಿ ಚಿತ್ರಗಳನ್ನು ನೋಡಲೂ ಅವಕಾಶವಿದೆ. ’ಮಹಾಸ್ವಾಮಿಗಳೇ’ ಅದಕ್ಕೆಲ್ಲ ಪ್ರೋತ್ಸಾಹ ಕೊಡ್ತಾರೆ. “ನಮ್ಮ ಮಹಾಸ್ವಾಮಿಗಳು ಹಸುವಿನಂಥವರು” ಎಂದು ಅಂಥವರೆಲ್ಲ ಹೊಗಳ್ತಾರೆ; ತೊನೆಯಪ್ಪನಿಗೆ ಜೈಕಾರ ಹಾಕ್ತಾರೆ.

ಯಾವ ಸನ್ಯಾಸಿ ನೇರವಾಗಿ ಅಂತರ್ಜಾಲಕ್ಕೆ ಬರುತ್ತಾನೋ ಅವನು ಸನ್ಯಾಸ ಧರ್ಮದಿಂದ ವಿಮುಖನಾಗುವ ಮೊದಲ ಹೆಜ್ಜೆ ಅದೇ ಎಂದು ನಾವು ಭಾವಿಸಬೇಕು. ಯಾವ ಸನ್ಯಾಸಿ ತನ್ನ ಹಾದರದ ಘಟನೆಗಳನ್ನು ವಿರೋಧಿಸಿದವರನ್ನು ಘಟಸರ್ಪದಂತೆ ವಿರೋಧಿಗಳೆಂದು ಭಾವಿಸಿ ಕಚ್ಚಲು ಹವಣಿಸುತ್ತಾನೋ ಅವನು ಸನ್ಯಾಸಿಯಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಯಾವ ಸನ್ಯಾಸಿ ವರ್ಷಪೂರ್ತಿ ನಾನಾ ಬಗೆಯಲ್ಲಿ ವರಾಡ ಎತ್ತುತ್ತಾನೋ ಅವನು ಪಕ್ಕಾ ರಾಜಕಾರಣಿ ಎಂದು ಮನದಟ್ಟುಮಾಡಿಕೊಳ್ಳಬೇಕು.

ದಾನ ಮಾಡಬೇಕಂತೆ-ಅದು ಸತ್ಪಾತ್ರರಿಗೆ; ಕಚ್ಚೆಹರುಕು ’ಸನ್ಯಾಸಿ’ಗಳ ಕೋರ್ಟ್ ಕೇಸುಗಳನ್ನು ಮುಚ್ಚಿಹಾಕುವ ಸಲುವಾಗಿ ಅಲ್ಲ. ತಾಕತ್ತಿದ್ದರೆ ನಾಲ್ಕು ನಾಲ್ಕು ದನ ಸಾಕಿ ಅಥವಾ ನೀವು ನೀವೇ ಸಾಮೂಹಿಕವಾಗಿ ಹಳ್ಳಿಗಳಲ್ಲಿ ಒಂದೊಂದು ಗೋಶಾಲೆ ಆರಂಭಿಸಿ, ಅಲ್ಲಿ ನೀವೇ ಖರ್ಚನ್ನು ನಿಭಾಯಿಸಿಕೊಳ್ಳಿ. ಹಾದರದ ಹೋರಿಗೆ ಹುರುಳಿಕಾಯಿ ಬೇಯಿಸಲು ನೀವು ಬಿಡಿಗಾಸನ್ನೂ ಕೊಡಬೇಡಿ.

Thumari Ramachandra

source: https://www.facebook.com/groups/1499395003680065/permalink/1855476024738626/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s