ಈಗಿನ ಸ್ಥಿತಿಯಲ್ಲಿ ಹವ್ಯಕ ಸಮಾಜವು ಅವ್ಯಕ್ತವಾದ ಒಳನೋವನ್ನು ಅನುಭವಿಸುತ್ತಿದೆ

ಈಗಿನ ಸ್ಥಿತಿಯಲ್ಲಿ ಹವ್ಯಕ ಸಮಾಜವು ಅವ್ಯಕ್ತವಾದ ಒಳನೋವನ್ನು ಅನುಭವಿಸುತ್ತಿದೆ || ಹವ್ಯಕ ಸಮಾಜವು ಒಂದು ಪ್ರಬುದ್ಧ ಸಮಾಜ ಎಂಬುದನ್ನು ಈಗಲೂ ಯಾರೂ ಅಲ್ಲಗಳೆಯುತ್ತಿಲ್ಲ || – ಎಲ್ಲರೂ ತಮ್ಮ ತಮ್ಮವರ ಮೇಲೆಯೇ ಮಣ್ಣೆರಚಿಕೊಳ್ಳುವ ಸ್ಥಿತಿ ಒದಗಿ ಬಂದಿದೆ || — ಈ ಪರಿಸರದಲ್ಲಿ ವಸ್ತು ಸ್ಥಿತಿಯನ್ನು ಅರಿತುಕೊಂಡು ಆದಷ್ಟೂ “ಅವಾಚ್ಯ” ಶಬ್ದಗಳನ್ನು ಉಪಯೋಗಿಸದೇ ವ್ಯವಹರಿಸುವುದು ಉತ್ತಮವೆಂದು ಎಲ್ಲರೂ ಅರಿತಲ್ಲಿ ಉತ್ತಮ|| – ಈಗ PIL ಹಾಕಿದವರನ್ನೂ ಅವರನ್ನು ಅನುಮೋದಿಸುವವರನ್ನೂ — “ನಾಸ್ತಿಕರು” – ಎಂಬ ಪದದೊಂದಿಗೆ ಬಿಂಬಿಸಲಾಗುತ್ತಿದೆ – ಮತ್ತೂ ಅವರ ಮೇಲೆ ಅವಾಚ್ಯ ಶಬ್ದ ಗಳನ್ನೂ ಉಪಯೋಗಿಸಲಾಗುತ್ತಿದೆ — ಪುನಃ ಪ್ರತಿಕ್ರಿಯೆಯಲ್ಲೂ ಅವಾಚ್ಯ ಶಬ್ಧ ಗಳು ಬರುತ್ತಿವೆ || – ಹವ್ಯಕ ಬಂಧು ಗಳೆಲ್ಲರೂ ಸ್ವಲ್ಪ ಮನಬಿಚ್ಚಿ ಪ್ರಶಾಂತ ಮನೋಭಾವದಿಂದ ಕೆಳಗಿನ ಬರಹಗಳನ್ನು ಓದಬೇಕೆಂದು ಕೇಳಿಕೊಳ್ಳುತ್ತೇವೆ ||
೧. ಸಾವಿರಾರು ವರುಷಗಳ ಪರಂಪರೆಯಿರುವ- ನಾಲ್ಕು ಆಮ್ನಾಯ ಮಠಗಳನ್ನೂ- ನಮ್ಮ ಮಠವನ್ನೂ ಸೇರಿ ಇನ್ನೂ ಅನೇಕ ಮಠಗಳನ್ನೂ ಸ್ಥಾಪಿಸಿ ದ – ಹಾಗೂ — ಮೂವರು ಪ್ರಸಿದ್ಧ ಮತಾಚಾರ್ಯರಲ್ಲಿ ಮೊದಲಿಗರೂ ಲೋಕಪ್ರಸಿದ್ಧರೂ ಆದ ಶ್ರೀಮಾದಾಚಾರ್ಯ ಶಂಕರರು ನಿಶ್ಚಯ ವಾಗಿಯೂ ಅತ್ಯಂತ ಪೂಜನೀಯರೂ ಆಗಿ – ಭಾರತ ದೇಶದ ಅಖಂಡತೆಯ ಉಳಿವಿಗೆ ( ಹಾಗೂ ಮರುಸ್ಥಾಪನೆ ಗೆ) ಕಾರಣೀಭೂತರೂ ಆಗಿದ್ದಾರೆ || ಹೀಗಿರುವಲ್ಲಿ ಅವರಿಂದ ಷ್ಠಾಪಿಸಲ್ಪಟ್ಟ ಪೀಠಗಳ ಮೇಲೆ ನಮಗೆಲ್ಲಾ “ಅಸ್ಖಲಿತ ” ಭಕ್ತಿಯೂ ಗೌರವವೂ ಇದೆ || — ಆದುದರಿಂದ – ಈ ಪೀಠಕ್ಕೆ ಯಾವರೀತಿಯ ಕಳಂಕವೂ ಬರಬಾರದೆಂಬುದೇ ನಮ್ಮ ಮಹದಾಶಯ — ಹಾಗೂ ಇದರ ಪಾವಿತ್ರ್ಯತೆಯನ್ನೂ ಸದಾಕಾಲವೂ ಉಳಿಸಿಕೊಂಡು ಬರುವುದು ಶಿಷ್ಯರೆಲ್ಲರನ್ನೂ ಸೇರಿ ನಮ್ಮೆಲ್ಲರ ಆಧ್ಯ ಕರ್ತವ್ಯವೇ ಆಗಿದೆ ಎಂಬುದು ಪ್ರಶ್ನಾತೀತ || ಒಂದು ವೇಳೆ ನಮ್ಮ ಕೈ ಮೀರಿ ಕಳಂಕ ಬಂದಲ್ಲಿ ಅದರ ಪರಿಹಾರ ಸಿಗುವ ವರೆಗೆ ದುಡಿಯುವುದ ನಿಜ ಭಕ್ತರ ಪರಮ ಕರ್ತವ್ಯ ಎಂಬುದು ಶಾಸ್ತ್ರ ಸಮ್ಮತ || ಈಗ ಕಳಂಕ ಸುಳಿದಾಡುತ್ತಿದೆ – ಆಪಾದನೆಗಳೆಲ್ಲವೂ ಅಸತ್ಯವೂ ಆಗಿರಬಹುದು — ಆದರೆ ಇದರ ಪರಿಹಾರಕ್ಕೆ ಬೇರೆ ವಿಧಿಯಿಲ್ಲದೆ ನ್ಯಾಯಾಲಯ ವೇ ಪ್ರವೇಶಿಸುವ ಪರಿಸ್ಥಿತಿ ಎದುರಾಗಿದೆ || ಈ ಸ್ಥಿತಿ ಯಲ್ಲಿ ಗೌರವಾನ್ವಿತ ನ್ಯಾಯಾಲಯದ ತೀರ್ಪೇ – ಪ್ರಜಾಪ್ರಭುತ್ವ ದಲ್ಲಿ ಅಂತಿಮ || ೨. ಈಗ PIL – ಬಂದುದು ಗೌರವಾನ್ವಿತ ನ್ಯಾಯಾಲಯವು ತನ್ನ ತೀರ್ಪು ನೀಡಿದ ಮೇಲೆ ಎಂಬುದನ್ನು ಗಮನಿಸಿ — ಈ ತೀರ್ಪಿನಲ್ಲಿ ದ್ವಂದ್ವಗಳು ಎದ್ದು ಕಾಣುತ್ತಿವೆ ಎಂದು ಹಲವರು, ಇನ್ನೂ ಕೆಲವರು ಆಪಾದನೆಯಿಂದ ಮುಕ್ತರಾದರೂ ಅನೈತಿಕ . ಸಂಬಂಧ ವಿತ್ತು ಎನ್ನುವರು , ಹಲವು ಪತ್ರಿಕೆಗಳೂ ಇದನ್ನೇ ಹೇಳುತ್ತಿವೆ –|| ಅಲ್ಲದೇ ಇನ್ನೂ ಉಳಿದವರು ಆರೋಪ ಪಟ್ಟಿ ಯ ವಿಚಾರಣೆಯೂ ಆಗದಿರುವಾಗ – ಎಲ್ಲಾ ಆರೋಪಗಳೂ ಶೂನ್ಯವಾಗಲಿಲ್ಲ ಅನ್ನುವವರಿದ್ದಾರೆ || – ಅಂತೂ ಪಾರದರ್ಶಕತೆ ಯ ಕೊರತೆ – ಎದ್ದು ಕಾಣುವಂತೇ ಭಾಸವಾಗುವುದರಿಂದ – ಅನೇಕರಲ್ಲಿ ಸಂಶಯವೂ ಉಳಿದಿರುವುದು ಹೌದು|| –ಶಾಸ್ತ್ರಗಳು ಹೇಳುತ್ತವೆ — “ಸಂಶಯಾತ್ಮಾ ವಿನಶ್ಯತಿ” – ಎಂದು || ಈ ಸಂಶಯಗಳನ್ನು ಪರಿಹರಿಸಿ ನಿಲ್ಲುವುದೇ ಶಾಸ್ತ್ರ ಸಮ್ಮತ || ಆದುದರಿಂದ ಪ್ರತಿ ವಾದಿಯು ಮೇಲಿನ ನ್ಯಾಯಾಲಯದಲ್ಲಿ ಈ ಅನೈತಿಕ ಸಂಬಂಧವೂ ಇರಲಿಲ್ಲ ಎಂದು ಸ್ಫಷ್ಟ ವಾಗಿ ಹೇಳುವಂತೇ ಕೇಳಿಕೊಳ್ಳುವುದು — ಪೀಠ ದ ಪಾವಿತ್ರ್ಯತೆ ಯ ದೃಷ್ಟಿಯಲ್ಲಿ ಅನಿವಾರ್ಯ ಮಾತ್ರವಲ್ಲ ಕರ್ತವ್ಯವೂ ಹೌದು || — ಇಲ್ಲದೆ ಹೋದಲ್ಲಿ ಪೀಠ ದ ಮೇಲಿನ ಆಪಾದನೆಯನ್ನು ಪರಿಹರಿಸದ ಕರ್ತವ್ಯ ವಿಮೂಢತ್ವಕ್ಕೆ ಸಮಾಜ ದ ಎಲ್ಲ ಶಿಷ್ಯರೂ ಬಾಧ್ಯರಾಗುತ್ತಾರೆ || –೩. ಆದರೆ ಈ ಹೇಳಲಾಗುತ್ತಿರುವ ಅನೈತಿಕ ಸಂಬಂಧ ವನ್ನು – ಪ್ರಶ್ನಿಸುವ ಲಕ್ಷಣ ಗಳು ಕಂಡು ಬರಲೇ ಇಲ್ಲ || ಹೀಗಿದ್ದಲ್ಲಿ ಪೀಠ ದ ” ಪಾವಿತ್ರ್ಯತೆ ” ಯು . ಪ್ರಶ್ನಾ ರ್ಥಕ ವಾಗಿಯೇ ಉಳಿಯುವಂತಹಾ ಸ್ಥಿತಿಯು ನಿರ್ಮಾಣ ವಾಗಿದೆ || – ಪೀಠದ ಗೌರವ ದ ಪ್ರಶ್ನೆ ಯಾದುದರಿಂದ PIL ಬಿಟ್ಟು ಬೇರೆ ಯಾವ ದಾರಿಯೂ ಕಾಣದಾಗಿದೆ || ಪೀಠ ದ ಮೇಲಿನ ನಮ್ಮ ಭಕ್ತಿ ಗೌರವ ಗಳು ಪ್ರಶ್ನಾತೀತ – ಯಾಕೆಂದರೆ ಪೀಠವನ್ನು ನಾವು ಎಂದೂ ಪ್ರಶ್ನಿಸುವುದಿಲ್ಲ — ಆದರೆ ಪೀಠ ದ ಮೇಲೆ ಏರಿಬಂದ ಕಳಂಕವನ್ನು ಪ್ರಶಿಸದೇ ಬಿಡಬಹುದೇ || – ಪೀಠ ವು ಸದಾ ಪವಿತ್ರ — ಆದರೆ ಕಳಂಕನಿವಾರಣೆ ಅತಿ ಅವಶ್ಯಕ || ಸರ್ವೇ ಜನಾಃ ಸುಖಿನೋ ಭವಂತು ||

Edurkala Ishwar Bhat

source: https://www.facebook.com/edurkalaishwar.bhat/posts/1135831023118914

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s