ಶಾಲಾ ಸುವರ್ಣ ಮಹೋತ್ಸವ: ರಾಘವೇಶ್ವರ ಶ್ರೀಗಳ ಪಾಲ್ಗೊಳ್ಳುವಿಕೆಗೆ ವಿರೋಧ

ಶಾಲಾ ಸುವರ್ಣ ಮಹೋತ್ಸವ: ರಾಘವೇಶ್ವರ ಶ್ರೀಗಳ ಪಾಲ್ಗೊಳ್ಳುವಿಕೆಗೆ ವಿರೋಧ

ಉದಯವಾಣಿ, Oct 30, 2016, 2:25 PM IST

ಸಾಗರ: ತಾಲೂಕಿನ ಹೆಗ್ಗೊàಡು ಕೇಡಲಸರದಲ್ಲಿ ನ. 4 ಮತ್ತು 5ರಂದು ನಡೆಯುವ ವಿದ್ಯಾಭಿವೃದ್ಧಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗಳು ಪಾಲ್ಗೊಳ್ಳದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿ ಕೆಲವರು ಉಪವಿಭಾಗಾಧಿಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಗರದ ಶಂಕರ ಮಠದ ಅಶ್ವಿ‌ನಿಕುಮಾರ್‌, ತಾಲೂಕಿನ 50 ವರ್ಷಗಳ ಇತಿಹಾಸವಿರುವ ಕೇಡಲಸರದ ವಿದ್ಯಾಭಿವೃದ್ಧಿ ಸಂಘವು ಪ್ರೌಢ ಶಿಕ್ಷಣದಿಂದ ಹಿಡಿದು ಕಾಲೇಜು ಶಿಕ್ಷಣದವರೆಗೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಸಂಸ್ಥೆಯ ಸುವರ್ಣ ಮಹೋತ್ಸವ ನ. 4 ಮತ್ತು 5ರಂದು ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಹೊಸನಗರ ರಾಮಚಂದ್ರಾಪುರ ಮಠದ ಸ್ವಾಮಿಗಳನ್ನು ಕರೆದಿರುವುದು ಖಂಡನೀಯ ಎಂದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಮಾತನಾಡಿ, ಒಂದು ನ್ಯಾಯಾಲಯದಲ್ಲಿ ರಾಘವೇಶ್ವರ ಸ್ವಾಮಿಗಳು ಆರೋಪದಿಂದ ಮುಕ್ತರಾಗಿದ್ದೇವೆ ಎಂದು ಬೀಗುತ್ತಿದ್ದಾರೆ. ಪ್ರಕರಣದ ವಿಚಾರಣೆಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಇನ್ನೂ ರಾಘವೇಶ್ವರ ಸ್ವಾಮಿಗಳು ಪೂರ್ಣದೋಷಮುಕ್ತರಾಗಿಲ್ಲ. ಯಾವುದೇ ಕಾರಣಕ್ಕೂ ವಿದ್ಯಾಭಿವೃದ್ಧಿ ಸಂಘದ ಕಾರ್ಯಕ್ರಮದಲ್ಲಿ ರಾಘವೇಶ್ವರ ಸ್ವಾಮಿಗಳು ವೇದಿಕೆ ಏರಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಆರ್ಯ ಈಡಿಗ ಯುವ ವೇದಿಕೆ ಅಧ್ಯಕ್ಷ ಸುಧಾಕರ ಕುಗ್ವೆ, ಪ್ರಧಾನ ಕಾರ್ಯದರ್ಶಿ ಕನ್ನಪ್ಪ ಮುಳಕೇರಿ, ಭೂರಹಿತ ಹೋರಾಟ ವೇದಿಕೆ ಸಂಚಾಲಕ ಕಬಸೆ ಅಶೋಕಮೂರ್ತಿ, ಮಂಜಪ್ಪ ಗಾಂಧಿನಗರ, ಕೃಷ್ಣಮೂರ್ತಿ, ಮಂಜುನಾಥ ಹೊಸಬಾಳೆ, ಜೆ.ಆರ್‌. ಗಣಪತಿ ಭಟ್‌ ಜಿಗಳೇಮನೆ, ಮಂಜುನಾಥ್‌ ಓತಗೋಡು ಇನ್ನಿತರರು ಇದ್ದರು.

source: http://www.udayavani.com/kannada/news/shimoga-news/175978/the-school-s-golden-jubilee-sri-participation-of-the-opposition-raghaveshwara

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s