ಉಳಿದವರು ಮರೆಯಲ್ಲಿ ನಕ್ಕರು….

ಉಳಿದವರು ಮರೆಯಲ್ಲಿ ನಕ್ಕರು….

ಮೋಟ್ಟ ಮೋದಲಿಗೆ ಇದು ಪ್ರೇಮಲತಾ ದಿವಾಕರ್ ಮತ್ತು ಬಳಗದವರ ಷಡ್ಯಂತ್ರ ಎಂದು ಅವರನ್ನೆಲ್ಲ ಬೀದಿಯಲ್ಲಿ ನಿಲ್ಲಿಸಿ ಬೈಯ್ಯುತ್ತಿರುವಾಗ ಬಹಳಷ್ಟು ಪ್ರಭೃತಿಗಳು ಮರೆಯಲ್ಲಿ ನಕ್ಕರು.
……
ಗೋಕರ್ಣದ ಜನರ ಷಡ್ಯಂತ್ರವೆಂದು ಕಂಡ ಕಂಡ ಕಡೆಗಳಲ್ಲಿ ಸಿಕ್ಕ ಸಿಕ್ಕವರು ಬೈಯುತ್ತಿರುವಾಗ ಉಳಿದವರು ಮರೆಯಲ್ಲಿ ನಕ್ಕರು.
……
ಇದು ಸ್ವರ್ನವಲ್ಲಿಕಡೆಯಿಂದ ನಡೆಯುತ್ತಿರುವ ಷಡ್ಯಂತ್ರ ಎಂದು ಅಲ್ಲಿಗೆ ಸಂಬಂಧಿಸಿದ – ಸಂಬಂಧ ಪಡದ ಜನರ ಮೇಲೆಲ್ಲಾ ಕೆಸರೆರಚ ತೊಡಗಿದಾಗ ಉಳಿದದವರು ಮರೆಯಲ್ಲಿ ನಕ್ಕರು.
…..
ಇದು ಹಿಂದೂ ಧರ್ಮದ ಮೇಲೇ ಮಿಶನರಿಗಳ ದಬ್ಬಾಳಿಕೆಯ ದ್ಯೋತಕ ಇದಕ್ಕೆಲ್ಲ ಜಾರ್ಜ್ ರವರು ಮತ್ತು ಮುಖ್ಯಮಂತ್ರಿಗಳೇ ಕಾರಣ ಎಂದು ಬಾಯಿಗೆ ಬಂದಂತೇ ಬೈದಾಗ ಉಳಿದವರು ಮರೆಯಲ್ಲಿ ನಕ್ಕರು.
……
ಹವ್ಯಕ ಸಮಾಜದ ಹಿರಿಯರು ಅಲ್ಲಲ್ಲಿ ದನಿಯೆತ್ತಿದಾಗ, ಜಾಲತಾಣಗಳಲ್ಲಿ ಕೆಲವರು ವಿರೋಧಿಸಿದಾಗ ಅವರ ಮಾನ ಹರಾಜುಹಾಕುವಂತೇ ಬೈಯ್ದಾಗ ಉಳಿದವರು ಮರೆಯಲ್ಲೇ ನಕ್ಕರು.
…..
ಇದೆಲ್ಲಕ್ಕೂ ಲಾಗಾಯತ್ತಿನಿಂದ ಕಿರುಕುಳ ಕೊಡುತ್ತಲೇ ಬಂದಿರುವ ಜಗದ್ಗುರು ಪೀಠ, ಶೃಂಗೇರಿಯ ಕಡೆಯೇ ಬೊಟ್ಟು ಮಾಡಿ ಬೈಯ್ದಾಗ ಉಳಿದವರು ಮರೆಯಲ್ಲೇ ನಕ್ಕರು.
…..
ಸಮಾನ ಮನಸ್ಕರೆಂಬ ಎಡಬಿಡಂಗಿಗಳು ಇಷ್ಟಕ್ಕೆಲ್ಲ ಮೂಲ ಕಾರಣ ಎಂದು ಅವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿ ಬೈದಾಗ ಉಳಿದವರು ಮರೆಯಲ್ಲೇ ನಕ್ಕರು.
……
RSS ನ ಪ್ರಮುಖರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಯವರನ್ನು ವಿರೋಧಿ ಗುಂಪಿನಲ್ಲಿ ಕಂಡಾಗ ಅವರನ್ನು ಮೂರು ರಸ್ತೆ ಕೂಡುವ ಜಾಗಕ್ಕೆ ತಂದಿಟ್ಟು ಬೈಯ್ದಾಗ ಉಳಿದವರು ಮರೆಯಲ್ಲಿ ನಕ್ಕರು.
…..
RSS ನ ಹಿರಿಯ ರು ಶ್ರೀ ನಾಗರಾಜಿ್ ರವರು ತಟಸ್ಥ ನಿಲುವೆಂದು ಹೇಳಿದರೂ ಅವರ ವಿವರಣೆಯಿಂದ ಜಾಗೃತರಾದ ಮೇಲೆ ಅವರನ್ನೂ ಆಡಬಾರದ ಮಾತುಗಳಿಂದ ಬೈಯ್ದಾಗ ಉಳಿದವರು ಮರೆಯಲ್ಲಿ ನಕ್ಕರು.

……..
ಅಂತೂ ಈ ಮರೆಯಲ್ಲಿ ನಕ್ಕವರೆಲ್ಲ ಹಾಗ್ಯಾಕೆ ನಕ್ಕರು ಎಂದರೆ 1- ಪುಣ್ಯಕ್ಕೆ ನಮ್ಮನ್ನೇನೂ ಅಂದಿಲ್ಲವಲ್ಲಾ… 2 ನಮಗೆ ಹಿಂದೆ ಬೈದಿದ್ದರೂ ನಿಜ ಏನೆಂದು ಗೊತ್ತಾಗಿರಬೇಕು ಹಾಗಾಗಿ ನಮ್ಮನ್ನು ಬಿಟ್ಟು ಅವರನ್ನು ಬೈಯ್ಯ ತೊಡಗಿದ್ದಾರೆ ಸರೀ ಇದೆ. ಹಾಗೇ ಆಗಬೇಕು ….. 3. ಮುಂದಿನ ಅಂಕ ಯಾರದ್ದಿರಬಹುದೂ…. ಒಳ್ಳೇ ಮಜವಾಗಿದೆ… ಈರೀತಿಯ ಕಾರಣಗಳಿವೆ. ನಾನೂ ಮುದಿನ ಸರದಿ ಯಾರದ್ದೆಂದು ಕಾಯುತ್ತಿದ್ದೇನೆ…!!!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/186760491730133/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s