ಬೆಂಕಿಗೆ ಸಿದ್ಧರಾಗಿ, ಅಗ್ನಿಗೆ ಸಿದ್ಧರಾಗಿ, ರಕ್ತಕ್ಕೆ ಸಿದ್ಧರಾಗಿ, ಪ್ರಾಣಕ್ಕೆ ಸಿದ್ಧರಾಗಿ..

ಬೆಂಕಿಗೆ ಸಿದ್ಧರಾಗಿ, ಅಗ್ನಿಗೆ ಸಿದ್ಧರಾಗಿ, ರಕ್ತಕ್ಕೆ ಸಿದ್ಧರಾಗಿ, ಪ್ರಾಣಕ್ಕೆ ಸಿದ್ಧರಾಗಿ..

ಬೆಂಕಿಗೆ ಸಿದ್ಧರಾಗಿ, ಅಗ್ನಿಗೆ ಸಿದ್ಧರಾಗಿ, ರಕ್ತಕ್ಕೆ ಸಿದ್ಧರಾಗಿ, ಪ್ರಾಣಕ್ಕೆ ಸಿದ್ಧರಾಗಿ
ಇದು ಉರಿಯಲ್ಲಿ ಪಾಕ್ ಉಗ್ರರು ನಮ್ಮ ಸೈನಿಕ ಶಿಬಿರದ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಮ್ಮ ಸೈನಿಕರನ್ನು ಪ್ರತಿದಾಳಿಗೆ ಹುಮ್ಮಸ್ಸು ತುಂಬಲು ಹೇಳಿದ ಮಾತುಗಳಲ್ಲ. ಬದಲಿಗೆ, ಅನೇಕ ಅತ್ಯಾಚಾರಗಳ ಆರೋಪ ಹೊತ್ತ ಪಾಪಕರ್ಮಿ(criminal)ಯೊಬ್ಬ ತನ್ನನ್ನು ಬಚಾವ್ ಮಾಡಲು ತನ್ನ ಬೆಂಬಲಿಗರನ್ನು ಹಿಂಸಾತ್ಮಕ ಹೋರಾಟಕ್ಕೆ ಸಜ್ಜುಗೊಳಿಸಲು ಹೇಳಿದ ಮಾತುಗಳಿವು.

೮ನೇ ತಾರೀಖು ಆತ ತನ್ನ ಬೆಂಬಲಿಗರ ಸಭೆ ಕರೆದಿದ್ದ. ಆತನ ಭಾಷಣದ ಪೂರ್ಣಪಾಠ ನನಗೆ ಲಭಿಸಿತು. ಕುತೂಹಲದಿಂದ ಗಮನಿಸಿದೆ. ಆ ಭಾಷಣವನ್ನು ಕೇಳಿದರೆ ೧೯೮೦ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಹಸ್ತಕನಾಗಿ ಖಾಲಿಸ್ಥಾನ ಸ್ಥಾಪನೆಗಾಗಿ ಹಿಂಸಾತ್ಮಕ ಹೋರಾಟ ನಡೆಸಿದ ಸಿಖ್ ಭಯೋತ್ಪಾದಕ ಸಂತ ಜರ್ನೈಲ್ ಸಿಂಹ ಭಿಂದ್ರಾನವಾಲೆಯ ಭಾಷಣವನ್ನು ಕೇಳಿದಂತೆನಿಸಿತು. ಅವನೂ ಕೂಡ ಮಾತೆತ್ತಿದರೆ ರಕ್ತ, ಬೆಂಕಿ, ಪ್ರಾಣ ಇತ್ಯಾದಿ ಹಿಂಸೆಯನ್ನು ಪ್ರಚೋದಿಸುವ ಭಾಷಣವನ್ನೇ ಮಾಡುತ್ತಿದ್ದ. ಅವನು ತನ್ನ ಹೆಸರಿಗೆ ಸಂತ ಎಂಬ ವಿಶೇಷಣವನ್ನು ಜೋಡಿಸಿಕೊಂಡಿದ್ದ. ಕಾವಿ ಧರಿಸಿದ್ದ ಆ ಭಯೋತ್ಪಾದಕನನ್ನು ನೋಡಿ ಅಟಲ ಬಿಹಾರಿ ವಾಜಪೇಯಿ ಅವರು “ಕೋವಿ ಹಿಡಿದ ಸಂತ” ಎಂಬ ಕವನ ರಚಿಸಿದ್ದರು.
ಈ ಪಾಪಕರ್ಮಿಯೂ ಸಹ ಆಗಾಗ ಸಂತ ಸಮಾವೇಶಗಳನ್ನು ನಡೆಸುತ್ತಾನೆ. ಕಾವಿ ಧರಿಸುತ್ತಾನೆ. ತಾನು ಸಂನ್ಯಾಸಿ ಎಂದು ಬಿಂಬಿಸುತ್ತಾನೆ.

ಸಂನ್ಯಾಸಿಗೆ ದೇಹಭಾವ ಲವಲೇಶವೂ ಇರಬಾರದು. ಆದರೆ ಈತ ತನ್ನ ಭಾಷಣದಲ್ಲಿ ಹೇಳಿದ್ದನ್ನು ಗಮನಿಸಿ: “ಗುರುವಿನ ದೇಹ ರಕ್ಷಣೆ ಶಿಷ್ಯರ ಹೊಣೆ.” ತನ್ನ ದೇಹರಕ್ಷಣೆಗಾಗಿ ಶಿಷ್ಯರ ಮೇಲೆ ಭಾವನಾತ್ಮಕ ಒತ್ತಡ ಹೇರುವ ಇವನೆಂಥ ಸಂನ್ಯಾಸಿ?

ನಿಜವಾದ ಸಂನ್ಯಾಸಿ ಶಿಷ್ಯರಿಗೆ ಶಾಂತಿಯನ್ನು ಪಡೆಯುವ ಮಾರ್ಗವನ್ನು ಬೋಧಿಸಬೇಕು. ಸಂಯಮವನ್ನು ಸಾಧಿಸುವ ದಾರಿಯನ್ನು ತೋರಬೇಕು. ಕ್ರೋಧದ ಮೇಲೆ ಪ್ರಭುತ್ವ ಗಳಿಸುವ ಪರಿಯನ್ನು ಹೇಳಿಕೊಡಬೇಕು. ಆದರೆ ಈತ? ಕ್ರೋಧಕ್ಕೆ ವಶವಾಗಲು ಪ್ರಚೋದನೆ ನೀಡಿದ. ಸರಕಾರದ ವಿರುದ್ಧ ಹಿಂಸಾತ್ಮಕ ಯುದ್ಧಕ್ಕೆ ತನ್ನ ಬೆಂಬಲಿಗರನ್ನು ಅಣಿಗೊಳಿಸುವ ರೀತಿಯಲ್ಲಿ ಮಾತನಾಡಿದ.

ಬಹುಶಃ ಒಂದು ವರ್ಷದ ಹಿಂದೆ ಅಂತ ಅನಿಸುತ್ತದೆ, ತನ್ನ ಬೆಂಬಲಿಗರ ಗುಪ್ತ ಸಮಾವೇಶದಲ್ಲಿ ಹೀಗೆಯೇ ಮಾತನಾಡಿದ್ದ. ಆಗ ತಾನು ಬಯಸಿದರೆ ಬಿಹಾರದಲ್ಲಿ, ರಾಜಸ್ಥಾನದಲ್ಲಿ, ಕೋಲ್ಕತ್ತಾದಲ್ಲಿ ಇದಕ್ಕಿಂತ ದೊಡ್ಡ ಸಾಮ್ರಾಜ್ಯ ಕಟ್ಟಬಲ್ಲೆ ಎಂದು ಆರ್ಭಟಿಸಿದ್ದ. ಈಗ ತಾನು ಕುಳಿತ ಪೀಠ ತನ್ನನ್ನು ದೂಡಿಹಾಕುತ್ತದೆ ಎಂಬ ಸ್ಥಿತಿ ನಿರ್ಮಾಣವಾಗಿದ್ದರಿಂದ ಈತ ಬಿಹಾರ, ರಾಜಸ್ಥಾನ ಮತ್ತು ಕೋಲ್ಕತ್ತಾಗಳ ಆಲೋಚನೆ ಮಾಡಬೇಕಾಗಿತ್ತು, ಸಹಜವಾಗಿ. ಆದರೆ ಈತ ತನ್ನ ಹಾಲೀ ಸ್ಥಾನವನ್ನು ಉಳಿಸಿಕೊಳ್ಳಲೋಸುಗ ಹಿಂಸಾತ್ಮಕ ಹೋರಾಟದ ಮಾತುನಾಡುತ್ತಾನೆ! ಅಂದರೆ ಬಿಹಾರ, ರಾಜಸ್ಥಾನ, ಕೋಲ್ಕತ್ತಾಗಳಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡುವುದೆಲ್ಲ ಪಟಾಕಿ ಎಂದಹಾಗಾಯಿತು.

ಇರಲಿ, ೮ನೇ ತಾರಿಖಿನ ಸಮಾವೇಶ ಅವನ ಕಾವಿಯನ್ನು ಕಳಚಿದ್ದಂತೂ ನಿಜ.

Sachchidananda Hegde

source: https://www.facebook.com/sachchidananda.hegde/posts/1781659998717283

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s