ಕೇಡಲಸರದ( ಹೆಗ್ಗೋಡು) ವಿ ಸಂ ಪ್ರೌಡಶಾಲೆ.. ನೈತಿಕ ದಿವಾಳಿಯನ್ನು ಸಾರಿದ ವ್ಯಕ್ತಿಯನ್ನು ಆಹ್ವಾನಿಸುತ್ತಿರುವುದು ಹೇಸಿಕೆಯಾಗಿದೆ..

ನೈತಿಕ ದಿವಾಳಿಯನ್ನು ಸಾರಿದ ವ್ಯಕ್ತಿಯನ್ನು ಆಹ್ವಾನಿಸುತ್ತಿರುವುದು ಹೇಸಿಕೆಯಾಗಿದೆ..

ಕೇಡಲಸರದ( ಹೆಗ್ಗೋಡು) ವಿ ಸಂ ಪ್ರೌಡಶಾಲೆ ನಾನು ಓದಿದ ಶಾಲೆ.ಹೊಸ ಕಟ್ಟಡದ ಮೊದಲ ತಂಡ ನಮ್ಮದು.ಈ ಶಾಲೆ ಸುವರ್ಣ ಮಹೋತ್ಸವ ಆಚರಿಸುತ್ತಿರುವುದನ್ನು ನೋಡುವಂತಾಗಿದ್ದು ಹೆಮ್ಮೆ ಪಡುವಂತಾದ್ದು.

ಈ ಕಾರ್ಯಕ್ರಮಕ್ಕೆ ಹಳೇ ವಿದ್ಯಾರ್ಥಿಯಾಗಿ ಸಂಭ್ರಮದಿಂದ ಭಾಗವಹಿಸಲು ಅವಕಾಶವಾಗದಂತೆ ವಿವಾದಾಸ್ಪದವಾದ ಒಬ್ಬ ವ್ಯಕ್ತಿಯನ್ನು ಸಂಬಂಧ ಪಟ್ಟವರು ವೇದಿಕೆಯಲ್ಲಿ ಕೂರಿಸುತ್ತಿರುವುದು ಬಹಳ ಅಸಹ್ಯ ವೆನ್ನಿಸುತ್ತಿದೆ. ಯಾವ ಶಾಲೆಯಲ್ಲಿ ನೈತಿಕ ಶೀಕ್ಷಣ ಪಡೆದುಕೊಂಡೆನೋ ಅದೇ ಶಾಲೆಯಲ್ಲಿ ನೈತಿಕ ದಿವಾಳಿಯನ್ನು ಸಾರಿದ ವ್ಯಕ್ತಿಯನ್ನು ಆಹ್ವಾನಿಸುತ್ತಿರುವುದು ಹೇಸಿಕೆಯಾಗಿದೆ.

ಮಾಡಿಕೊಳ್ಳಿ. ನಿಮಗೆ ಬೇಕಾದಂತೆ ಮಾಡಿಕೊಳ್ಳಿ. ಆದರೆ ತವರಿನ ಕಾರ್ಯಕ್ರಮದಲ್ಲಿ ಒಂದು ಹೆಣ್ಣುಮಗಳಿಗೆ ಭಾಗವಹಿಸಲು ಅವಕಾಶ ಕೊಡದಿದ್ದರೆ ಎಷ್ಟು ಬೇಸರವಾಗುತ್ತೋ ಅಷ್ಟೇ ಬೇಸರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕೊಡದಿದ್ದರಿಂದ ನನಗೆ ಆಗಿದೆ ಎಂದು ಈ ಮೂಲಕ ಹೇಳಿಕೊಳ್ಳಲೇ ಬೇಕಾಗಿದೆ.ನನ್ನನ್ನು ಮತ್ತು ಶೀಲಗೆಟ್ಟವನ ವಿರೋದಿಗಳಾದ ನನ್ನಂತಹ ಇತರ ಹಳೇ ವಿದ್ಯಾರ್ಥಿಗಳನ್ನು ಬಹಿಷ್ಕರಿಸಲಾಗಿಯೇ ಆ ಕಾವಿವೇಷಧಾರಿಯನ್ನು ವೇದಿಕೆಯಲ್ಲಿ ಕೂರಿಸಲಾಗುತ್ತಿದೆ ಎಂಬುದು ಎಲ್ಲರಿಗೂ ಮೇಲ್ನೋಟಕ್ಕೆ ಅರ್ಥವಾಗುವಂತಹದು.

ನಿಜ, ನಾನೇನು ದೊಡ್ಡ ಕೋಲಲ್ಲ.ಭಾಗವಹಿಸಿದರೇನು ಬಿಟ್ಟರೇನು ಎಂಬ ನಿಮ್ಮ ತರ್ಕ ವ್ಯವಾಹಾರ ದೃಷ್ಟಿಯಿಂದ ಸರಿಯಾಗಿದ್ದರೂ ಆ ಶಾಲೆಯೋಡನೆ ನಮಗಿದ್ದ ಒಂದು ಭಾವನಾತ್ಮಕ ಸಂಬಂಧವನ್ನು ಹತ್ತಿಕ್ಕಿ ನೀವು ಪಡುವ ಸಂತೋಷ ಅದೊಂದು ವಿಕೃತಸಂತೋಷವೇ ಸರಿ.
ನನಗೆ ಗೊತ್ತಿದೆ, ನಾನು ಈ ಎಲ್ಲವನ್ನು ಸಹಿಸಿ ಬಂದರೆ ಅದು ದಕ್ಷಬ್ರಹ್ಮನ ಯಜ್ಞಕ್ಕೆ ಹೋದ ಶಿವನ ಪತ್ನಿ ಸತಿಯ ಪಾಡೇ ಆಗುತ್ತದೆ.

ಆ ಶಾಲೆಯಲ್ಲಿ ನನ್ನ ತಂಡದಲ್ಲಿ ಓದಿದ ಬಹಳ ಜನ ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದು ಕಾರ್ಯಕ್ರಮಕ್ಕೆ ಬರಲು ಶಕ್ಯವಿಲ್ಲದವರು ಕೆಲವರು ಇದ್ದಾರು.ಈ ಎರಡರ ತೊಂದರೆಯು ಇಲ್ಲದ ನನಗೆ ಕುತಂತ್ರದ ಕಾರಣದಿಂದ ಬರಲು ಅಸಾದ್ಯವಾಗುವಂತೆ ಮಾಡಿದ್ದು ,ಬಂದರೆ ಚಪ್ಪಲಿ ಪೋರಕೆಗಳನ್ನು ಪ್ರದರ್ಶಿಸುವ ಸಂಭವ ಇರುವಂತೆ ಮಾಡಿದ್ದು, ಶೋಭಾಯಮಾನವಲ್ಲದಿದ್ದರೂ ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕಾಗಿದೆ.

ಹಳೇಯ ನೆನಪುಗಳನ್ನು ಕೆದಕಿಕೊಂಡು ,ಎಲ್ಲೇಲ್ಲೋ ಇರುವ ಹಳೇಯ ಮಿತ್ರರು ಬಂದಾಗ ಅವರ ಜೀವನದ ಯಶಸ್ಸು ಅಪಯಶಸ್ಸುಗಳನ್ನು ಕಣ್ತುಂಬ ನೋಡಿ ವಿಚಾರಿಸಿಕೊಂಡು ಅವರೊಂದಿಗೆ ನನ್ನ ಐದು ದಶಕಗಳ ಜೀವನಚಕ್ರವನ್ನು ಹೋಲಿಸಿಕೊಂಡು ಸಂಭ್ರಮಿಸ ಬೇಕಾಗಿದ್ದ ಈ ಕಾರ್ಯಕ್ರಮ ಅನೈತಿಕನ ಹಿಂಬಾಲಕರ ದುರ್ಬುದ್ಧಿಯಿಂದಾಗಿ ನನ್ನ ಪಾಲಿಗೆ ಇಲ್ಲವಾಯಿತು.ನಲವತ್ತು ವರ್ಷಗಳ ಹಂಬಲದಿಂದ ಸಾಧಿಸಿ ಜಯಿಸಿದ ನನ್ನ ಗುರಿಯಲ್ಲಿ ಸವೆಸಿದ ದಾರಿಯನ್ನು ನನ್ನ ಮಿತ್ರರಿಗೆ ಅಂತರ್ಯದಲ್ಲಿ ಪಿಸುಗುಡುವ ,ಹಂಚಿಕೊಳ್ಳುವ ಅವಕಾಶ ಶೀಲಗೆಟ್ಟವನೆಂದು ಕೊರ್ಟನಲ್ಲಿ ಸಾರಲ್ಪಟವನ ಹಿಂಬಾಲಕರ ಸಣ್ಣಬುದ್ಧಿಯಿಂದಾಗಿ ನನ್ನ ಪಾಲಿಗೆ ಇಲ್ಲವಾಯಿತು.

ನಾನು ಗೈರು ಹಾಜರಾದರೇನು.ಆ ಶಾಲೆಯಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಪಡೆದುಕೊಳ್ಳಬಹುದಾದ ಎಲ್ಲಾ ನಲಿವು ಆನಂದಗಳನ್ನು ಪಡೆದುಕೊಳ್ಳಲೆಂದು ಆಶಿಸುತ್ತೇನೆ

heggodu

Ganapathi Bhatta

source: https://www.facebook.com/groups/1499395003680065/permalink/1841327536153475/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s