ದಂಡ ಯೋಗ್ಯ, ಅನಾಚಾರಿ, ಸುಳ್ಳುಗಾರ…

ದಂಡ ಯೋಗ್ಯ, ಅನಾಚಾರಿ, ಸುಳ್ಳುಗಾರ…

ನ್ಯಾಯಾಲಯ ಎನ್ನುವುದು ಈ ದೇಶದ ಸಂವಿಧಾನಾತ್ಮಕವಾದ ನ್ಯಾಯದಾನ ಸಂಸ್ಥೆ. ಇಡೀ ದೇಶ ಮತ್ತು ದೇಶಾಭಮಾನಿ ವ್ಯಕ್ತಿಗಳು ಮತ್ತು ತದಂಗ ಸಂಸ್ಥೆಗಳು ಅದನ್ನು ಇದುವರೆಗೂ ಒಪ್ಪಿ ಮುನ್ನಡೆಯುತ್ತಿವೆ. ಅಂತಹ ನ್ಯಾಯಾಲಯದಿಂದ ಈಗಾಗಲೇ ರಾಮಚಂದ್ರಾಪುರ ಮಠ ಮತ್ತು ಸದರಿ ಪೀಠಾಧಿಪತಿ ಎನ್ನಿಸಿಕೊಂಡವನ ಇದುವರೆಗಿನ ಪ್ರಕರಣಗಳಲ್ಲಿ ಮೊದಲ ಪ್ರಕರಣವೊಂದರಲ್ಲಿ “ಈ ಮಠವೆಂಬುದು ಸಾರ್ವಜನಿಕ ಆಸ್ತಿ, ತತ್ಕಾರಣದಿಂದ ‘ದಂಡ ‘ ಹಾಕುವುದಿಲ್ಲ. ಹಾಕಿದರೆ ಭಕ್ತರ ಸಾರ್ವಜನಿಕರ ಹಣವನ್ನೇ ನೀನು ದಂಡದ ರೂಪದಲ್ಲಿ ಕೊಟ್ಟಂತಾಗುತ್ತದೆ ” ಎಂದು ಶ್ರೀಮಠದ ‘ಸಾರ್ವಜನಿಕತೆ ‘ ಯನ್ನು ತಿಳಿಸಿದೆ. ಇದಲ್ಲದೇ ಈಗಾಗಲೇ ಅತ್ಯಾಚಾರ ಆರೋಪವನ್ನೇ ತಳ್ಳಿಹಾಕಿ ನ್ಯಾಯಾಲಯ ಕೊಟ್ಟ ಕಾರಣಗಳ ಪಟ್ಟಿಯಲ್ಲಿಯೂ ಸದರಿ ವ್ಯಕ್ತಿಯ ಕುರಿತ ಹೇಳಿಕೆಯಲ್ಲಿ ‘ಇಲ್ – ಇಂಟಿಮಸಿ ‘ ಪದ ಬಳಕೆಯ ಮೂಲಕ ಅನುಮಾನಕ್ಕೆಡೆಯಿತ್ತಿದೆ. ಈಗಾಗಲೇ ಈ ವ್ಯಕ್ತಿ ತನ್ನ ಮೇಲೆ ಅಪಪ್ರಚಾರ ಹಾಗೂ ಧಾರ್ಮಿಕ ನಂಬಿಕೆಗಳ ಮೇಲೆ ಆಘಾತವಾಗಿದೆ ಎದು ದೂರಿದ ಪ್ರಕರಣವನ್ನು ನ್ಯಾಯಪೀಠ ವಜಾಗೊಳಿಸಿದೆ ಎಂಬಲ್ಲಿಗೆ ಇವನು ‘ಸುಳ್ಳುಗಾರ ‘ ಎಂಬುದನ್ನೂ ತಿಳಿಸಿ ಆಗಿದೆ….!
ಇದಲ್ಲದೆ PILಸಂಬಂಧ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ.
ಅಂದರೆ ಈ ವ್ಯಕ್ತಿ ನ್ಯಾಯಾಲಯದ ದೃಷ್ಟಿಯಲ್ಲೇ ಇದುವರೆಗೆ…
1. ದಂಡ ಯೋಗ್ಯ,
2. ಅನಾಚಾರಿ,
3. ಸುಳ್ಳುಗಾರ…
ಬಿರುದುಗಳು ಉಳಿದದ್ದು ಇನ್ನೂ ಬರಬೇಕಿದೆಯಷ್ಟೇ..!

ಈ ಹಂತದಲ್ಲಿ ನಮ್ಮ ನಾಡಿನ ಕೆಲ ಶಾಸನ ನಿರ್ಮಾತೃಗಳೆನ್ನಿಸಿಕೊಂಡವರು, ಧರ್ಮ – ಭಾರತೀಯತೆ, ಹಿಂದುತ್ವ ಇತ್ಯಾದಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲೇ ಹುಟ್ಟಿಕೊಂಡ ಸಂಘ ಸಂಸ್ಥೆಗಳು, ಅಲ್ಲದೇ ಈ ನಾಡಿನ ಕೆಲ ಪ್ರಜ್ಞಾವಂತರೆಂದುಕೊಂಡವರ ಪಟ್ಟಿಯಲ್ಲಿ ಕಾಣಿಸಿಕೊಂಡ ವ್ಯಕ್ತಿಗಳು, RSS ಮತ್ತು ಅದರ ಕೆಲ ಪ್ರಕಲ್ಪಗಳಾದ ಕರ್ನಾಟಕದ ‘ವಿಶ್ವ ಹಿಂದೂ ಪರಿಷತ್ ‘ ಹಾಗೂ ‘ ಹಿಂದೂ ಜಾಗರಣ ವೇದಿಕೆ ‘ ಯಂತಹ ಸಂಘಟನೆಗಳು ಈ ರಾಮಚಂದ್ರಾಪುರ ಮಠ ಮತ್ತು ಪೀಠಸ್ಥ ನನ್ನು ಓಲೈಸುತ್ತಿರುವುದಲ್ಲದೇ, ಆ ಕುರಿತು ತಮ್ಮ ಅಭಿಪ್ರಾಯಗಳನ್ನು “ಲಿಖಿತ ” ರೂಪದಲ್ಲೂ ಬಿಡುಗಡೆ ಗೊಳಿಸಿರುವುದು ಸಖೇದಾಶ್ಚರ್ಯಕ್ಕೆ ಕಾರಣವಾಗಿದೆ. ಅಲ್ಲದೇ ಮುಂದೆ ಇನ್ನೂ ನ್ಯಾಯಾಲಯದ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕು, ಸ್ಪಷ್ಟ ತೀರ್ಪುಗಳು ಬರಬೇಕಿದೆಯಷ್ಟೇ. ಅದು ಒಂದುವೇಳೆ ವ್ಯತಿರಿಕ್ತವಾಗಿ ಬಂದಲ್ಲಿ….!!!? ಈಗಾಗಲೇ ಓಲೈಸಿದ ವ್ಯಕ್ತಿಗಳು ಮತ್ತು ಸಂಘಟನೆಗಳು ಖಂಡಿತವಾಗಿ ಸಮಾಜಕ್ಕೆ ಉತ್ತರದಾಯಿಗಳಾಗುತ್ತಾರೆ. ಅಲ್ಲದೇ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರುವಾಗಲೆ ಮಠ ಮತ್ತು ಸದರಿ ಪೀಠಸ್ಥನ ಕುರಿತು ತೆಗೆದುಕೊಳ್ಳುತ್ತಿರುವ ನಿಲುವುಗಳು ಮತ್ತು ಪ್ರಕಟಣೆಗಳು ವಿಚಾರಣಾ ಹಂತದ ಪ್ರಕ್ರಿಯೆಯ ಮೇಲೆ ನ್ಯಾಯಾಲಯದ ಮೇಲೆಯೂ ಪರಿಣಾಮ ಬೀರಬಹುದಾಗಿದೆ.
ಏನೇ ಇರಲಿ, ಒಬ್ಬ ವ್ಯಕ್ತಿಯನ್ನೋ ಅವನ ಚರ್ಯೆಗಳನ್ನೋ ಒಂದೇ ಮುಖದಿಂದ ಅಳೆದು ತಮ್ಮ ನಿರ್ಣಯಗಳನ್ನು ಸಮಾಜಕ್ಕೆ ಹೇಳುವ ಸಂಘಟನೆಗಳು ಯಾ ವ್ಯಕ್ತಿಗಳ ಆಂತರ್ಯವನ್ನು ಮುಂದಿನ ದಿನಗಳಲ್ಲಿ ಜನ ಹೇಗೆ ಸ್ವೀಕರಿಸಬಹುದು…? ಕಾದು ನೋಡೋಣ…!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/179697165769799/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s