ಮಾನ್ಯ ಉತ್ತರಕನ್ನಡದ ಚುನಾಯಿತ ಜನಪ್ರತಿಗಳೇ

ಮಾನ್ಯ ಉತ್ತರಕನ್ನಡದ ಚುನಾಯಿತ ಜನಪ್ರತಿಗಳೇ
– ಆರ್.ವಿ.ದೇಶಪಾಂಡೆ
– ಅನಂತಕುಮಾರ ಹೆಗಡೆ
– ಮಂಕಾಳ್ ವೈದ್ಯ
– ವಿಶ್ವೇಶ್ವರ ಹೆಗಡೆ

ದಯವಿಟ್ಟು ಈ ರಾಘವೇಶ್ವರ ಸ್ವಾಮೀ ಫೋಭಿಯಾದಿಂದ ಹೊರಬನ್ನಿ. ಈ ಸ್ವಾಮಿಯ ವಿಷಯ ಕೋರ್ಟ್ ನೋಡಿಕೊಳ್ಳುತ್ತದೆ ನೀವು ಅದರಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನೀವು ನಿಮ್ಮ ಕ್ಷೇತ್ರದ ಅಭಿವೃದ್ಧಿ ಯತ್ತ ಗಮನ ಹರಿಸಿ. ನಿಮಗೆ ಈ ಸ್ವಾಮಿಯಲ್ಲಿ ಅಷ್ಟೊಂದು ಆಸಕ್ತಿಯಿದ್ದರೆ ದಯವಿಟ್ಟು ನಿಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ ಹಿಂದೆ ಮಲ್ಲಿಕಾ ಶೆರಾವತ್ ಳ ಹತ್ತಿರ ಚಾಮರ ಸೇವೆ ಮಾಡಿಸಿಕೊಂಡ ಈ ಸ್ವಾಮೀ ಗೆ ನೀವು ಚಾಮರ ಸೇವೆ ಮಾಡುವವರಾಗಿ ಸೇರಿಕೊಳ್ಳಿ. ಅವರಿಗೆ ದಿನ ಬಹುಪರಾಕ್ ಹಾಕುವ ಭಾಗ್ಯ ನಿಮಗೆ ಸಿಗುತ್ತದೆ. ಅಂತೂ ನಿಮ್ಮ ಮೇಲೆ ಒಳ್ಳೆಯ ನೀರಿಕ್ಷೆ ಇಟ್ಟುಕೊಂಡಿದ್ದ ನಿಮ್ಮ ಕ್ಷೇತ್ರದ ಜನರಿಗೆ ನಿಮ್ಮ ಆಸಕ್ತಿ ಇರುವದು ಈ ಅನಾಚಾರ ಸ್ವಾಮಿಯಲ್ಲಿ ಅಂತ ತೋರಿಸಿಕೊಟ್ಟಿದ್ದಿರಿ.

ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ವಿಚಾರಕ್ಕೆ ಬರೋಣ…. ಇದು ಹಿಂದೆ ಬಿ.ಜೆ.ಪಿ. ಸರಕಾರ ಕೈಗೊಂಡಂತ ಗೋಕರ್ಣ ಹಸ್ತಾಂತರದಂತ ಏಕಾ ಏಕಿ ನಿರ್ಣಯ ಇದಲ್ಲ. ಯಾವಾಗ ಇವನ ಅವ್ಯವಾರ ಬಯಲಾದರೂ ಇವನು ಪೀಠ ತೊರೆಯಲು ಒಪ್ಪಲಿಲ್ಲವೋ ಅವಾಗ ಮಠಕ್ಕೆ ನಡೆದುಕೊಳ್ಳುತ್ತಿದ್ದ ಸದ್ಭಕ್ತರಿಗೆ ಕೋರ್ಟಿನ ಮೊರೆ ಹೋಗುವದು ಅನಿವಾರ್ಯವಾಯಿತು. ಕೋರ್ಟ್ ಎರಡು ಕಡೆಯ ವಾದವಿವಾದ ಆಲಿಸಿದ ನಂತರವೇ ಆಡಳಿತಾಧಿಕಾರಿ ನೇಮಿಸುವ ವಿಚಾರಕ್ಕೆ ಬಂದಿದ್ದು. ಮಠದಲ್ಲಿ ಎಲ್ಲದು ಸರಿಯಿದೆ ಅಂತ ಆಗಿದ್ದರೆ ಆಡಳಿತಾಧಿಕಾರಿ ನೇಮಿಸುವ ವಿಚಾರದಲ್ಲಿ ಸ್ವಾಮಿಗಳಿಗೆ ಭಯವೇಕೆ? ನೀವುಗಳು ಮಾಧ್ಯಮಗಳಲ್ಲಿ ಹೇಳಿಕೆ ಕೊಡುವದನ್ನು ನೋಡಿದರೆ ನೀವುಗಳು ಸಹ ಇವನ ಅವ್ಯವಹಾರಗಳಲ್ಲಿ ಭಾಗೀದಾರರೋ ಅನ್ನುವ ಸಂಶಯ ಬರುತ್ತಿದೆ. ಇವನ ಹಾವ ಭಾವಗಳನ್ನು ನೋಡಿದ ಪ್ರಾರ್ಥಮಿಕ ಶಾಲೆಗೇ ಹೋಗುವ ಮಕ್ಕಳು ಇವನ ಸನ್ಯಾಸತ್ವದ ಬಗ್ಗೆ ಪ್ರಶ್ನೆ ಮಾಡುತ್ತಾರೆ ಆದರೆ ಆ ಮಕ್ಕಳಿಗಿರುವಷ್ಟು ಕನಿಷ್ಠ ಜ್ಞಾನ ನಿಮಗಿಲ್ಲವಾಯಿತೇ? ಇನ್ನಾದರೂ ಎಚ್ಚತ್ತು ಕೊಳ್ಳಿ ತನ್ನ ನಿತ್ಯಾನುಷ್ಠಾನವನ್ನು ಮರೆತು ಕೇವಲ ಭ್ರಷ್ಠಾಚಾರ ಅನಾಚಾರ ವ್ಯಭಿಚಾರ ಸ್ವೇಚ್ಚಾಚಾರಗಳಲ್ಲಿ ಮೈಮರೆತು ಆದಿ ಶಂಕರರ ಹೆಸರಿಗೆ ಕಳಂಕ ತರುತ್ತಿರುವ ಈ ಸ್ವಾಮಿಯನ್ನು ಧಿಕ್ಕರಿಸಿ.

ಇನ್ನು ಗೋಕರ್ಣ ವಿಷಯದಲ್ಲಿ ಸಾಕಷ್ಟು ಅಭಿವೃದ್ಧಿ ಯಾಗಿದೆ ಅಂತ ಬೊಗಳೆ ಬಿಡುವ ನಿಮಗೆ ನೇರ ಪ್ರಶ್ನೆ? ದೇವಸ್ಥಾನಕ್ಕೆ ಬರುತ್ತಿರುವ ಆದಾಯವನ್ನು ಕೊಳ್ಳೆ ಹೊಡೆಯುವದು ಅಭಿವೃದ್ಧಿಯೇ? ಇವರೇ ಹೇಳಿದ್ದಾರೆ ಗೋಕರ್ಣ ವನ್ನು ಸರಕಾರ ತನ್ನ ವಶಕ್ಕೆ ಪಡೆದರೆ ಲೂಟಿ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತದೆ ಅಂತ. ಇದರ ಅರ್ಥ ತಾನೊಬ್ಬನೇ ಹಣ ಲಪಟಾಯಿಸುತ್ತೇನೆ ಬೇರೆಯವರು ಬೇಡ ಅಂತಲ್ಲವೇ? ಗೋಕರ್ಣ ಕೇವಲ ಒಂದು ಮಠಕ್ಕೆ ಸೇರಿದ್ದಲ್ಲ. ಬಿ.ಜೆ.ಪಿ. ಸರ್ಕಾರ ಬೇರೆ ಯಾರನ್ನೂ ಕೇಳದೆ ಏಕಾ ಏಕಿ ನಿರ್ಣಯ ಕೈಗೊಂಡಾಗ ನೀವೆಲ್ಲಾ ಎಲ್ಲಿ ಅಡಗಿದ್ದಿರಿ? ೨೦೦೮ ರಲ್ಲಿ ಇತರ ಮಠಾಧೀಶರ ನೇತೃತ್ವದಲ್ಲಿ ನಡೆಸಿದ ಧರ್ಮ ಸಭೆಯಲ್ಲಿ ಇದನ್ನು ಖಂಡಿಸಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಬಿ.ಜೆ.ಪಿ. ಯ ಈ ಏಕಾ ಏಕಿ ನಿರ್ಣಯ ದ ವಿರುದ್ಧ ಕಳೆದ ೮ ವರ್ಷಗಳಿಂದ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ಅಂತಿಮ ವಿಚಾರಣೆಗೆ ಬಂದಿರುವ ಈ ಕೇಸನಲ್ಲಿ ಸರಕಾರ ಕೋರ್ಟ್ ಆದೇಶ ಪಾಲಿಸಲೇಬೇಕು. ಈ ಹಿಂದಿನ ಕೋರ್ಟ್ ಆದೇಶಗಳನ್ನು ಪರಿಶೀಲಿಸಿಯೇ ಸರಕಾರಿ ವಕೀಲರು ಸರಕಾರ ಗೋಕರ್ಣ ಹಸ್ತಾಂತರವನ್ನು ವಾಪಸ್ಸ ಪಡೆಯುವ ಇಂಗಿತವನ್ನು ವ್ಯಕ್ತ ಪಡಿಸಿದ್ದು. ಇದು ಕೋರ್ಟ್ ವಿಚಾರಣೆ ಹಂತದಲ್ಲಿರುವಾಗ ಇದನ್ನು ಹಿಂದೂ ದೇವಾಲಯಗಳ ಮೇಲೆ ಸರಕಾರ ನಿಯಂತ್ರಣ ಸಾಧಿಸಲು ಹೊರಟಿದೆ ಅಂತ ಯಾಕೆ ಸುಳ್ಳು ಹೇಳಿಕೆಗಳನ್ನು ಕೊಟ್ಟು ಸಮಾಜದ ಸ್ವಾಸ್ಥ್ಯ ಕೆಡಿಸಲು ಹೊರಟಿದ್ದೀರಿ? ಯಾಕೆ ಜವಬ್ಧಾರಿ ಸ್ಥಾನದಲ್ಲಿರುವ ನೀವುಗಳೇ ಕೋಮು ಗಲಭೆಗೆ ಪ್ರಚೋದನೆ ಮಾಡುತ್ತಿದ್ದೀರಿ? ದಯವಿಟ್ಟು ಈಗಲಾದರೂ ಎಚ್ಚತ್ತುಕೊಳ್ಳಿ ಸಮಾಜದ ಸ್ವಾಸ್ಥ್ಯ ಕೆಡಿಸಬೇಡಿ.

source: https://www.facebook.com/groups/1499395003680065/permalink/1836333359986226/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s