ಸಂಘದ ಹಿರಿಯ ನೇತಾರರುಗಳು ತಮ್ಮ ನಿಲುವನ್ನು ಪ್ರದರ್ಶಿಸಿದ್ದರೆ ….

…..ನಾವೆಲ್ಲ ಬಹಳ ಚಿಕ್ಕವರಿರುವಾಗಿನಿಂದ ನಮ್ಮ ದೇಶದ ಅತ್ಯಂತ ಶಿಸ್ತುಬದ್ಧ ಹಿಂದುತ್ವವಾದಿ ಸಂಘಟನೆಯೆನ್ನಿಸಿಕೊಂಡ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದ ಅಡಿಯಲ್ಲಿ ಬೆಳೆದವರು. ಸಂಘ ಮತ್ತು ಸಂಘ ಪರಿವಾರದ ಅನೇಕ ಪ್ರಕಲ್ಪಗಳಲ್ಲಿ ಜೀವನದ ಕೆಲ ಸಮಯಗಳನ್ನು ನೀಡಿದವರು. ಅಂದಿನ ಸಂಘದ ಹಿರಿಯ ನೇತಾಗಣದ ದಿವ್ಯ ಮಾರ್ಗದರ್ಶನದಲ್ಲಿ ದೇಶಪ್ರೇಮ, ಧರ್ಮ ಪ್ರಜ್ಞೆಯ ಕುರಿತು ತಿಳಿದುಕೊಂಡು ಅನುಸರಿಸಿಕೊಂಡು ಬಂದವರು.. ಸಂಘದ ನಿಲುವಿನಲ್ಲಿ ಈ ಹಿಂದೂ ದೇಶ ಮತ್ತು ಹಿಂದುಗಳ ಆರಾಧ್ಯ ದೈವವೆನ್ನಿಸಿಕೊಂಡ ಪ್ರಭು ಶ್ರೀರಾಮನನ್ನು ಆದರ್ಶವನ್ನಾಗಿಟ್ಟುಕೊಂಡು ಅನೇಕ ಪ್ರಕಲ್ಪಗಳು ಟಿಸಿಲೊಡೆದು ಹೆಮ್ಮರವಾಗಿ ಬೆಳೆದುನಿಂತಿದೆ. ಅದನ್ನು ನೋಡುವಾಗ ನಮಗೆ ಅದೇನೋ ಆನಂದ…

……. ಆದರೆ ಇತ್ತೀಚೆಗಿನ ಸಂಗದ ಪ್ರಕಲ್ಪಗಳಾದ ಕೆಲವು ಸಂಘಟನೆಗಳ ಹಿತಾಸಕ್ತಿಗಳನ್ನು ನೋಡುವಾಗ ಖೇದವೆನ್ನಿಸುತ್ತದೆ. “ಹಿಂದೂ ಜಾಗರಣ ವೇದಿಕೆ” “ವಿಶ್ವ ಹಿಂದೂ ಪರಿಷತ್” ಮುಂತಾದ ಸಂಘಟನೆಗಳು ಈ ದೇಶದ ಪ್ರಜೆಯ ನರನಾಡಿಗಳಲ್ಲಿ ಹಿಂದುತ್ವದ ಪ್ರಜ್ಞೆಯನ್ನು ಹರಿಸಿ ಈ ದೇಶದ ವೇದೋಚಿತವಾದ ಧಾರ್ಮಿಕ ಜೀವನಕ್ಕೆ ನಮ್ಮೆಲ್ಲರನ್ನು ಹುರಿದುಂಬಿಸಿದ್ದು ಈಗ ಧರ್ಮ ಬಾಹಿರವಾದ ಅಲ್ಲದೇ ನಾವೆಲ್ಲ ನಿತ್ಯವೂ ಅನುಸರಿಸುವ ಒಮ್ದು ಸದ್ಧರ್ಮ ಪೀಠವೊಂದರ ಮೇಲೆ ಆಪಾದನೆಯನ್ನು ಮಾಡುತ್ತಿರುವ ವ್ಯಕ್ತಿಯನ್ನು ಮತ್ತು ಅವನು ಮಾಡಿದ ಕೆಲಸಗಳನ್ನು ಸರಿ ಎಂದು ಹೇಳುವುದರ ಮೂಲಕ ಹಿಮ್ದಿನ ಪ್ರಜ್ಞೆಗೆ ವ್ಯತಿರಿಕ್ತವಾದ ಅಭಿಪ್ರಾಯಗಳನ್ನು ಹೇಳಿದಂತೆನಿಸುತ್ತಿದೆ.

…… ಹೌದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಈ ವ್ಯಕ್ತಿ ಹಿಂದೆ ನಡೆಸಿದ ಗೋ ಗ್ರಾಮ ಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುಂದೆ ಹಿಂದೂ ಧರ್ಮದ ನೇತಾರನೆನ್ನಿಸಬೇಕೆಂದು ಬಯಸಿದ್ದು ಸತ್ಯ. ಆದರೆ ನಂತರದ ದಿನಗಳಲ್ಲಿ ಈ ವ್ಯಕ್ತಿಯ ಮುಖವಾಡದ ಬದುಕನ್ನು ಕಂಡ ಇದೇ ರಾಷ್ಟೀಯ ಸ್ವಯಂ ಸೇವಕ ಸಂಘದ ಹಿರಿಯರು ಕಿವಿಮಾತು ಹೇಳಿದ್ದನ್ನೂ ಲಕ್ಷಿಸದೇ ತನ್ನ ವ್ಯವಹಾರವನ್ನು ಮುಂದುವರೆಸಿದ್ದನ್ನು ಗಮನಿಸಿದ ಸಂಘ ಈ ವ್ಯಕ್ತಿಯಿಂದ ದೂರಾಗಿದೆಯೆಂದು ಭಾವಿಸಿದ್ದೆವು. ಆದರೆ ಈಗ ಅೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಕಲ್ಪಗಳಾದ “ಹಿಂದೂ ಜಾಗರಣ ವೇದಿಕೆ” ಹಾಗೂ ವಿಶ್ವ ಹಿಮ್ದೂ ಪರಿಷತ್’ ನೀಡಿರುವ ಪತ್ರಿಕಾ ಹೇಳಿಕೆಗಳನ್ನು ಅವಲೋಕಿಸಿದಾಗ ಮುಂದೊಂದು ದಿನ ನಾವು ನೆಚ್ಚಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದಲೂ ಇಂತಹುದೇ ಅಭಿಪ್ರಾಯ ಬಂದರೂ ಅಚ್ಚರಿಯೇನಿಲ್ಲ ಎಂದೆನಿಸುತ್ತಿದೆ.

ಇದಕ್ಕೆ ಸಂಘದ ಹಿರಿಯ ನೇತಾರರುಗಳು ತಮ್ಮ ನಿಲುವನ್ನು ಪ್ರದರ್ಶಿಸಿದ್ದರೆ ನಮ್ಮಂತಹ ಸಂಘದ ನಿಷ್ಟಾವಂತ ಸ್ವಯಂ ಸೇವಕರು ನೆಮ್ಮದಿಯನ್ನು ಹೊಂದಬಹುದು.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/178750802531102/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s