ನ್ಯಾಯವನ್ನು ಅಪೇಕ್ಷಿಸಿ ಹೋಗಿದ್ದು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದು…!

ತನ್ನ ಮೇಲೆ ನಡೆದ ಅನ್ಯಾಯಕ್ಕೆ ನ್ಯಾಯಾಲಯದಲ್ಲಿ ಈ ನಾಡಿನ ಸಾಂವಿಧಾನಿಕ ಚೌಕಟ್ಟಿನಲ್ಲಿ ನ್ಯಾಯವನ್ನು ಅಪೇಕ್ಷಿಸಿ ಹೋಗಿದ್ದು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದು…!
**************************
ತನ್ನ ಮೇಲೆ ಹೀಗೊಂದು ಆಪಾದನೆ ಬಂದಿದೆಯೆಂದಕೂಡಲೇ ತನ್ನ ಸುತ್ತಲಿನ ಭಕ್ತರೆಂಬುವ ಜನಗಳನ್ನು ಆ ಸಂತ್ರಸ್ಥೆಯ ಮೇಲೆ ಎತ್ತಿ ಕಟ್ಟಿ ಸಾಮಾಜಿಕ ಜಾಲತಾಣಗಳು ಹಾಗೂ ಇತರ ಮಾಧಮಗಳಲ್ಲಿ ಸಂತ್ರಸ್ಥೆಯನ್ನೂ ಆಕೆಯ ಕುಟುಂಬವನ್ನೂ ಮೇಲಾಗಿ ಅವರ ಹೆಣ್ಣುಮಕ್ಕಳನ್ನೂ ತನ್ನ ಸುತ್ತಲಿನ ಭಕ್ತಗಣದ ಮೂಲಕ ಅವಹೇಳನಕಾರಿಯಾಗಿ ಚಿತ್ರಿಸಿದ್ದು… ಅದು ಭಾವನೆಗಳಿಗೆ ಧಕ್ಕೆ ತರಲಿಲ್ಲವೇ..?
****************************
ತಾನು ಒಂದು ಧರ್ಮಪೀಠದ ಸಂನ್ಯಾಸಿಯೆಂಬುದನ್ನೂ ಮರೆತು ಸಂನ್ಯಾಸಕ್ಕೋ ಧರ್ಮ ಪೀಠಕ್ಕೋ ತಕ್ಕುದಲ್ಲದ ವ್ಯವಹಾರಗಳನ್ನು ಮಾಡಿದ್ದಲ್ಲದೇ ಅದನ್ನು ವಿರೋಧಿಸಹೊರಟವರ ಮೇಲೆ ತನ್ನ ಜನಗಳಿಂದ ಅವಾಚ್ಯ ನಿಂದನೆಗಳನ್ನು ಮಾಡಿದ್ದಲ್ಲದೇ ದೈಹಿಕ ಹಲ್ಲೆಗೂ ಮುಂದಾದ ಘಟನೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದಂತಲ್ಲವೇ..?
ತನ್ನ ಮೇಲೆ ಬಂದ ಆಪಾದನೆಗಳನ್ನು ತನಗಿಷ್ಟ ಬಂದಂತೇ ವ್ಯಾಖ್ಯಾನಿಸುತ್ತ ತನ್ನ ಭಕ್ತಗಡಣ ಎಂಬವರನ್ನು ತನ್ನ ವೀರಾವೇಶದ ಪ್ರವಚನಾದಿಗಳಿಂದ ಸಂತ್ರಸ್ಥೆ ಯಾ ತನ್ನನ್ನು ವಿರೋಧಿಸುವವರ ವಿರುದ್ಧ ಎತ್ತಿಕಟ್ಟುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದಂತಲ್ಲವೇ..?
***************************
ಸಂನ್ಯಾಸಿಯೆಂಬುದನ್ನೂ ಮರೆತು ತಾನು ಮಾಡಿದ್ದೆಲ್ಲವೂ ಸರಿ ತನಗೆ ಹೇಳುವ ಅಧಿಕಾರ ಯಾರಿಗೂ ಇಲ್ಲ ಎಂಬಂತೇ ಪ್ರಚೋದನಕಾರಿಯಾದ ಭಾಷಣಗಳಿಂದ ಲಾಗಾಯತ್ತಿನಿಂದ ತನ್ನ ಮಠವನ್ನು ಧರ್ಮ ಪೀಠವನ್ನೂ ನತಮಸ್ತಕರಾಘಿ ನಡೆದುಕೊಂಡು ಬಂದ ವ್ಯಕ್ತಿಗಳ ಮೇಲೆ ತನ್ನ ಜನರನ್ನು ಎತ್ತಿಕಟ್ಟಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದಂತಲ್ಲವೇ…?
****************************
ತನ್ನ ಮೇಲೆ ಬಂದ ಆಪಾದನೆಗಳನ್ನು ಮುಚ್ಚಿಕೊಳ್ಳುವುದಕ್ಕಾಗಿ ಕಂಡ ಕಂಡಲ್ಲಿ ಸಭೆ ಸಮಾರಂಭಗಳನ್ನು ನಡೆಸಿ ಸಂತ್ರಸ್ಥೆಯನ್ನೂ ಅವರ ಕುಟುಂಬದವರನ್ನೂ ಅದೂ ಸಾಲದೆಂಬಂತೇ ತನ್ನ ವಿರುದವಾಗಿ ನಿಂತಿದ್ದಾರೆಂದುಕೊಂಡು ಈ ನಾಡಿನ ಹಲವಾರು ಗುರುಪೀಠಗಳನ್ನೂ ಹೆಸರಿಸಿ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದು ಲೆಕ್ಕಕ್ಕೆ ಸಿಗುವುದಿಲ್ಲವೇ..?
****************************
ಧರ್ಮ ಪೀಠವೆಂದರೆ ನಮ್ಮ ಸಮಾಜದ ಆತ್ಯಂತಿಕ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರ ಎಂಬುದನ್ನು ತಿಳಿದೂ ಅಲ್ಲಿಗೆ ಲಾಗಾಯತ್ತಿನಿಂದ ನಡೆದುಕೊಂಡು ಬರುತ್ತಿದ್ದ ಅನೇಕ ಈ ಸಮಾಜದ ಹಿರಿಯ ಜೀವಗಳನ್ನು ಅತ್ಯಂತ ಹೇಯಕರವಾಗಿ ನಡೆಸಿಕೊಂಡಿದ್ದು ಸಮಾಜದ ಧಾರ್ಮಿಕ ಸಾಮಾಜಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದಂತಲ್ಲವೇ..?
*****************************
ನಿಜವಾಗಿಯೂ ತನಗೆ ಸಾಂವಿಧಾನಿಕವಾಗಿ ಎಲ್ಲಿ ಹೇಗೆ ನ್ಯಾಯ ದೊರೆಯಬೇಕಿತ್ತೋ ಅಲ್ಲಿಂದಲೇ ನ್ಯಾಯವನ್ನಪೇಕ್ಷಿದಳೇ ವಿನಾ ಇವನಂತೇ ಸಮಾಜವನ್ನು ಎತ್ತಿಕಟ್ಟಿ ಇಡೀ ಸಮಾ ಪರ ಮತ್ತು ವಿರುದ್ಧ ಎಂಬ ಹೋಳಾಗುವಂತೇ ಮಾಡಿದ್ದು ತನ್ನ ಅನೇಕ ಪ್ರವಚನಗಳಲ್ಲಿಯೂ ಸಹ ಈ ಸಮಾಝದ ಅತ್ಯಂತ ಭಕ್ತಿ ಶ್ರದ್ಧೆಯ ಗುರುಪೀಠಗಳನ್ನೂ ಅವಮಾಣಕರವಾಗಿ ಸ್ವತಃ ನಿಂದಿಸಿದ್ದಲ್ಲದೇ ತನ್ನ ಅನುಚರರುಗಳಿಂದ ವಾಚಾಮಗೋಚರವಾಗಿ ಅಂತಹ ಗುರುಪೀಠಗಳ ಮೇಲೆ ವಾಕ್ಪ್ರಹಾರ ನಡೆಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದಂತಲ್ಲವೇ..?
*****************************
ಸಂತ್ರಸ್ಥೆಯೆನ್ನಿಸಿಕೊಂಡವಳು ಇವನಂತೇ ಎಲ್ಲಿ ಸಭೆ ನಡೆಸಿದಳು..?
ಅವರೆಲ್ಲಿ ಇವನಂತೆ ಪ್ರವಚನ ನಡೆಸಿದರು..?
ಅವರೆಲ್ಲಿ ಇವನಂತೇ ಜನರನ್ನು ಮಾನಸಿಕವಾಗಿ ದೈಹಿಕವಾಗಿ ಹಿಂಸೆಗೆ ಪ್ರಚೋದಿಸಿದರು..?
ಅವರೆಲ್ಲಿ ಇವನಂತೆ..ಇವನ ಭಕ್ತಗಡಣದವರಂತೇ.. ವೈಯಕ್ತಿಕವಾಗಿ ಇವನನ್ನೋ ಇವನ ಭಕ್ತಗಡಣವನ್ನೋ ವಾಚಾಮಗೋಚರವಾಗಿ ನಿಂದಿಸಿದರು..?
ಅವರೆಲ್ಲಿ ಇವನಂತೇ ವಿರೋಧಿಸುವವರ ಮನೆಯ ಕಾರ್ಯ ಕಲಾಪಗಳಿಗೆ ಅಡ್ಡಿಯುಂಟುಮಾಡಲು ಶಿಷ್ಯಂದಿರನ್ನು ಪ್ರಚೋದಿಸಿದಂತೇ ಇವನ ಭಕ್ತಗಡಕ್ಕೆ ಅಡ್ಡಿಯುಂಟುಮಾಡಿದರು…?
******************************
ಮತೀಯ ಭಾವನೆಯ ಪ್ರಶ್ನೆಯೇ ಬರುವುದಿಲ್ಲ…! ಏಕೆಂದರೆ ಇಲ್ಲಿ ಸಂತ್ರಸ್ಥೆಯೋ ಅಥವಾ ಅರ್ಜಿದಾರನೋ ಈರ್ವರೂ ಒಂದೇ ಮತ ಪಂಥ, ಗುರುಪೀಠ, ಧರ್ಮಾಚರಣೆಗೆ ಸಂಬಂಧಪಟ್ಟವರು…!
**************************
ತಾನು ಮಾಡಿದ ತಪ್ಪಿನಿಂದಾಗಿ ಇಡೀ ಸಮಾಝ ತಲೆತಗ್ಗಿಸುವಂತಾಗಿದೆ ಎಂಬುದನ್ನೂ ಮರೆತು ತನ್ನ ಮೇಲಾಗುತ್ತಿರುವ ಈ ಪ್ರಕರಣಗಳೆಲ್ಲ “ಹಿಂದುತ್ವ”ದ ಮೇಲಾಗುತ್ತಿರುವ ದಬ್ಬಾಳಿಕೆಯೆಂಬಂತೇ ಬಿಂಬಿಸಿ ಇಡೀ ಸಮುದಾಯವನ್ನು ಗೊಂದಲದಲ್ಲಿ ಸಿಕ್ಕಿಸಿದ್ದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದಂತಾಗಲಿಲ್ಲವೇ..? ಅದೇ ವ್ಯಕ್ತಿ ತನ್ನ ಮೇಲೆ ಈ ರೀತಿಯ ಆರೋಪಗಳಿಗೆ ಕಾರಣವಾದುದ್ದು ನಮ್ಮದೇ ಹಿಂದೂ ಧರ್ಮದ ಅತ್ಯಂತ ಶ್ರೇಷ್ಟವಾದ ಇನ್ನೊಂದು ಗುರುಪೀಠ ಎಂಬುದನ್ನು ತನ್ನ ಪ್ರವಚನಗಳಲ್ಲಿ ಉಸಿರುಕಟ್ಟಿಕೊಂಡು ಕೂಗಿದ್ದು…! ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದಂತಲ್ಲವೇ..?
****************************

ನಿಜವಾದ ಬ್ರಾಹ್ಮಣ, ಬ್ರಾಹ್ಮಣ್ಯದಿಂದಲ್ಲದೇ ಬೇರೆಯದರಿಂದ ಬದುಕಲಾರ..!
ಬ್ರಾಹ್ಮಣ್ಯಕ್ಕೆ ಧಕ್ಕೆ ತಂದುಕೊಂಡ ಎಲ್ಲರೂ ಅದರಿಂದಲೇ ಕೊನೆಯನ್ನೂ ಕಾಣಬೇಕಾಗುತ್ತದೆ..
ರಾವಣನ ಹನನವಾಗಬೇಕಾದರೆ ಕೈ, ಕಾಲು,, ರುಂಡ,,, ಮುಂಡ.. ಹೀಗೇ ಕಡಿಕಡಿದು ತೆಗೆಯುತ್ತ ಬರಬೇಕಾಯ್ತು ಪ್ರಭು ಶ್ರೀರಾಮಚಂದ್ರಮ..! ಈಗಲೂ ಅದೇ ಆಗುವುದು.. ಒಂದೊಂದಾಗಿ ಪಾಪದ ಲೆಕ್ಕ ಕಳೆಯುತ್ತಬರಬೇಕು..!
*****************************
ಇದನ್ನೆಲ್ಲ ಅನುಲಕ್ಷಿಸಿಯೇ ಮಾನ್ಯ ಘನ ನ್ಯಾಯಾಲಯವು ಸಜ್ಜನರ ನ್ಯಾಯದ ಬೇಡಿಕೆಗಳಿಗೆ ಸ್ಪಂದಿಸಿ ಈ ನ್ಯಾಯದಾನವನ್ನು ನೀಡಿದೆಯೆಂದರೆ ತಪ್ಪಾಗಲಾರದು..
ಧರ್ಮೋ ರಕ್ಷತಿ ರಕ್ಷಿತಃ- ಯಾರು ಧರ್ಮವನ್ನು ರಕ್ಷಿಸುತ್ತಾರೆಯೋ ಅವರನ್ನೂ ಧರ್ಮವೇ ರಕ್ಷಿಸುತ್ತದೆ!!!

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/178333952572787/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s