ಇದು ಧರ್ಮದ ರಕ್ಷಣೆಯೋ…? ಅಥವಾ ಧರ್ಮ ರಕ್ಷಕನೆಂದು ಮುಖವಾಡ ಹಾಕಿದ ವ್ಯಕ್ತಿಯ ರಕ್ಷಣೆಯೋ..?

ಇದು ಧರ್ಮದ ರಕ್ಷಣೆಯೋ…? ಅಥವಾ ಧರ್ಮ ರಕ್ಷಕನೆಂದು ಮುಖವಾಡ ಹಾಕಿದ ವ್ಯಕ್ತಿಯ ರಕ್ಷಣೆಯೋ..?

………..ರಾಮಚಂದ್ರಾಪುರ ಮಠದ ಮೇಲೆ ಲಾಗಾಯತ್ತಿನಿಂದ ಇತರ ಶಂಕರ ಪೀಠಗಳು ಅದರಲ್ಲೂ ಶೃಂಗೇರಿ ಜಗದ್ಗುರು ಪೀಠ ಕತ್ತಿ ಮಸೆಯುತ್ತಿದೆ. ಅದೇ ಮಠದ ಕೆಲಸ ತನ್ನಮೇಲೆ ಆಪಾದನೆ ಬರುವಂತೆ ಮಾಡಿರುವುದು, ರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟ ಗೋಕರ್ಣ ದೇವಾಲಯವನ್ನು ಸರಕಾರ ವಶ ಪಡಿಸಿಕೊಳ್ಳುವಂತೆ ಮಾಡುತ್ತಿರುವುದು, ಅಷ್ಟು ಸಾಲದೆಂಬಂತೇ ರಾಮಚಂದ್ರಾಪುರ ಮಠದ ಮೇಲೆ ಆಡಳಿತಾಧಿಕಾರಿಯನ್ನು ನಿಯಮಿಸುವಂತೆ ಸರಕಾರದ ಮೇಲೆ ಒತ್ತಡ ತಂದಿರುವುದು ಅಲ್ಲದೇ ನಮ್ಮ ಮಠಕ್ಕೆ ಸೇರಿದ ಬೆರಳೆಣಿಕೆಯ ಭಕ್ತರನ್ನು ತಮ್ಮ ಮೇಲೆ ಎತ್ತಿಕಟ್ಟಿರುವುದು.. ಇದೆಲ್ಲ ಆ PIL ಒಕ್ಕಣಿಕೆಯೇ ಹೇಳುತ್ತದೆ ಎಂದು ಪ್ರವಚನ ಮಾಡುತ್ತ ತನ್ನ ಸುತ್ತಲಿನ ಭಕ್ತ ಗಡಣವೆಂದುಕೊಂಡವರನ್ನು ಪ್ರಚೋದನೆಗೊಳಪಡಿಸುವುದನ್ನು ಗಮನಿಸಬೇಕು.

………..ಶ್ರೀ ಶಂಕರ ಭಗವತ್ಪಾದಾಚಾರ್ಯರು ವೈದಿಕ ಧರ್ಮದ ಕಾವಲಿಗಾಗಿ ಈ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿ ಅಲ್ಲಿಗೆ ಧರ್ಮ ಪೀಠಾಧ್ಯಕ್ಷರನ್ನೂ ನಿಯಮಿಸಿ ತನ್ಮೂಲಕ ಯಾವತ್ತೂ ಹಿಂದೂ ಧರ್ಮದ ಮತ್ತು ವೈದಿಕ ಸಂಸ್ಕೃತಿಯ ಪುನರುತ್ಥಾನ ಮತ್ತು ಪ್ರವರ್ಧನೆ ಆಗುತ್ತಿರಲಿ ಎಂದು ಸ್ಥಾಪಿಸಿದ್ದರೋ ಅಂತಹ ಹಿಂದುಗಳ ಆರಾಧ್ಯ ಪೀಠವೊಂದರ ಮೇಲೆ ತಾನು ಆರೋಪ ಮಾಡಿದ್ದಲ್ಲದೇ ಈಗ ಹಿಂದುತ್ವದ ಮೇಲೆ ಆಗುತ್ತಿರುವ ದಬ್ಬಾಳಿಕೆ ಎಂದು ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆಗಳಂಥ ಈ ದೇಶದ ಹಿಂದುತ್ವದ ಹರಿಕಾರರು ಎಂದು ಕರೆಯಿಸಿಕೊಳ್ಲಬಲ್ಲಂತಹ ಸಂಘಟನೆಗಳಿಂದ ಪತ್ರಿಕಾ ಪ್ರಕಟಣೆಯನ್ನೂ ಕೊಡಿಸುತ್ತಿದ್ದಾನೆ. ಇವೆಲ್ಲವನ್ನು ಗಮನಿಸಿದರೆ ಅಥವಾ ಯಾವ ಪತ್ರಿಕಾ ಹೇಳಿಕೆ ಮತ್ತು ಪ್ರಕಟಣೆಗಳನ್ನು ನೀಡಿದ ಸಂಘಟನೆಗಳನ್ನು ನಿಜವಾಗಿಯೂ ಪ್ರಶ್ನಿಸಲೇ ಬೇಕಿದೆ. ಅದೇನೆಂದರೆ, ಸದರಿ ವ್ಯಕ್ತಿ ಆಪಾದನೆ ಮಾಡುತ್ತಿರುವ ಈ ದೇಶದ ಆಮ್ನಾಯ ಪೀಠವೊಂದು ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸತ್ಯವೇ…? ಹಾಗೆ ಹೇಳುತ್ತಿರುವ ಈ ವ್ಯಕ್ತಿಯ ಮಾತನ್ನು ತಾವುಗಳು ಪುಷ್ಟೀಕರಿಸುತ್ತೀರೆಂದಾದರೆ ತಮ್ಮ ನಿಲುವುಗಳನ್ನು ಗಮನಿಸಲೇ ಬೇಕಾಗುತ್ತದೆ. ಇಲ್ಲಿ ಶೃಂಗೇರಿ ಜಗದ್ಗುರು ಪೀಠದಿಂದ ಇಂತಹ ಒಂದು ಕೆಲಸ ನಡೆಯುತ್ತಿದೆ ಎಂಬುದನ್ನು ಯಾರೂ ನಂಬಲಿಕ್ಕೆ ಸಾಧ್ಯವೇ ಇಲ್ಲ.. ಕೇವಲ ಹೇಳಿಕೊಳ್ಳುತ್ತಿರುವುದು ಮಾತ್ರ ಹೀಗೆ ಒಂದು ಆಮ್ನಾಯ ಪೀಠದ ಮೇಲೆ ತಥಾ ಕಥಿತ ಆಪಾದನೆಗಳನ್ನು ಮಾಡುತ್ತಿರುವ ವ್ಯಕ್ತಿಯ ಹೇಳಿಕೆಗಳಿಗೆ ಹೆಚ್ಚಿನವರ್ಯಾರೂ ತಲೆ ಕೆಡಿಸಿಕೊಳ್ಲಲಾರರು…! ಆದರೂ ಮಾಡುತ್ತಿರುವ ಆಪಾದನೆ ಗುರುತರವಾದದ್ದು ಮತ್ತು ಮಾಡುತ್ತಿರುವುದು ಹಿಂದೂ ಧರ್ಮದ ಪರಮೋಚ್ಚ ಧರ್ಮಪೀಠವೆನ್ನಿಸಿದ ಶ್ರೀ ಶೃಂಗೇರಿ ಪೀಠದ ಮೇಲೆ ಎಂಬುದನ್ನು ಗಮನಿಸಬೇಕು…!

…………ಯಾವ ಹಿಂದೂ ಸಂಸ್ಕೃತಿಯನ್ನು ಇಂತಹ ಸಂಘಟನೆಗಳೆಲ್ಲ ಹುಟ್ಟಿಕೊಳ್ಳುವುದಕ್ಕಿಂತ ಮುಂಚಿನಿಂದಲೂ ಈ ದೇಶದಲ್ಲಿ ನೆಲೆಯೂರಿ ಸತ್ ಸಂಪ್ರದಾಯಗಳನ್ನು ಹಾಕಿಕೊಂಡು ಬಂದ ಆಮ್ನಾಯ ಪೀಠಗಳು ಹಿಂದೂ ವಿರೋಧಿಗಳಾದರೇ..?

………….ಖಂಡಿತ ಆತ್ಮ ವಿಮರ್ಶೆ ಮಾಡಿಕೊಳ್ಳಲೇ ಬೇಕಾದ ಕಾಲ ಸನ್ನಿಹಿತವಾಗಿದೆ.. ಸದರಿ ಪೀಠಪತಿಯು ಆರೋಪ ಮಾಡುತ್ಿರುವುದು ತನ್ನ ಮೇಲೆ ಕತ್ತಿ ಮಸೆಯುತ್ತಿರುವವರು ತಮ್ಮದೇ ಅಕ್ಕ ಪಕ್ಕದ ಮಠಗಳು ಎಂದು. ಅದರಲ್ಲೂ ಹೆಸರು ಹೇಳದಿದ್ದರೂ ತನ್ನ ಭಕ್ತರಿಗೆ ನಂಬಿಕೆ ಬರುವುದಕ್ಕಾಗಿ ಉದಾಹರಿಸುವ ಎಲ್ಲ ಸಂಗತಿಗಳೂ ಈ ದೇಶದ ಹಿಂದುತ್ವದ ಬುನಾದಿಯನ್ನು ಕಟ್ಟಿಕೊಟ್ತ ಶ್ರೀ ಭಗವತ್ಪಾದಾಚಾರ್ಯರಿಂದ ಸ್ಥಾಪಿತವಾದ ಆಮ್ನಾಯಪೀಠಗಳಲ್ಲೊಂದಾದ ಶ್ರೀ ಶೃಂಗೇರಿ ಮಹಾ ಸಂಸ್ಥಾನದ ಮೇಲೆ ಎಂಬ ಪ್ರಜ್ಞೆಯೂ ಈ ಹಿಂದೂ ಸಂಘಟನೆಗಳಿಗೆ ತಿಳಿಯಲಿಲ್ಲವಾ…

………
ಏನೋ ಗೊತ್ತಿಲ್ಲ… ಅಂತೂ ಈ ವ್ಯಕ್ತಿಯನ್ನು ಮತ್ತು ಸರಕಾರದ ನಡೆಯನ್ನು ವಿಮರ್ಶೆಗೆ ತೆಗೆದುಕೊಂಡು ಸರಕಾರ ಮಾಡುತ್ತಿರುವುದು ಸರಿಯಲ್ಲ, ಅದು ಹಿಂದುತ್ವದ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಎಂದು ಬಿಂಬಿಸುತ್ತಿರುವುದನ್ನು ನೋಡಿದರೆ ಮುಂದೆ ಶೃಂಗೇರಿಯಂತಹ ಸನಾತನ ಹಿಂದೂ ಧರ್ಮ ಪೀಠಗಳ ಅಸ್ಥಿತ್ವವನ್ನು ಈ ಸಂಘಟನೆಗಳು ಪ್ರಶ್ನೆ ಮಾಡಿದಂತೇ ತೋರುತ್ತದೆ…! ಇದು ಧರ್ಮದ ರಕ್ಷಣೆಯೋ…? ಅಥವಾ ಧರ್ಮ ರಕ್ಷಕನೆಂದು ಮುಖವಾಡ ಹಾಕಿದ ವ್ಯಕ್ತಿಯ ರಕ್ಷಣೆಯೋ..? ಅವರೇ ಹೇಳಬೇಕು….!

ಸಂಘಟನೆಗಳ ಪತ್ರಿಕಾ ಪ್ರಕಟಣೆಯೆಂದು ಈ ಜಾಲತಾಣದಲ್ಲಿ ಹರಿದಾಡುತ್ತಿರುವ ಓಲೆಯನ್ನು ಈ ಲೇಖದೊಂದಿಗೆ ಲಗತ್ತಿಸಿದೆ….!

ನಿಜವಾಗಿಯೂ ಸದರಿ ಸಂಘಟನೆಗಳ ಪತ್ರಾಂಕಿತರುಗಳಾದ ಶ್ರೀಯುತ ಶಣೈ ಅವರು ಹಾಗೂ ಶ್ರೀಯುತರುಗಳಾದ ಜಗದೀಶ್ ಕಾರಂತರವರೇ ಉತ್ತರಿಸಬೇಕು ಅಲ್ಲವಾ..?

vhp

hjv

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/178738589198990/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s