ದಯವಿಟ್ಟು ಇಂತ ಹೇಳಿಕೆಗಳನ್ನ ಪ್ರಕಟಿಸಿ ಬಿ.ಜೆ.ಪಿ. ಪಕ್ಷಕ್ಕೆ ದ್ರೋಹ ಭಗೆಯಬೇಡಿ

ದಯವಿಟ್ಟು ಇಂತ ಹೇಳಿಕೆಗಳನ್ನ ಪ್ರಕಟಿಸಿ ಬಿ.ಜೆ.ಪಿ. ಪಕ್ಷಕ್ಕೆ ದ್ರೋಹ ಭಗೆಯಬೇಡಿ

ಮಾನ್ಯ ವಿಶ್ವೇಶ್ವರ ಹೆಗಡೆಯವರೆ ನಿಮ್ಮ ಪತ್ರಿಕಾ ಪ್ರಕಟಣೆ ನೋಡಿ ಆಶ್ಚರ್ಯ ಹಾಗೂ ನಿಮ್ಮ ಕಾರ್ಯವೈಖರಿಯ ಬಗ್ಗೆ ಭ್ರಮನಿರಸನ ವಾಯಿತು. ಬಿ.ಜೆ.ಪಿ. ಪಕ್ಷವು ಒಳ್ಳೆಯ ತತ್ವ ಸಿದ್ದಾಂತ ಹೊಂದಿದ ಪಕ್ಷ ಅಂದುಕೊಂಡಿದ್ದೆ ಆದರೆ ನಿಮ್ಮ ಪತ್ರಿಕಾ ಪ್ರಕಟಣೆ ನೋಡಿದಾಗ ಕರ್ನಾಟಕ ದ ಬಿ.ಜೆ.ಪಿ. ನಾಯಕರು ತಮ್ಮ ತತ್ವ ಸಿದ್ದಾಂತಗಳಿಗೆ ಯಳ್ಳು ನೀರು ಬಿಟ್ಟಿದ್ದಾರೆ ಅಂತ ಗೊತ್ತಾಯಿತು. ಮೋದಿಜಿಯವರು ಪ್ರಧಾನ ಮಂತ್ರಿ ಯಾದ ನಂತರ ನಮ್ಮ ಕರ್ನಾಟಕ ಬಿ.ಜೆ.ಪಿ. ನಾಯಕರು ಮೋದಿಜಿಯವರ ೧% ಗುಣವನ್ನಾದರೂ ಅಳವಡಿಸಿಕೊಳ್ಳುತ್ತಾರೆ ಅಸಂಭದ್ದ ಹೇಳಿಕೆಗಳನ್ನು ಕೊಡುವದಿಲ್ಲ ಅಂದುಕೊಂಡಿದ್ದೆ ಆದರೆ ಅದನ್ನೆಲ್ಲ ಸುಳ್ಳು ಮಾಡಿದಿರಿ ನೀವು.

ಇನ್ನು ಪ್ರಸ್ತುತ ರಾಮಚಂದ್ರಾಪುರ ಮಠ ಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಬರೋಣ. ಸರಕಾರ ಈ ನಿರ್ಧಾರಕ್ಕೆ ಬರಲು ಕಾರಣವನ್ನು ನೀವು ತಿಳಿದುಕೊಂಡಿದ್ದೀರಾ? ಏನೂ ಗೊತ್ತಿಲ್ಲದೇ ಸರಕಾರದ ನಿರ್ಧಾರವನ್ನು ವಿರೋಧಿಸಬೇಕೆಂದು ವಿರೋಧಿಸಹಾಗಿದೆ. ರಾಘವೇಶ್ವರ ಸ್ವಾಮಿಗಳ ವ್ಯವಹಾರಗಳ ವಿರುದ್ಧ ಕೆಲವು ಪಿಐಲ್ ಮಾನ್ಯ ಉಚ್ಚನ್ಯಾಯಾಲಯದಲ್ಲಿ ಧಾಖಲಾಗಿವೆ. ಇದರಲ್ಲಿ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವದು ಸೇರಿದೆ. ನ್ಯಾಯಾಲಯದಲ್ಲಿ ಇದರ ಕುರಿತು ವಾದ ಪ್ರತಿವಾದ ಈಗಾಗಲೇ ಆಗಿದೆ. ಅದರ ಪ್ರಕಾರವೇ ಸರಕಾರ ಈ ನಿರ್ದಾರಕ್ಕೆ ಬಂದಿದ್ದು. ಇನ್ನು ಈ ರಾಘವೇಶ್ವರ ಸ್ವಾಮಿಗಳ ವ್ಯವಹಾರ ದ ಕುರಿತು ಒಂದು ಸಿಂಪಲ್ಲ ಪ್ರಶ್ನೆ. ರಾಘವೇಶ್ವರ ಸ್ವಾಮಿಗಳು ಧರ್ಮಚಕ್ರ ಟ್ರಸ್ಟ್ ಅಂತ ಒಂದು ಎನ್.ಜಿ.ಓ. ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಎನ್.ಜಿ.ಓ. ಸಂಸ್ಥೆಗಳು ಪ್ರತೀ ವರುಷ ತಮ್ಮ ಲೆಕ್ಕ ಪತ್ರಗಳನ್ನು FCRA ಅವರಿಗೆ ಕಡ್ಡಾಯ ವಾಗಿ ಸಲ್ಲಿಸ ಬೇಕು. ಆದರೆ ಸ್ವಾಮಿಗಳು ಇಲ್ಲಿಯವರೆಗೆ ಒಂದು ವರುಷದ ಲೆಕ್ಕವನ್ನು ಸಲ್ಲಿಸಲಿಲ್ಲ . FCRA ಅವರು ನೋಟಿಸ್ ಸಹ ಕೊಟ್ಟಿದ್ದರು ಆದರೂ ಸಹ ಲೆಕ್ಕ ಪತ್ರಗಳನ್ನು ಸಲ್ಲಿಸಲಿಲ್ಲ . ಹೀಗಾಗಿ FCRA ಅವರು ಇವರ ಧರ್ಮಚಕ್ರ ಟ್ರಸ್ಟ್ ಎನ್.ಜಿ.ಓ. ಅನ್ನು ೨೦೧೫ ರಲ್ಲಿ ಬ್ಯಾನ್ ಮಾಡಿದರು. ೧೦ ರೂಪಾಯಿಗೂ ಲೆಕ್ಕ ವಿದೆ ಅನ್ನುವ ಈ ಸ್ವಾಮಿಗಳು ಯಾಕೆ ಲೆಕ್ಕ ಪತ್ರ ಸಲ್ಲಿಸಲು ವಿಫಲರಾದರು ? ಆದರೆ ಏನೂ ಆಗಿಲ್ಲವೆಂಬಂತೆ ಇನ್ನೂ ಧರ್ಮ ಚಕ್ರ ಟ್ರಸ್ಟ್ ಹೆಸರಿನಲ್ಲಿ ಹಣಪಡೆಯುತ್ತಿದ್ದಾರಲ್ಲ. ಇದು ಜನರಿಗೆ ಮಾಡುತ್ತಿರುವ ಮೋಸವಲ್ಲವೇ ? ಹೀಗೆ ಇವರ ಅವ್ಯವಹಾರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಇನ್ನು ಗೋಕರ್ಣ ದೇವಸ್ಥಾನ ಹಸ್ತಾಂತರ ವಿಷಯದಲ್ಲು ಅಷ್ಟೇ. ಇವರ ಹೇಳಿಕೆಯನ್ನೇ ಗಮನಿಸಿ. ಸ್ವಾಮಿಗಳು ಗೋಕರ್ಣ ದೇವಸ್ಥಾನವನ್ನು ತಮಗೆ ಹಸ್ತಾಂತರ ಮಾಡಿ ಅಂತ ಕೇಳಿರಲಿಲ್ಲವಂತೆ. ಅಂದಿನ ಬಿ.ಜೆ.ಪಿ. ಸರಕಾರವೇ ಇವರಿಗೆ ವಹಿಸಿ ಕೊಟ್ಟಿದೆಯಂತೆ. ಇದು ೧೦೦ ಕ್ಕೆ ೧೦೦ ಸುಳ್ಳು. ಇವರು ಗೋಕರ್ಣ ದೇವಸ್ಥಾನವನ್ನು ತಮಗೆ ಹಸ್ತಾಂತರ ಮಾಡುವಂತೆ ಅಂದಿನ ಸರಕಾರಕ್ಕೆ ಮನವಿ ಮಾಡಿದ ದಾಖಲೆಗಳಿವೆ. ಹಾಗಾದರೆ ಇವರು ಕೇಳದೆ ಇವರಿಗೆ ಗೋಕರ್ಣ ದೇವಸ್ಥಾನವನ್ನು ಹಸ್ತಾಂತರ ಸರಕಾರ ಮಾಡಿದೆಯಂತ ಆದರೆ, ಈಗ ಅದನ್ನು ವಾಪಸ್ಸ ಪಡೆಯುವ ಇಂಗಿತವನ್ನು ಸರಕಾರ ವ್ಯಕ್ತಪಡಿಸಿದರೆ ಇವರಿಗೇನು ನಷ್ಟ. ಈ ಸ್ವಾಮಿಯ ಹೇಳಿಕೆಯನ್ನು ಗಮನಿಸಿದರೆ ಗೊತ್ತಾಗುತ್ತದೆ ಇವ ಒಬ್ಬ ಸ್ವಾಮಿಯಲ್ಲ ಇನ್ನೂ ಲೌಕಿಕ ಪ್ರಪಂಚದಲ್ಲಿ ಆಸಕ್ತಿ ಉಳಿಸಿಕೊಂಡಿರುವಂತ ವ್ಯಕ್ತಿ ಅಂತ. ಇವರ ಹೇಳಿಕೆಗಳನ್ನು ಯಾವುದಾದರೂ ಒಬ್ಬ ಶಂಕರ ಪೀಠದ ಯತಿ ಸಮರ್ಥಿಸಿಯಾನೇ ?

ಇನ್ನು ಇವನ ಹೇಳಿಕೆ ಪೂರ್ತಿ ಕೇಳಿ. ಒಂದು ಕಡೆಯಲ್ಲಿ ಇವ ಬೇರೆ ಮಠಾಧೀಶರ ಕೈವಾಡವಿದೆ. ಅಸೂಹೆಯಿಂದ ಅವರು ಹೀಗೆ ಮಾಡುತ್ತಿದ್ದಾರೆ ಅಂತ ಹೇಳುತ್ತಾನೆ. ಇದು ಒಂದು ಸ್ವಾಮಿಯಾಗಿ ಆಡತಕ್ಕ ಮಾತೆ? ಶಂಕರ ಪೀಠಕ್ಕೆ ಕಳಂಕ ತಂದಿಟ್ಟ ಇವನನ್ನು ಸಮರ್ಥಿಸುತಿರಲ್ಲ ಇದು ನಿಮ್ಮ ಮೌಢ್ಯ ದ ಪ್ರದರ್ಶನವಲ್ಲವೇ?

ಮೋದಿಜಿಯವರು ನಕಲಿ ಗೋ ರಕ್ಷಕರ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ಕೊಟ್ಟರು. ಅದು ಸಹ ಇಂತ ನಕಲಿ ಸ್ವಾಮಿಗಳ ನಕಲಿ ಗೋ ರಕ್ಷಣೆಯನ್ನು ನೋಡಿಯೇ ಹೇಳಿದ್ದು. ಇವರು ಗೋ ಕಿಂಕರ ಯಾತ್ರೆಯಲ್ಲಿ RSS ನವರಿಗೆ ನಾಮ ಹಾಕಿದ್ದು ಮರೆತುಹೋಯಿತೇ?

ಇನ್ನು ಇವರ ವಿರುದ್ಧ ಸೆಷೆನ್ ಕೋರ್ಟ್ ನಲ್ಲಿ ಮುದಿಗೌಡರ ಕೊಟ್ಟ ಜಡ್ಜ್ಮೆಂಟ್ ಓದಿದ್ದೀರಾ? ಆ ಜಡ್ಜ್ಮೆಂಟ್ ಪ್ರಕಾರ ಇವನು ಹೆಣ್ಣಿನೊಡನೆ ಸಮಂಧ ಹೊಂದಿದ್ದ ಅದಕ್ಕೆ ill intimacy ಅಂತ ಬರೆದಿದ್ದಾರೆ. ಒಬ್ಬ ಶಂಕರ ಪೀಠದ ಯತಿ ill intimacy ಸಮಂಧ ಹೊಂದಬಹುದೇ ?

ಯಾರೋ ಒಬ್ಬ ಸಂಪಾದಕ ಇವನನ್ನು ಒಬ್ಬ ಮಹಾನ್ ಸ್ವಾಮಿಯಂತೆ ಬಿಂಭಿಸಿ ಬರೆದರೆ ಇವನ ಹುಟ್ಟು ಸ್ವಭಾವ ಹೋಗುವದೇ? ಕರ್ನಾಟಕದ ಜನತೆಗೆ ಈ ಸ್ವಾಮೀ ಏನು ಎಷ್ಟ್ರವ ಅಂತ ಗೊತ್ತಾಗಿದೆ. ಕೇವಲ ಹಳದಿ ಖಾದಿ ಧರಿಸಿದರೆ ಸಾಲದು ತಮ್ಮ ನಡುವಳಿಕೆಯಲ್ಲಿ ತೋರಿಸಬೇಕು.

ಇಷ್ಟೆಲ್ಲಾ ಇದ್ದು ನೀವು ಇಂತ ಪತ್ರಿಕಾ ಪ್ರಕಟಣೆಯನ್ನು ಕೊಡುತ್ತೀರಿ ಅಂತಾದರೆ ನಿಮ್ಮ ನೈತಿಕತೆಯನ್ನು ಪ್ರಶ್ನಿಸ ಬೇಕಾಗುತ್ತದೆ. ಇನ್ನ್ಮುಂದಾದರೂ ಸ್ವಲ್ಪ ಯೋಚಿಸಿ ಮಾತಾಡಿ. ದಯವಿಟ್ಟು ಇಂತ ಹೇಳಿಕೆಗಳನ್ನ ಪ್ರಕಟಿಸಿ ಬಿ.ಜೆ.ಪಿ. ಪಕ್ಷಕ್ಕೆ ದ್ರೋಹ ಭಗೆಯಬೇಡಿ.

@ShankaraPeetha
source: https://www.facebook.com/groups/1499395003680065/permalink/1833461640273398/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s