ಅದು “ಅಖಿಲ ಹವ್ಯಕ ಮಹಾ ಸಭಾ” ವಂತೆ…!

ಅದು “ಅಖಿಲ ಹವ್ಯಕ ಮಹಾ ಸಭಾ” ವಂತೆ…!

ಬಹುದಿನಗಳ ಹಿಂದೆ ನನಗೆ ಇಂಥದೊಂದು ಸಂಘಟನೆಯಿದೆ ಎಂಬುದೇ ತಿಳಿದಿರಲಿಲ್ಲ… ಅದು “ಅಖಿಲ ಹವ್ಯಕ ಮಹಾ ಸಭಾ” ವಂತೆ…! ಇದರ ಕೆಲಸ ಕಾರ್ಯಗಳ ಬಗ್ಗಂತೂ ಯಾವುದೇ ಬೈಲಾ ಇದುವರೆಗೆ ಯಾರಿಗೂ ತಿಳಿದಿರಲಿಕ್ಕಿಲ್ಲ… ಏಕೆಂದರೆ ಈ ಮಹಾಸಭಾ ಎಂಬ ಸಂಘಟನೆ ಎಲ್ಲೆಲ್ಲಿ ಯಾವ ಯಾವ ವಿಚಾರಗಳಲ್ಲಿ ಮೂಗು ತೂರಿಸುತ್ತಿದೆ ಎಂಬುದೇ ಜನಕ್ಕೆ ಇನ್ನೂ ಅರ್ಥವಾಗಿಲ್ಲ…! ಸದ್ಯದ ಪರಿಸ್ಥಿತಿಯಲ್ಲಿ ಸದರಿ ಮಹಾಸಭಾ ದಿಂದ ಹೊರಟ ಒಂದು ಬಿನ್ನವತ್ತಳೆ ನನಗೆ ಎಲ್ಲೋ ಕಂಡಹಾಗಾಯ್ತು.. ಆದರೆ ಅದನ್ನು ಇಲ್ಲಿ ಅಂಟಿಸಿಕೊಂಡು ಮಲಿನಗೊಳಿಸಿಕೊಳ್ಲಲು ಇಷ್ಟವಿಲ್ಲದ ಕಾರಣ ಅದರ ಪೋಟೋ ಪ್ರತಿಯನ್ನು ಹಾಕುತ್ತಿಲ್ಲ…!

ರಾಮಚಂದ್ರಾಪುರ ಮಠ ಎಂಬುದು ಅಖಿಲ ಹವ್ಯಕ ಮಹಾಸಭಾದ ಶಾಖೆಯೂ ಅಲ್ಲ.. ಏಕೆಂದರೆ ಶ್ರೀ ಮಠವು ಕೇವಲ ಹವ್ಯಕರದ್ದೊಂದೇ ಅಲ್ಲ..! (ಈಗಾಗಲೇ ಎಲ್ಲರ ಅರಿವಿಗೂ ಬಂದಿರುವಂತೇ ಮತ್ತು ಶ್ರೀ ಮಠವೇ ಹೇಳಿಕೊಂಡಂತೇ ಇದು 18 ವಿವಿಧ ಜನಾಂಗಗಳಿಗೆ ಸಂಬಂಧಿಸಿದ್ದು..!) ಆದರೆ ಮಹಾ ಸಭಾ ಕೇವಲ ಹವ್ಯಕರದ್ದು ಎಂದು ಕಂಡುಬರುತ್ತದೆ…! ಹೀಗಿರುವಾಗ ಮಠವೊಂದರ ವಿಚಾರವಾಗಿ ಮಹಾಸಭಾ ಇಷ್ಟೊಂದು ಮುತುವರ್ಜಿಯನ್ನು ತಳೆಯಲು ಕಾರಣವೇನು..? ಆಯಿತು.. ಹೆಚ್ಚಾಗಿ ಹವ್ಯಕರೇ ನಡೆದುಕೊಳ್ಳುತ್ತಿರುವ ಮಠವು ಮಹಾಸಭಾದ ಸಂಪರ್ಕದಲ್ಲೂ ಇದೆ ಎಂಬುದಾದರೆ. ಈಗಾಗಲೇ ಹಲವಾರು ಆಪಾದನೆಗಳು ನ್ಯಾಯಿಕ ವಿಧಾನಗಳಲ್ಲಿ ನಲುಗುತ್ತಿರುವ ಶ್ರೀ ಮಠವನ್ನೋ ಶ್ರೀ ಮಠದ ಪೀಠಸ್ಥನನ್ನೋ ಅಥವಾ ಶ್ರೀ ರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟಿದೆ ಎಂದು ಹುಯಿಲೆಬ್ಬಿಸುತ್ತಿರುವ ಗೋಕರ್ಣ ದೇವಾಲಯದ ಆಡಳಿತೆಯನ್ನು ಸರಕಾರ ಪುನಃ ಹಿಂಪಡೆಯುವ ವಿಚಾರದಲ್ಲಿ ಮಹಾಸಭಾ ತನ್ನ ಅಧಿಕೃತ ಪತ್ರಕದಲ್ಲಿ ಒಂದು ನಿರ್ಣಯವನ್ನು ಪಾಸು ಮಾಡುತ್ತದೆಂದಾದರೆ.. ಮಠದ ವ್ಯವಹಾರದಲ್ಲಿ ನಡೆದ ಅಕ್ರಮಗಳನ್ನು ಬಯಲಿಗೆಳೆದವರು ಹವ್ಯಕರೇ ಆಗಿದ್ದಾರೆ. ಮಠೀಯ ವ್ಯಕ್ತಿಗಳ ಮೇಲೆ ಅತ್ಯಾಚಾರದಂತಹ ಆರೋಪ ಮಾಡಿದವರೂ ಹವ್ಯಕರೇ ಆಗಿದ್ದಾರೆ..! ಮಠದ ಆಡಳಿತೆಗೆ ಗೋಕರ್ಣವನ್ನು ತೆಗೆದುಕೊಂಡಿದ್ದರ ಕುರಿತು ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ದಾಖಲಿಸಿ ಅದನ್ನು ಪುನಃ ಸಾರ್ವಜನಿಕವಾಗಿಸಬೇಕೆಂದು ಹೇಳುತ್ತಿರುವವರೂ ಹವ್ಯಕರೇ ಆಗಿದ್ದಾರೆ…! ಈ ಎಲ್ಲ ಮಠೀಯ ಪ್ರಕರಣಗಳಲ್ಲಿ ಮಠದ ಅಥವಾ ಪೀಠಸ್ಥನೆಂದುಕೊಳ್ಳುವ ವ್ಯಕ್ತಿಯ ವಿರೋಧವಾಗಿದ್ದವರು ಹವ್ಯಕರಲ್ಲವೇ..? ಅಖಿಲ ಹವ್ಯಕ ಮಹಾಸಭಾ ಎಂಬ ಶುಭ ನಾಮಧೇಯವಿದ್ದ ಒಂದು ಸಂಘಟನೆ ಹೀಗೇ ಅನ್ಯಾಯ ಅನಾಚಾರಗಳಿಂದ ಬೇಸತ್ತು ಇಬ್ಭಾಗವಾದ ಸಮುದಾಯದ ಇಬ್ಬದಿಯ ಜನರಿಗೂ ಸಮಾಧಾನ ಹೇಳುವ ಕೆಲಸವನ್ನು ಬಿಟ್ಟು ಯಾವ ಆಮಿಷಕ್ಕೆ ಒಳಗಾಗಿ ಕೇವಲ ಮಠೀಯ ವಿಭಾಗಕ್ಕೇ ತನ್ನ ಒತ್ತನ್ನು ಕೊಡುತ್ತಿದೆ..?ಉಳಿದ ಹವ್ಯಕ ಸಮಾಜದ ಜನಗಳ ಮನೋಗತಕ್ಕೆ ಬೆಲೆಯನ್ನೇ ಕೊಡುವ ಸ್ಥಿತಿಯಲ್ಲಿ ಒಂದು ಅಖಿಲ ಸಂಘಟನೆ ಇಲ್ಲವೆಂದಾದರೆ.. ಅದು ಅಖಿಲ ಹವ್ಯಕ ಮಹಾಸಭಾ ಎಂಬ ಹೆಸರನ್ನು ಹೊಂದಿರುವುದು ಎಷ್ಟು ಸರಿ.. ? ಪ್ರಾಜ್ಞರು ಚಿಂತಿಸಬೇಕು…!

ಇನ್ನೊಂದು ಇಂತಹುದೇ ಬಿನ್ನವತ್ತಳೆಯನ್ನೋ ನಿರೂಪವನ್ನೋ ಆದೇಶವನ್ನೋ ನಾನು ಈ ಅಖಿಲ ಹವ್ಯಕ ಮಾಸಭಾ ಎಂಬ ಸಂಘಟನೆಯ ’ಲೆಟರ್ ಹೆಡ್’ ನಿಂದ ಅಪೇಕ್ಷಿಸಬೇಕಾಗಿದೆ.. ಅದೆಂದರೆ.. ಹೀಗೆ “ಶ್ರೀ ರಾಮಚಂದ್ರಾಪುರ ಮಠದ ಯಾವತ್ತೂ ವ್ಯವಹಾರಗಳಲ್ಲಿ ಮಠದ ವಿರೋಧವಾಗಿದ್ದವರು ಹವ್ಯಕ ಸಮಾಜದಿಂದ ಬಹಿಷ್ಕರಿಸಲ್ಪಟ್ಟಿರುವವರು.. ಕಾರಣ ಇನ್ನು ಮುಂದೆ ಮಹಾಸಭಾದ ಯಾವುದೇ ವ್ಯವಹಾರಗಳಲ್ಲಿ ಅವರನ್ನು ಒಳಗೊಳ್ಳುವಂತಿಲ್ಲ..” ಇತ್ಯಾದಿಯಾಗಿ ಒಂದು ಹೊರಬರಬಹುದೇ…..? ನಿರೀಕ್ಷೆ ನನ್ನದು.. ಹವ್ಯಕರು ಹವ್ಯಕ ಮಹಾಸಭೆ .. ನಿರ್ಣಯಿಸಬೇಕು ಅಷ್ಟೇ..!

ಏಕೆಂದರೆ ನಾನೋ ನನ್ನಂಥವರೋ ಇಂದು ಕೇವಲ ಹವ್ಯಕ ಬ್ರಾಹ್ಮಣ ಸಮಾಜದ ನಡುವೆ ಬದುಕುತ್ತಿಲ್ಲ.. ನಾವು ಬದುಕುವ ತಾಣಗಳಲ್ಲಿ ಇರುವ ತ್ರಿಮತಸ್ಥ ಬ್ರಾಹ್ಮಣ ಸಮಾಜದ ಅನೇಕ ಸಂಘಟನೆಗಳಲ್ಲಿ ಸೇರಿಕೊಂಡು ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡಬೇಕಾಗಿದೆ. ಅಲ್ಲಿ ನಾವು ನಮ್ಮನ್ನು ನಾನೊಬ್ಬ ಹವ್ಯಕ ಬ್ರಾಹಣ ಎಂಬ ನಾಮಧೇಯದಿಂದಲೇ ಗುರುತಿಸಿಕೊಳ್ಲಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಲುವ ಸಲುವಾಗಿ ನಾವು ಸೇರಿದ ತ್ರಿಮತಸ್ಥ ಬ್ರಾಹ್ಮಣ ಒಕ್ಕೂಟಗಳಲ್ಲಿ ನಾವು ನಮ್ಮನ್ನು ಗುರುತಿಸಿಕೊಳ್ಲಹೋದಾಗ “ಓ… ನೀವು.. ಓ ಆ ಇವರ ಕಡೆಯವರಾ..?” ಎಂದು ಮೂಗು ಮುರಿಯುತ್ತಾರೆ.. ಆಗ ನಾವು ತಲೆ ಕೆಳಗೆ ಹಾಕಿ ನಮ್ಮ ಅಸ್ಮಿತೆಯನ್ನು ಕಳೆದುಕೊಂಡು ಬರುವ ದುಸ್ಥಿತಿ ಇದೆ. ಹಾಗಾಗಿ ಇಂದು ನಮ್ಮಂತಹ ಅನೇಕರು ಬ್ರಾಹ್ಮಣ ಸಮುದಾಯದಲ್ಲಿ ನಾನು ಒಬ್ಬ “ಹವ್ಯಕ” ಎಂದುಕೊಳ್ಲಲೂ ನಾಚಿಕೆ ಪಡಬೇಕಾದ ಪರಿಸ್ಥಿತಿಗೆ ನಮ್ಮನ್ನು ನೂಕಿದ ಈ ಮಠೀಯ ವ್ಯವಹಾರಗಳ ಕುರಿತು ಹವ್ಯಕ ಮಹಾ ಸಭಾ ಎಷ್ಟೂ ಮುತುವರ್ಜಿ ವಹಿಸುತ್ತದೋ ಅಷ್ಟೇ ಮುತುವರ್ಜಿಯನ್ನು ನಮ್ಮ ಕಷ್ಟಗಳ ಕುರಿತೂ ಯೋಚಿಸಬೇಕಾಗಿದೆಯಲ್ಲವೇ..?

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/176136756125840/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s