ನನ್ನನ್ ನಂಬಿ ಪ್ಲೀಸ್……

ನನ್ನನ್ ನಂಬಿ ಪ್ಲೀಸ್……
****************************

ಅನಾಚಾರಿ ಸ್ವಾಮಿಯೊಬ್ಬ ತನ್ನ ಕುರಿಗಳನ್ನು ಯಾವರೀತಿಯಲ್ಲಿ ನಂಬಿಸಿ ಬಹುಪರಾಕ್ ಹೇಳಿಸಿಕೊಳ್ಳುತ್ತಿದ್ದಾನೆಂದರೆ, ಸಂತ್ರಸ್ಥೆಯರೂ ಮೈಚೂಟಿಕೊಂಡು ತಮಗೆ ಈ ಹೋರಿಸ್ವಾಮಿಯಿಂದ ನಡೆದ ಅತ್ಯಾಚಾರ ನಿಜವೋ ಸುಳ್ಳೋ ಎಂದು ಮೈ ಪರಚಿಕೊಳ್ಳುವಂತಾಗಬಹುದು. ಆಡಂಬರದ ಚತುರ್ಮೋಸ ಮಾಡಿ ಒಂದೇ ಕಡೆ ಜಾಂಡಾ ಹೊಡೆದಿದ್ದ ಹೋರಿಸ್ವಾಮಿ ಈಗ ದಂಡಯಾತ್ರೆ ಹೊರಟಿದೆ. ನಿನ್ನೆ ನಡೆದ ಒಂದು ಸಭೆಯಲ್ಲಿ ತನ್ನ ಕುರಿಗಳ ಮಂದೆಯ ಮುಂದೆ ತಾವು ಯಾವತಪ್ಪನ್ನೂ ಮಾಡಿಲ್ಲ ಎಂದು ಕೈಕಟ್ಟಿಕೊಂಡು ಸಮರ್ಥನೆಗೆ ನಿಂತಿತ್ತು.ಧರ್ಮದ ದೃಷ್ಟಿಯಿಂದ ಮಠ ಎಲ್ಲೂ ತಪ್ಪಿಲ್ಲವಂತೆ.ನೈತಿಕವಾಗಿ ಧಾರ್ಮಿಕವಾಗಿ ಕಾನೂನಿನ ದೃಷ್ಟಿಯಲ್ಲಿ ತಮ್ಮಲ್ಲಿ ಎಲ್ಲೂ ತಪು ಹುಡುಕುವಂತಿಲ್ಲ ಎಂದು ಬೊಗಳಿದೆ. ಅವರ ಮಾತು ಅಕ್ಷರಶಃ ಸತ್ಯ….. ಕುರಿಗಳೇ ಇವೆಲ್ಲವನ್ನು ಮಾಡಲು ಅವಕಾಶ ನೀಡಿರುವುದರಿಂದ ತಪ್ಪು ಪಟಾಲಂ ಮತ್ತು ಕುರಿಗಳದ್ದೇ ಆಗಿರುತ್ತದೆ.ಹೆಂಗಸರನ್ನು/ಕನ್ಯೆಯರನ್ನು ಕಳಿಸುತ್ತಿರುವವರು ಭಕ್ತ ಪೋಷಕರು,ಕಿಟಕಿ ಭಾಗಿಲು ಮುಚ್ಚಿ ಕಾವಲು ಕಾಯ್ದು ಸಸೂತ್ರವಾಗಿ ಹಾದರ ನಡೆಸಲು ಅವಕಾಶ ಮಾಡಿಕೊಡುವವರು ಪಟಾಲಂಗಳು ..ಅಂದಮೇಲೆ ಇವರ ತಪ್ಪು ಎಲ್ಲಿ ಬಂತು. ಮನುಷ್ಯನಾಗಿ ಹುಟ್ಟಿದ ಮೇಲೆ ಲೈಂಗಿಕ ಸುಖವನ್ನು ಹೊಂದಬಾರದು ಎಂದು ಯಾವ ಧರ್ಮವೂ ಹೇಳಿಲ್ಲ. ಪ್ರಚೋದಿಸುವ ಧಾತುಗಳನ್ನು ದೇಹದೊಳಗೆ ತುಂಬಿದ ಭಗವಂತನೇ ಅದರ ಹೊಣೆ ಹೊರಬೇಕಾಗುತ್ತದೆ ಹಾಗಾಗಿ ಧರ್ಮದ ದೃಷ್ಟಿಯಲ್ಲಿ ತಮ್ಮದೇನು ತಪ್ಪಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಇನ್ನು ನೈತಿಕತೆಯ ಪ್ರಶ್ನೆ ಬಂದಾಗಲೂ ತಪ್ಪು ಇವರಿಂದ ನಡೆದಿಲ್ಲ.ಕಳ್ಳನ ನೈತಿಕತೆ ಕಳ್ಳತನ, ಕೊಲೆಗಡುಕನಿಗೂ ಕೊಲೆಮಾಡುವುದಕ್ಕೆ ತನ್ನದೇ ಆದ ನೈತಿಕತೆ ಇರುತ್ತದೆ.ಇನ್ನು ವ್ಯಭಿಚಾರಿಣಿಗೂ ತನ್ನದೇ ಆದ ನೈತಿಕತೆ ಇರುತ್ತದೆ! ಹಾಗೆಯೇ ಕಾಮುಕರಾದ ತಮ್ಮ ನೈತಿಕತೆ ಕಾಮವನ್ನು ಶಮನ ಮಾಡಿಕೊಳ್ಳುವುದು..ಅದನ್ನು ಶಿರಸಾವಹಿಸಿ ನಡೆಸಿಕೊಂಡು ಬಂದು ತಮ್ಮ ವಾಂಛೆಯನ್ನು ತೀರಿಸಿಕೊಂಡಿದ್ದಾರೆಯೇ ಹೊರತು ಅದರಲ್ಲೂ ಇವರ ಯಾವ ತಪ್ಪನೂ ಹುಡುಕುವಂತಿಲ್ಲ.ಇನ್ನು ನ್ಯಾಯದೇವತೆಯ ದೃಷ್ಟಿಯಲ್ಲಿ ಇವರು ತಪ್ಪು ಮಾಡಲು ಸಾಧ್ಯವೇ ಇಲ್ಲ ಯಾಕೆಂದರೆ ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಲಾಗಿರುತ್ತದೆ. ಕೇವಲ ದಾಖಲೆಯ ಮೇಲೆ ನಡೆಯುವ ವಾದ ವಿವಾದಗಳನ್ನು ಆಲಿಸಿಯೇ ತೀರ್ಪು ಹೊರಬರುವುದರಿಂದ ಇವರು ನ್ಯಾಯದೇವತೆಯ ದೃಷ್ಟಿಯಲ್ಲಿ ತಪ್ಪು ಮಾಡಿರುವುದಿಲ್ಲ.( ಒಮ್ಮೆಕಣ್ಣು ಬಿಟ್ಟು ಇವನ ಮುಖಚಹರೆ ನೋಡಿದರೂ ಸಾಕಾಗುತ್ತಿತ್ತು ಇವನನ್ನು ಅಪರಾಧಿ ಎಂದು ಮುದ್ರೆ ಒತ್ತಲು). . ಇನ್ನು ಯತಿನಿಯಮದ ಪ್ರಶ್ನೆ ಬರುವುದಿಲ್ಲ..ಯಾಕೆಂದರೆ ನಮ್ಮ ಸಂವಿಧಾನದಲ್ಲೂ ಬಹಳಷ್ಟು ತಿದ್ದುಪಡಿಗಳಾಗುವಂತೆ ಇದರಲ್ಲು ತಮಗೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುವುದು ಆಯಾ ಯತಿಗಳಿಗೆ ಬಿಟ್ಟ ವಿಚಾರ..ಕೇವಲ 32 ವರ್ಷ ಬದುಕಿದ್ದ ಶಂಕರರಿಗೆ ಬೇರೆಯದಕ್ಕೆ ಸಮಯವಿರಲಿಲ್ಲ…ಅಮೂಲ್ಯವಾದ ದೇಹವನ್ನು ವಾಂಛೆಯನ್ನು ಅದುಮಿಟ್ಟುಕೊಂಡು ದೀರ್ಘ ಕಾಲಬದುಕುವುದು ಈ ದೇಹವನ್ನು ದಂಡಿಸಿದಂತೆ…ಪ್ರತಿಯೊಬ್ಬ ಮನುಷ್ಯನೂ ಮಾನಸಿಕ ವ್ಯಭಿಚಾರಿ ಎನ್ನುವ ಮಾತೇ ಇದೆ…ಹಾಗಾಗಿ ಹೆಚ್ಚು ಕಾಲ ಬದುಕಿರ ಬೇಕಾದ ತಮಗೆ ಅನುಷ್ಟಾನವನ್ನೆಲ್ಲ ಕೈಬಿಟ್ಟಿದ್ದು ಸಮಯಾಕಾಶವೂ ಬೇಕಷ್ಟಿವೆ ಜೊತೆಗೆ ಬಿಟ್ಟಿಯಾಗಿ ಭಕ್ತೆಯರು ಸಿಗುತ್ತಿರುವಾಗ ದೂರತಳ್ಳುವುದು ಮೂರ್ಖತನ. ಇದೆ ಎಲ್ಲ ಕಾರಣಗಳಿಂದ ತಮ್ಮದೇನು ತಪ್ಪಿಲ್ಲ ..ನಮ್ಮ “ದಂಡ”ಯಾತ್ರೆ ಯಥಾ ಪ್ರಕಾರ ಸಾಗುತ್ತದೆ …ಜೈ ಹಾದರೇಶ್ವರ

Prakash Kakal

https://www.facebook.com/groups/1499395003680065/permalink/1831215120498050/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s