ದೇವಾಲಯವು ಸಾರ್ವಜನಿಕ ಆಸ್ತಿ ಎಂದೇ ಪರಿಗಣಿತವಾಗಿದೆ

ದೇವಾಲಯವು ಸಾರ್ವಜನಿಕ ಆಸ್ತಿ ಎಂದೇ ಪರಿಗಣಿತವಾಗಿದೆ

ಗೋಕರ್ಣ ದೇವಾಲಯ ಹಸ್ತಾಂತರ ಮತ್ತು ಪುನಃ ಸರಕಾರ ತನ್ನ ಸುಪರ್ದಿಗೆ ಪಡೆಯುವ ಕುರಿತು ತೆಗೆದುಕಂಡ ನಿರ್ಣಯಗಳ ಕುರಿತಾಗಿ ಜನರಲ್ಲಿ ಗೊಂದಲವೆಬ್ಬಿಸುವ ಅನೇಕ ಹೇಳಿಕೆಗಳು ಮಾಧ್ಯಮಗಳಲ್ಲಿ ಅಲ್ಲಲ್ಲಿ ಕೇಳಿಬರುತ್ತಿದೆ. ಆದರೆ ನೈಜ ಸ್ಥಿತಿಯನ್ನು ಉಲ್ಲೇಖಿಸಬಲ್ಲ ಯಾವ ಮಾಹಿತಿಯೂ ಸಾರ್ವಜನಿಕರಿಗೆ ಇದುವರೆಗೆ ಕೊಡುವಲ್ಲಿ ವಿಫಲವಾಗಿದ್ದರ ಪರಿಣಾಮವಾಗಿ ಜನ ದೇವಾಲಯ ಮತ್ತು ಒಂದು ಸ್ಥಾಪಿತ ಧಾರ್ಮಿಕ ಸಂಸ್ಥೆಯ ಕುರಿತಾಗಿ ಭಿನ್ನ ನಿಲುವುಗಳನ್ನು ತಳೆಯುವಂತಾಗಿದೆ. ಈ ಕುರಿತು ಜನರಿಗೆ ಸ್ಪಷ್ಟ ಮಾಹಿತಿಯನ್ನೊದಗಿಸುವ ಒಂದು ಪ್ರಯತ್ನವೇ ಈ ಲೇಖದ ಉದ್ದೇಶ.
ಕಥೆ ಹೀಗಿದೆ….
ಕರ್ನಾಟಕ ಸರಕಾರ
ಸ್ಂಖ್ಯೆ 1) ಏಕರೂಪ ಶಾಸನ ಸಿ.ಆರ್.45/0/08
ಆಯುಕ್ತರ ಕಾರ್ಯಾಲಯ
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಬೆಂಗಳೂರು.
ದಿನಾಂಕಃ 24-9-2008
ಗೆ_
1) ಜಿಲ್ಲಾ ನೋಂದಣಾಧಿಕಾರಿ
ಉತ್ತರಕನ್ನಡ ಜಿಲ್ಲೆ
ಕಾರವಾರ
2) ಉಪ ನೋಂದಣಾಧಿಕಾರಿ
ಕುಮಟಾ ತಾಲ್ಲೂಕು
ಕುಮಟಾ
3) ಕಾರ್ಯದರ್ಶಿಗಳು
ಗ್ರಾಮಪಂಚಾಯತಿ
ಗೋಕರ್ಣ
ಉತ್ತರಕನ್ನಡ ಜಿಲ್ಲೆ.
ಮಾನ್ಯರೇ,
ವಿಷಯ ಃ ಉತ್ತರಕನ್ನಡ ಜಿಲ್ಲೆ ಕುಮಟಾ ತಾಲ್ಲೂಕು ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಸ್ಥಿರ ಆಸ್ತಿಗಳ ಹಕ್ಕುಗಳನ್ನು ಬದಲಾಯಿಸುವ ಕುರಿತು,
ಉಲ್ಲೇಖಃ ಸರಕಾರದ ಆದೇಶ ಸಂಖ್ಯೆ : ಕಂ.ಇ. 56 ಮು.ಅ.ಬಿ.2008 ದಿಃ 12:8:08
ಉತ್ತರಕನ್ನಡ ಜಿಲ್ಲೆ ಕುಮಟಾ ತಾಲ್ಲೂಕು ಶ್ರೀ ಮಹಾಬಲೇಶ್ವರ ದೇವಾಲಯವನ್ನು ಮತ್ತು ಅದಕ್ಕೆ ಸೇರಿದ ಪರಿವಾರ ದೇವರ ದೇವಾಲಯಗಳನ್ನು ಉಲ್ಲೇಖಿತ ಸರಕಾರಿ ಆದೇಶದ ಅಧಿಸೂಚಿತ ಪಟ್ಟಿಯಿಂದ ಹೊರತುಪಡಿಸಿ, ಸದರಿ ದೇವಾಲಯಗಳ ಸಂಪೂರ್ಣ ಆಡಳಿತವನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲು ಆದೇಶದ ಮೇರೆಗೆ ದೇವಾಲಯಗಳ ಆಡಳಿತವನ್ನು ಮಾತ್ರ ಶ್ರೀ ಮಠಕ್ಕೆ ಹಸ್ತಾಂತರಿಸಲಾಗಿರುತ್ತದೆ.
2
ಆದರೆ ದೇವಾಲಯಕ್ಕೆ ಸೇರಿದ ಎಲ್ಲಾ ಸ್ಥಿರ ಆಸ್ತಿಗಳ ಮೂಲ ಹಕ್ಕನ್ನು ದೇವಾಲದ ಹೆಸರಿನಲ್ಲಿಯೇ ಮುಂದುವರೆಯಬೇಕಾಗಿರುತ್ತದೆ. ಹಾಗೂ ದೇವಾಲಯವೂ ಸಹ ಸಾರ್ವಜನಿಕ ಸಂಸ್ಥೆಯಾಗಿರುತ್ತದೆ.
ಆದುದರಿಂದ ಸದರಿ ದೇವಾಲಯಕ್ಕೆ ಸೇರಿದ ಆಸ್ತಿಯ ಮೂಲ ಹಕ್ಕನ್ನು ಯಾವುದೇ ಕಾರಣಕ್ಕೂ ಶ್ರೀ ಮಠದ ಹೆಸರಿಗೆ ವರ್ಗಾಯಿಸಲು ಅವಕಾಶವಿಲ್ಲ. ಸುದ್ದಿ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯಂತೇ ದೇವಸ್ಥಾನದ ಯಾವುದಾದರೂ ಸ್ಥಿರ-ಚರ ಆಸ್ಥಿಗಳ ಹಕ್ಕನ್ನು/ಖಾತೆಯನ್ನು ಶ್ರೀ ಮಠದ ಹೆಸರಿಗೆ ವರ್ಗಾಯಿಸಿ ನೋಂದಾವಣಿ ಮಾಡಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿಯನ್ನು ತುರ್ತಾಗಿ ಸಲ್ಲಿಸಲು ಕೋರಿದೆ.
ತಮ್ಮ ನಂಬುಗೆಯ
ಆಯುಕ್ತರು,
ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು
ಗ್ರಾಮ ಪಂಚಾಯತಿ ಗೋಕರ್ಣ
ಸ್ವೀಕೃತಿ ಆಗಿದೆ.
***************************************************************
……………
ಈ ಸುತ್ತೋಲೆಯನ್ನಾಧರಿಸಿ ಹೇಳುವುದಾದರೆ ಇಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೇ ದೇವಾಲಯದ ಆಡಳಿತೆಯನ್ನು ಮಾತ್ರ ಶ್ರೀ ಮಠಕ್ಕೆ ವರ್ಗಾಯಿಸಿದೆಯೇ ವಿನಾ ಉಳಿದ ಯಾವುದೇ ವ್ಯವಹಾರಕ್ಕೆ ಶ್ರೀ ಮಠ ಕೈ ಹಾಕುವಂತಿಲ್ಲ ಮತ್ತು ದೇವಾಲಯವು ಸಾರ್ವಜನಿಕ ಆಸ್ತಿ ಎಂದೇ ಪರಿಗಣಿತವಾಗಿದೆ. ಎಂಬ ಬಗ್ಗೆ ಸ್ಪಷ್ಟ ಉಲ್ಲೇಖ ದೊರೆಯುತ್ತದೆ.
ಇದನ್ನು ಗಮನಿಸಿದಾಗ ಈಗ ಎದ್ದಿರುವ ಕಔತೂಹಲಿಕ ವಿಚಾರವೆಂದರೆ ಸರಕಾರ ಮಾಡಿದ ಕ್ರಮ ಯಾವುದೇ ಕಾರಣಕ್ಕೂ ವ್ಯತ್ಯಸ್ತವೆಂದು ತೋರುವುದಿಲ್ಲ. ಹೀಗಿದ್ದರೂ ಗೋಕರ್ಣದ ಆಡಳಿತೆಯನ್ನು ಸರಕಾರ ಹಿಂಪಡೆಯುತ್ತಿದೆ, ಗೋಕರ್ಣ ನಮ್ಮ ಮಠದ್ದು ಇತ್ಯಾದಿ ಹುಯಿಲುಗಳು ಅರ್ಥವಿಲ್ಲದ್ದು ಎನ್ನಿಸುತ್ತದೆ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

https://www.facebook.com/groups/161894837550032/permalink/176038979468951/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s