ಗೋಕರ್ಣ ದೇವಳದ ನಿಜ ಮಾಲಿಕರು ಯಾರು?

ಗೋಕರ್ಣ ದೇವಳದ ನಿಜ ಮಾಲಿಕರು ಯಾರು?

ಇದೀಗ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಳವನ್ನು ಸರಕಾರ ವಾಪಸ್ ಪಡೆಯಲು ಚಿಂತನೆ ನಡೆಸುತ್ತಿದೆ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಅವರು ಉಚ್ಚ ನ್ಯಾಯಾಲಯಕ್ಕೆ ತಿಳಿಸಿರುವ ವಿಚಾರ ಸಾಕಷ್ಟು ಸಂಚಲನೆಯನ್ನು ಸೃಷ್ಟಿಸಿದೆ. ಆ ಪುರಾಣ ಪ್ರಸಿದ್ಧ ದೇವಳದ ಉಸ್ತುವಾರಿಯನ್ನು ತನಗೆ ವಹಿಸಿದ ಲಾಗಾಯ್ತಿನಿಂದ ಶ್ರೀ ರಾಮಚಂದ್ರಾಪುರ ಮಠವು ಆ ದೇವಳವು ಮೂಲತಃ ತನ್ನದೇ ಆಗಿತ್ತು, ಈಗ ಅದು ಮರಳಿ ತನಗೇ ಸೇರಿದಂತಾಯಿತು ಎಂದು ಢಾಣಾಡಂಗುರ ಹೇಳಿಕೊಂಡು ಬಂದಿದೆ.

ಆದರೆ ವಾಸ್ತವವಾಗಿ ಹಿಂದಿನ ಸರಕಾರ ದೇವಳದ ಪ್ರಭಾರವನ್ನು ಮಾತ್ರ ಶ್ರೀ ರಾಮಚಂದ್ರಾಪುರ ಮಠಕ್ಕೆ ವಹಿಸಿದ್ದೇ ವಿನಾ ಅದರ ಸಂಪೂರ್ಣ ಒಡೆತನದ ಹಕ್ಕುಗಳನ್ನಲ್ಲ ಎಂದು ಸ್ಪಷ್ಟಪಡಿಸುವ ಸರಕಾರದ ದಾಖಲೆಯೊಂದು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಅದು ಮುಜರಾಯಿ ಇಲಾಖೆಯ ಆಯುಕ್ತರ ಪತ್ರವಾಗಿದೆ. ನನಗೆ ಈ ದಾಖಲೆಯ ಸಾಚಾತನವನ್ನು ಅನುಮಾನಿಸುವಂತಹ ಯಾವ ಕಾರಣವೂ ಕಾಣುತ್ತಿಲ್ಲ.

ಇಲ್ಲಿ ನನಗೆ ಎರಡು ಪ್ರಶ್ನೆಗಳು ಎದ್ದಿವೆ. ಮೊದಲನೆಯದಾಗಿ ಗೋಕರ್ಣ ದೇವಾಲಯವು ತನ್ನದೇ ಆಸ್ತಿ ಎಂದು ಹಾಲೀ ಪೀಠಾಧಿಪತಿ ಹೇಳಿಕೊಂಡು ಬಂದಿರುವುದರ ಅಧಾರ್ಮಿಕತೆ ಮತ್ತು ಅನೈತಿಕತೆ. ಸತ್ಯ, ಧರ್ಮ ಮತ್ತಿತರ ಧರ್ಮತತ್ವಗಳನ್ನು ಹಾಗೂ ತತ್ಸಂಬಂಧಿತ ನೈತಿಕ ಮೌಲ್ಯಗಳ ಸ್ಥಾಪನೆಗಾಗಿಯೇ ಇರಬೇಕಾಗಿದ್ದ ಶ್ರೀ ಮಠ ಹಾಗೂ ಅದರ ಪೀಠಾಧಿಪತಿ ಈ ರೀತಿ ಸುಳ್ಳನ್ನು ಪ್ರತಿಪಾದಿಸುತ್ತ ಬಂದಿರುವುದು. ಇದು ಘೋರ ಆಧ್ಯಾತ್ಮಿಕ ಅಪರಾಧವಲ್ಲವೇ?

ಎರಡನೆಯದಾಗಿ, ಈ ದಾಖಲೆಯ ಪ್ರಕಾರ ದೇವಳದ ಒಡೆತನವು ಸರಕಾರದ್ದೇ ಆಗಿರುವಾಗ ತನ್ನ ಸೊತ್ತನ್ನು ತಾನು ವಾಪಸ್ ಪಡೆಯುವುದರಲ್ಲಿ ಸರಕಾರದ ತಪ್ಪೇನಿದೆ? ಇದನ್ನು ಹಿಂದೂ ಧರ್ಮದ ಮೇಲಿನ ಹಲ್ಲೆ ಎಂದೆಲ್ಲ ಜನರನ್ನು ದಿಕ್ಕು ತಪ್ಪಿಸುವ ದುಷ್ಟತನವೇಕೆ? ಸರಕಾರ ಕೇವಲ ರಾಮಚಂದ್ರಾಪುರಮಠವನ್ನು ಮಾತ್ರ ಗುರಿಯಾಗಿಸಿಕೊಂಡು ಆಕ್ರಮಣ ನಡೆಸುತ್ತಿದೆ ಎಂದು ಬಾಯಿಬಡಿದುಕೊಳ್ಳುವುದೇಕೆ? ಸುಳ್ಳಿನ ಅಡಿಪಾಯದ ಮೇಲೆ ಈ ರೀತಿ ಅನೈತಿಕತೆಯನ್ನು ಪ್ರತಿಷ್ಠಾಪಿಸಿಕೊಂಡು, ಜನರನ್ನು ಉದ್ರೇಕಿಸುವ ರೀತಿಯಲ್ಲಿ ಸಭೆ-ಸಮಾವೇಶಗಳನ್ನು ನಡೆಸುವುದು ಶ್ರೀ ಶಂಕರಾಚಾರ್ಯ ಪರಂಪರೆಯ ಮಠವೊಂದು ಮಾಡಬಹುದೇ ?

ಗೋಕರ್ಣ ಹಸ್ತಾಂತರ ವಿಷಯ ನ್ಯಾಯಾಲಯದ ಮುಂದಿದೆ. ಅದರ ಕಾನೂನುಬದ್ಧತೆಯನ್ನು ನ್ಯಾಯಲಯವು ತೀರ್ಮಾನಿಸುತ್ತದೆ. ನಾನು ಅದನ್ನಿಲ್ಲಿ ಚರ್ಚಿಸುತ್ತಿಲ್ಲ. ನಾನೆತ್ತಿರುವ ಪ್ರಶ್ನೆಗಳು ಧರ್ಮ ಮತ್ತು ನೀತಿಗೆ ಸಂಬಂಧಿಸಿದವು.

Sachchidananda Hegde

source: https://www.facebook.com/sachchidananda.hegde/posts/1774114022805214

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s