ಶೀಲಗೆಟ್ಟ ಸಂಬಂಧ ಹೊಂದಿರುವವರ ಕೈಯಿಂದ !!!! ಶ್ರೀ ಗೋಕರ್ಣ ದೇಗುಲವನ್ನ ಸರಕಾರ ಅತಿ ಶೀಘ್ರ ವಾಪಸ್ಸು ಪಡೆಯಲಿ

!!!ಅತ್ಯಾಚಾರ ಆರೋಪಿತ!!!!!ಶೀಲಗೆಟ್ಟ ಸಂಬಂಧ ಹೊಂದಿರುವವರ ಕೈಯಿಂದ !!!! ಶ್ರೀ ಗೋಕರ್ಣ ದೇಗುಲವನ್ನ ಸರಕಾರ ಅತಿ ಶೀಘ್ರ ವಾಪಸ್ಸು ಪಡೆಯಲಿ!!!!!

ಅಭಿವೃದ್ಧಿಯ ನೆಪದಲ್ಲಿ, ಕಳೆದ ಬಿ.ಜೆ.ಪಿ ಸರಕಾರ, ಗೋಕರ್ಣ ದೇವಾಲಯದ ಆಡಳಿತವನ್ನ ಯಾವುದೇ ಪೂರ್ವ ಷರತ್ತನೂ, ಸಹ ವಿಧಿಸದೇ ರಾಮಚಂದ್ರಾಪುರ ಮಠಕ್ಕೆ ವಹಿಸಿದ್ದು,ಅದರ ಏಕಪಕ್ಷೀಯವಾದ, ಹಾಗೂ ಆತುರದ ನಿರ್ಧಾರವಾಗಿದೆ. ಸರಕಾರಕ್ಕೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಪ್ರಾಮಾಣಿಕ ಕಳಕಳಯಿದ್ದಿದ್ದರೆ,ದೇವಾಲಯದ ಹಸ್ತಾಂತರದ ತನ್ನ ಆಯ್ಕೆಯನ್ನು ಮುಕ್ತವಾಗಿ ಹಾಗೂ ಪಾರದರ್ಶಕವಾಗಿ ಇರಿಸಬಹುದಾಗಿತ್ತು.

ಕರ್ನಾಟಕದಲ್ಲಿರುವದು ರಾಮಚಂದ್ರಾಪುರ ಮಠ ಒಂದೇ ಸಂಸ್ಥೆಯಲ್ಲ ???? ಇವಕ್ಕಿಂತ ಇನ್ನೂ ಉತ್ತಮವಾಗಿ ಆಡಳಿತ ನಡೆಸುವ ಪ್ರಸಿದ್ದವಾದ,ಜನಪ್ರಿಯ ಅನೇಕ ಧಾರ್ಮಿಕ ಸಂಸ್ಥೆಗಳೂ, ಮಠ ಮಾನ್ಯಗಳು ಇವೆ.ಉಳಿದ ಮಠ ಮಾನ್ಯಗಳ ಸಾಧನೆಗೆ ಹೋಲಿಸಿದರೆ ಇವರ ಸಾಧನೆ ನಗಣ್ಯ!!!! ಇವರದು ಮಂತ್ರಕ್ಕಿಂತ ಉಗುಳೇ ಜಾಸ್ತಿ!!

ಗೋಕರ್ಣ ಅಭಿವೃದ್ಧಿಯ ವಿಷಯ ಬೇರೆ, ಕ್ರಿಮಿನಲ್ ಅಪರಾಧ ಬೇರೆ,ಗೋಕರ್ಣ ಅಭಿವೃದ್ದಿಗೆ ಇಲ್ಲಿ ಯಾರೂ ಅಡ್ಡಿಪಡಿಸುತ್ತಿಲ್ಲ ಆದರೆ ಭೂ ಕಬಳಿಕೆ , !!!ಅರಣ್ಯ ಒತ್ತುವರಿ,!!! ಸರಕಾರದ ಗೋಮಾಳದ ಅತಿಕ್ರಮಣ!!! ಮಠದ ಹಣಕಾಸಿನ ಅವ್ಯವಹಾರ!!! ಅತ್ಯಾಚಾರ ದಂತಹ ಹಲವು ಹತ್ತು ಗಂಭೀರ ಪ್ರಕರಣಗಳಲ್ಲಿ ಆರೋಪಿತರಾಗಿ ತನಿಖೆಯನ್ನು ಎದುರಿಸುತ್ತಿರುವವರು ಆಡಳಿತಾಧಿಕಾರಿಯಾದರೆ ದೇವಾಲಯದ ಆದಾಯ ದುರ್ಬಳಕೆಯಾಗುವ ಅಪಾಯ ವಿರುವದರಿಂದ ಪುರಾಣ ಪ್ರಸಿದ್ಧ ದೇವಾಲಯವನ್ನು ಸರಕಾರ ಈ ಕೂಡಲೇ ಹಿಂಪಡೆಯ ಬೇಕೆಂಬುದೇ ನಮ್ಮ ಆಗ್ರಹ!!

ಈ ಮಠದ ಉದ್ದೇಶಿತ ಯೋಜನೆ ದಡ ಸೇರದ್ದಕ್ಕಿಂತ ಹಳ್ಳ ಹಿಡಿದದ್ದೇ ಹೆಚ್ಚು!!!! ರಾಮ ಕಥೆ, ಪಶು ಸಂಗೋಪನಾ ಇಲಾಖೆಯ ಅನುದಾನದ ದುರ್ಬಳಕೆ, ಇವರ ಗೋಶಾಲೆಯ ದುರವಸ್ಥೆಯ ಬಗ್ಗೆ!!! ಸರಕಾರದ ವರದಿಯೇ ಇದಕ್ಕೆ ಸಾಕ್ಷಿ.

ಹೇಳಿಕೊಳ್ಳುವಂತಹ ಯಾವ ಸಾಧನೆಯನ್ನೂ ಇವರು ಮಾಡದಿದ್ದರೂ ಈಗ “ಗೋಕರ್ಣದ ಅಭಿವೃದ್ಧಿ ” ಎಂಬ ಶೀರ್ಷಿಕೆಯೊಂದಿಗೆ “ಜನ ಮಾಧ್ಯಮ” ಮುಂತಾದ ಪತ್ರಿಕೆಗಳಲ್ಲಿ ತಮ್ಮ ಪರವಾಗಿಯೇ ಜನಾಭಿಪ್ರಾಯ ಮೂಡಿಸುವಂತಹ !!!! ವ್ಯರ್ಥ ಪ್ರಯತ್ನ ಈ ಮಠ ಈಗ ಮಾಡುತ್ತಿದೆ ಮಾಧ್ಯಮಗಳು ಸಮಾಜದ ಕಾವಲುಗಾರ ನಂತೆ ಕೆಲಸ ಮಾಡ ಬೇಕೆ ವಿನ: ಇಂತಹ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವವರ ಪರ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ತೊಡಗಬಾರದು, ಇದು ಜನರ ಹಾದಿ ತಪ್ಪಿಸುವ ತಂತ್ರ !!!! ಪ್ರಶ್ನೆ ಅಭಿವೃದ್ಧಿಯ ವಿಷಯವಲ್ಲ ಇಂತಹ ಗಂಭೀರ ಆರೋಪವನ್ನು ಹೊತ್ತವರ ಕೈಯಲ್ಲಿ ಗೋಕರ್ಣ ದೇವಾಲಯದ ಆಡಳಿವಿರಬೇಕೇ?? ಬೇಡವೇ ಎಂಬುದಾಗಿದೆ.

ಆರೋಪಿಗಳು ಮೊದಲು ಎಲ್ಲ ತನಿಖೆಯನ್ನು ಎದುರಿಸಿ ತಾವು ನಿರಪರಾಧಿಗಳು ಎಂದು ಸಾಬೀತು ಪಡಿಸಲಿ!!!!! ಇಂತಹ ಆರೋಪ ಹೊತ್ತವರ ಆಡಳಿತ ಖಂಡಿತ ಗೊಕರ್ಣಕ್ಕೆ ಅವಶ್ಯಕತೆಯಿಲ್ಲ !!!!!ಸರಕಾರ ಈ ಕೂಡಲೇ ದೇವಾಲಯವನ್ನ ತನ್ನ ವಶಕ್ಕೆ ತೆಗೆದುಕೊಳ್ಳಲಿ ಎಂಬುದೇ ನಮ್ಮ ಆಗ್ರಹವಾಗಿದೆ!!!!

ಇದಕ್ಕೆ ತಮ್ಮ ಸಹಮತವಿದ್ದರೆ ಘನ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ತಲುಪುವ ವರೆಗೆ ಶೆರ್ ಮಾಡಿರೆಂದು ನಮ್ಮ ಮನವಿಯಾಗಿದೆ.

Chintamani Upadhya

source: https://www.facebook.com/chintamani.upadhya.3/posts/1660570124272328

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s